ಬೆಂಗಳೂರು: ಮುಂದಿನ 1 ವಾರಗಳ ಕಾಲ ರಾಜ್ಯದ ಹವಾಮಾನದಲ್ಲಿ ಭಾರೀ ಏರುಪೇರು ಕಂಡುಬರಲಿದೆ. ಒಂದೆಡೆ ಸುಡುವ ಬಿಸಿಲು, ಒಣಹವೆ ಹಾಗೂ ಮತ್ತೊಂದೆಡೆ ಮಳೆಯ ಆರ್ಭಟ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನ ಜಿಲ್ಲೆಗಳಾದ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ ಮತ್ತು ಗದಗದಲ್ಲಿ ಸೂರ್ಯನ ತಾಪ ವಿಪರೀತವಾಗಿರಲಿದೆ. ವಾರಪೂರ್ತಿ ಸುಮಾರು 42 ಡಿಗ್ರಿ ಸೆಲ್ಸಿಯಸ್ ತಾಪಮಾನದ ಎಚ್ಚರಿಕೆ ನೀಡಲಾಗಿದೆ. ನಿನ್ನೆ ಕಲಬುರಗಿಯಲ್ಲಿ 41.6 …
Read More »Yearly Archives: 2026
ಜೋಡಿ ಕೊಲೆ ಸಾಕ್ಷಿ ಹೇಳಲು ಹೋಗಬೇಕಿದ್ದವನ ಶವ ಮರದಲ್ಲಿ ಪತ್ತೆ!ಜೋಡಿ ಕೊಲೆ ಸಾಕ್ಷಿ ಹೇಳಲು ಹೋಗಬೇಕಿದ್ದವನ ಶವ ಮರದಲ್ಲಿ ಪತ್ತೆ!
ಚಿಕ್ಕೋಡಿ: ಜೋಡಿ ಕೊಲೆ ಪ್ರಕರಣದ ಸಾಕ್ಷಿ ಹೇಳಲು ಕೋರ್ಟ್‌ಗೆ ಹೊಗಬೇಕಿದ್ದ ವ್ಯಕ್ತಿಯ ಶವ ಅಥಣಿಯ ಹಣಮಾಪುರ ಗ್ರಾಮದ ಹೊರವಲಯದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾವನ್ನಪ್ಪಿದ ವ್ಯಕ್ತಿಯನ್ನು ಮಹಾರಾಷ್ಟ್ರ ಮೂಲದ ದಾದಾಸೋ ಇಮಗರ (56) ಎಂದು ಗುರುತಿಸಲಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಬಾವಿ ವಿಚಾರಕ್ಕೆ ಮಗ ಹಾಗೂ ತಮ್ಮನನ್ನು ಸಂಬಂಧಿಕರು ಕೊಲೆ ಮಾಡಿದ್ದರು. ಇದನ್ನು ದಾದಾಸೋ ಕಣ್ಣಾರೆ ಕಂಡಿದ್ದ. ಈ ಬಗ್ಗೆ ಹತ್ತು ಜನರ ವಿರುದ್ಧ ದೂರು …
Read More »ಮೇ 10ರಂದು ಬೆಂಗಳೂರು ಜನತೆಯ ಪರವಾಗಿ ಪ್ರಧಾನಿ ಮೋದಿಗೆ ಅಭಿನಂದನೆ: ಆರ್.ಅಶೋಕ್
ಬೆಂಗಳೂರು: ಮೇ 10ರಂದು ಆಗಮಿಸುತ್ತಿರುವ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರಿಗೆ ಬೆಂಗಳೂರು ಜನತೆಯ ಪರವಾಗಿ ಅಭಿನಂದನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಬಿಜೆಪಿ ಕಾರ್ಯಾಲಯದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿ ಅಧಿಕಾರಕ್ಕೆ ಬರುತ್ತಿದೆ. ಮೋದಿ ಅವರ ಸಾಧನೆಗೆ ವಿಶ್ವವೇ ಕೊಂಡಾಡುತ್ತಿದೆ. 75 ವರ್ಷಗಳ ನಂತರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸಾಧನೆ …
Read More »ಬಸವನ ಕುಡಚಿಯ ಸಾಯಿ ಕಾಲೋನಿಯಲ್ಲಿ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಲೋಕಾರ್ಪಣೆ
