Breaking News

Daily Archives: ನವೆಂಬರ್ 20, 2026

ಬಸವಣ್ಣನನ್ನ ಕೊಲೆಗಾರ ಅಂದಿಲ್ಲ, ಧರ್ಮ ವಿರೋಧಿಗಳು ನನ್ನ ವಾದ ಒಪ್ಪಲ್ಲ: ಲೇಖಕ ರವಿ ಹಂಜ್ ಸ್ಪಷ್ಟನೆ

ಬೆಂಗಳೂರು: 12ನೇ ಶತಮಾನದ ಮಹನೀಯ.. ವಚನಗಾರ, ಕ್ರಾಂತಿಕಾರಿ ಭಕ್ತಿ ಭಂಡಾರಿ ಬಸವಣ್ಣನವರ ವಿರುದ್ಧ ಅಮೆರಿಕ ಮೂಲದ ಲೇಖಕ ರವಿ ಹಂಜ್  ಬರೆದಿರುವ ಪುಸ್ತಕ ʻಬಸವ ಮಂಟಪʼ ವಿವಾದ ಸೃಷ್ಟಿಸಿದೆ. ಪುಸ್ತಕದಲ್ಲಿ ಸಾಮಾಜಿಕ ಸುಧಾರಕ ಬಸವಣ್ನನವರ ಚಾರಿತ್ರ್ಯ ವಧೆ ಮಾಡಿರುವ ಆರೋಪ ಮಾಡಲಾಗಿದೆ. ಬಸವಣ್ಣನವರನ್ನ ಕೊಲೆಗಾರನ ರೀತಿ ಬಿಂಬಿಸಿರುವ ಲೇಖಕ ಬಿಜ್ಜಳನ ಹತ್ಯೆಯಲ್ಲಿ ಬಸವಣ್ಣನ ಪಾತ್ರ ಎಂದಿದ್ದಾರೆ. ಸದ್ಯ ಇದು ವೀರಶೈವ ಲಿಂಗಾಯತ  ಸಮುದಾಯದವರನ್ನ ಕೆರಳಿಸಿದೆ. ಲೇಖಕ ರವಿ ಹಂಜ್ ಆಕ್ರೋಶ …

Read More »

ಆಹಾರ ಆಯೋಗದ ದಿಢೀರ್ ದಾಳಿ; ಕಲಬೆರಕೆ ಖಾರದ ಪುಡಿ ಫ್ಯಾಕ್ಟರಿ ಬಂದ್

ಗದಗ: ಕರ್ನಾಟಕ ರಾಜ್ಯ ಆಹಾರ ಆಯೋಗ ತಂಡ  ಗದಗ ಜಿಲ್ಲೆಯ  ವಿವಿಧ ಆಹಾರ ಘಟಕಗಳು, ಶಾಲೆಗಳು ಮತ್ತು ಸರ್ಕಾರಿ ಕಚೇರಿಗಳ ಮೇಲೆ ದಿಢೀರ್ ದಾಳಿ ನಡೆಸಿ ಆಹಾರ ಸುರಕ್ಷತೆ ಪರಿಶೀಲಿಸಿದೆ. ಮೊದಲಿಗೆ ಗದಗ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ‘ಕಲ್ಯಾಣಿ ಟ್ರೇಡಿಂಗ್ ಕಂಪನಿ’ಯ ಖಾರದ ಪುಡಿ ಫ್ಯಾಕ್ಟರಿಗೆ ಅಧಿಕಾರಿಗಳು ಭೇಟಿ ನೀಡಿದರು. ಅಲ್ಲಿ ಪರಿಶೀಲನೆ ನಡೆಸಿದಾಗ ಖಾರದ ಪುಡಿಗೆ ಕೃತಕ ಬಣ್ಣ ಕಲಬೆರಕೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಕಳಪೆ ಗುಣಮಟ್ಟದ ಮೆಣಸಿನಕಾಯಿ, ಎಣ್ಣೆ …

Read More »

