ಸವದತ್ತಿ ತಾಲೂಕಿನ ಹರ್ಷ ಸಕ್ಕರೆ ಕಾರ್ಖಾನೆಯಲ್ಲಿ 2026-2027ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಹಾಗೂ ಬಾಯ್ಲರ್ ಪ್ರದೀಪನ ಸಮಾರಂಭಕ್ಕೆ ಸೋಮವಾರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಚಾಲನೆ ನೀಡಲಾಯಿತು.ಹೂಲಿ ಸಾಂಬಯ್ಯನವರ ಮಠದ ಪೂಜ್ಯ ಶ್ರೀ ಉಮೇಶ್ವರ ಶಿವಾಚಾರ್ಯ ಅಜ್ಜನವರ ಅಮೃತ ಹಸ್ತದಿಂದ ಬಾಯ್ಲರ್ ಪ್ರದೀಪನ ನೆರವೇರಿಸುವ ಮೂಲಕ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಕಾರ್ಖಾನೆಯ ಪ್ರಗತಿ, ರೈತರ ಸಮೃದ್ಧಿ ಹಾಗೂ ಪ್ರಸಕ್ತ ಹಂಗಾಮು ಯಾವುದೇ …
Read More »Yearly Archives: 2026
ಗ್ಯಾಸ್ ಸಿಲಿಂಡರ್ ಸ್ಫೋಟ: ಆರು ಕಾರ್ಮಿಕರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ
ಮುಂಜಾನೆ ಗಾಢ ನಿದ್ದೆಯಲ್ಲಿದ್ದ ಕಾರ್ಮಿಕರು ಕ್ಷಣಾರ್ಧದಲ್ಲಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ್ದಾರೆ. ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ಆರು ಮಂದಿ ಕಟ್ಟಡ ಕಾರ್ಮಿಕರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಸ್ಫೋಟದ ತೀವ್ರತೆಗೆ ಮನೆಯ ಸಿಮೆಂಟ್ ಶೀಟ್ಗಳು ಛಿದ್ರಗೊಂಡಿದ್ದು, ಮನೆಯಲ್ಲಿದ್ದ ಬಟ್ಟೆಬರೆ ಹಾಗೂ ಇತರ ವಸ್ತುಗಳು ಸುಟ್ಟು ಕರಕಲಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಜುನಾಥ ಎಂಬುವರಿಗೆ ಸೇರಿದ ಮನೆಯಲ್ಲಿ ಉತ್ತರ ಭಾರತದ ಮೂಲದ ಕಟ್ಟಡ ಕಾರ್ಮಿಕರು ಬಾಡಿಗೆಗೆ ವಾಸವಿದ್ದರು. ಸೋಮವಾರ ಮುಂಜಾನೆ …
Read More »ವಕೀಲನಿಗೆ ಗುಂಡಿಕ್ಕಿ ಹತ್ಯೆ: ಬಾಡಿಗೆಗೆ ಇದ್ದವರಿಂದಲೇ ಕೃತ್ಯ
ದುಷ್ಕರ್ಮಿಗಳು ವಕೀಲರೊಬ್ಬರಿಗೆ ಗುಂಡಿಟ್ಟು ಹತ್ಯೆಗೈದಿರುವ ಘೋರ ಘಟನೆಯೊಂದು ನಡೆದಿದೆ. ಬೆಂಗಳೂರಿನ ವೈಟ್ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಘಟನೆ ಬಳಿಕ ಸುತ್ತಮುತ್ತಲಿನ ಪ್ರದೇಶದ ಜನರು ಬೆಚ್ಚಿ ಬಿದ್ದಿದ್ದಾರೆ. ಮಂಜುನಾಥ್ ಮೃತಪಟ್ಟ ವಕೀಲರು. ಮಂಜುನಾಥ್ ಅವರ ಮನೆಯಲ್ಲಿ ಬಾಡಿಗೆಗೆ ಇದ್ದ ಬಿಹಾರ ಮೂಲದ ವ್ಯಕ್ತಿಗಳಿಂದಲೇ ಘಟನೆ ನಡೆದಿದೆ ಎಂದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿದುಬಂದಿದೆ. ಅಲ್ಲದೇ ಬಾಡಿಗೆ ವಿಚಾರಕ್ಕೆ ಕಿರಿಕ್ ಆಗಿದೆ ಅನ್ನೋ ಶಂಕೆಯೂ ಇದೆ. ಪಟ್ಟಂದೂರು ಅಗ್ರಹಾರದಲ್ಲಿ ವಕೀಲ …
Read More »ದಸರಾ ರೀಲ್ಸ್ ಮಾಡಿ ಬಹುಮಾನ ಗೆಲ್ಲಿ: ಟಾಪ್ 100 ರೀಲ್ಸ್ಗೆ ಡಿಕೆಶಿ ವಿಶೇಷ ಆಫರ್!
