Breaking News

ಬಿ.ವಿ.ವಿ.ಸಂಘದ ನೇತೃತ್ವದಲ್ಲಿ ಜೂ.21ರಂದು 10 ಸಾವಿರ ಜನರೊಂದಿಗೆ ಬೃಹತ್ ಯೋಗ ದಿನಾಚರಣೆ

Spread the love

ಬಾಗಲಕೋಟೆ,: ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ನೇತೃತ್ವದಲ್ಲಿ ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಗರದ ಮೂರು ಸ್ಥಳಗಳಲ್ಲಿ ಏಕಕಾಲದಲ್ಲಿ ಆಯೋಜಿಸಲಾಗಿದ್ದು, ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ಬಿ.ವಿ.ವಿ.ಸಂಘದ ಕಾರ್ಯಾಧ್ಯಕ್ಷರಾದ ಡಾ. ವೀರಣ್ಣ ಚರಂತಿಮಠ ತಿಳಿಸಿದರು.
ನಗರದ ಬಿ.ವಿ.ವಿ. ಸಂಘದ ಮಿನಿ ಸಭಾಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಆರೋಗ್ಯಕರ ಜೀವನಕ್ಕಾಗಿ ಯೋಗ” ಎಂಬ ಘೋಷವಾಕ್ಯದಡಿ ಯೋಗ ದಿನಾಚರಣೆ ನಡೆಯಲಿದ್ದು, ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಬಹುದು ಎಂದರು.
ನಗರದ ಬಿ.ವಿ.ವಿ. ಸಂಘದ ಕ್ರೀಡಾಂಗಣ, ವಿದ್ಯಾಗಿರಿಯ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ಮೈದಾನ ಹಾಗೂ ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಮೈದಾನಗಳಲ್ಲಿ ಬೆಳಿಗ್ಗೆ 6.45ರಿಂದ 7.45ರವರೆಗೆ ಯೋಗಾಭ್ಯಾಸ ನಡೆಯಲಿದ್ದು ಭಾಗವಹಿಸುವವರು ಬೆಳಿಗ್ಗೆ 6.30ರೊಳಗೆ ಸ್ಥಳಕ್ಕೆ ಆಗಮಿಸಿಬೇಕು,
ಬಿ.ವಿ.ವಿ. ಸಂಘದ ಹಳೆಯ ಆವರಣದಲ್ಲಿ ಡಾ. ವೀರಣ್ಣ ಚರಂತಿಮಠ, ಎಸ್.ಎನ್. ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಅಶೋಕ ಎಂ. ಸಜ್ಜನ (ಬೇವೂರ) ಹಾಗೂ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಮಹೇಶ ಎನ್. ಅಥಣಿ ಅವರ ನೇತೃತ್ವದಲ್ಲಿ ಕಾರ್ಯಕ್ರಮಗಳು ಜರುಗಲಿವೆ.
ಬಾಗಲಕೋಟೆ ಸಂಘದ ಮೈದಾನದಲ್ಲಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಡಾ. ಆರ್.ಬಿ. ಹೊಸಮನಿ ನೇತೃತ್ವದ ತಂಡ ಮಾರ್ಗದರ್ಶನ ಮಾಡಲಿದ್ದು, ಎಸ್. ನಿಜಲಿಂಗಪ್ಪ ಮೇಡಿಕಲ್ ಕಾಲೇಜಿ ಮೈದಾನದಲ್ಲಿ ಯೋಗ ಪರಿಣತ ವೈದ್ಯರಾದ ಡಾ. ಅಶೋಕ ಬಡಕಲಿ, ಡಾ. ಎಸ್.ಎಸ್. ದೊಡಮನಿ, ಡಾ. ಮೀನಾಕ್ಷಿ ಬಡಕಲಿ ಹಾಗೂ ಯೋಗ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳು ವಿವಿಧ ಯೋಗಾಸನಗಳ ಪ್ರದರ್ಶನ ನೀಡಲಿದ್ದಾರೆ. ವಿದ್ಯಾಗಿರಿಯ ಇಂಜನೀಯರಿಂಗ್ ಕಾಲೆಜು ಮೈದಾನದಲ್ಲಿ ವಿವೇಕಾನಂದ ಯೋಗ ವಿಜ್ಞಾನ ಕೇಂದ್ರದ ಸಂಗಣ್ಣ ಕುಪ್ಪಸ್ತ ಅವರ ತಂಡ ಯೋಗದ ಮಾರ್ಗದರ್ಶನ ನಡೆಸಿಕೊಡಲಿದೆ.
ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಹಾಗೂ ಸಾರ್ವಜನಿಕರು ಸೇರಿದಂತೆ ಸುಮಾರು 10 ಸಾವಿರ ಶಿಬಿರಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಬಿ.ವಿ.ವಿ.ಸಂಘದ ಕಾರ್ಯಾದ್ಯಕ್ಷ ಡಾ. ವೀರಣ್ಣ ಚರಂತಿಮಠ ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿ.ವಿ.ವಿ. ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಮಹಾವಿದ್ಯಾಲಯದ ಆಡಳಿತ ಮಂಡಳಿ ಕಾರ್ಯಾದ್ಯಕ್ಷ ಅಶೋಕ ಸಜ್ಜನ ಬೇವೂರ, ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಬಾವಿ, ಮಲ್ಲಿಕಾರ್ಜುನ ಸಾಸನೂರ, ಮಹಾಂತೇಶ ಶೆಟ್ಟರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿದ ಯವಕರು ವಶಕ್ಕೆ

Spread the loveಬೆಳಗಾವಿ: ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆಯಲ್ಲಿ ಯುವಕರ ಗುಂಪಿನ ಮಧ್ಯೆ ನಡೆಯುತ್ತಿದ್ದ ಗಲಾಟೆ ಬಿಡಿಸಲು ಮುಂದಾದ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