ಬೆಳಗಾವಿ: ಬೆಳಗಾವಿಯ ಬಸವನ ಕುಡಚಿಯ ಸಾಯಿ ಕಾಲೋನಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಲೋಕಾರ್ಪಣೆ, ವಿಗ್ರಹ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭವು ಭಕ್ತಿ ಹಾಗೂ ಧಾರ್ಮಿಕ ಸಂಭ್ರಮದ ವಾತಾವರಣದಲ್ಲಿ ಅದ್ದೂರಿಯಾಗಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಭಾಗವಹಿಸಿ, ದೇವಸ್ಥಾನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಧಾರ್ಮಿಕ ಕೇಂದ್ರಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು …
Read More »ಟ್ರಾೃಕ್ಟರ್ ಮೇಲಿಂದ ಬಿದ್ದು ಬಾಲಕ ಸಾವು
ಬೆಳಗಾವಿ: ಟ್ರಾೃಕ್ಟರ್ ಇಂಜಿನ್‌ದಲ್ಲಿ ಮಕ್ಕಳು ಕುಳಿತು ಪ್ರಯಾಣಿಸುತ್ತಿದ್ದ ವೇಳೆ ಓರ್ವ ಬಾಲಕ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಬೈಲಹೊಂಗಲ ತಾಲೂಕಿನ ಮಾಸ್ತಮರಡಿ-ಗಜಮನಾಳ ರಸ್ತೆಯಲ್ಲಿ ಸಂಭವಿಸಿದೆ. ಮಾಸ್ತಮರಡಿಯ ಮನೋಜ ಬಸವರಾಜ ಮಿಚಿಡೊಳ್ಳಿ (13) ಮೃತ ಬಾಲಕ. ಸೋಮವಾರ ಸಂಜೆ ಗಂಗಪ್ಪ ನಾಯ್ಕ ಎಂಬುವವರು ತಮ್ಮ ಟ್ರಾೃಕ್ಟರ್‌ಗೆ ನೇಗಿಲು ಜೋಡನೆ ಮಾಡಿಕೊಂಡು ಮೃತ ಮನೋಜ ಹಾಗೂ ಇತರೆ ಇಬ್ಬರು ಬಾಲಕರನ್ನು ಕೂಡ್ರಿಸಿಕೊಂಡು ಹೋಗುತ್ತಿದ್ದಾಗ ಮನೋಜ ಕೆಳಗೆ ಬಿದ್ದು ತಲೆಗೆ ಗಾಯವಾಗಿತ್ತು. ತಕ್ಷಣವೇ ಬೈಲಹೊಂಗಲ …
Read More »ದೈಹಿಕ ಶಿಕ್ಷಕರಿಗೆ ಯೋಗ ತರಬೇತಿ ಕಡ್ಡಾಯ
ಬೆಳಗಾವಿ:ಶಾಲಾ ಮಕ್ಕಳಿಗೆ ಆರೋಗ್ಯ ಸುಧಾರಣೆ ನಿಟ್ಟಿನಲ್ಲಿ ಸರಳ ಯೋಗಾಸನಗಳು ಮತ್ತು ಆಯುಷ್ ಗಿಡ ಮೂಲಿಕೆಗಳ ಬಗ್ಗೆ ಪ್ರಾತ್ಯಕ್ಷೀತೆ ನೀಡುವ ಮೂಲಕ ಬಲವರ್ಧನೆಗೊಳಿಸಬೇಕು ಎಂದು ಜಿಪಂ ಸಿಇಒ ರಾಹುಲ ಶಿಂಧೆ ತಿಳಿಸಿದರು. ನಗರ ಜಿಪಂ ಸಭಾಂಗಣದಲ್ಲಿ ಮಂಗಳವಾರ ಆಯುಷ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ ಯೋಗ ಮತ್ತು ಆಯುಷ ಪದ್ದತಿಗಳ ಬಲವರ್ಧೆನೆಗೊಳಿಸುವ ಪ್ರಯುಕ್ತ ಜಿಲ್ಲಾ ಆಯುಷ್ ಅಧಿಕಾರಿಗಳು ಮತ್ತು …
Read More »ಠೇವಣಿ ಹಣ ಮರಳಿಸಲು ಆಗ್ರಹಿಸಿ ಎಸಿ ಕಚೇರಿ ಎದುರು ಸುತಗಟ್ಟಿ ಕುಟುಂಬ ಪ್ರತಿಭಟನೆ
ಬೈಲಹೊಂಗಲ: ನಗರದ ಟಿಪ್ಪು ಸುಲ್ತಾನ್ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ಇಟ್ಟಿದ್ದ 1.50 ಲಕ್ಷ ರೂ. ಠೇವಣಿ ಅವಧಿ ಪೂರ್ಣಗೊಂಡಿದ್ದರೂ ಮರಳಿಸದೆ ಸತಾಯಿಸುತ್ತಿರುವ ಹಿನ್ನೆಲೆಯಲ್ಲಿ ಇಮ್ತಿಯಾಜ್ ಸುತಗಟ್ಟಿ ಕುಟುಂಬದವರು ನಗರದ ಉಪವಿಭಾಗಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು. ವಿವಿಧ ಕನ್ನಡಪರ ಹಾಗೂ ರೈತ ಸಂಘಟನೆಗಳ ಬೆಂಬಲದೊಂದಿಗೆ ನಡೆದ ಧರಣಿಯಲ್ಲಿ ಇಮ್ತಿಯಾಜ್ ಸುತಗಟ್ಟಿ ಮಾತನಾಡಿ, ದೃಷ್ಟಿ ಹೀನನಾಗಿರುವ ನಾನು ಮನೆ ನಿರ್ಮಾಣಕ್ಕಾಗಿ ಸೊಸೈಟಿಯಲ್ಲಿ ಠೇವಣಿ ಇಟ್ಟಿದ್ದ ಹಣ ಮರಳಿ ಪಡೆಯಲು …
