Breaking News

ನಾಗೇಂದ್ರ ರಾಜೀನಾಮೆ ಬಗ್ಗೆ ನೋಟಿಸ್‌ ‌ಕೊಟ್ಟು ವಿಪಕ್ಷ ಚರ್ಚೆ ಮಾಡಲಿ: ಡಿಕೆಶಿ

Spread the love

ಬೆಂಗಳೂರು: ವಿಧಾನ ಪರಿಷತ್ ಕಲಾಪ 5ನೇ ದಿನವೂ ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಕಲಾಪ ಬಲಿಯಾಯ್ತು. ವಿಪಕ್ಷಗಳು ಹೋರಾಟ ಮುಂದುವರೆಸಿದ್ರು. ಈ ವೇಳೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌  ಅವರು ನಾಗೇಂದ್ರ ರಾಜೀನಾಮೆ ಬಗ್ಗೆ ನೋಟಿಸ್‌ ‌ಕೊಟ್ಟು ವಿಪಕ್ಷ ಚರ್ಚೆ ಮಾಡಲಿ ಎಂದಿದ್ದಾರೆ.

ಕಲಾಪ ಪ್ರಾರಂಭ ಆದ ಕೂಡಲೇ ಸಭಾಪತಿಗಳು ಪ್ರಶ್ನೋತ್ತರ ಕಲಾಪ, ಬರ ಸೇರಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ಆಗಬೇಕು ಅವಕಾಶ ಕೊಡಿ ಅಂತ ಮನವಿ ಮಾಡಿದ್ರು‌‌. ಇದಕ್ಕೂ ಒಪ್ಪದ ವಿಪಕ್ಷಗಳು ನಾಗೇಂದ್ರ ರಾಜೀನಾಮೆ ಕೊಡಬೇಕು ಎಂದರು. ಈ ವೇಳೆ ಸಚಿವ ಯು.ಟಿ ಖಾದರ್ ರಾಜ್ಯಪಾಲರು ಪ್ರಮಾಣವಚನ ಬೋಧಿಸಿದ್ದಾರೆ. ಅವರಿಗೆ ಕಾನೂನು ಗೊತ್ತಿಲ್ಲವಾ ಅಂತ ವಿಪಕ್ಷಗಳ ವಿರುದ್ದ ಗರಂ ಆದ್ರು‌. ಈ ವೇಳೆ ವಿಪಕ್ಷಗಳು ನಾಗೇಂದ್ರ ರಾಜೀನಾಮೆಗೆ ಘೋಷಣೆ ಶುರು ಮಾಡಿದ್ರು. ಕೈ ಬರಹದ ಪ್ಲೇ ಕಾರ್ಡ್ ಹಿಡಿದು ಘೋಷಣೆ ಮಾಡಿದ್ರು. ಗದ್ದಲ ಗಲಾಟೆ ಮಧ್ಯೆ ಸಭಾಪತಿಗಳು ಪ್ರಶ್ನೋತ್ತರ, ಶೂನ್ಯವೇಳೆ, ಗಮನ ಸೆಳೆಯುವ ಕಲಾಪ ತೆಗೆದುಕೊಂಡು ಮುಗಿಸಿದ್ರು.

ಈ ವೇಳೆ ಸದನದಲ್ಲಿ ಮಾತಾಡಿದ ಸಿಎಂ ಡಿಕೆ ಶಿವಕುಮಾರ್ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಹೋರಾಟ ಮಾಡಲಿ. ನಾನು ಹಿಂದೆಯೇ ಪಕ್ಷದ ಅಧ್ಯಕ್ಷ ಆದಾಗ ನಾನೇ ರಾಜೀನಾಮೆ ಕೊಡಿಸಿದ್ದೆ‌. ತನಿಖೆ ಮಾಡಿಸಿದ್ದೇವೆ‌. ಆದರೆ ಈಗ ವಿಪಕ್ಷಗಳು ನೋಟಿಸ್‌ ಕೊಟ್ಟು ಚರ್ಚೆ ಮಾಡಲಿ. ಅವರ ಬಳಿ ಏನು ದಾಖಲೆ ಇದೆ. ಸಿಬಿಐ, ಇಡಿ ಅವರು ಏನ್ ಮಾಹಿತಿ ಕೊಟ್ಟರು ಅಂತ ಚರ್ಚೆ ಮಾಡಲಿ. ಚರ್ಚೆ ಮಾಡಲ್ಲ. ನೋಟಿಸ್ ಕೊಟ್ಟಿಲ್ಲ. ಹೀಗೆ ಮಾಡೋದು ಸರಿಯಲ್ಲ, ನೋಟಿಸ್‌ ಕೊಡಿ ಎರಡು ದಿನ ಚರ್ಚೆ ಮಾಡೋಣ ಎಂದರು.

