Breaking News

Daily Archives: ಆಗಷ್ಟ್ 22, 2026

ಗ್ರಾಮದೊಳಗೆ ರಾಜಾರೋಷವಾಗಿ ಓಡಾಡಿದ ಚಿರತೆ

ಚಿಕ್ಕಮಗಳೂರು: ಕಡೂರು  ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ಚಿರತೆಯೊಂದು ರಾಜಾರೋಷವಾಗಿ ಓಡಾಡಿದೆ. ಚಿರತೆ ಓಡಾಡಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಫೋಟೋ ಒಂದರಲ್ಲಿ ವೃದ್ಧೆಯೊಬ್ಬಳು ಮನೆಯಂಗಳದಲ್ಲಿ ನಿಂತಿದ್ದಾಗ, ಬಹಳ ಸಮೀಪದಲ್ಲೇ ಚಿರತೆ ಹೋಗಿರುವುದು ಸೆರೆಯಾಗಿದೆ. ಚಿರತೆ ಮನೆಯೊಂದರ ಕಾಂಪೌಂಡ್ ಮೇಲೆ ಮಲಗಿ ವಿಶ್ರಾಂತಿ ಪಡೆಯುತ್ತಿರುವ ದೃಶ್ಯ ಸಹ ಮೊಬೈಲ್‌ನಲ್ಲಿ ಗ್ರಾಮಸ್ಥರು ಸೆರೆಹಿಡಿದಿದ್ದಾರೆ. ಚಿರತೆಯ ಓಡಾಟದಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಚಿರತೆ ಓಡಾಟದಿಂದ ಕೂಲಿ ಕಾರ್ಮಿಕರು, ಬೈಕ್‌ ಸವಾರರು, ಶಾಲಾ ಮಕ್ಕಳ ಓಡಾಟಕ್ಕೆ …

Read More »

ರಾಜಸ್ಥಾನ ಸರ್ಕಾರಿ ಶಾಲೆ ಪರಿಶೀಲನೆಗೆ ತೆರಳಿದ್ದ ಸಿಜೆಪಿ ನಾಯಕರಿಗೆ ಥಳಿತ – ಹೊಡೆದು ಬೆನ್ನಟ್ಟಿ ಓಡಿಸಿದ ಗ್ರಾಮಸ್ಥರು

ಜೈಪುರ: ಸರ್ಕಾರಿ ಶಾಲೆ ಪರಿಶೀಲನೆಗೆ ತೆರಳಿದ್ದ ಕಾಕ್ರೋಚ್ ಜನತಾ ಪಾರ್ಟಿ  ನಾಯಕರು ಮತ್ತು ಸದಸ್ಯರ ಮೇಲೆ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿ ಬೆನ್ನಟ್ಟಿದ ಘಟನೆ ರಾಜಸ್ಥಾನದಲ್ಲಿನಡೆದಿದೆ. ಜೈಪುರ  ಜಿಲ್ಲೆಯ ಬಗ್ರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಮ್‌ಪುರ ಕನ್ವರ್‌ಪುರ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಪರಿಶೀಲನೆಗೆ ಇಂದು ಸಿಜೆಪಿ ಸಹ-ಸಂಸ್ಥಾಪಕ ಅಶುತೋಷ್ ರಾಂಕಾ ನೇತೃತ್ವದ ತಂಡ ಆಗಮಿಸಿತ್ತು. ಗ್ರಾಮದ ಸರ್ಕಾರಿ ಶಾಲೆಗೆ ಭೇಟಿ ನೀಡಲು ಮುಂದಾದಾಗ ಈ ದಾಳಿ ನಡೆದಿದೆ. ಘಟನೆಯ …

Read More »

