ಬೆಂಗಳೂರು: ಡಿಕೆ ಶಿವಕುಮಾರ್ ಅವರು ಮನಸ್ಸು ಮಾಡಿದ್ರೆ, ಸ್ವಂತ ಹಣದಲ್ಲೇ ಸಾಲ ಮನ್ನಾ ಮಾಡಬಹುದು ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿದರು. ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೈತರ ಸಾಲ ಮನ್ನಾಗೆ ಆಗ್ರಹಿಸಿದರು. ಡಿಕೆ ಶಿವಕುಮಾರ್ ಅವರು ಮನಸು ಮಾಡಿದ್ರೆ, ತಮ್ಮ ಸ್ವಂತ ಹಣದಲ್ಲೇ ಸಾಲ ಮನ್ನಾ ಮಾಡಬಹುದು. ರೈತರು ಸಾಲಮನ್ನಾ ಆಗಬೇಕು ಅಂತ ಹೇಳ್ತಿದ್ದಾರೆ. ಸಿಎಂ ಕೂಡಾ ʻʻಸಿದ್ದರಾಮಯ್ಯ, ಕುಮಾರಸ್ವಾಮಿ ಕಾಲದಲ್ಲಿ ಸಾಲ ಮನ್ನಾ ಆಗಿದೆ. ನಾನು …
Read More »Monthly Archives: ಸೆಪ್ಟೆಂಬರ್ 2026
ಬೆಳಗಾವಿ | ಗ್ರಾಮ ಪಂಚಾಯ್ತಿಗೆ ನುಗ್ಗಿ ತಂದೆ, ಮಗಳ ಬರ್ಬರ ಹತ್ಯೆಗೈದಿದ್ದ ಆರೋಪಿಗಳು ಅಂದರ್
ಬೆಳಗಾವಿ: ಕಿತ್ತೂರು ತಾಲೂಕಿನ ಅವರಾದಿ ಗ್ರಾಮ ಪಂಚಾಯ್ತಿಗೆ ನುಗ್ಗಿ ತಂದೆ ಮಗಳನ್ನು ಬರ್ಬರವಾಗಿ ಹತ್ಯೆಗೈದಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಮಾಜಿ ಯೋಧ ರುದ್ರಪ್ಪ ಅವರ ಸಹೋದರ ಬಸಪ್ಪ ಕುಂದರಗಿ, ಸಂಗಪ್ಪ ಕುಂದರಗಿ ಮತ್ತು ಪುತ್ರ ಮಡಿವಾಳಪ್ಪ ಕುಂದರಗಿ ಬಂಧಿತ ಆರೋಪಿಗಳು. ಕೊಲೆಗೆ ಬಳಿಸಿದ ಆಯುಧಗಳನ್ನೂ ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಸ್ತಿ ವಿಚಾರಕ್ಕೆ ಅಣ್ಣ ತಮ್ಮಂದಿರ ನಡುವೆ ಗಲಾಟೆ ನಡೆಯುತ್ತಿತ್ತು. ಅದೇ ಆಸ್ತಿ ಪಾಲುದಾರಿಕೆಗೆ ಅರ್ಜಿ ಸಲ್ಲಿಸಲು ಮತ್ತೊಬ್ಬ …
Read More »ಖಾಸಗಿ ಅಂಗ ತೋರಿಸಿ ಅಸಭ್ಯ ವರ್ತನೆ; ಕಾಮುಕನನ್ನ ಬಿಟ್ಟು ವಿದ್ಯಾರ್ಥಿನಿ ಸಹಾಯಕ್ಕೆ ಬಂದ ಯುವಕರೇ ಅರೆಸ್ಟ್
ಬಾಗಲಕೋಟೆ: ಹಾಸ್ಟೆಲ್ ವಿದ್ಯಾರ್ಥಿನಿಯೊಬ್ಬಳಿಗೆ ನಡು ರಸ್ತೆಯಲ್ಲೇ ಖಾಸಗಿ ಅಂಗ ತೋರಿಸಿ ಅಸಭ್ಯವಾಗಿ ವರ್ತಿಸಿದ ಆರೋಪ ಕೇಳಿಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ಬಾಗಲಕೋಟೆಯ ನವನಗರ ಪೊಲೀಸರ ಕ್ರಮದ ವಿರುದ್ಧ ಕುಟುಂಬಸ್ಥರು ಹಾಗೂ ನೊಂದ ವಿದ್ಯಾರ್ಥಿನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಗಲಕೋಟೆಯ ನವನಗರದ 51ನೇ ಸೆಕ್ಟರ್ನಲ್ಲಿ ಸೆ.17ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸುದೀಪ ನಾಡಗೌಡ ಎಂಬ ಯುವಕ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ವೇಳೆ ವಿದ್ಯಾರ್ಥಿನಿ ಸಹಾಯಕ್ಕಾಗಿ …
