Breaking News

ಕೃಷ್ಣಾ ನದಿಯಲ್ಲಿ ಈಜಲು ಹೋಗಿ ಯುವಕ ನೀರುಪಾಲು

Spread the love

ರಾಯಚೂರು: ಕೃಷ್ಣಾ ನದಿಯ  ಅಪಾಯ ಸ್ಥಳದಲ್ಲಿ ಈಜಲು ಹೋಗಿ ಯುವಕನೋರ್ವ ನೀರುಪಾಲಾಗಿರುವ ಘಟನೆ ರಾಯಚೂರಿನ ದೇವಸುಗೂರು ಬಳಿ ನಡೆದಿದೆ.

ಜಾರ್ಖಂಡ್ ಮೂಲದ 20 ವರ್ಷದ ಸುನಿಲ್ ಪಹಾಡಿಯಾ ಮೃತ ದುರ್ದೈವಿ. ಖಾಸಗಿ ಫಾರ್ಮಾ ಕಂಪನಿಯಲ್ಲಿ ಹೆಲ್ಪರ್ ಕೆಲಸದಲ್ಲಿದ್ದ ಸುನಿಲ್ ತನ್ನ ಸ್ನೇಹಿತನ ಜೊತೆ ಈಜಲು ಕೃಷ್ಣಾ ನದಿ ಸೇತುವೆ ಬಳಿ ಹೋಗಿದ್ದಾಗ ದುರ್ಘಟನೆ ನಡೆದಿದೆ.

ಅಗ್ನಿ ಶಾಮಕದಳ ಹಾಗೂ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ನದಿಯಿಂದ ಶವ ಹೊರತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ರಿಮ್ಸ್ ಆಸ್ಪತ್ರೆಗೆ ಶವ ರವಾನಿಸಲಾಗಿದೆ. ಘಟನೆ ಸಂಬಂಧ ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಸಿಜೆಪಿಯಿಂದ ತಿರಂಗಾ ಯಾತ್ರೆ: ದೆಹಲಿಯಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಮಾರ್ಗಸೂಚಿ

Spread the loveನವದೆಹಲಿ: ಅ.16ರಂದು ಸಿಜೆಪಿಯು ಕನ್ನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ತಿರಂಗಾ ಯಾತ್ರೆ ಹಮ್ಮಿಕೊಂಡಿರುವ ಹಿನ್ನೆಲೆ ದೆಹಲಿ ಪೊಲೀಸರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