ತೃತೀಯಲಿಂಗಿಯಂತೆ ನಟಿಸಿ ಮನೆಗೆ ನುಗ್ಗಿ ಗಗನಸಖಿ ಮೇಲೆ ಅತ್ಯಾಚಾರ

ಮುಂಬೈ: ತೃತೀಯಲಿಂಗಿಯಂತೆ ನಟಿಸಿ ವ್ಯಕ್ತಿಯೊಬ್ಬ ಗಗನಸಖಿ ಮನೆಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮುಂಬೈ ಮಧ್ಯ ಭಾಗದ ಪೊವೈನಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅನಿಲ್‌ ಶೇಷರಾವ್‌ ಶಿಂಧೆ ಬಂಧಿತ ಆರೋಪಿ. ಗಂಡನ ಅನಾರೋಗ್ಯ ಗುಣಪಡಿಸಲು ಕೆಟ್ಟ ದೃಷ್ಟಿ ತೆಗೆಯುವುದಾಗಿ ನಂಬಿಸಿ ಗಗನಸಖಿ ಮನೆಗೆ ಪ್ರವೇಶಿಸಿದ್ದ ಆರೋಪಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಸಂತ್ರಸ್ತೆ ಮನೆಗೆ ನುಗ್ಗಿದ ಆರೋಪಿ, ಏಕಾಏಕಿ ಬೆಡ್‌ರೂಮ್‌ಗೆ ಪ್ರವೇಶಿಸಿದ್ದಾನೆ. ನಂತರ ಮಹಿಳೆಯನ್ನು ಬೆದರಿಸಿ …

Read More »

ವಿಪಕ್ಷಗಳ ಹೋರಾಟದ ಮಧ್ಯೆ ಸಚಿವ ನಾಗೇಂದ್ರಗೆ ಮತ್ತೊಂದು ಇಲಾಖೆ ಜವಾಬ್ದಾರಿ ಕೊಟ್ಟ ಡಿಕೆ ಸರ್ಕಾರ

ಬೆಂಗಳೂರು: ವಿಧಾನ ಮಂಡಲದ ಅಧಿವೇಶನದಲ್ಲಿ ಸಚಿವ ಬಿ. ನಾಗೇಂದ್ರ  ರಾಜೀನಾಮೆಗೆ ಒತ್ತಾಯಿಸಿ ವಿಪಕ್ಷಗಳು 5 ದಿನಗಳಿಂದ ಹೋರಾಟ ಮಾಡ್ತಿವೆ. ಇದರ ಮಧ್ಯೆಯೇ ನಾಗೇಂದ್ರ ಅವರಿಗೆ ರಾಜ್ಯ ಸರ್ಕಾರ ಮತ್ತೊಂದು ಇಲಾಖೆ ಜವಾಬ್ದಾರಿ ಕೊಟ್ಟಿದೆ. ಯೋಜನೆ ಮತ್ತು ಸಾಂಖ್ಯಿಕ ಖಾತೆ ಜೊತೆಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಸಚಿವಾಲಯದ ಜವಾಬ್ದಾರಿಯನ್ನೂ ನಾಗೇಂದ್ರ ಅವರ ಹೆಗಲಿಗೆ ಸಿಎಂ ಹಾಕಿದ್ದಾರೆ. ಈ ಇಲಾಖೆ ಸಂಬಂಧ ವಿಧಾನ ಪರಿಷತ್ ನಲ್ಲಿ ಸಚಿವ ನಾಗೇಂದ್ರ ಬಿಜೆಪಿ ಸದಸ್ಯ …

Read More »

ಶ್ರೀರಂಗಪಟ್ಟಣದ ಚಾಮುಂಡೇಶ್ವರಿಗೆ ನೋಟುಗಳ ಅಲಂಕಾರ – ಧನಲಕ್ಷ್ಮಿಯಾಗಿ ಕಂಗೊಳಿಸಿದ ದೇವಿ

ಮಂಡ್ಯ: ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಶ್ರೀರಂಗಪಟ್ಟಣದ ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯದಲ್ಲಿ  ತಾಯಿಗೆ ಆಕರ್ಷಕ ‘ಧನಲಕ್ಷ್ಮಿ’ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಲಾಗಿದೆ. ದೇವಾಲಯದ ಗರ್ಭಗುಡಿಯನ್ನು ಸಂಪೂರ್ಣವಾಗಿ ನೋಟುಗಳಿಂದ ಸಿಂಗರಿಸಲಾಗಿದ್ದು, ಭಕ್ತರ ಕಣ್ಮನ ಸೆಳೆಯುತ್ತಿದೆ. ಭಕ್ತರು ನೀಡಿದ ಕಾಣಿಕೆ ಹಣವಾದ ಸುಮಾರು 3 ಲಕ್ಷ ರೂ. ಬಳಸಿಕೊಂಡು ದೇವಾಲಯದ ಪ್ರಧಾನ ಅರ್ಚಕರಾದ ಲಕ್ಷ್ಮೀಶ ಅವರು ಈ ವೈಭವೋಪೇತ ಅಲಂಕಾರ ಮಾಡಿದ್ದಾರೆ. 10, 20, 50, 100, 200 ಹಾಗೂ 500 ರೂ. …