Read More »ಮೀನು ವ್ಯಾಪಾರ ಬಂದ್ ಮಾಡಿಸೋಕೆ ಹೇಳಿದ್ಯಾರು? ಅವ್ರನ್ನ ಸಸ್ಪೆಂಡ್ ಮಾಡ್ತೇನೆ: ಸಿಎಂ ಗರಂ
ಮಂಗಳೂರು: ಇಂದು ಬೆಳ್ಳಂಬೆಳಗ್ಗೆ ಮಂಗಳೂರು ಮೀನುಗಾರಿಕಾ ಬಂಧರಿಗೆ ಭೇಟಿ ನೀಡಿದ ಸಿಎಂ ಡಿಕೆ ಶಿವಕುಮಾರ್ ಮೀನುಗಾರರ ಸಮಸ್ಯೆಗಳನ್ನ ಆಲಿಸಿದರು. ಇದೇ ವೇಳೆ ಬಂದರಿನಲ್ಲಿನ ಮೀನು ವ್ಯಾಪಾರ ಬಂದ್ ಮಾಡಿಸಿದ್ದಕ್ಕೆ ಪೊಲೀಸ್ ಇಲಾಖೆ ಹಾಗೂ ಅಧಿಕಾರಿಗಳ ವಿರುದ್ಧ ಗರಂ ಆದರು. ಶನಿವಾರ ಬೆಳಗ್ಗೆ ಮಂಗಳೂರು ಮೀನುಗಾರಿಕಾ ಬಂದರಿಗೆ ಭೇಟಿ ನೀಡಿದ ಸಿಎಂ ಡಿಕೆಶಿ, ಬಂದರಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಇದೇ ವೇಳೆ ಮೀನುಗಾರರೊಂದಿಗೆ ಮಾತುಕತೆ ನಡೆಸಿ, ಅವರ ಸಮಸ್ಯೆಗಳು ಹಾಗೂ ತುರ್ತು ಅಗತ್ಯಗಳ …
Read More »ಗಣೇಶ ವಿಸರ್ಜನಾ ಮೆರವಣಿಗೆ ವೇಳೆ 2 ಗುಂಪಿನ ಯುವಕರ ನಡುವೆ ಮಾರಾಮಾರಿ
ವಿಜಯನಗರ: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಎರಡು ಗುಂಪಿನ ಯುವಕರ ನಡುವೆ ಮಾರಾಮಾರಿ ನಡೆದಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಕೌಲ್ ಪೇಟೆಯ ದೊಡ್ಡ ಮಸೀದಿ ಬಳಿ ನಡೆದಿದೆ. 5ನೇ ದಿನದ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಘಟನೆ ನಡೆದಿದೆ. ಕಿಕ್ಕಿರಿದು ಸೇರಿದ್ದ ಜನರ ಮಧ್ಯೆ ಯುವಕರು ಹೊಡೆದಾಡಿಕೊಂಡಿದ್ದಾರೆ. ಒಬ್ಬ ಹುಡುಗನನ್ನ ಏಳೆಂಟು ಯುವಕರ ಗುಂಪೊಂದು ಅಟ್ಟಾಡಿಸಿ ಥಳಿಸಿದೆ. ಪೊಲೀಸರು ಬರುತ್ತಿದ್ದಂತೆ ಯುವಕರು ಓಡಿ ಹೋಗಿದ್ದಾರೆ. ಹೊಸಪೇಟೆ ಪಟ್ಟಣ …
Read More »ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಟ್ರ್ಯಾಕ್ಟರ್ ಹರಿದು ಇಬ್ಬರು ಬಾಲಕರು ಸಾವು