ನಾನು ಯಾಕೆ ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡೆ ಅಂತ ಹೇಳ್ತೀನಿ. ರಾಹುಲ್ ಮನೆಗೆ ಹೋಯ್ತು ಅಂತ ಹೇಳೋದು ಸರಿಯಲ್ಲ. ಸರ್ಕಾರದ ಮೇಲೆ ಆರೋಪ ಮಾಡೋದು ಸರಿಯಲ್ಲ. ಎರಡು ವರ್ಷ ಅವರನ್ನು ಹೊರಗೆ ಇಟ್ಟಿದ್ವಿ. ನೀವು ಚರ್ಚೆ ಮಾಡಿ. ನಾವು ಚರ್ಚೆ ಮಾಡ್ತೀವಿ ಎಂದು ವಿಪಕ್ಷಗಳಿಗೆ ತಿರುಗೇಟು ಕೊಟ್ಟರು.

ಛಲವಾದಿ ನಾರಾಯಣಸ್ವಾಮಿ ಮಾತಾಡಿ, ನಾಗೇಂದ್ರ ಅವರ ವಯಕ್ತಿಕ ವಿರೋಧಿಗಳು ನಾವಅಲ್ಲ. ರಾಜೀನಾಮೆ ಕೊಟ್ಟು ಹೊರಗೆ ಇದ್ದರು. ಬೇಲ್ ಮೇಲೆ ಹೊರಗೆ ಇದ್ದಾರೆ‌. ದೋಷಮುಕ್ತ ಆಗಿಲ್ಲ. ಕೋರ್ಟ್ ಆದೇಶ ಮಾಡಿದ್ರೆ ನೋಡೋಣ. SIT ಯಾರ ಕೈಯಲ್ಲಿ ಇದೆ‌ ಅಂತ ಗೊತ್ತಿದೆ. ಸರ್ಕಾರಕ್ಕೆ ಇಷ್ಟು ಆತುರವಾಗಿ ಯಾಕೆ ನಾಗೇಂದ್ರ ಅವರನ್ನು ತಗೊಂಡ್ರಿ. ಬೇರೆ ಅವರನ್ನು ತಗೊಳ್ಳಿ. ಕಳಂಕಿತರನ್ನು ಸೇರಿಸಿಕೊಂಡಿರೋದು ಸರಿಯಲ್ಲ. ಚರ್ಚೆ ಮಾಡೋದು ಏನು ಇಲ್ಲ. ಅವರನ್ನು ವಜಾ ಮಾಡಿ ನಾವು ಸಹಕಾರ ಮಾಡ್ತೀವಿ ಎಂದರು.

ಕಾಶಪ್ಪನವರ್ ದಲಿತರನ್ನು ನಿಂದಿಸಿದ್ದಾರೆ. ಮೋದಿ ದೇಶವನ್ನು ಹೊಲಗೇರಿ ಮಾಡಿದ್ದಾರೆ ಅಂತ ಮಾತಾಡಿದ್ದಾರೆ. ಕಾಶಪ್ಪನವರ್ ಅವರನ್ನು ಕೂಡಲೇ ಅರೆಸ್ಟ್ ಮಾಡಬೇಕು. ಅದು ಅಟ್ರಾಸಿಟಿ ಕೇಸ್‌. ಅವರನ್ನು ಕೂಡಲೇ ಬಂಧನ ಮಾಡಿ, ಅಂತ ಸಿಎಂಗೆ ಛಲವಾದಿ ನಾರಾಯಣಸ್ವಾಮಿ ಒತ್ತಾಯ ಮಾಡಿದರು. ಗದ್ದಲ. ಗಲಾಟೆ ಹಿನ್ನೆಲೆ ಸೋಮವಾರಕ್ಕೆ ಸಭಾಪತಿಗಳು ಕಲಾಪ ಮುಂದೂಡಿಕೆ ಮಾಡಿದ್ರು


Spread the love

About Laxminews 24x7

Check Also

28 ಜೀವಾವಧಿ ಶಿಕ್ಷಾ ಬಂಧಿಗಳ ಅವಧಿ ಪೂರ್ವ ಬಿಡುಗಡೆಗೆ ಸಂಪುಟ ಅಸ್ತು

Spread the loveಬೆಂಗಳೂರು: ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿ ಜೀವಾವಧಿ ಶಿಕ್ಷೆ  ಅನುಭವಿಸುತ್ತಿರುವ ಸನ್ನಡತೆ ಹೊಂದಿರುವ ಅರ್ಹ ಬಂಧಿಗಳ ಪೈಕಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