Breaking News

Yearly Archives: 2026

ಶೃಂಗೇರಿ ನೂತನ ಶಾಸಕರಾಗಿ ಡಿ.ಎನ್.ಜೀವರಾಜ್‌ ಪ್ರಮಾಣವಚನ ಸ್ವೀಕಾರ

ಚಿಕ್ಕಮಗಳೂರು: ಶೃಂಗೇರಿ ಕ್ಷೇತ್ರದ ನೂತನ ಶಾಸಕರಾಗಿ ಡಿ.ಎನ್.ಜೀವರಾಜ್‌ ಅವರು ಇಂದು ಪ್ರಮಾಣವಚನ ಸ್ವೀಕರಿಸಿದರು. ಸ್ಪೀಕರ್ ಯು.ಟಿ.ಖಾದರ್ ಅವರು ಜೀವರಾಜ್‌ಗೆ ಪ್ರಮಾಣವಚನ ಬೋಧಿಸಿದರು. ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್, ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕ ಮುನಿರಾಜು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಿದ್ದರು. ಶೃಂಗೇರಿ ಶಾರದಾಂಬೆ ಮತ್ತು ಭಗವಂತನ ಹೆಸರಿನಲ್ಲಿ ಜೀವರಾಜ್ ಪ್ರಮಾಣವಚನ ಸ್ವೀಕರಿಸಿದರು. ನೂತನ ಬಿಜೆಪಿ ಶಾಸಕನಿಗೆ ಬೊಕ್ಕೆ, ವಿಧಾನಸಭೆ ನಡಾವಳಿಗಳ ಪುಸ್ತಕ ನೀಡಿದ ಸ್ಪೀಕರ್ ಖಾದರ್ ನೀಡಿ ಅಭಿನಂದಿಸಿದರು. …

Read More »

ತಮಿಳುನಾಡಿನಲ್ಲಿ ಜನನಾಯಗನ್ ಸರ್ಕಾರಕ್ಕೆ ಶಾಕ್ – ಬಹುಮತ ಸಾಬೀತು ಮಾಡದ ದಳಪತಿ ವಿಜಯ್

ಚೆನ್ನೈ: ಬಹುಮತದ ಕೊರತೆಯಿಂದ ತಮಿಳುನಾಡಲ್ಲಿ  ಸರ್ಕಾರ ರಚನೆಗೆ ಕಸರತ್ತು ನಡೆಸುತ್ತಿರುವ ಟಿವಿಕೆ ಮುಖ್ಯಸ್ಥ ವಿಜಯ್‌ಗೆ  ಶಾಕ್ ಎದುರಾಗಿದೆ. ವಿಜಯ್ ಮೌಖಿಕ ಮಾಹಿತಿಗೆ ರಾಜ್ಯಪಾಲರು ತೃಪ್ತರಾಗದ ಕಾರಣ, ನಾಳೆ ಪ್ರಮಾಣವಚನ ಸ್ವೀಕರಿಸುವುದು ಅನುಮಾನವಾಗಿದೆ. ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಆರ್ಲೇಕರ್ ಅವರನ್ನು ಟಿವಿಕೆ ಮುಖ್ಯಸ್ಥ ವಿಜಯ್ ಇಂದು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಈ ವೇಳೆ ವಿಜಯ್ ನೀಡಿದ ಮೌಖಿಕ ಮಾಹಿತಿಗೆ ತೃಪ್ತರಾಗಿಲ್ಲ. ಬಹುಮತ ಸಾಬೀತುಪಡಿಸುವಲ್ಲಿ ವಿಜಯ್ ವಿಫಲರಾದರು. ಕಾಂಗ್ರೆಸ್ …

Read More »

ಮೇ 10ಕ್ಕೆ ಬೆಂಗಳೂರಿಗೆ ಪ್ರಧಾನಿ ಮೋದಿ – ಬಿಜೆಪಿಯಿಂದ ಬೃಹತ್ ಅಭಿನಂದನಾ ಸಮಾರಂಭ

ಬೆಂಗಳೂರು: ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ  ನೇತೃತ್ವದ ಎನ್‌ಡಿಎ ಮೈತ್ರಿಕೂಟ ದಿಗ್ವಿಜಯ ಸಾಧಿಸಿದ ನಂತರ ಇದೇ ಮೊದಲ ಬಾರಿಗೆ ಮೇ 10ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ವತಿಯಿಂದ ಬೃಹತ್ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಇಂದು ಪೂರ್ವಭಾವಿ ಸಭೆ ನಡೆಸಲಾಯಿತು. ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಯಿತು. ಬೆಂಗಳೂರು ಬಿಜೆಪಿ …

