Breaking News

Monthly Archives: ಮೇ 2026

ಹಣಕ್ಕಾಗಿ ಮಕ್ಕಳ ಮಾರಾಟ, ವರದಕ್ಷಿಣೆಗಾಗಿ ಪತ್ನಿಯ ಕೊಲೆ – ತಲೆಮರೆಸಿಕೊಂಡ ಪತಿಗಾಗಿ ಪೊಲೀಸರಿಂದ ತಲಾಶ್‌

ಹಾಸನ: ವರದಕ್ಷಿಣೆಗಾಗಿ ಪತ್ನಿಯನ್ನು ಕೊಲೆ ಮಾಡಿ ನಂತರ ಮೃತದೇಹವನ್ನು ಆಸ್ಪತ್ರೆಯಲ್ಲಿ ಇಟ್ಟು ಪತಿ ಎಸ್ಕೇಪ್ ಆದ ಘಟನೆ ಚನ್ನರಾಯಪಟ್ಟಣದ  ಕಂಚಾಗಾರ ಬೀದಿಯಲ್ಲಿ ನಡೆದಿದೆ. ಗುಲ್ಷನ್ ಬಾನು (34) ಕೊಲೆಯಾದ ಮಹಿಳೆ. ಪತಿ ಸೈಫ್‌ ಅಲಿಖಾನ್ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಕಳೆದ 14 ವರ್ಷಗಳ ಹಿಂದೆ ಹಾಸನದ  ಚಿಪ್ಪಿನಕಟ್ಟೆಯ ಗುಲ್ಷನ್‌ ಬಾನು, ಚನ್ನರಾಯಪಟ್ಟಣದ ಸೈಫ್‌ ಅಲಿಖಾನ್ ಜೊತೆ ವಿವಾಹವಾಗಿದ್ದರು. ದಂಪತಿಗೆ ಎರಡು ಗಂಡು ಮಕ್ಕಳಿದ್ದು ಸೈಫ್‌ಅಲಿಖಾನ್ ಗಾರೆ ಕೆಲಸ ಮಾಡಿಕೊಂಡಿದ್ದ. …

Read More »

ಕರ್ನಾಟಕದಿಂದ ರಾಜ್ಯಸಭೆಗೆ ಶರ್ಮಿಳಾ ರೆಡ್ಡಿ ಆಯ್ಕೆ ಸಾಧ್ಯತೆ

ನವದೆಹಲಿ: ಕರ್ನಾಟಕದಿಂದ ತೆರವಾಗುವ ಮೂರು ರಾಜ್ಯಸಭಾ ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆ ಕಸರತ್ತು ಆರಂಭಗೊಂಡಿದೆ. ಕರ್ನಾಟಕದಿಂದ ರಾಜ್ಯಸಭೆಗೆ ವೈಎಸ್ ರಾಜಶೇಖರ ರೆಡ್ಡಿ ಪುತ್ರಿ ಹಾಗೂ ಆಂಧ್ರ ಕಾಂಗ್ರೆಸ್ (Congress) ಸಮಿತಿಯ ಅಧ್ಯಕ್ಷೆ ಶರ್ಮಿಳಾ ರೆಡ್ಡಿ  ಅವರನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ. ಮೂರು ಸ್ಥಾನಗಳಲ್ಲಿ ಒಂದು ಸ್ಥಾನ ಖರ್ಗೆಗೆ, ಇನ್ನೊಂದು ಸ್ಥಾನವನ್ನು ಸಿದ್ದರಾಮಯ್ಯಗೆ ಹೈಕಮಾಂಡ್ ಮೀಸಲಿಟ್ಟಿದೆ. ಒಂದು ವೇಳೆ ಸಿದ್ದರಾಮಯ್ಯ ಒಪ್ಪದಿದ್ದರೆ ಪರ್ಯಾಯ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ. 3ನೇ ಸ್ಥಾನಕ್ಕೆ ಶರ್ಮಿಳಾ …

Read More »