Read More »

ಕಾಂಗ್ರೆಸ್ ಮುಖಂಡ ಡೇವಿಡ್ ಡಿಸೋಜಾ ಹತ್ಯೆ ಕೇಸ್ – ಉತ್ತರಾಖಂಡ್‌ನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್‌

ಉಡುಪಿ: ಕಾಂಗ್ರೆಸ್ ಮುಖಂಡ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣದಲ್ಲಿ ಮತ್ತೋರ್ವ ಆರೋಪಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ಸೂರಜ್ (31) ಬಂಧಿತ ಆರೋಪಿ. ಉತ್ತರಾಖಂಡ್‌ನ ನೈನಿತಾಲ್ ಜಿಲ್ಲೆಯ ಹಲ್ದ್ವಾನಿ ಬಳಿ ವಿಶೇಷ ಕಾರ್ಯಾಚರಣೆ ನಡೆಸಿ, ತಲೆಮರೆಸಿಕೊಂಡಿದ್ದ ಸೂರಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಶೂಟೌಟ್ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಸೂರಜ್‌ ವಿರುದ್ಧ ಈ ಪ್ರಕರಣದಲ್ಲಿ ಒಳಸಂಚು ರೂಪಿಸಿ, ಹಣಕಾಸು ಪೂರೈಕೆ ಮಾಡಿದ್ದ ಆರೋಪ ಇದೆ. ಈಗಾಗಲೇ ಬಂಧಿತರಾಗಿರುವ …

Read More »

ಚುನಾವಣೆಗೂ ಮುನ್ನ ಯೋಗಿ ಸರ್ಕಾರ ಭದ್ರತಾ ಪ್ಲ್ಯಾನ್ – ಮಾಯಾವತಿ ಸೇರಿ 44 ನಾಯಕರಿಗೆ ಬುಲೆಟ್‌ಪ್ರೂಫ್ ಜಾಕೆಟ್

ಲಕ್ನೋ: ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ  ಪ್ರಮುಖ ಭದ್ರತಾ ಕ್ರಮಕ್ಕೆ ಮುಂದಾಗಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹಾಗೂ ಬಹುಜನ ಸಮಾಜ ಪಕ್ಷದ (BSP) ಅಧ್ಯಕ್ಷೆ ಮಾಯಾವತಿ ಸೇರಿದಂತೆ ಸುಮಾರು 44 ಪ್ರಮುಖ ರಾಜಕೀಯ ನಾಯಕರಿಗೆ ಬುಲೆಟ್‌ಪ್ರೂಫ್ ಜಾಕೆಟ್‌ಗಳನ್ನ ಒದಗಿಸಲು ಸಿದ್ಧತೆ ನಡೆಸಿದೆ ಎಂದು ವರದಿಗಳು ತಿಳಿಸಿವೆ. ಮೂಲಗಳ ಪ್ರಕಾರ, ಭದ್ರತಾ ಕೇಂದ್ರ ಕಚೇರಿ ಸುಮಾರು 10 ಲಕ್ಷ ರೂ. …

Read More »