Read More »

ಮಧ್ಯರಾತ್ರಿ ರಸ್ತೆಗಿಳಿದ ‘ರಿಯಲ್ ಲೇಡಿ ಸಿಂಗಮ್’: ಒಬ್ಬಂಟಿ ಮಹಿಳೆಯಂತೆ ನಿಂತು 40 ಕಾಮುಕರಿಗೆ ಬಿಸಿ ಮುಟ್ಟಿಸಿದ ಕಮಿಷನರ್ ಸುಮತಿ!

​ಹೈದರಾಬಾದ್: ಸಿನೆಮಾದಲ್ಲಿ ಹಿರೋಗಳು ವೇಷ ಮರೆಸಿಕೊಂಡು ಬಂದು ವಿಲನ್‌ಗಳಿಗೆ ಪಾಠ ಕಲಿಸುವುದನ್ನು ನಾವು ನೋಡಿದ್ದೇವೆ. ಆದರೆ ಹೈದರಾಬಾದ್‌ನಲ್ಲಿ ಅಂತಹದ್ದೇ ಒಂದು ನೈಜ ಘಟನೆ ನಡೆದಿದೆ. ಮಲ್ಕಾಜ್‌ಗಿರಿ ಪೊಲೀಸ್ ಆಯುಕ್ತೆ ಸುಮತಿ ಐಪಿಎಸ್ ಅವರು ಮಧ್ಯರಾತ್ರಿ ರಸ್ತೆಗಿಳಿದು, ಮಹಿಳೆಯರ ಸುರಕ್ಷತೆಯನ್ನು ಪ್ರಶ್ನಿಸುವ ಗೂಂಡಾಗಳಿಗೆ ಮರೆಯಲಾಗದ ಶಾಕ್ ಟ್ರೀಟ್ಮೆಂಟ್ ನೀಡಿದ್ದಾರೆ. ​ಕಾರ್ಯಾಚರಣೆ ನಡೆದಿದ್ದು ಹೇಗೆ? ​ಮಲ್ಕಾಜ್‌ಗಿರಿ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಕಾರ್ಯಪ್ರವೃತ್ತರಾದ ಸುಮತಿ ಅವರು, ನಗರದಲ್ಲಿ ಮಹಿಳೆಯರು ರಾತ್ರಿ …

Read More »

ಬೆಳಗಾವಿ: ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ – 48 ಮಂದಿಗೆ ಬಿದ್ದಿತು ದಂಡದ ಬಿಸಿ

ಬೆಳಗಾವಿ ನಗರದ ಶಹಾಪುರ ಪ್ರದೇಶದಲ್ಲಿಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ್ ಇಲಾಖೆ ಭರ್ಜರಿ ಬೇಟೆಯಾಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರು ಹಾಗೂ ನಿಯಮ ಮೀರಿ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದವರ ಮೇಲೆ ಕೋಟ್ಪಾ (COTPA) ಕಾಯ್ದೆಯಡಿ ದಾಳಿ ನಡೆಸಿ ದಂಡ ವಿಧಿಸಲಾಯಿತು. ಬೆಳಗಾವಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಮತ್ತು ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಇಂದು ನಗರದ ಶಹಾಪುರ ವ್ಯಾಪ್ತಿಯಲ್ಲಿ ‘ಕೋಟ್ಪಾ-2003’ ಕಾಯ್ದೆಯಡಿ ವಿಶೇಷ ಜಾಗೃತಿ ಹಾಗೂ …

Read More »

ಸುಳ್ಳು ಆರೋಪದ ಹಿನ್ನೆಲೆ ಮಹಿಳೆ ಮೇಲೆ ಹಲ್ಲೆ ನಡೆಸಿದ ಅಬಕಾರಿ ಪೊಲೀಸರು..