ಧಾರಾಕಾರ ಮಳೆಗೆ ಕಾಂಪೌಂಡ್ ಗೋಡೆ ಕುಸಿದು ಆಟೋ ಚಾಲಕ ಸಾವು

ಬೆಂಗಳೂರು: ನಗರದಲ್ಲಿ ಇಂದು ಸಂಜೆ ಸುರಿದ ಧಾರಾಕಾರ ಮಳೆಗೆ ಕಾಂಪೌಂಡ್ ಗೋಡೆ ಕುಸಿದು ಆಟೋ ಚಾಲಕ ಬಲಿಯಾಗಿರುವ ಘಟನೆ ನಡೆದಿದೆ. ವಿಜಯನಗರದ ಕ್ಲಬ್ ಕಾಂಪೌಂಡ್ ಗೋಡೆ ಕುಸಿದು ಶಿವಬೋರಯ್ಯ ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ. ಗೋಡೆ ಪಕ್ಕ ಆಟೋದಲ್ಲಿ ಕುಳಿತಿದ್ದರು. ಆಟೋ ಮೇಲೆ ಗೋಡೆ ಕುಸಿದು ಪರಿಣಾಮ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಗೋಡೆ ಕುಸಿತದ ವೇಳೆ ಭಾರಿ ದುರಂತ ತಪ್ಪಿದೆ. ಘಟನಾ ಸ್ಥಳದಲ್ಲಿ ನಿತ್ಯ ಸಾರ್ವಜನಿಕರು ಓಡಾಡುತ್ತಿದ್ದರು. ಇದೇ …

Read More »

IPL ಆರ್‌ಸಿಬಿ ಫೈನಲ್‌; ಬೆಂಗಳೂರಲ್ಲಿ ಸಂಭ್ರಮಾಚರಣೆಗೆ ಬ್ರೇಕ್‌ – ಗೈಡ್‌ಲೈನ್ಸ್‌ ಬಿಡುಗಡೆ

ಬೆಂಗಳೂರು: ಐಪಿಎಲ್‌ 2026 ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಫೈನಲ್‌ ಪ್ರವೇಶಿಸಿದ್ದು, ಪಂದ್ಯದ ದಿನ ಬೆಂಗಳೂರಿನಲ್ಲಿ ಸಂಭ್ರಮಾಚರಣೆಗೆ ನಿಷೇಧ ಹೇರಲಾಗಿದೆ. ಕಳೆದ ಬಾರಿ ಆರ್‌ಸಿಬಿ ಐಪಿಎಲ್‌ ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಂಭ್ರಮಾಚರಣೆ ನಡೆದಿತ್ತು. ಮಧ್ಯರಾತ್ರಿ 12 ಗಂಟೆ ನಂತರ ರಸ್ತೆ ರಸ್ತೆಗಳಲ್ಲಿ ಆರ್‌ಸಿಬಿ ಫ್ಯಾನ್ಸ್‌ ಸೆಲಬ್ರೇಷನ್‌ ಮಾಡಿದ್ದರು. ಈ ಬಾರಿ ಸಂಭ್ರಮಾಚರಣೆಗೆಗೆ ಕಟ್ಟುನಿಟ್ಟಿನ ನಿಯಮ ತರಲಾಗಿದೆ. ಪೊಲೀಸ್‌ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ. ಸೋಷಿಯಲ್ ಮೀಡಿಯಾದ ಮೇಲೂ ಪೊಲೀಸರು ಕಣ್ಣಿಟ್ಟಿದ್ದಾರೆ. ಒಂದು …

Read More »

ಸಿದ್ದರಾಮಯ್ಯ ಬಗ್ಗೆ ನನಗಿದ್ದ ಗೌರವ ಮತ್ತಷ್ಟು ಹೆಚ್ಚಾಯ್ತು: ಸಂಜಯ್ ರಾವತ್

ಮುಂಬೈ: ಸಿದ್ದರಾಮಯ್ಯ  ಅವರ ಬಗ್ಗೆ ನನಗಿದ್ದ ಗೌರವ ಮತ್ತಷ್ಟು ಹೆಚ್ಚಾಯ್ತು ಎಂದು ಮಹಾರಾಷ್ಟ್ರದ ಉದ್ಧವ್‌ಠಾಕ್ರೆ ಬಣದ ಶಿವಸೇನೆ ನಾಯಕ ಸಂಜಯ್ ರಾವತ್  ಕೊಂಡಾಡಿದ್ದಾರೆ. ಸಿದ್ದರಾಮಯ್ಯರಂತೆ ಸುಗಮ ಅಧಿಕಾರ ಹಸ್ತಾಂತರ  ಅಪರೂಪ. ರಾಜಕಾರಣಿಗಳು ಸಾಮಾನ್ಯವಾಗಿ ತಮ್ಮ ಅಧಿಕಾರ ಮತ್ತು ಸ್ಥಾನಗಳನ್ನು ಬಿಟ್ಟುಕೊಡಲು ಹಿಂಜರಿಯುತ್ತಾರೆ. ಆದರೆ, ಸಿದ್ದರಾಮಯ್ಯ ನಡೆಸಿದ ಈ “ಸುಗಮ ಅಧಿಕಾರ ಹಸ್ತಾಂತರ” ಅತ್ಯಂತ ಅಪರೂಪವಾಗಿ ಕಂಡುಬರುತ್ತದೆ. ಯಾವುದೇ ಹಠ ಹಿಡಿಯದೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಮೂಲಕ ರಾಜಕಾರಣದಲ್ಲಿ ಅಪರೂಪದ ಮಾದರಿಯನ್ನು …