ʻಬಸವ ಮಂಟಪʼ ಕೃತಿ ಬ್ಯಾನ್‌ – ಕಾನೂನು ಅಭಿಪ್ರಾಯ ಪಡೆದು ಕ್ರಮ ವಹಿಸಲು ಸಿಎಸ್‌ಗೆ ಸಿಎಂ ಸೂಚನೆ

ಬೆಂಗಳೂರು: 12ನೇ ಶತಮಾನದ ಕ್ರಾಂತಿಕಾರಿ ಭಕ್ತಿ ಭಂಡಾರಿ ಬಸವಣ್ಣ ವಿರುದ್ಧ ಅಮೆರಿಕ ಮೂಲದ ಲೇಖಕ ರವಿ ಹಂಜ್  ಬರೆದಿರುವ ಪುಸ್ತಕ ʻಬಸವ ಮಂಟಪʼ ಬ್ಯಾನ್‌ ಮಾಡಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಡಿಸಿಎಂ ಪರಮೇಶ್ವರ್‌ ತಿಳಿಸಿದ್ದಾರೆ. ಈ ಮಧ್ಯೆ ರವಿ ಹಂಜ್‌ ಅವರ ʻಬಸವ ಮಂಟಪʼ ಕೃತಿ ಬ್ಯಾನ್‌ ಮಾಡುವ ಸಂಬಂಧ ಕಾನೂನು ಅಭಿಪ್ರಾಯ ಪಡೆಯಲು ಸಿಎಂ ಡಿಕೆ ಶಿವಕುಮಾರ್‌ ಅವರು, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ …

Read More »

ರಾಜ್ಯದಲ್ಲಿ 50% ರಿಯಾಯಿತಿ ದರದಲ್ಲಿ 50,000 ಸೈಟು ಹಂಚಿಕೆಗೆ ಸಂಪುಟ ಒಪ್ಪಿಗೆ: ಪರಮೇಶ್ವರ್‌

ಬೆಂಗಳೂರು: ಮುಖ್ಯಮಂತ್ರಿ ಅವರ ʻನಮ್ಮ ಮನೆʼ ಯೋಜನೆಯಡಿ ರಾಜ್ಯದಾದ್ಯಂತ ಸಮುದಾಯದ ಶ್ರಮಿಕರಿಗೆ ಶೇ. 50ರ ರಿಯಾಯಿತಿ ದರದಲ್ಲಿ 50 ಸಾವಿರ ನಿವೇಶನಗಳನ್ನ (30 ಅಡಿ × 40 ಅಡಿ) ಒದಗಿಸಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಡಿಸಿಎಂ ಪರಮೇಶ್ವರ್‌  ತಿಳಿಸಿದ್ದಾರೆ. ಇಂದು ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಯೋಜನೆಯಡಿ ಕರ್ನಾಟಕ ಗೃಹ ಮಂಡಳಿ ವತಿಯಿಂದ EWS, LIG, MIG ಮತ್ತು HIG ನಿವೇಶನಗಳನ್ನ …

Read More »

ಹಿಂದುಳಿದ ವರ್ಗಗಳ ಸಾಲದ ಬಡ್ಡಿ ಮನ್ನಾ, 12 ಜಿಲ್ಲೆಗಳ ಹೆದ್ದಾರಿ ಅಭಿವೃದ್ಧಿ, 1,700 ಕೋಟಿ ವೆಚ್ಚದಲ್ಲಿ ಎಲೆಕ್ಟ್ರಿಕ್‌ ಬಸ್‌ ಸೇರಿ ಹಲವು ತೀರ್ಮಾನ

ಬೆಂಗಳೂರು: ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ, ರೈತರ ಕಲ್ಯಾಣ, ವಸತಿ ಯೋಜನೆ, ಸಾರಿಗೆ ಮೂಲಸೌಕರ್ಯ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹತ್ತಾರು ಮಹತ್ವದ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ ಬರೋಬ್ಬರಿ 10,252 ಕೋಟಿ, ಬಡ ಹಾಗೂ ಶ್ರಮಿಕ ವರ್ಗಕ್ಕೆ ರಿಯಾಯಿತಿ ದರದಲ್ಲಿ 50,000 ನಿವೇಶನಗಳನ್ನು ಒಳಗೊಂಡ ‘ನಮ್ಮ ಮನೆ’ ಯೋಜನೆ, ಹಿಂದುಳಿದ ವರ್ಗಗಳ ಸಾಲದ ಮೇಲಿನ 236 …

