Breaking News

ಕದ್ದುಮುಚ್ಚಿ ಮಾತನಾಡಿಲ್ಲ, ನಾನು ಸಿಎಂ ಏನು ಮಾತನಾಡಿದ್ದೇವೆ ಅನ್ನೋದು ಗೊತ್ತಿದೆ: ಡಿಕೆಶಿ

Spread the love

ಬೆಂಗಳೂರು: ನಾನು ಸಿದ್ದರಾಮಯ್ಯ ಏನು ಮಾತಾಡಿಕೊಂಡಿದ್ದೇವೆ ಎನ್ನುವುದು ನನಗೆ ಗೊತ್ತಿದೆ. ನಾವು ಕದ್ದುಮುಚ್ಚಿ ಮಾತನಾಡಿಕೊಂಡಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್‌  ಹೇಳಿದ್ದಾರೆ.

ದೆಹಲಿಗೆ ತೆರಳುವ ಮುನ್ನ ಸದಾಶಿವ ನಗರದ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗೊಂದಲ ಬೇರೆಯವರಿಗೆ ಇರಬಹುದು. ಆದರೆ ನನಗೆ ಯಾವುದೇ ಗೊಂದಲ ಇಲ್ಲ. ನಾವು, ನಮ್ಮ ವರಿಷ್ಠರು ಮಾತಾಡಿಕೊಂಡಿದ್ದೇವೆ. ಬೇರೆಯವರು ಟೆನ್ಶನ್ ತೆಗೆದುಕೊಳ್ಳುವುದಾಗಲಿ, ಹೇಳಿಕೆ ಕೊಡೋದರಿಂದಾಗಲಿ ಯಾರಿಗೂ ಇದರಿಂದ ಪ್ರಯೋಜನ ಇಲ್ಲ ಎಂದರು.

ನನ್ನ ಪರ, ವಿರುದ್ಧ ಶಾಸಕರು, ಸಚಿವರು ಹೇಳಿಕ ನೀಡಿದರೆ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ. ಎಲ್ಲರೂ ಬಾಯಿ ಮುಚ್ಚಿಕೊಂಡು ಇರಬೇಕು ಅಂತ ಖರ್ಗೆಯವರು ಹೇಳಿದ್ದಾರೆ. ಅದನ್ನು ನಾವು ಪಾಲಿಸಿಕೊಂಡು ಹೋಗಬೇಕು ಎಂದು ಹೇಳಿದರು.

ಅಸ್ಸಾಂ ಚುನಾವಣೆ ವಿಚಾರದ ಬಗ್ಗೆ ಇಂದು ಸಂಜೆ ಚರ್ಚೆ ನಡೆಸಲು ಎಐಸಿಸಿಯವರು ನನ್ನನ್ನು ಕರೆದಿದ್ದಾರೆ. ಕೇರಳಕ್ಕೆ ಹೋಗಿದ್ದೆ ಈಗ ಮುಗಿಸಿಕೊಂಡು ಅಸ್ಸಾಂಗೆ ಹೋಗಬೇಕು ಎಂದರು.

ಬಜೆಟ್‌ ಸಭೆಗೆ ಗೈರಾಗುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ, ಬಜೆಟ್ ಮೀಟಿಂಗ್ ಬಗ್ಗೆ ಸಿಎಂಗೆ ಕೇಳಿಕೊಂಡಿದ್ದೇನೆ. ನಿನ್ನೆಯೂ ಬಜೆಟ್ ಮೀಟಿಂಗ್ ಮಾಡಿದ್ದು ಸಿಎಂ ಸಭೆ ಮಾಡುತ್ತಾರೆ. ದೆಹಲಿಯಿಂದ ಬಂದ ನಂತರ ಮಾತನಾಡುತ್ತೇನೆ ಎಂದು ತಿಳಿಸಿದರು.

ದೆಹಲಿಯಿಂದ ಗುಡ್ ನ್ಯೂಸ್ ತರ್ತೀರಾಎಂಬ ಪ್ರಶ್ನೆಗೆ ಡಿಕೆಶಿ, ಪ್ರತಿ ದಿನವೂ ನನಗೆ ಒಳ್ಳೆಯದೇ, ಪ್ರತೀ ದಿನವೂ ಸಂತೋಷನೇ, ಪ್ರತೀ ದಿನವೂ ಕಷ್ಟದ ದಿನನೇ. ಯಾವುದೂ ಏನೂ ಸುಲಭವಲ್ಲ. ಜನರ ಸಮಸ್ಯೆಗಳನ್ನು ಬಗೆಹರಿಸಬೇಕಾದರ ಅನೇಕ ಕಷ್ಟಗಳು, ತೊಡಕುಗಳು ಇದ್ದೇ ಇರುತ್ತವೆ. ಟೀಕೆಗಳು ಬರುತ್ತಲೇ ಇರುತ್ತವೆ. ಟೀಕೆಗಳನ್ನು ಎದುರಿಸಲೇಬೇಕು, ನಮ್ ಕೆಲಸ ಮಾಡಿಕೊಂಡು ಹೋಗಬೇಕು ಎಂದು ಮಾರ್ಮಿಕ ಮಾತನ್ನು ಆಡಿದರು.

ಯತೀಂದ್ರಗೆ ಯಾಕೆ ನೋಟಿಸ್‌ ನೀಡಿಲ್ಲ ಎಂಬ ಇಕ್ಬಾಲ್ ಹುಸೇನ್ ಹೇಳಿಕೆಯ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಅದನ್ನು ಹೈಕಮಾಂಡ್‌ ಬಳಿ ಕೇಳೋಣ ಅಂತ ಹೇಳಿ ಡಿಕೆಶಿ ದೆಹಲಿಗೆ ತೆರಳಿದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