Read More »ಜಿಲ್ಲೆಯ 227 ಶುದ್ಧ ನೀರಿನ ಘಟಕಗಳು ಬಂದ್
ಗ್ರಾಮೀಣ ಜನರಿಗೆ ಸುರಕ್ಷಿತ ನೀರು ಮತ್ತು ಕಲುಷಿತ ನೀರಿನಿಂದ ಹರಡುವ ರೋಗ ತಡೆಗಟ್ಟುವ ಉದ್ದೇಶದಿಂದ ರಾಜ್ಯ ಸರ್ಕಾರ ರಾಜ್ಯಾದ್ಯಂತ ಪ್ರತಿ ಗ್ರಾಮ ಮಟ್ಟದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಲಕ್ಷಾಂತರ ರೂ.ವೆಚ್ಚ ಮಾಡಿ ಅಳವಡಿಸಿದೆ. ಆದರೆ ಸರಿಯಾದ ನಿರ್ವಹಣೆ ಇಲ್ಲದೇ ಜಿಲ್ಲೆಯ 227 ಅಧಿಕ ಘಟಕಗಳು ಸ್ಥಗಿತಗೊಂಡಿವೆ.ಪರಿಣಾಮ ಜನರು ಶುದ್ಧ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದೆ. ಸರ್ಕಾರ ಗ್ರಾಮೀಣ ಜನರ ಜೀವನ ಮಟ್ಟ ಸುಧಾರಣೆ ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೆ …
Read More »ಉಗರಗೋಳದಲ್ಲಿ ಗಮನಸೆಳೆದ ಶಕ್ತಿ ಪ್ರದರ್ಶನ
ಉಗರಗೋಳ: ಗ್ರಾಮದಲ್ಲಿ ಆಗಿಹುಣ್ಣಮೆ ಹಾಗೂ ಗ್ರಾಮದೇವತೆಯರಾದ ದ್ಯಾಮವ್ವದೇವಿ, ದುರ್ಗವ್ವದೇವಿಯರಿಗೆ ಉಡಿ ತುಂಬುವ ಕಾರ್ಯಕ್ರಮದ ಅಂಗವಾಗಿ ಈಚೆಗೆ ಶಕ್ತಿಪ್ರದರ್ಶನ ಜರುಗಿತು. 20 ವರ್ಷದ ಪ್ರವೀಣ ದುಂಡಿ (ಗೋಸಲ್), ವಿಜಯ ಪಡಸುಣಗಿ, ಕಾರ್ತಿಕ ಕುದರಿ ಅವರು 1 ಕ್ವಿಂಟಾಲ್ ಜೋಳದ ಚೀಲ ಹೊತ್ತು ಯಾರ ಸಹಾಯವಿಲ್ಲದೆಯೇ ದೀಢ್ ನಮಸ್ಕಾರ ಹಾಕಿ ಭಕ್ತಿ ಸೇವೆ ಸಲ್ಲಿಸಿದರು. ಜೋಡೆತ್ತು ಸಾಥ್ ನೀಡಿದವು. ಗ್ರಾಮದ ರಾಯಣ್ಣ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಅರ್ಧ ಕಿಮೀ ವರೆಗೆ ಸಾಗಿ ಗಮನಸೆಳೆದರು. ಸ್ಥಳೀಯ …
Read More »ನಕಲಿ ವೈದ್ಯರ ಆಸ್ಪತ್ರೆ ಮೇಲೆ ದಾಳಿ
ಚಿಕ್ಕೋಡಿ: ತಾಲ್ಲೂಕಿನ ಕರೋಶಿ ಗ್ರಾಮದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿರುವ ಕುರಿತು ಸಾರ್ವಜನಿಕರಿಂದ ದೂರು ಕೇಳಿ ಬಂದ ಹಿನ್ನಲೆ ಮಂಗಳವಾರ ನಕಲಿ ವೈದ್ಯರ ಕ್ಲಿನಿಕ್‌ಗಳು ಮೇಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಈಶ್ವರ್ ಗಡಾದ ಅವರ ನೇತೃತ್ವದಲ್ಲಿ ಆಸ್ಪತ್ರೆಗಳ ಮೇಲೆ ದಾಳಿ ನಡೆಸಲಾಗಿದೆ. ಇಲಾಖೆ ಆಲಯಕಾರಿಗಳ ೧೨ ತಂಡಗಳು ಏಕಕಾಲಕ್ಕೆ ಗ್ರಾಮದ ೭ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿ,ಆಸ್ಪತ್ರೆ,ಪ್ರಮಾಣ ಪತ್ರ,ಹೈಡೋಜ್ ಆಸ್ಪತ್ರೆ ನೀಡುತ್ತಿರುವ ಕುರಿತು ಪರೀಶಿಲನೆ ನಡೆಸಿ ಮಾಹಿತಿ …
Read More »
Laxmi News 24×7