ರಾಯಚೂರು: ನಗರದ ಜಹಿರಾಬಾದ್ನ ಎಂ.ಈರಣ್ಣ ವೃತ್ತದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಟ್ರ್ಯಾಕ್ಟರ್ ಹರಿದು ಇಬ್ಬರು ಬಾಲಕರು ಸಾವನ್ನಪ್ಪಿದ್ದು ಓರ್ವ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ. 14 ವರ್ಷದ ಸುಚಿತ್, 16 ವರ್ಷದ ಚರಣಕುಮಾರ್ ಮೃತ ದುರ್ದೈವಿಗಳು. 36 ವರ್ಷದ ವಿಜಯಕುಮಾರ್ಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ರ್ಯಾಕ್ಟರ್ ಚಾಲಕ ಬ್ರೇಕ್ ಬದಲು ಆಕ್ಸಿಲರೇಟರ್ ಒತ್ತಿದ ಹಿನ್ನೆಲೆ ದುರಂತ ನಡೆದಿದೆ. ಜಹಿರಾಬಾದ್ ನಿಂದ ನಗರದ ಖಾಸಬಾವಿಗೆ ಗಣೇಶ ವಿಸರ್ಜನೆ ಮೆರವಣಿಗೆ …
Read More »ಲಾಡ್ಜ್ನಲ್ಲಿ ಹೆಂಡತಿ ಕೊಂದು ಪರಾರಿಯಾಗಿದ್ದ ಗಂಡ ಆತ್ಮಹತ್ಯೆ
ಚಿಕ್ಕಬಳ್ಳಾಪುರ: ಲಾಡ್ಜ್ನಲ್ಲಿ ಹೆಂಡತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಗಂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮದುಗೆರೆ ಗ್ರಾಮದಲ್ಲಿ ನಡೆದಿದೆ. ದೊಡ್ಡಬಳ್ಳಾಪುರದಲ್ಲಿ ಪತ್ನಿ ವಿದ್ಯಾಳನ್ನು ಕೊಲೆ ಮಾಡಿದ್ದ ಆನಂದ್, ಗೌರಿಬಿದನೂರು ತಾಲೂಕಿನ ಸ್ವಗ್ರಾಮ ಮದುಗೆರೆ ಗ್ರಾಮದ ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೆಪ್ಟಂಬರ್ 15ರಂದು ದೊಡ್ಡಬಳ್ಳಾಪುರದ ಲಾಡ್ಜ್ನಲ್ಲಿ 23 ವರ್ಷದ ವಿದ್ಯಾಳನ್ನು ಐಡಿ ಕಾರ್ಡ್ ಟ್ಯಾಗ್ನಿಂದ ಕತ್ತು ಬಿಗಿದು ಕೊಲೆ ಮಾಡಿದ್ದ ಆನಂದ್ ಬಳಿಕ ಪರಾರಿಯಾಗಿದ್ದ. ಸೆಪ್ಟೆಂಬರ್ 16ರಂದು ಪ್ರಕರಣ ಬೆಳಕಿಗೆ ಬಂದಿತ್ತು. ಪರಾರಿಯಾಗಿದ್ದ …
Read More »ಜನಾರ್ದನ ರೆಡ್ಡಿಗೆ ವಂದೇ ಮಾತರಂ 2 ಪ್ಯಾರಾನಾದ್ರೂ ಹಾಡೋಕೆ ಬರುತ್ತಾ ಕೇಳಿ: ಹರಿಪ್ರಸಾದ್ ತಿರುಗೇಟು
ಬೆಂಗಳೂರು: ಜನಾರ್ದನ ರೆಡ್ಡಿಗೆ ವಂದೇ ಮಾತರಂ 2 ಪ್ಯಾರಾನಾದ್ರೂ ಹಾಡೋಕೆ ಬರುತ್ತಾ ಕೇಳಿ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ತಿರುಗೇಟು ನೀಡಿದರು. ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ʻಹರಿಪ್ರಸಾದ್ ಹುಚ್ಚʼ ಎಂಬ ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದರು. ಹುಚ್ಚರಿಗೆಲ್ಲ ನಾನು ಉತ್ತರ ಕೊಡಲ್ಲ. ವಂದೇ ಮಾತರಂ ಅವರಿಗೆ ಎರಡು ಪ್ಯಾರಾ ಆದ್ರೂ ಹೇಳೋಕೆ ಬರುತ್ತಾ ಕೇಳಿ. ಗಣಿ ಕಳ್ಳ ಸರ್ಕಾರದ ಗಣಿ ಲೂಟಿ ಮಾಡಿ …
