ಬೆಳಗಾವಿ: ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣವರ ವಿರುದ್ಧದ 4,500 ಕೋಟಿ ರೂಪಾಯಿ ವಂಚನೆ ಆರೋಪ ಪ್ರಕರಣ ಸಿಐಡಿ ಅಧಿಕಾರಿಗಳ ಹತ್ತು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಬಳಿಕ ಶಿವಾನಂದ ನೀಲಣ್ಣವರ್ ರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. 4,500 ಕೋಟಿ ರೂಪಾಯಿ ವಂಚನೆ ಆರೋಪ ಪ್ರಕರಣದಲ್ಲಿ ಪ್ರಮುಖ ಆರೋಪಿ ಶಿವಾನಂದ ನೀಲಣ್ಣವರ್ ಅವರನ್ನು ಇಂದು 2ನೇ ಹೆಚ್ಚುವರಿ ಸತ್ರ ನ್ಯಾಯಾಲಯಕ್ಕೆ ಸಿಐಡಿ ಅಧಿಕಾರಿಗಳು ಹಾಜರುಪಡಿಸಿದರು. …
Read More »Daily Archives: ಮೇ 28, 2026
ಬೆಂಗಳೂರು: ಲಿವಿಂಗ್ ಟುಗೆದರ್‌ನಲ್ಲಿದ್ದ ಮಾಜಿ ಆರ್‌ಜೆ ಮನೀಷಾ ಆತ್ಮಹತ್ಯೆ; ಪ್ರಿಯಕರನ ವಿರುದ್ಧ 3 ಪುಟಗಳ ಡೆತ್‌ನೋಟ್!
ಬೆಂಗಳೂರು: ಮುಂಬೈ ಮೂಲದ ಮಾಜಿ ರೇಡಿಯೋ ಜಾಕಿ (RJ) ಮನೀಷಾ ಪ್ರಸಾದ್ (48) ಅವರು ಬೆಂಗಳೂರಿನ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೇ 23 ರಂದು ಹೆಣ್ಣೂರು ಸಮೀಪದ ಮಾನ್ಯತಾ ಟೆಕ್ ಪಾರ್ಕ್ ಆವರಣದಲ್ಲಿರುವ ಫ್ಲ್ಯಾಟ್‌ನಲ್ಲಿ ಈ ದುರ್ಘಟನೆ ನಡೆದಿದೆ. ಸ್ಥಳದಲ್ಲಿ 3 ಪುಟಗಳ ಡೆತ್‌ನೋಟ್ ಪತ್ತೆಯಾಗಿದ್ದು, ಲಿವಿಂಗ್ ಟುಗೆದರ್‌ನಲ್ಲಿದ್ದ ಪ್ರಿಯಕರ ಹರ್ಷವರ್ಧನ್ ಸಿಂಗ್ ಬನ್ಸಾಲ್ ನೀಡಿದ ಮಾನಸಿಕ ಕಿರುಕುಳವೇ …
Read More »ಧಾರವಾಡ ಶೂಟೌಟ್ ಕೇಸ್ ಭೇದಿಸಿದ ಖಾಕಿ: ಐವರು ಆರೋಪಿಗಳ ಬಂಧನ, ಪಿಸ್ತೂಲ್ ಹಾಗೂ ರಿವಾಲ್ವರ್ ಜಪ್ತಿ!
ಧಾರವಾಡ ಹೊರವಲಯದ ತಡಸಿನಕೊಪ್ಪ ಬಳಿಯ ಇಟಿಗಟ್ಟಿ ರಸ್ತೆ ಮಾರ್ಗದಲ್ಲಿ ಕಳೆದ ದಿನ ನಡೆದ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಭೀಕರ ಗಲಾಟೆ ನಡೆದು ಗಾಳಿಯಲ್ಲಿ ಗುಂಡು ಹಾರಿಸಿ ವ್ಯಕ್ತಿಯೊಬ್ಬನಿಗೆ ಗಾಯಗೊಳಿಸಿದ ಪ್ರಕರಣದಲ್ಲಿ ಐವರನ್ನ ಬಂಧಿಸಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ತಿಳಿಸಿದ್ದಾರೆ. ಈ ಕುರಿತು ಧಾರವಾಡದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊದಲು ಅಂಗರಕ್ಷಕರು (ಬೌನ್ಸರ್ಸ್) ಗುಂಡು ಹಾರಿಸಿದ್ದಾರೆ ಎಂಬ ಮಾಹಿತಿ ಇತ್ತಾದರೂ, ಘಟನೆಯ ಬಳಿಕ ಪೊಲೀಸರಿಗೆ …
Read More »ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶ್ರೀ ರೇಣುಕಾ ಯಲ್ಲಮ್ಮ ದೇವಿ ಅಭಿವೃದ್ಧಿ ಪ್ರಾಧಿಕಾರದ ಪ್ರಮುಖ ಸಭೆ!