ಕೈಮುಗಿದು ಹೇಳುತ್ತೇನೆ ಯುವಕರೇ ಟೋಲ್ ಕಟ್ಟಬೇಡಿ, FIR ಗೆ ಹೆದರಬೇಡಿ – ಹೆಚ್‌ಡಿಕೆ ಕರೆ

ಬೆಂಗಳೂರು: ಕೈಮುಗಿದು ಹೇಳುತ್ತೇನೆ ಯುವಕರೇ ಟೋಲ್ ಕಟ್ಟಬೇಡಿ, FIR ಗೆ ಹೆದರಬೇಡಿ ಎಂದು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಕರೆ ನೀಡಿದ್ದಾರೆ. ನೈಸ್‌ ರಸ್ತೆಯ ಟೋಲ್‌ ಸಂಗ್ರಹ ವಿಚಾರವಾಗಿ ಕೇಂದ್ರ ಸಚಿವ ಹಾಗೂ ಜೆಡಿಎಸ್‌ ನಾಯಕ ಹೆಚ್‌.ಡಿ. ಕುಮಾರಸ್ವಾಮಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನೈಸ್‌ ಸಂಸ್ಥೆ ವಿರುದ್ಧದ ಆರೋಪಗಳ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಅವರು, ಸಾರ್ವಜನಿಕರು ಟೋಲ್‌ ಪಾವತಿಸದಂತೆ ಕರೆ ನೀಡಿದ್ದಾರೆ. ಜನರಿಗೆ …

Read More »

1 ಅಪಾರ್ಟ್ಮೆಂಟ್‌ಗೆ ಒಂದೇ ಅಸೋಸಿಯೇಷನ್; ಅಪಾರ್ಟ್ಮೆಂಟ್ ನಿವಾಸಿಗಳ ಹಿತರಕ್ಷಣೆಗಾಗಿ ಹೊಸ ವಿಧೇಯಕ: ಕೃಷ್ಣ ಬೈರೇಗೌಡ

ಬೆಂಗಳೂರು: ಅಪಾರ್ಟ್ಮೆಂಟ್ ನಿವಾಸಿಗಳ ಹಿತರಕ್ಷಣೆ ಕಾಪಾಡುವ ಹಾಗೂ ಅವರಿಗೆ ಶಾಸನಬದ್ಧ ಹಕ್ಕುಗಳನ್ನು ಒದಗಿಸುವ ಸಲುವಾಗಿ 2026ನೇ ಸಾಲಿನ ‘ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕಕ್ಕೆ ಅಂಗೀಕಾರ ದೊರೆತಿದೆ. ವಿಧಾನಸಭೆಯಲ್ಲಿ ‘2026ನೇ ಸಾಲಿನ ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕʼವನ್ನು ಮಂಡಿಸಿ ವಿವರಣೆ ನೀಡಿದ ಅವರು, “ರಾಜ್ಯದಲ್ಲಿ ದಿನೇ ದಿನೇ ಬೆಳೆಯುತ್ತಿರುವ ಅಪಾರ್ಟ್ಮೆಂಟ್ ಸಂಸ್ಕೃತಿ, ನಿವಾಸಿಗಳು ಎದುರಿಸುತ್ತಿರುವ ನಿರಂತರ ಆಡಳಿತಾತ್ಮಕ ಗೊಂದಲಗಳು ಹಾಗೂ ಡೆವಲಪರ್‌ಗಳ ಮಿತಿಮೀರಿದ ಧೋರಣೆಗೆ ಶಾಶ್ವತ ಮುಕ್ತಿ …

Read More »

ಬೆಳಗಾವಿಯಲ್ಲಿ ಮರಾಠಾ ಸಮುದಾಯ ಪ್ರತಿಭಟನೆ

ಬೆಳಗಾವಿ:ನೆರೆಯ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕುಪವಾಡದಲ್ಲಿ ಬೆಳಗಾವಿ ಮೂಲದ ಕೇಸರೇಕರ್ ದಂಪತಿ ಬರ್ಬರ ಹತ್ಯೆ ಪ್ರಕರಣದ ಆರೋಪಿಗಳಿಗೆ ಮರಣದಂತೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ನಗರದಲ್ಲಿ ಮರಾಠ ಸಮುದಾಯ ಪ್ರತಿಭಟನಾ ರ‌್ಯಾಲಿ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಕರ್ನಾಟಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಖಾನಾಪುರ ತಾಲೂಕಿನ ಹೆಬ್ಬಾಳ ಗ್ರಾಮದ ಮೂಲದ ಮೋಹನ ಕೇಸರೇಕರ ಹಾಗೂ ಅವರ ಪತ್ನಿ ಮನಿಷಾ ಕೇಸರೇಕರ ಜೀವನೋಪಾಯಕ್ಕಾಗಿ ಸಾಂಗ್ಲಿಯಲ್ಲಿ ನೆಲೆಸಿದ್ದರು.  ಕುಪವಾಡದ …

Read More »