Read More »ಬೈಕ್ನಲ್ಲಿ ತೆರಳುತ್ತಿದ್ದ ಕಾರ್ಮಿಕರ ಮೇಲೆ ಒಂಟಿ ಸಲಗ ದಾಳಿ – ಇಬ್ಬರು ಗಂಭೀರ
ಮಡಿಕೇರಿ: ಕೊಡಗಿನಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಕಾಡಾನೆ ದಾಳಿಗೆ ಇಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕುಶಾಲನಗರ ತಾಲ್ಲೂಕಿನ ಅತ್ತಿಮಂಗಲ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕೂಲಿ ಕೆಲಸಕ್ಕೆ ಬೈಕ್ನಲ್ಲಿ ತೆರಳುತ್ತಿದ್ದ ಇಬ್ಬರು ಕಾರ್ಮಿಕರ ಮೇಲೆ ರಸ್ತೆಗೇ ಏಕಾಏಕಿ ಬಂದ ಒಂಟಿ ಸಲಗ ದಾಳಿ ನಡೆಸಿದೆ. ಗಾಯಗೊಂಡವರನ್ನ ಸುಬ್ರಹ್ಮಣಿ (60) ಹಾಗೂ ಉಮೇಶ್ (53) ಎಂದು ಗುರುತಿಸಲಾಗಿದೆ. ರಸ್ತೆ ಬದಿಯಲ್ಲಿ ದಟ್ಟವಾಗಿ ಬೆಳೆದಿದ್ದ ಗಿಡಗಂಟಿ ಮತ್ತು ಪೊದೆಗಳ ನಡುವೆ ಕಾಡಾನೆ ಅಡಗಿದ್ದರಿಂದ, …
Read More »ಪರಿಸರ ಸಂರಕ್ಷಣೆಯಲ್ಲಿ ಭಾರತದ ಕೊಡುಗೆ; ತಲಾ ಇಂಗಾಲ ಹೊರಸೂಸುವಿಕೆ ಜಾಗತಿಕ ಸರಾಸರಿಯ ಅರ್ಧಕ್ಕಿಂತ ಕಡಿಮೆ
ನವದೆಹಲಿ: ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಇಂಗಾಲ ಹೊರಸೂಸುವಿಕೆಯ ಹೊಣೆಗಾರಿಕೆಯನ್ನು ಅನ್ಯಾಯವಾಗಿ ಹೊರಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತದ ತಲಾ ಇಂಗಾಲ ಹೊರಸೂಸುವಿಕೆ ಜಾಗತಿಕ ಸರಾಸರಿಯ ಅರ್ಧಕ್ಕಿಂತಲೂ ಕಡಿಮೆ ಇದೆ ಎಂದು ತಿಳಿಸಿದ್ದಾರೆ. ನವದೆಹಲಿಯ ವಿಜ್ಞಾನ ಭವನದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆಯೋಜಿಸಿದ್ದ ‘ದಿ ಫ್ಯೂಚರ್ ಆಫ್ ಎನ್ವಿರಾನ್ಮೆಂಟ್ & ಕ್ಲೈಮೇಟ್ ಡೈನಾಮಿಕ್ಸ್’ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಬನ್ ಹೊರಸೂಸುವಿಕೆಯ ಹೊಣೆಗಾರಿಕೆಯನ್ನು ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ …
Read More »
Laxmi News 24×7