ಬೆಂಗಳೂರು: ನಾನು ಸಿದ್ದರಾಮಯ್ಯ ಏನು ಮಾತಾಡಿಕೊಂಡಿದ್ದೇವೆ ಎನ್ನುವುದು ನನಗೆ ಗೊತ್ತಿದೆ. ನಾವು ಕದ್ದುಮುಚ್ಚಿ ಮಾತನಾಡಿಕೊಂಡಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ದೆಹಲಿಗೆ ತೆರಳುವ ಮುನ್ನ ಸದಾಶಿವ ನಗರದ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗೊಂದಲ ಬೇರೆಯವರಿಗೆ ಇರಬಹುದು. ಆದರೆ ನನಗೆ ಯಾವುದೇ ಗೊಂದಲ ಇಲ್ಲ. ನಾವು, ನಮ್ಮ ವರಿಷ್ಠರು ಮಾತಾಡಿಕೊಂಡಿದ್ದೇವೆ. ಬೇರೆಯವರು ಟೆನ್ಶನ್ ತೆಗೆದುಕೊಳ್ಳುವುದಾಗಲಿ, ಹೇಳಿಕೆ ಕೊಡೋದರಿಂದಾಗಲಿ ಯಾರಿಗೂ ಇದರಿಂದ ಪ್ರಯೋಜನ ಇಲ್ಲ ಎಂದರು. ನನ್ನ ಪರ, ವಿರುದ್ಧ …
Read More »Yearly Archives: 2026
ರಾಜ್ಯ ರಾಜಕೀಯಕ್ಕೆ ಮರಳುವ ಸುಳಿವು ನೀಡಿದ ರೋಷನ್ ಬೇಗ್
ನವದೆಹಲಿ: ನಾನು ರಾಜಕೀಯದಿಂದ ನಾಪತ್ತೆಯಾಗಿಲ್ಲ, ಎಲ್ಲರೂ ಸೇರಿ ಕೋರ್ಟ್ ಕೇಸ್‌ಗಳಲ್ಲಿ ಸಿಲುಕಿಸಿದ್ದರು ನಿಧಾನವಾಗಿ ಅವುಗಳಿಂದ ಆಚೆ ಬರುತ್ತಿದ್ದೇನೆ. ರಾಜಕೀಯ ನನ್ನ ರಕ್ತದಲ್ಲಿದೆ, ವಿದ್ಯಾರ್ಥಿ ಜೀವನದಿಂದ ರಾಜಕೀಯ ಮಾಡುತ್ತಿದ್ದೇನೆ. ಮುಂದೆ ನಾನು ಸಕ್ರೀಯ ರಾಜಕೀಯಕ್ಕೆ ಮರಳುತ್ತೇನೆ ಎಂದು ಮಾಜಿ ಸಚಿವ ರೋಷನ್ ಬೇಗ್ ಹೇಳಿದ್ದಾರೆ. ದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿ ಬಳಿಕ ಮಾತಮಾಡಿದ ಅವರು ಅವರು, ನಾನು ಚಿಕ್ಕಪ್ಪ ದೊಡ್ಡಪ್ಪ ಮೂಲಕ ರಾಜಕೀಯಕ್ಕೆ …
Read More »ಪ್ರಧಾನಿ ಕುರ್ಚಿ ಬಳಿ ಕೈ ಮಹಿಳಾ ಸದಸ್ಯರ ಪ್ರತಿಭಟನೆಯ ವಿಡಿಯೋ ಬಿಡುಗಡೆ – ಕಿರಣ್ ರಿಜಿಜು ಆಕ್ರೋಶ
ನವದೆಹಲಿ: ಲೋಕಸಭೆಯಲ್ಲಿ ಕಾಂಗ್ರೆಸ್ ಮಹಿಳಾ ಸದಸ್ಯರು ಪ್ರತಿಭಟನೆ ನಡೆಸಿದ್ದ ವಿಡಿಯೋವನ್ನು ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಕಿರಣ್ ರಿಜಿಜು ಬಿಡುಗಡೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಈ ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡ ಕಿರಣ್ ರಿಜುಜು ತನ್ನ ಸಂಸದರು