ಮೈಸೂರು ದಸರಾ ಸಂಭ್ರಮವನ್ನು ರೀಲ್ಸ್ ಮೂಲಕ ಹಂಚಿಕೊಳ್ಳುವ ಯುವಜನರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಶೇಷ ಬಹುಮಾನದ ಆಫರ್ ಘೋಷಿಸಿದ್ದಾರೆ. ದಸರಾ ದೀಪಾಲಂಕಾರ, ಜಂಬೂಸವಾರಿ, ಆಹಾರ ಮೇಳ ಸೇರಿದಂತೆ ಹಬ್ಬದ ಯಾವುದೇ ಸಂಭ್ರಮದ ಕುರಿತು ರೀಲ್ಸ್ ಮಾಡಿ ಕಳುಹಿಸಿ. ಉತ್ತಮವಾದ 100 ರೀಲ್ಸ್ ಆಯ್ಕೆ ಮಾಡಿ ಬಹುಮಾನ ನೀಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. ಮೈಸೂರಿನಲ್ಲಿ ದಸರಾ ಕಂಬಳ ಓಟಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಈ ಘೋಷಣೆ ಮಾಡಿದ್ದಾರೆ. ಸಾಮಾಜಿಕ …
Read More »ರಾಜ್ಯದಾದ್ಯಂತ ಮುಂದಿನ 7 ದಿನ ಭಾರಿ ಮಳೆ ಮುನ್ಸೂಚನೆ
ರಾಜ್ಯದಲ್ಲಿ ಇಂದಿನಿಂದ ಮುಂದಿನ ಏಳು ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದ್ದು, ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ವಿವಿಧ ಜಿಲ್ಲೆಗಳಿಗೆ ಎಚ್ಚರಿಕೆ ನೀಡಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗುವ ಸಾಧ್ಯತೆಯಿದೆ. ಅಕ್ಟೋಬರ್ 18ರಂದು ಗುಡುಗು ಮತ್ತು …
Read More »ಸ್ಟಿಂಗ್ ಆಪರೇಷನ್ ಮಾಡಿದವರನ್ನು ಒದ್ದು ಒಳಗೆ ಹಾಕಬೇಕು: ಸಚಿವ ಎಂ.ಬಿ.ಪಾಟೀಲ್ ಆಕ್ರೋಶ
ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಿರುವ ಸ್ಟಿಂಗ್ ಆಪರೇಷನ್ ವಿವಾದದ ಬಗ್ಗೆ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ.ಪಾಟೀಲ್, ಸ್ಟಿಂಗ್ ಆಪರೇಷನ್ ನಮ್ಮ ರಾಜ್ಯಕ್ಕೆ ಒಂದು ಶಾಪ ಎಂದು ತಿಳಿಸಿದ್ದಾರೆ. ಸ್ಟಿಂಗ್ ಆಪರೇಷನ್ಗಳ ಮೂಲಕ ಗುರಿಯಾಗಿಸುವ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಸಚಿವರು ಎಚ್ಚರಿಕೆಯಿಂದ ಇರಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವ ಸಂಪುಟ ಸಭೆಯಲ್ಲಿ ಸಲಹೆ ನೀಡಿದ್ದರು ಎಂದರು. ಸ್ಟಿಂಗ್ ಆಪರೇಷನ್ …
Read More »ಎರಡು ತಲೆ, ಒಂದೇ ದೇಹ*: *ಜನಿಸಿದ ವಾರದಲ್ಲೇ ಸಯಾಮಿ ಅವಳಿ ಶಿಶುಗಳ ಸಾವು
ಎರಡು ತಲೆಗಳು, ಒಂದೇ ದೇಹದೊಂದಿಗೆ ಜನಿಸಿದ್ದ ಅಪರೂಪದ ಸಯಾಮಿ ಅವಳಿ ಗಂಡು ಶಿಶುಗಳು ಜನಿಸಿದ ಕೇವಲ ಒಂದು ವಾರದಲ್ಲೇ ಮೃತಪಟ್ಟಿವೆ. ಒಡಿಶಾದ ಬೆರ್ಹಾಂಪುರದ ಸರ್ಕಾರಿ ಎಂಕೆಸಿಜಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ಚಿಕಿತ್ಸೆ ನೀಡಿದರೂ ಶಿಶುಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ಘಟನೆ ಅಪರೂಪದ ವೈದ್ಯಕೀಯ ಸ್ಥಿತಿಯ ಸವಾಲುಗಳನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಕಂಧಮಾಲ್ ಜಿಲ್ಲೆಯ ತುಮುಡಿಬಂಧ ಪ್ರದೇಶದ 22 ವರ್ಷದ ದಿನಗೂಲಿ ಕಾರ್ಮಿಕ ಮಹಿಳೆ ಅಕ್ಟೋಬರ್ 11ರಂದು ಸಿಸೇರಿಯನ್ …