Read More »

`ಬಸವ ಮಂಟಪ’ ಕೃತಿ ವಿವಾದ – ಲೇಖಕ ರವಿ ಹಂಜ್, ಪ್ರಕಾಶಕರ ವಿರುದ್ಧ FIR

ಬೆಂಗಳೂರು: ರಾಜ್ಯದಲ್ಲಿ ಲೇಖಕ ರವಿ ಹಂಜ್ ಅವರ ಬಸವ  ಮಂಟಪ ಕೃತಿ ಸಂಬಂಧಿಸಿದಂತೆ ಆಕ್ರೋಶ ಭುಗಿಲೆದ್ದಿದ್ದು, ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ  ಲೇಖಕ ರವಿ ಹಂಜ್ ಹಾಗೂ ಪ್ರಕಾಶಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬಸವ ಸಮಿತಿ ಅಧ್ಯಕ್ಷ ಅರವಿಂದ್ ಜತ್ತಿ ಅವರು ದೂರು ನೀಡಿದ್ದು, ಬಸವಣ್ಣನರನ್ನ ಕೊಲೆಗಾರ & ಕಳ್ಳ ಎಂಬಂತೆ ಬಿಂಬಿಸಿದ್ದಾರೆ. ಲಿಂಗಾಯತ ಪದ ತಿರುಚಿ ಲಿಂಗಾಹತ ಎಂದು ಹೇಳಿದ್ದಾರೆ. ಜೊತೆಗೆ ಲಿಂಗಾಯತ & ಕೆಲ ಪೂಜ್ಯರ ವಿರುದ್ಧ ಆಕ್ಷೇಪಾರ್ಹ …

Read More »

ಆಶಾ ಕಾರ್ಯಕರ್ತರ ಗೌರವಧನ ಹೆಚ್ಚಳ ಕೇಂದ್ರ ಸರ್ಕಾರ ಮಾಡಬೇಕು: ಸಚಿವ ಯು.ಟಿ.ಖಾದರ್

ಬೆಂಗಳೂರು: ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಕೆ ಸಾಧ್ಯವಿಲ್ಲ ಅಂತ ಪರೋಕ್ಷವಾಗಿ ಆರೋಗ್ಯ ಸಚಿವ ಯು.ಟಿ ಖಾದರ್ ತಿಳಿಸಿದ್ದಾರೆ. ಗೌರವ ಧನ ಹೆಚ್ಚಳ ಕೇಂದ್ರ ಸರ್ಕಾರ ಮಾಡಬೇಕು ಅಂತ ಕೇಂದ್ರದ ಕಡೆ ಬೊಟ್ಟು ಮಾಡಿದರು. ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಆಶಾ ಕಾರ್ಯಕರ್ತೆಯರು ನೇರವಾಗಿ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬರುತ್ತಾರೆ. NHM ಅಡಿಯಲ್ಲಿ ಕೇಂದ್ರ ಸರ್ಕಾರ ನೇಮಕ ಮಾಡಿರೋದು. 2014 ರಲ್ಲಿ ನಾನು ಸಚಿವ ಆಗಿದ್ದಾಗ ಕೇಂದ್ರ ಸರ್ಕಾರ ಎಷ್ಟು ಜಾಸ್ತಿ …

Read More »

ಧೈರ್ಯವಿದ್ದರೆ ಅಯೋಧ್ಯೆಯಿಂದ ನನ್ನ ವಿರುದ್ಧ ಸ್ಪರ್ಧಿಸಿ – ಅಖಿಲೇಶ್ ಯಾದವ್‌ಗೆ ಸಿಎಂ ಯೋಗಿ ನೇರ ಸವಾಲ್‌!

ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ನೇರ ಸವಾಲು ಹಾಕಿದ್ದಾರೆ. ಧೈರ್ಯವಿದ್ದರೆ ಅಯೋಧ್ಯೆ ಕ್ಷೇತ್ರದಿಂದ ನನ್ನ ವಿರುದ್ಧ ಸ್ಪರ್ಧಿಸಿ, ಒಂದು ವೇಳೆ ನೀವು ಅಯೋಧ್ಯೆಯಿಂದ ನಾಮಪತ್ರ ಸಲ್ಲಿಸಿದರೆ, ನಾನೂ ಅದೇ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುತ್ತೇನೆ ಎಂದು ಸವಾಲ್‌ ಹಾಕಿದ್ದಾರೆ. ಗೋರಖ್‌ಪುರ ಜಿಲ್ಲೆಯ ಕ್ಯಾಂಪಿಯರ್‌ಗಂಜ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ, ಅಖಿಲೇಶ್ ಯಾದವ್ (Akhilesh Yadav) …

Read More »

ಸರ್ಕಾರಿ ಆತಿಥ್ಯಕ್ಕೆ ನೋ ಎಂದ ಶಾಸಕ ಶರಣಗೌಡ ಕಂದಕೂರ: ಸ್ವಂತ ಖರ್ಚಿನಲ್ಲೇ ಬೆಳಗಾವಿ ಅಧಿವೇಶನಕ್ಕೆ ಹಾಜರು

ಬೆಳಗಾವಿಯಲ್ಲಿ ಡಿ 2 ರಿಂದ ಆರಂಭವಾಗಲಿರುವ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ಯಾವುದೇ ಸೌಲಭ್ಯ ಪಡೆಯದೆ, ಸ್ವಂತ ಖರ್ಚಿನಲ್ಲೇ ಪಾಲ್ಗೊಳ್ಳಲು ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ನಿರ್ಧರಿಸಿದ್ದಾರೆ. ಅಧಿವೇಶನದ ಸಂದರ್ಭದಲ್ಲಿ ಶಾಸಕರಿಗೆ ಸರ್ಕಾರದಿಂದ ಕಲ್ಪಿಸುವ ವಸತಿ, ಊಟೋಪಚಾರ ಹಾಗೂ ಇತರೆ ಭತ್ಯೆಗಳನ್ನು ಸ್ವೀಕರಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ವಿಧಾನಸಭಾಧ್ಯಕ್ಷರಿಗೆ ಅಧಿಕೃತ ಪತ್ರ ಬರೆದಿರುವ ಅವರು, ತಮ್ಮ ಹೆಸರಿಗೆ ಯಾವುದೇ ಸರ್ಕಾರಿ ಆತಿಥ್ಯ ಅಥವಾ …

Read More »

ಬೆಳಗಾವಿಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಯುವಕನ ವಿರುದ್ಧ ಪ್ರಕರಣ ದಾಖಲು

ಬೆಳಗಾವಿ: ನಗರದ ಸಾರ್ವಜನಿಕ ಸ್ಥಳದಲ್ಲಿ ಅಸಹಜವಾಗಿ ವರ್ತಿಸುತ್ತಿದ್ದ ಯುವಕನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದ್ದು, ಆತನ ವಿರುದ್ಧ ಮಾರ್ಕೆಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಗರದ ಖಂಜರ ಗಲ್ಲಿಯಲ್ಲಿ ನವೆಂಬರ್ 17ರಂದು ಈ ಘಟನೆ ನಡೆದಿದೆ. ಬೆಂಡಿ ಬಜಾರ್‌ನ ಬಾಸಿಬನ್ ಮಸೀದಿ ಹಿಂಭಾಗದ ನಿವಾಸಿ ಶೂಫಿಯಾನ್ ಅಬ್ದುಲ್ ರಹೀಮ್ ಕಚಿ (23) ಸಾರ್ವಜನಿಕ ಸ್ಥಳದಲ್ಲಿ ಅಸಹಜವಾಗಿ ವರ್ತಿಸುತ್ತಿರುವುದನ್ನು ಗಮನಿಸಿದ ಮಾರ್ಕೆಟ್ ಠಾಣೆಯ ಎಎಸ್‌ಐ ಶಂಕರ ಶಿಂಧೆ …

Read More »