Breaking News

Yearly Archives: 2026

ರಾಜ್ಯದಲ್ಲಿ ಬರ – 177 ತಾಲೂಕುಗಳಲ್ಲಿ 46,324 ಕೋಟಿ ಬೆಳೆ ನಷ್ಟ , 7,142 ಕೋಟಿ ನೆರವಿಗೆ ಮನವಿ

ಬೆಂಗಳೂರು: ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನ ಬರಪೀಡಿತ  ಎಂದು ಘೋಷಿಸಲಾಗಿದ್ದು, ಬರ ಪರಿಸ್ಥಿತಿ ಹಿನ್ನೆಲೆ ರಾಜ್ಯ ಸರ್ಕಾರ  ಕೇಂದ್ರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಿದೆ. ರಾಜ್ಯಕ್ಕೆ ಆಗಮಿಸಿರುವ ಅಂತರ ಸಚಿವಾಲಯದ ಕೇಂದ್ರ ತಂಡಕ್ಕೆ  ರಾಜ್ಯ ಸರ್ಕಾರ ಬರದಿಂದ ಉಂಟಾಗಿರುವ ಬೆಳೆ ನಷ್ಟದ ವಿವರಗಳನ್ನ ಸಲ್ಲಿಸಿದೆ. ಈಗಾಗಲೇ ಘೋಷಿಸಲಾದ 177 ತಾಲೂಕುಗಳ ಪೈಕಿ ಎಲ್ಲ 177 ತಾಲೂಕುಗಳಲ್ಲೂ ಬೆಳೆ ನಷ್ಟದ ಮೌಲ್ಯಮಾಪನ ಪೂರ್ಣಗೊಂಡಿದ್ದು, ಉಳಿದ 40 ತಾಲೂಕುಗಳಲ್ಲಿ ಮೌಲ್ಯಮಾಪನ ಕಾರ್ಯ …

Read More »

ಮೈಸೂರು | ನಾಲ್ಕೇ ದಿನಕ್ಕೆ ಮುರಿದು ಬಿದ್ದ ದಸರಾ ದೀಪಾಲಂಕಾರ ಕಟೌಟ್

ಮೈಸೂರು: ನಗರದ ಗನ್ ಹೌಸ್ ವೃತ್ತದಲ್ಲಿ ಕಟ್ಟಲಾಗಿದ್ದ ದಸರಾ ದೀಪಾಲಂಕಾರದ ಕಟೌಟ್ ಏಕಾಏಕಿ ಮುರಿದು ಬಿದ್ದಿದೆ. ಟಿಟಿ ವಾಹನದ ಮೇಲೆ ವಿದ್ಯುತ್ ದೀಪಾಲಂಕಾರದ ಕಟೌಟ್ ಬಿದ್ದಿದೆ ವಾಹನ ಚಾಲಕ ಅದೃಷ್ಟ ವಶಾತ್ ಪ್ರಾಣಾಪಾಯಾದಿಂದ ಪಾರಾಗಿದ್ದಾನೆ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ಹಾಗೂ ಗುತ್ತಿಗೆ ಪಡೆದ ಮೋಹನ್ ಎಂಬ ವ್ಯಕ್ತಿಯ ಬೇಜವಾಬ್ದಾರಿತನದಿಂದ ಕಟೌಟ್ ಮುರಿದು ಬಿದ್ದಿದೆ. ಬೃಹತ್ ಲೈಟ್ ಕಟೌಟ್ ಗೆ ಅರ್ಧ ಅಡಿ ಗುಂಡಿ ತೆಗೆದು ಕಂಬ ಹಾಕಿದ …

Read More »

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮಗಳಿದ್ದರೆ ಸಮಗ್ರ ತನಿಖೆ ನಡೆಸಿ: ಸಿ.ಟಿ ರವಿ