Read More »

NEET UG ಪ್ರಶ್ನೆಪತ್ರಿಕೆ ಸೋರಿಕೆ – ಎನ್‌ಟಿಎಗೆ ಸುಪ್ರೀಂಕೋರ್ಟ್ ತರಾಟೆ

ನವದೆಹಲಿ: ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಎನ್‌ಟಿಎಗೆ ಸುಪ್ರೀಂ ಕೋರ್ಟ್  ತರಾಟೆಗೆ ತೆಗೆದುಕೊಂಡಿದೆ. ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೋರ್ಟ್ ಉನ್ನತಮಟ್ಟದ ಮೇಲ್ವಿಚಾರಣಾ ಸಮಿತಿಗಳ ಹೊರತಾಗಿಯೂ ಇಷ್ಟು ದೊಡ್ಡ ಪ್ರಮಾದ ಹೇಗೆ ಸಂಭವಿಸಿತು ಎಂದು ಪ್ರಶ್ನೆ ಮಾಡಿದೆ. ನಾವು ಯುವಜನರನ್ನು ನಿರಾಸೆಗೊಳಿಸಬಾರದು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ಕೊಟ್ಟಿದೆ. ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸರ್ಕಾರವು ಯುವಜನರ ಆತಂಕಗಳ ಬಗ್ಗೆ ಗಂಭೀರವಾಗಿ …

Read More »

ಪತ್ನಿಯ ಶಿಕ್ಷಣಕ್ಕಾಗಿ ಹಗಲಿರುಳು ಶ್ರಮಿಸಿದ ಪತಿ: ಬಿಪಿಎಸ್‌ಸಿ ಶಿಕ್ಷಕಿಯಾಗುತ್ತಲೇ ಗಂಡನಿಗೆ ಕೈಕೊಟ್ಟ ಮಹಿಳೆ!

ಬಿಹಾರ್: “ಹರಿದ ಬಟ್ಟೆಗಳನ್ನು ಧರಿಸಿ, ತನ್ನ ಹೆಂಡತಿಗೆ ಉತ್ತಮ ಶಿಕ್ಷಣ ನೀಡಲು ಹಾಗೂ ಅವಳಿಗೆ ಸರ್ಕಾರಿ ಕೆಲಸ ಕೊಡಿಸಲು ಆತ ದಿನದ 24 ಗಂಟೆಗಳ ಕಾಲ ಶ್ರಮಿಸಿದ್ದ… ಆದರೆ ಅವಳು ಬಿಪಿಎಸ್‌ಸಿ (BPSC) ಶಿಕ್ಷಕಿಯಾದ ಕ್ಷಣವೇ, ಕೈಹಿಡಿದ ಗಂಡನನ್ನೇ ತೊರೆದು ನಡೆದಿದ್ದಾಳೆ.” ಇದು 13 ವರ್ಷಗಳ ಕಾಲ ಸಂಸಾರ ನಡೆಸಿ, ಇಂದು ಬೀದಿಗೆ ಬಿದ್ದಿರುವ ಪತಿಯೊಬ್ಬನ ಕರುಣಾಜನಕ ಕಥೆ. ಪತಿ ಅಮನ್ ಕುಮಾರ್ ತನ್ನ ಪತ್ನಿ ಗುಂಜನ್ ಕುಮಾರಿ ವಿರುದ್ಧ …

Read More »