ನಮ್ಮ ಸವದತ್ತಿ ಯಲ್ಲಮ್ಮ ಕ್ಷೇತ್ರಕ್ಕೆ ಆಗಮಿಸುವ ಅಪಾರ ಸಂಖ್ಯೆಯ ಭಕ್ತಾದಿಗಳಿಗೆ ಸುಸಜ್ಜಿತ ಮೂಲಸೌಕರ್ಯ ಕಲ್ಪಿಸುವುದು ಮತ್ತು ಕ್ಷೇತ್ರದ ಸಮಗ್ರ ಅಭಿವೃದ್ಧಿ ನಮ್ಮ ಮೊದಲ ಆದ್ಯತೆಯಾಗಿದೆ. ಇಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ, ಗೌರವಾನ್ವಿತ ಜಿಲ್ಲಾಧಿಕಾರಿಗಳಾದ ಶ್ರೀ ಮೊಹಮ್ಮದ್ ರೋಷನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (SP) ಉಪಸ್ಥಿತಿಯಲ್ಲಿ “ಶ್ರೀ ರೇಣುಕಾ ಯಲ್ಲಮ್ಮ ದೇವಿ ಅಭಿವೃದ್ಧಿ ಪ್ರಾಧಿಕಾರದ” ಮಹತ್ವದ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಸವದತ್ತಿ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಕುಡಿಯುವ …
Read More »ಬಾಗಲಕೋಟೆ ಶಹರ್ ಠಾಣೆ ಪೊಲೀಸರ ಭರ್ಜರಿ ಬೇಟೆ: ಅಂತರ್ ಜಿಲ್ಲಾ ಮನೆಗಳ್ಳನ ಬಂಧನ, 22 ಲಕ್ಷದ ಚಿನ್ನಾಭರಣ ವಶ!
ಬಾಗಲಕೋಟೆ ಜಿಲ್ಲೆಯ ಚೌಡಾಪೂರ ಗ್ರಾಮದಲ್ಲಿ ನಡೆದಿದ್ದ ಭಾರಿ ಮನೆ ಕಳ್ಳತನ ಪ್ರಕರಣವನ್ನು ಬಾಗಲಕೋಟೆ ಶಹರ ಪೊಲೀಸರು ಕೇವಲ ಕೆಲವೇ ದಿನಗಳಲ್ಲಿ ಯಶಸ್ವಿಯಾಗಿ ಭೇದಿಸಿದ್ದಾರೆ. ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಮೂಡಿಸಿದ್ದ ಈ ಪ್ರಕರಣದ ಅಂತರ್ ಜಿಲ್ಲಾ ಆರೋಪಿಯನ್ನು ಬಂಧಿಸಿ, ಆತನಿಂದ ಲಕ್ಷಾಂತರ ಮೌಲ್ಯದ ಚಿನ್ನದ ಆಭರಣಗಳನ್ನು ಜಪ್ತಿ ಮಾಡಲಾಗಿದೆ. ಕಳೆದ ಮಾರ್ಚ್ 19 ರಂದು ಚೌಡಾಪೂರ ಗ್ರಾಮದ ನಿವಾಸಿ ಪುಂಡಲಿಕಪ್ಪ ಪಾಟೀಲ್ ಅವರ ಮನೆಯ ಬೀಗ ಒಡೆದು ಕನ್ನ ಹಾಕಿದ್ದ …
Read More »
Laxmi News 24×7