Read More »ಸೋದರ ಸಂಬಂಧಿ ಜೊತೆಯೇ ಪತ್ನಿಯ ಅನೈತಿಕ ಸಂಬಂಧ*: ಮನನೊಂದ ಪತಿ ಆತ್ಮಹತ್ಯೆ
ಸೋದರ ಸಂಬಂಧಿ ಜೊತೆಯೇ ಪತ್ನಿ ಅನೈತಿಕ ಸಂಬಂಧ ಹೊಂದಿ, ಎರಡನೇ ಮಗುವಿಗೆ ತಾಯಿಯಾಗುತ್ತಿರುವುದನ್ನು ತಿಳಿದು ಮನನೊಂದ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಪತ್ನಿಯ ಕೃತ್ಯಕ್ಕೆ ಬೇಸತ್ತು ಪತಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದು, ಮುನಿಕೃಷ್ಣ (35) ಎಂದು ಗುರುತಿಸಲಾಗಿದೆ. ಈ ಘಟನೆ ಬೆಂಗಳೂರು ಹೊರವಲಯದಲ್ಲಿ ನಡೆದಿದೆ. ಆನೇಕಲ್ ತಾಲ್ಲೂಕಿನ ನೆರಿಗಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಮುನಿಕೃಷ್ಣ 10 ವರ್ಷಗಳ ಹಿಂದೆ …
Read More »ಸ್ಟಿಂಗ್ ಆಪರೇಷನ್ ಒಳ್ಳೇದು; ಮನೆಯಲ್ಲಿರುವ ಹೆಣ್ಣುಮಕ್ಕಳಿಗೆ ಗೌರವ ಜಾಸ್ತಿ ಆಗುತ್ತೆ ಎಂದ ಶಾಸಕ
ರಾಜ್ಯದಲ್ಲಿ ಸದ್ಯ ಸ್ಟಿಂಗ್ ಆಪರೇಷನ್ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದ್ದು, ಈ ಬಗ್ಗೆ ಚೆನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಸ್ಟಿಂಗ್ ಆಪರೇಷನ್ ಒಳ್ಳೆಯದು ಎಂದಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಶಿವಗಂಗಾ ಬಸವರಾಜ್, ಸ್ಟಿಂಗ್ ಆಪರೇಷನ್ ಒಂದು ರೀತಿ ಒಳ್ಳೆಯದು. ಸ್ಟಿಂಗ್ ಆಪರೇಷನ್ ನಿಂದ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಗೌರವ ಜಾಸ್ತಿ ಆಗುತ್ತೆ, ಯಾರು ಎಲ್ಲೂ ಹೋಗದಂತೆ ಮನೆಕಡೆ ಗಮನ ಹರಿಸುತ್ತಾರೆ. ಈ ರೀತಿ ಮಾಡೋದೂ ಒಂದು ತರಹ ಒಳ್ಳೆಯದು ಅನ್ನಿಸುತ್ತೆ ಎಂದಿದ್ದಾರೆ. …
Read More »ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ, ಸಲ್ಮಾನ್ ಖಾನ್ಗೆ ಮತ್ತೆ ಬೆದರಿಕೆ
ಬಾಲಿವುಡ್ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ನಡೆದ ಗುಂಡಿನ ದಾಳಿಯ ಬೆನ್ನಲ್ಲೇ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ. ಈ ದಾಳಿಯ ಹೊಣೆ ಹೊತ್ತಿರುವುದಾಗಿ ಹೇಳಿಕೊಂಡಿರುವ ವ್ಯಕ್ತಿಗಳು, ಸಲ್ಮಾನ್ ಖಾನ್ಗೆ ಕ್ಷಮೆಯಾಚಿಸುವಂತೆ ಒತ್ತಾಯಿಸಿ ಮತ್ತೊಂದು ಬೆದರಿಕೆ ಹಾಕಿದ್ದಾರೆ. ಸಲ್ಮಾನ್ ಜೊತೆ ಕೆಲಸ ಮಾಡುವವರನ್ನೂ ಗುರಿಯಾಗಿಸುವುದಾಗಿ ಎಚ್ಚರಿಕೆ ನೀಡಿರುವುದರಿಂದ ಬಾಲಿವುಡ್ನಲ್ಲಿ ಆತಂಕ ಹೆಚ್ಚಿದೆ. ಆದರೆ, ಬಿಷ್ಣೋಯ್ ಗ್ಯಾಂಗ್ನ ನೇರ ಭಾಗವಹಿಸುವಿಕೆಯನ್ನು ಮುಂಬೈ ಪೊಲೀಸರು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ. …
Read More »
Laxmi News 24×7