ಕಲಬುರಗಿ: ಗೃಹ ಸಚಿವರ ತವರಲ್ಲೇ ಪೊಲೀಸ್ ಠಾಣೆಯಿಂದ ಪೋಕ್ಸೊ ಪ್ರಕರಣದ ಆರೋಪಿ ಪರಾರಿಯಾಗಿರುವ ಘಟನೆ ನಡೆದಿದೆ.
ಜಿಲ್ಲೆಯ ಅಫಜಲಪುರ್ ಪೊಲೀಸ್ ಠಾಣೆಯಿಂದ ಪೋಕ್ಸೊ ಪ್ರಕರಣದ ಆರೋಪಿ ಮಂಜಾನಾಥ್ ಪರಾರಿಯಾಗಿದ್ದಾನೆ. ಕಳೆದ ಒಂದು ವಾರದ ಹಿಂದೆ ಪೋಕ್ಸೊ ಪ್ರಕರಣ ದಾಖಲಾದ ಹಿನ್ನೆಲೆ ಆರೋಪಿಯನ್ನು ಬಂಧಿಸಿ ಠಾಣೆಗೆ ಪೊಲೀಸರು ಕರೆತಂದಿದ್ದರು.
ಗುರುವಾರ ಮಧ್ಯರಾತ್ರಿ ಠಾಣೆಯ ಲಾಕಪ್‌ನಿಂದ ಆರೋಪಿ ಎಸ್ಕೇಪ್ ಆಗಿದ್ದಾನೆ. ಪೊಲೀಸರು ಠಾಣೆಯಲ್ಲಿ ಮಲಗಿರುವುದನ್ನ ಕಂಡು ಆರೋಪಿ ಪರಾರಿಯಾಗಿದ್ದಾನೆ. ಆರೋಪಿ ಎಸ್ಕೇಪ್ ಆಗುವ ದೃಶ್ಯ ‘ಪಬ್ಲಿಕ್ ಟಿವಿ’ಗೆ ಲಭ್ಯವಾಗಿದೆ.
ಇದೀಗ ಆರೋಪಿ ಪತ್ತೆಗಾಗಿ ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯದಲ್ಲಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
Laxmi News 24×7