ಚಂದ್ರವ್ವಳ ಮೇಲೆ ಅಕ್ರಮ ಸಾರಾಯಿ ಮಾರಾಟ ಸುಳ್ಳು ಆರೋಪ.. ಮಹಿಳೆ ಮೇಲೆ ಅಬಕಾರಿ ಇನ್ಸ್ಪೆಕ್ಟರ್ ಸೇರಿ ನಾಲ್ವರಿಂದ ಹಲ್ಲೆ ಆರೋಪ.. ಜಮಖಂಡಿ ಅಬಕಾರಿ ಇನ್ಸ್ಪೆಕ್ಟರ್ ಗೀತಾ ತೆಗ್ಗಿ,ಸಿಬ್ನಂದಿ ಆನಂದ್, ಹಣಮಂತ್,ಕಲ್ಯಾಣಿ ವಿರುದ್ಧ ಎಪ್ಐಆರ್… ಅವ್ರು ಸಿಎಲ್ ಪೋರ್ ಅರ್ಜಿದಾರರು. ಅವ್ರ ಮನವಿಗೆ ಅಬಕಾರಿ ಇಲಾಖೆ ಸಿಬ್ಬಂದಿಗಳು ಸ್ಪಂಧಿಸಿಲ್ಲ. ಜಿಲ್ಲಾ ಅಬಕಾರಿ ಡಿಸಿ ಬಳಿ ಹೊಗಿದ್ದೆ ಆ ಕುಟುಂಬದ ಮಹಿಳೆ ಮೇಲೆ ಅಬಕಾರಿ ಅಧಿಕಾರಿಗಳಿಂದ ಹಲ್ಲೆಗೆ ಕಾರಣ.ಅಲ್ಲದೆ ಅಕ್ರಮ ಸರಾಯಿ ಮಾರಾಟದಲ್ಲಿ …

Read More »

ಕರೋಶಿ ಆಸ್ಪತ್ರೆ ಮೇಲೆ ರೇಡ್! ಹೈ-ಡೋಸ್ ಔಷಧಿ ನೀಡಿ ಮೋಸ: ನಕಲಿ ವೈದ್ಯರಿಗೆ ಡಿಎಚ್‌ಒ ಶಾಕ್‌!

ಚಿಕ್ಕೋಡಿ ತಾಲೂಕಿನ ಕರೋಶಿಯಲ್ಲಿ ನಕಲಿ ಡಾಕ್ಟರ್‌ಗಳಿಗೆ ಡಿಎಚ್‌ಒ ತಂಡ ಬಿಗ್ ಶಾಕ್ ಕೊಟ್ಟಿದೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಈಶ್ವರ ಗಡಾದ್ ನೇತೃತ್ವದ ಏಳು ತಂಡಗಳು ಒಂದೇ ಟೈಮ್‌ಗೆ ಗ್ರಾಮದ ಆಸ್ಪತ್ರೆ-ಕ್ಲಿನಿಕ್‌ಗಳ ಮೇಲೆ ದಾಳಿ ಮಾಡಿ ದಾಖಲೆಗಳು, ಔಷಧಿ, ಚಿಕಿತ್ಸೆ ಪದ್ಧತಿ ಎಲ್ಲವನ್ನೂ ಚೆಕ್‌ ಮಾಡಿದ್ದಾರೆ. ಕೆಲವರು ಮೆಡಿಕಲ್ ಓದಿಲ್ಲ, ಆದರೂ ಡಾಕ್ಟ‌ರ್ ಅಂತ ಕುಳಿತು ಹಾಯ್‌ಡೋಸ್ ಔಷಧಿ ಕೊಡುತ್ತಿದ್ದಾರೆ ಅಂತ ಬಂದ ದೂರು ಮೇರೆಗೆ ಈ ಆಪರೇಷನ್ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳ …

Read More »