ಲೋಕಸಭೆಯಲ್ಲಿ ಪ್ರದರ್ಶಿಸಿದ ಅತ್ಯಂತ ಅವಮಾನಕರ ನಡವಳಿಕೆಯ ಬಗ್ಗೆ ಕಾಂಗ್ರೆಸ್ ಹೆಮ್ಮೆಪಡಬೇಕು. ನಾವು ನಮ್ಮ ಬಿಜೆಪಿಯ ಮಹಿಳಾ ಸಂಸದರಿಗೆ ಕಾಂಗ್ರೆಸ್ ಸಂಸದರನ್ನು ಎದುರಿಸಲು ಅವಕಾಶ ನೀಡಿದ್ದರೆ ಅದು ತುಂಬಾ ಕೊಳಕು ದೃಶ್ಯಕ್ಕೆ ಕಾರಣವಾಗುತ್ತಿತ್ತು. ಸಂಸತ್ತಿನ ಘನತೆ …
Read More »ಬೆಸ್ಕಾಂ ಭ್ರಷ್ಟಾಚಾರಕ್ಕೆ ಲೋಕಾಯುಕ್ತ ಬ್ರೇಕ್: ₹3 ಲಕ್ಷ ಲಂಚ ಪಡೆಯುತ್ತಿದ್ದ ಇಇ ರಾಜೇಶ್ ಲೋಕಾಯುಕ್ತ ಪೊಲೀಸ್ ವಶಕ್ಕೆ
ಬೆಂಗಳೂರು: ನಗರದ ಇಂದಿರಾ ನಗರ ಬೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ (ಇಇ) ರಾಜೇಶ್ ಕೆ.ವಿ. ಅವರು ವಾಣಿಜ್ಯ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ನೀಡಲು ₹3 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ! ವಿದ್ಯುತ್ ಗುತ್ತಿಗೆದಾರರಾದ ದಿಲೀಪ್ ಎಸ್.ಎನ್. ಅವರು 24 ಕಿಲೋವಾಟ್ ಸಾಮರ್ಥ್ಯದ ನೂತನ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದ್ದರು! ಈ ಕೆಲಸ ಮಾಡಿಕೊಡಲು ರಾಜೇಶ್ ಅವರು ಮೊದಲಿಗೆ ₹7 ಲಕ್ಷಕ್ಕೆ ಬೇಡಿಕೆಯಿಟ್ಟು, ಅಂತಿಮವಾಗಿ ₹3 ಲಕ್ಷ …
Read More »ನಕಲಿ ದಾಖಲೆ ಸೃಷ್ಟಿ ಸಬ್‌ರಜಿಸ್ಟ್ರಾರ್ ಬಂಧನ
ಚಿಕ್ಕೋಡಿ:ನಕಲಿ ದಾಖಲೆ ಸೃಷ್ಟಿಸಿ ಜಮೀನು ಖರೀದಿ, ಮಾರಾಟ ಮಾಡಿಸಿದ ಆರೋಪದಡಿ ಹುಕ್ಕೇರಿ ತಾಲೂಕಿನ ಉಪನೋಂದಣಿ ಅಧಿಕಾರಿ ಮಡಿವಾಳಯ್ಯ ಬಾನಿಮಠ (34), ಬಾಂಡ್ ರೈಟರ್ ಆನಂದ ದಡ್ಡಿಮನಿ(35) ಪೊಲೀಸರು ಬಂಧಿಸಿದ್ದಾರೆ. ಹುಕ್ಕೇರಿ ತಾಲೂಕಿನ ಕುರಣಿ ಗ್ರಾಮದಲ್ಲಿರು 2.1 ಎಕರೆ ಜಮೀನಿಗೆ ಬಂಧಿತರು ನಕಲಿ ದಾಖಲೆ ಸೃಷ್ಟಿಸಿ ಹುಕ್ಕೇರಿ ಉಪನೋಂದಣಿ ಕಚೇರಿಯಲ್ಲಿ ಬೇರೆ ವ್ಯಕ್ತಿಯ ಹೆಸರಿನಲ್ಲಿ ನೋಂದಣಿ ಮಾಡಿಸಿ ಮಾರಾಟ ಮಾಡಿದ್ದರು. ಈ ಅಕ್ರಮಕ್ಕೆ ಉಪನೋಂದಣಿ ಅಧಿಕಾರಿ ಸೇರಿ ಹಲವರು ಭಾಗಿಯಾಗಿರುವ ಕುರಿತು …
Read More »ಮಟ್ಕಾ ಅಡ್ಡೆ ಮೇಲೆ ಪೊಲೀಸ್ ದಾಳಿ