ಚಿತ್ರದುರ್ಗ: ಮತದಾರರ ಪಟ್ಟಿಯಿಂದಹೆಸರುಗಳನ್ನು ತೆಗೆದುಹಾಕಿರುವ ಕುರಿತು ಬಂದಿರುವ ದೂರುಗಳನ್ನು ಚುನಾವಣಾ ಆಯೋಗ  ಗಂಭೀರವಾಗಿ ಪರಿಗಣಿಸಿ, ಪ್ರತಿಯೊಂದು ಆಕ್ಷೇಪಣೆಯನ್ನೂ ಸಮಗ್ರವಾಗಿ ಪರಿಶೀಲಿಸಬೇಕು ಎಂದು ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಆಗ್ರಹಿಸಿದರು. ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮತದಾರರ ಪಟ್ಟಿಯಿಂದ ಅಳಿಸಲ್ಪಟ್ಟಿರುವವರಲ್ಲಿ ಬಹುಪಾಲು ಹಿಂದೂಗಳೇ ಇದ್ದಾರೆ ಎಂದು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದರು. ಚಿಕ್ಕಮಗಳೂರು ಕ್ಷೇತ್ರದಲ್ಲಿ ಸುಮಾರು 32 ಸಾವಿರ ಹೆಸರುಗಳು ಅಳಿಸಲ್ಪಟ್ಟಿದ್ದು, ಅವರಲ್ಲಿ ಹಿಂದೂ ಮತದಾರರು ಹೆಚ್ಚಿನ …

Read More »

ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ – ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ

ಬೆಂಗಳೂರು: ಎಸ್‍ಐಆರ್ ಸಂಬಂಧ ಬಿಜೆಪಿ ಕಾರ್ಯಕರ್ತರ  ಮೇಲೆ ಪೊಲೀಸ್‌ ಇಲಾಖೆ ಕಾನೂನು ಕ್ರಮ ಜಾರಿಗೊಳಿಸುವುದು, ಕಿರುಕುಳ ನೀಡಿದರೆ ರಾಜ್ಯದಾದ್ಯಂತ ಹೋರಾಟ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ಅವರು ಎಚ್ಚರಿಕೆ ನೀಡಿದರು. ಎಸ್‍ಐಆರ್  ಸಂದರ್ಭದಲ್ಲಿ ಸಲ್ಲಿಸಲಾದ ನಮೂನೆ 7 ಅರ್ಜಿಗಳಿಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕ್ರಿಯೆಗಳನ್ನ ಕಾನೂನು ಅನುಸಾರ ಕೈಗೊಳ್ಳಬೇಕು ಎಂದು ಆಗ್ರಹಿಸಿ ಇಂದು ಪೊಲೀಸ್ ಮಹಾನಿರ್ದೇಶಕರು ಮತ್ತು‌ ಪೊಲೀಸ್‌ ಮಹಾನಿರೀಕ್ಷಕರಿಗೆ ಮನವಿ ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಇಡೀ ರಾಜ್ಯದಲ್ಲಿ …

Read More »

ಅನ್ಯಾಯದ ವಿರುದ್ಧ ಧ್ವನಿ ಎತ್ತಲು `ಸತ್ಯಾಗ್ರಹ’ ಡಿಜಿಟಲ್ ವೇದಿಕೆ ಆರಂಭಿಸಿದ ರಾಹುಲ್ ಗಾಂಧಿ

ನವದೆಹಲಿ: ದೇಶಾದ್ಯಂತ ಅನ್ಯಾಯದ ವಿರುದ್ಧ ನಡೆಯುತ್ತಿರುವ ಹೋರಾಟಗಳು ಹಾಗೂ ಪ್ರತಿಭಟನೆಗಳನ್ನು ಒಂದೇ ವೇದಿಕೆಯಲ್ಲಿ ದಾಖಲಿಸಿ, ಜನರ ಧ್ವನಿಯನ್ನು ರಾಷ್ಟ್ರೀಯ ಮಟ್ಟಕ್ಕೆ ತಲುಪಿಸುವ ಉದ್ದೇಶದಿಂದ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ  `ಸತ್ಯಾಗ್ರಹ’  ಹೆಸರಿನ ಹೊಸ ಡಿಜಿಟಲ್ ವೇದಿಕೆಯನ್ನು ಆರಂಭಿಸಿದ್ದಾರೆ. ಗಾಂಧಿ ಜಯಂತಿ ಹಿನ್ನೆಲೆ ವೇದಿಕೆ ಆರಂಭಿಸಲಾಗಿದ್ದು, ಸತ್ಯ, ಅಹಿಂಸೆ ಹಾಗೂ ಅನ್ಯಾಯದ ವಿರುದ್ಧ ನಿರ್ಭೀತ ಪ್ರತಿರೋಧದ ಆಶಯಗಳನ್ನು ಇಂದಿನ ಹೋರಾಟಗಳಿಗೆ ಸಂಪರ್ಕಿಸುವ ಉದ್ದೇಶ ಹೊಂದಿದೆ. ದೇಶದ ವಿವಿಧ ಭಾಗಗಳಲ್ಲಿ ಜನರು …