ಬೆಳಗಾವಿ GTTC ಡಿಪ್ಲೋಮಾ ಪ್ರವೇಶಕ್ಕೆ ಮೇ 10 ಕೊನೆಯ ದಿನ

ತಾಂತ್ರಿಕ ಶಿಕ್ಷಣದ ಸುವರ್ಣ ಅವಕಾಶ ಬಳಸಿಕೊಳ್ಳಲು ಪ್ರಾಚಾರ್ಯ ಯಲ್ಲಪ್ಪ ಸವದತ್ತಿ ಕರೆ ಜಿಟಿಟಿಸಿ ಡಿಪ್ಲೋಮಾ ಪ್ರವೇಶಕ್ಕೆ ಮುಹೂರ್ತ ಫಿಕ್ಸ್ ಮೇ 10ರ ಒಳಗೆ ಅರ್ಜಿ ಸಲ್ಲಿಸಿ ಜಪಾನ್ ಅಮೇರಿಕಾದಿಂದ ಜಿಟಿಟಿಸಿಗೆ ಪ್ರೋತ್ಸಾಹ ಸ್ಮಾರ್ಟ್ ಸಿಟಿಯಿಂದ ಹೈಟೆಕ್ ಸೌಲಭ್ಯಗಳ ಕೊಡುಗೆ ಬೆಳಗಾವಿಯ ಉದ್ಯಮಬಾಗದಲ್ಲಿರುವ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಡಿಪ್ಲೋಮಾ ಪ್ರವೇಶ ಪ್ರಾರಂಭವಾಗಿದ್ದು ಮೇ.10ರ ವರಗೆ ಕೊನೆಯ ದಿನಾಂಕವಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಯಲ್ಲಪ್ಪ ಸವದತ್ತಿ ಹೇಳಿದರು. ಬುಧವಾರ ಬೆಳಗಾವಿಯಲ್ಲಿ …

Read More »

ಅಹಿಂದ ಮತಗಳೇ ಕಾಂಗ್ರೆಸ್ ಭದ್ರ ಬುನಾದಿ: ಮತಗಳ್ಳತನ ಪ್ರಕರಣದ ಬಗ್ಗೆ ಗೃಹ ಸಚಿವ ಪರಮೇಶ್ವರ ಪ್ರತಿಕ್ರಿಯೆ!

ಅಹಿಂದ ವರ್ಗಗಳೇ ಕಾಂಗ್ರೆಸ್ ಪಕ್ಷದ ಶಕ್ತಿ ಎಂದು ಗೃಹ ಸಚಿವ ಜಿ. ಪರಮೇಶ್ವರ ಇಂದು ದೃಢವಾಗಿ ಪ್ರತಿಪಾದಿಸಿದ್ದಾರೆ. ಅತ್ತ ಶೃಂಗೇರಿ ಮತಗಳ್ಳತನ ವಿವಾದದ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ಪ್ರಕರಣದ ಮುಂದಿನ ಕಾನೂನು ಹೋರಾಟದ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ.” ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ ಅವರು ಅಹಿಂದ್ ಮತಗಳೇ ಮೊದಲಿನಿಂದಲೂ ಕಾಂಗ್ರೆಸ್’ಗೆ ಬುನಾದಿ. ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು, ಬೇರೆ ಬೇರೆ ಸಮುದಾಯದವರೇ ಕಾಂಗ್ರೆಸ್ಸಿನ ಮೂಲ ಮತದಾರರು …

Read More »

ಧಾರವಾಡ ಅಣ್ಣಿಗೇರಿ ಉಪ ತಹಸೀಲ್ದಾರ ಹಾಗೂ ಆಹಾರ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ, 300ಕ್ವಿಂಟಾಲ್ ಪಡಿತರ ಅಕ್ಕಿ ಜಪ್ತಿ

ಧಾರವಾಡ: ಪಟ್ಟಣದ ಗದಗ-ಚಿಲಕವಾಡ ಕ್ರಾಸ್ ಬಳಿ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 300ಕ್ಕೂ ಅಧಿಕ ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಗದಗದಿಂದ ಅಣ್ಣಿಗೇರಿ ಮಾರ್ಗವಾಗಿ ಅಕ್ಕಿ ಸಾಗಿಸುವ ವೇಳೆ ಲಾರಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದೆ. ಯಾವುದೇ ಪರವಾನಗಿ ಹಾಗೂ ದಾಖಲಾತಿ ಇಲ್ಲದೆ ಅಕ್ರಮವಾಗಿ ಲಾರಿಯಲ್ಲಿ 300ಕ್ಕೂ ಅಧಿಕ ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿಯನ್ನು 624 ಪ್ಲಾಸ್ಟಿಕ್ ಚೀಲಗಳಲ್ಲಿ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ, ಲಾರಿ ಹಾಗೂ ಅಕ್ಕಿ …

Read More »