ಬೆಳಗಾವಿ: ನಗರದ ಪೊಲೀಸರು ನಡೆಸಿದ 6 ಪ್ರತ್ಯೇಕ ಮಟ್ಕಾ ಅಡ್ಡೆ ಮೇಲಿನ ದಾಳಿ ಪ್ರಕರಣಗಳಲ್ಲಿ 7 ಜನ ಆರೋಪಿ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿತರಾದ ಮೊಹಮ್ಮದ್‌ಶಫಿ ತಹಶೀಲ್ದಾರ (69), ಐಮಾನ್ ಹಸನ್‌ಸಾಬ್ ಚಿಕ್ಕೋಡಿ (33), ಮೊಹ್ಮದ್‌ದಿಲಶಾದ್ ಅನ್ಸಾರಿ (30), ದಾನೀಶ್ ಸಯ್ಯದ್ (23), ಮೊಹ್ಮದ್‌ರಜಾ ಇನಾಮದಾರ್ (27), ಮೊಹ್ಮದ್‌ಯೂನಸ್ ಕಲೀಲ್‌ಅಹ್ಮದ್ (30), ಸಲ್ಮಾನ್ ಅನ್ಸಾರಿ ನಿಯಾಜುದ್ದೀನ್ (30) ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ …
Read More »ಬಿಜೆಪಿಗೆ ಅಬಕಾರಿ ಸಚಿವರೇ ಟಾರ್ಗೆಟ್:ಸಿದ್ಧಾರ್ಥ ಸಿಂಗೆ ಆಕ್ರೋಶ
ಅಥಣಿ ಗ್ರಾಮೀಣ: ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಬಾರ್ ಲೈಸನ್ಸ್ ಹಂಚಿಕೆ ಹಗರಣ ವಿಚಾರದಲ್ಲಿ ವಿನಾಕಾರಣ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೆಸರು ಉಲ್ಲೇಖಿಸಿ ಬಿಜೆಪಿಯವರು ವಿಧಾನಸಭೆಯಲ್ಲಿ ಧರಣಿ ನಡೆಸುತ್ತಿದ್ದಾರೆ ಎಂದು ಅಥಣಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿದ್ಧಾರ್ಥ ಸಿಂಗೆ ಆರೋಪಿಸಿದರು. ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ನಿರೀಕ್ಷಣಾಮಂದಿರದಲ್ಲಿ ಅಥಣಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯವರು ಅಬಕಾರಿ ಸಚಿವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಈಗಾಗಲೇ ಸುಳ್ಳು ಆರೋಪಗಳ …
Read More »ಡಿಸಿಸಿ ಬ್ಯಾಂಕ್ ಠೇವಣಿ 500 ಕೋಟಿ ರೂ. ಹೆಚ್ಚಳ
ಬೆಳಗಾವಿ: ಇಲ್ಲಿನ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಬಿಡಿಸಿಸಿ) ಹೊಸ ಆಡಳಿತ ಮಂಡಳಿಯ ಮೂರು ತಿಂಗಳ ಅವಧಿಯಲ್ಲಿ ಠೇವಣಿ 500 ಕೋಟಿ ರೂ. ಹೆಚ್ಚಳವಾಗಿದೆ. ಆದರೆ, ಬ್ಯಾಂಕಿನ ವಹಿವಾಟು ಬಗ್ಗೆ ತಪ್ಪು ಮಾಹಿತಿ ನೀಡುತ್ತಿರುವ ಡಾ.ಮಹಾಂತೇಶ ಕಡಾಡಿ ಸೇರಿ ನಾಲ್ವರಿಗೆ ಕಾನೂನು ನೋಟೀಸ್ ನೀಡಲಾಗಿದೆ ಎಂದು ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಹೇಳಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡಿಸಿಸಿ ಬ್ಯಾಂಕಿನಲ್ಲಿ ಯಾವುದೇ ರೀತಿಯ ಠೇವಣಿ ಕಡಿಮೆಯಾಗಿಲ್ಲ. ನಬಾರ್ಡ್ …