ಹಣ ಡಬ್ಲಿಂಗ್ ದಂಧೆ ಪ್ರಕರಣದ ಸಾಕ್ಷಿಯ ಹತ್ಯೆ – ಚಿತ್ರದುರ್ಗದ ಜಿಪಂ ಮಾಜಿ ಸದಸ್ಯ ಅರೆಸ್ಟ್

ಚಿತ್ರದುರ್ಗ: ಹಣ ಡಬ್ಲಿಂಗ್ ದಂಧೆ ಮತ್ತು ಕೊಲೆ ಪ್ರಕರಣದ ಆರೋಪಿ ಆಗಿರುವ ಚಿತ್ರದುರ್ಗದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಚಂದ್ರಶೇಖರ್ ಅಲಿಯಾಸ್ ಕೋಟಾನೋಟ್ ಚಂದ್ರ ಬಂಧಿತ ಆರೋಪಿ. ಸಾವನ್ನಪ್ಪಿರುವ ವ್ಯಕ್ತಿ ಮಲ್ಲಿಕಾರ್ಜುನ (40) ಅವರಿಗೆ ಲೋನ್ ಕೊಡಿಸುವುದಾಗಿ ನಂಬಿಸಿ ಈತ ವಂಚಿಸಿದ್ದಾನೆ. ಅದಲ್ಲದೆ, ಮಲ್ಲಿಕಾರ್ಜುನ ಅವರ ಬ್ಯಾಂಕ್ ಖಾತೆ ಮೂಲಕ ಹಣ ಡಬ್ಲಿಂಗ್ ದಂಧೆ ನಡೆಸಿದ್ದ. ಇದಾದ ಬಳಿಕ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಮಲ್ಲಿಕಾರ್ಜುನ ಸಾಕ್ಷಿಯಾಗಿದ್ದರು. ಇದರಿಂದ …

Read More »

KPCC ಅಧ್ಯಕ್ಷ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಹೆಸರು ಫಿಕ್ಸ್‌?

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿ ಹುದ್ದೆಗೆ ಡಿಸಿಎಂ ಡಿಕೆ ಶಿವಕುಮಾರ್‌ ಅವರ ಹೆಸರು ಖಚಿತಗೊಂಡಿದೆ. ಈ ಹಿನ್ನೆಲೆ ತೆರವಾಗುವ ಕೆಪಿಸಿಸಿ ಅಧ್ಯಕ್ಷ  ಸ್ಥಾನಕ್ಕೆ ಯಾರು ಬರುತ್ತಾರೆ ಅನ್ನೋ ಕುತೂಹಲಕ್ಕೂ ಕಾಂಗ್ರೆಸ್‌ ಹೈಕಮಾಂಡ್‌ ಬ್ರೇಕ್‌ ಹಾಕಿದೆ. ಶಾಸಕಾಂಗ ಪಕ್ಷದ ನಾಯಕನಾಗುತ್ತಿದ್ದಂತೆ ಡಿಕೆ ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಅದರಿಂದ ತೆರವಾಗುವ ಸ್ಥಾನಕ್ಕೆ ಸಚಿವ ಸತೀಶ್‌ ಜಾರಕಿಹೊಳಿ ಅವರ ಹೆಸರು ಬಹುತೇಕ ಅಂತಿಮಗೊಂಡಿದೆ ಎಂದು ಪಕ್ಷದ ಆಪ್ತ ಮೂಲಗಳು …

Read More »

ಮಾಜಿ ಸಚಿವ ವೆಂಕಟರಮಣಪ್ಪ ನಿಧನ

ತುಮಕೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಸಚಿವ ವೆಂಕಟರಮಣಪ್ಪ ಶುಕ್ರವಾರ (ಇಂದು) ನಿಧನರಾಗಿದ್ದಾರೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ  ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದು, ಪುತ್ರ ಶಾಸಕ ಹೆಚ್‌.ವಿ ವೆಂಕಟೇಶ್‌, ಕುಮಾರಸ್ವಾಮಿ, ಪುತ್ರಿ ಪದ್ಮಾವತಿ ಅವರನ್ನ ಅಗಲಿದ್ದಾರೆ. ಅನಾರೋಗ್ಯಕ್ಕೀಡಾಗಿದ್ದ ವೆಂಕಟರಮಣಪ್ಪ ಅವರನ್ನ ಬೆಂಗಳೂರಿನ ಪೋರ್ಟೀಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ (ಇಂದು) ಬೆಳಗ್ಗಿನ ಜಾವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ವೆಂಕಟರಮಣಪ್ಪ ಅವರು 2008 ರ ಅವಧಿಯಲ್ಲಿ ರೇಷ್ಮೆ ಮತ್ತು ಸಣ್ಣ ಕೈಗಾರಿಕಾ …

Read More »