ಬೆಂಗಳೂರು: ನಗರದಲ್ಲಿ ಇಂದು ಸಂಜೆ ಸುರಿದ ಧಾರಾಕಾರ ಮಳೆಗೆ ಕಾಂಪೌಂಡ್ ಗೋಡೆ ಕುಸಿದು ಆಟೋ ಚಾಲಕ ಬಲಿಯಾಗಿರುವ ಘಟನೆ ನಡೆದಿದೆ.
ವಿಜಯನಗರದ ಕ್ಲಬ್ ಕಾಂಪೌಂಡ್ ಗೋಡೆ ಕುಸಿದು ಶಿವಬೋರಯ್ಯ ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ. ಗೋಡೆ ಪಕ್ಕ ಆಟೋದಲ್ಲಿ ಕುಳಿತಿದ್ದರು. ಆಟೋ ಮೇಲೆ ಗೋಡೆ ಕುಸಿದು ಪರಿಣಾಮ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಗೋಡೆ ಕುಸಿತದ ವೇಳೆ ಭಾರಿ ದುರಂತ ತಪ್ಪಿದೆ. ಘಟನಾ ಸ್ಥಳದಲ್ಲಿ ನಿತ್ಯ ಸಾರ್ವಜನಿಕರು ಓಡಾಡುತ್ತಿದ್ದರು. ಇದೇ ಜಾಗದಲ್ಲಿ ವಾಹನಗಳನ್ನ ನಿಲ್ಲಿಸಿ ಹಲವರು ಹೋಗುತ್ತಿದ್ದರು. ಇವತ್ತು ಕೂಡ ಅದೇ ರೀತಿ ಮಳೆ ಬಂದಾಗ ಬಂದು ಆಟೋ ಚಾಲಕ ನಿಂತಿದ್ದ. ಚಾಲಕ ಬಂದು ನಿಂತ ಕೆಲವೇ ಹೊತ್ತಲ್ಲಿ ಕಾಂಪೌAಡ್ ಕುಸಿದು ಬಿದ್ದಿದೆ. ಸ್ಥಳೀಯರು ಬಂದು ಕಾಂಪೌAಡ್ ಅಡಿ ಪರಿಶೀಲನೆ ಮಾಡುವವರೆಗೂ ಚಾಲಕ ಸಿಲುಕಿರೋದು ಗೊತ್ತೇ ಇಲ್ಲ. ಸ್ಥಳೀಯರ ಪರಿಶೀಲನೆ ನಂತರ ಘಟನೆ ಬೆಳಕಿಗೆ ಬಂದಿದೆ.
Laxmi News 24×7