Read More »ಗ್ರಾಮೀಣ ಭಾಗದಲ್ಲಿ ಮಹಿಳಾ ಸಬಲೀಕರಣಕ್ಕೆ ಶ್ರಮಿಸಲು ಕರೆ
ಬೆಳಗಾವಿ: ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ ಸಬಲೀಕರಣದಿಂದ ಮಾತ್ರ ಸಮುದಾಯದ ಅಭಿವೃದ್ಧಿ ಸಾಧ್ಯ. ಹೀಗಾಗಿ ಗ್ರಾಮ ಮಟ್ಟದಲ್ಲಿ ಕೆಲಸ ಮಾಡುವ ಗ್ರಾಪಂ ಮಟ್ಟದ ಮುಖ್ಯ ಪುಸ್ತಕ ಬರಹಗಾರರು, ಎಂಬಿಕೆ ಮತ್ತು ಎಲ್‌ಸಿಆರ್‌ಪಿ ಸಂಪನ್ಮೂಲ ವ್ಯಕ್ತಿಗಳ, ಕೃಷಿ ಸಖಿ, ಪಶು ಸಖಿಯರ ಮೂಲಕ ಸರ್ಕಾರದ ಯೋಜನೆಗಳನ್ನು ಮನೆಮನೆಗೆ ತಲುಪಿಸುವ ಕಾರ್ಯವನ್ನು ಬದ್ಧತೆಯಿಂದ ಮಾಡಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಗ್ರಾಮೀಣ ಮಹಿಳೆಯರ ಶ್ರೇಯೋಭೀವೃದ್ಧಿ ಉದ್ದೇಶದಿಂತ ತಮ್ಮ ಗೃಹ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ …
Read More »ವಾಲ್ಮೀಕಿ ಜಾತ್ರೆಯಲ್ಲಿ ಸಿಎಂ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ: ಸಮುದಾಯಕ್ಕೆ ಸೈಟ್ ಭಾಗ್ಯ ಘೋಷಿಸಿದ ಸಚಿವ ಸತೀಶ್ ಜಾರಕಿಹೊಳಿ!
ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಜನಸಾಗರವೇ ಹರಿದುಬಂದಿದೆ. ವಾಲ್ಮೀಕಿ ಜಾತ್ರೆಯನ್ನು ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರೆ, ಸಚಿವ ಸತೀಶ್ ಜಾರಕಿಹೊಳಿ ಅವರು ಸಮುದಾಯದ ಜನರಿಗೆ ‘ನಿವೇಶನ’ ನೀಡುವ ಬಂಪರ್ ಆಫರ್ ಘೋಷಿಸಿದ್ದಾರೆ. ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠ ಆಯೋಜಿಸಿದ್ದ “ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರೆ-2026 ಮತ್ತು ಜನ ಜಾಗೃತಿ ಜಾಥಾ ಮಹೋತ್ಸವ”ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ಬಿಜೆಪಿವರು 4 …
Read More »
Laxmi News 24×7