Read More »

ಆರ್ಕೆಸ್ಟ್ರಾ ನೋಡ್ತಿದ್ದ ವೇಳೆ ದುರಂತ – ಲೈಟ್ ಕಂಬ ಬಿದ್ದು ಓರ್ವ ಸಾವು, ಮತ್ತೋರ್ವ ಗಂಭೀರ

ಬೆಂಗಳೂರು: ರಸ್ತೆ ಬದಿ ಲೈಟ್ ಕಂಬ  ಬಿದ್ದು ನೇಪಾಳ ಮೂಲದ ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನಲ್ಲಿ  ನಡೆದಿದೆ. ಶುಕ್ರವಾರ ನಗರದ ಮಾರತ್ತಹಳ್ಳಿಯ ಸಂಜಯನಗರದಲ್ಲಿ ಗಣೇಶ ವಿಸರ್ಜನೆಗೆ ಮೆರವಣಿಗೆ ನಡೆಯುತ್ತಿತ್ತು. ಈ ವೇಳೆ ಆರ್ಕೆಸ್ಟ್ರಾ ಕೂಡ ನಡೆಯುತ್ತಿತ್ತು. ರಾತ್ರಿ ಹನ್ನೊಂದು ಗಂಟೆ ವೇಳೆಯಲ್ಲಿ ಜನ ರಸ್ತೆಯ ಪಕ್ಕದಲ್ಲಿ ನಿಂತು ನೋಡುತ್ತಿದ್ದರು. ಈ ವೇಳೆ ಏಕಾಏಕಿ ಕಂಬ ಬಿದ್ದು, ಅವಘಡ ಸಂಭವಿಸಿದೆ. ಲೈಟ್ ಕಂಬ ಹಳೆಯದಾಗಿದ್ದು, ಕರೆಂಟ್ …

Read More »

ಬರ ಪರಿಸ್ಥಿತಿ ಸಮರ್ಪಕವಾಗಿ ನಿಭಾಯಿಸಲು ನೋಡಲ್ ಅಧಿಕಾರಗಳನ್ನು ನಿಯೋಜಿಸಿ – ಡಿಸಿಗೆ ಹೆಚ್.ಸಿ ಬಾಲಕೃಷ್ಣ ಸೂಚನೆ

ರಾಮನಗರ: ಜಿಲ್ಲೆಯ ಐದು ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿದ್ದು, ಬರ  ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲು ಎಲ್ಲಾ ತಾಲೂಕುಗಳಲ್ಲೂ ನೋಡಲ್ ಅಧಿಕಾರಿಗಳನ್ನು ನಿಯೋಜಿಸುವಂತೆ ಪೌರಾಡಳಿತ ಸಚಿವ ಹೆಚ್.ಸಿ.ಬಾಲಕೃಷ್ಣ  ಅಧಿಕಾರಿಗಳಿಗೆ ತಿಳಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಪತ್ತು ನಿರ್ವಹಣೆ ವಿಷಯಗಳ ಕುರಿತಂತೆ ಆಯೋಜಿಸಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿಯೋಜಿತ ನೋಡಲ್ ಅಧಿಕಾರಿಗಳು ಪ್ರತಿ ಶುಕ್ರವಾರ ಸಂಬಂಧಿಸಿದ ಕ್ಷೇತ್ರಗಳಿಗೆ ತೆರಳಿ ಅಲ್ಲಿ ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲು ಕೈಗೊಳ್ಳಲಾಗುತ್ತಿರುವ ಕ್ರಮಗಳು …

Read More »

ಕರ್ನಾಟಕ ಬರ – ಜಿಲ್ಲೆಗಳಿಗೆ ಭೇಟಿ, ಕೇಂದ್ರ ತಂಡದಲ್ಲಿ ಯಾರಿದ್ದಾರೆ?

ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಖಾರಿಫ್ ಬರದ ಪರಿಸ್ಥಿತಿಯನ್ನು ಪ್ರತ್ಯಕ್ಷವಾಗಿ ಪರಿಶೀಲಿಸಲು ಮತ್ತು ಅಧ್ಯಯನ ನಡೆಸಲು ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳ ಉನ್ನತ ಮಟ್ಟದ ಅಧಿಕಾರಿಗಳ ತಂಡವು ಅಕ್ಟೋಬರ್ 6 ರವರೆಗೆ ಜಿಲ್ಲೆಗಳಿಗೆ ಭೇಟಿ ನೀಡಲಿವೆ ​ಅಧಿಕಾರಿಗಳ ಈ ತಂಡವನ್ನು ಒಟ್ಟು ಮೂರು ವಿಭಾಗಗಳಾಗಿ, ತಂಡ 1, ತಂಡ 2 ಮತ್ತು ತಂಡ 3 ಎಂದು ವಿಂಗಡಿಸಲಾಗಿದ್ದು, ಈ ತಂಡಗಳು ಬರ ಪೀಡಿತ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಪರಿಸ್ಥಿತಿಯನ್ನು ಅವಲೋಕಿಸಲಿವೆ. …

Read More »

ಇಂದು ಒಂದೇ ದಿನ 5 ಚಿನ್ನ – ಪದಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದ ಭಾರತ

ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್  ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಅಸಾಧಾರಣ ಪ್ರದರ್ಶನ ಮುಂದುವರಿಸಿದ್ದಾರೆ. ಇಂದು ಒಂದೇ ದಿನ 5 ಚಿನ್ನದ ಪದಕಗಳನ್ನು ಬೇಟೆಯಾಡಿದ ಭಾರತ  ಪದಕ ಪಟ್ಟಿಯಲ್ಲಿ ಬಲಿಷ್ಠ ಉಜ್ಬೇಕಿಸ್ತಾನವನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಪುರುಷರ ಹಾಕಿ  ವಿಭಾಗದಲ್ಲಿ ಭಾರತದ ಪುರುಷರ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿತು. ಈ ಮಹತ್ವದ ಗೆಲುವಿನೊಂದಿಗೆ ಭಾರತವು ಪದಕ ಪಟ್ಟಿಯಲ್ಲಿ 5ನೇ ಸ್ಥಾನದಿಂದ …

Read More »

ಪ್ರೆಟ್ರೋಲ್ ಬಂಕ್‌ನಲ್ಲಿ ವಿದ್ಯುತ್ ಸ್ಪರ್ಶಿಸಿ ಯುವಕ ದುರ್ಮರಣ

ಬೀದರ್: ಪ್ರೆಟ್ರೋಲ್ ಬಂಕ್‌ನಲ್ಲಿ  ವಿದ್ಯುತ್ ಸ್ಪರ್ಶಿಸಿ ಯುವಕ  ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಸವಕಲ್ಯಾಣ ತಾಲೂಕಿನ ಚಂಡಕಾಪುರ ಗ್ರಾಮದ ಬಳಿಯ ಪೆಟ್ರೋಲ್ ಬಂಕ್‌ನಲ್ಲಿ ನಡೆದಿದೆ. ಬಸವಕಲ್ಯಾಣ ನಗರದ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿಯ ಅಧ್ಯಕ್ಷ ಅನಿಲ್ ರಗಟೆ ಎಂಬುವವರಿಗೆ ಸೇರಿದ ಬಂಕ್ ಇದಾಗಿದ್ದು, ವಿದ್ಯುತ್ ಸ್ಪರ್ಶಿಸಿ ಮಂಠಾಳ ಗ್ರಾಮದ ಅಮಿತ್ (19) ಮೃತಪಟ್ಟಿದ್ದಾನೆ. ಪೆಟ್ರೋಲ್ ಬಂಕ್‌ನ ಕಟ್ಟಡದ ಮೇಲಿದ್ದ ಸೋಲಾರ್ ತೊಳೆಯುವಾಗ ದುರ್ಘಟನೆ ಸಂಭವಿಸಿದೆ. ಬಂಕ್‌ನಲ್ಲಿ ಪೆಟ್ರೋಲ್, ಡಿಸೇಲ್ ತುಂಬಿಸಲು ಅಂತ …

Read More »