Breaking News

Daily Archives: ಮೇ 17, 2026

ಟ್ರ‍್ಯಾಕ್ಟರ್-ಲಾರಿ ಅಪಘಾತದಲ್ಲಿ ಏಳು ಮಂದಿ ದುರ್ಮರಣ – ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

ಕೊಪ್ಪಳ: ಟ್ರ‍್ಯಾಕ್ಟರ್ ಮತ್ತು ಟ್ಯಾಂಕರ್ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸಿಎಂ ಸಿದ್ದರಾಮಯ್ಯ ಅವರು ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಕೊಪ್ಪಳದ ಹುಲಿಗೆಮ್ಮ ದೇವಾಲಯಕ್ಕೆ ಭಕ್ತಾದಿಗಳನ್ನು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ಒಂದು ತುಂಗಭದ್ರಾ ಸೇತುವೆಯ ಮೇಲಿಂದ ಕೆಳಗೆಬಿದ್ದ ಪರಿಣಾಮ ಚಿಕ್ಕ ಮಕ್ಕಳು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ.  ದುರ್ಘಟನೆಯ …

Read More »

ಮಕ್ಕಳಾಗಲಿಲ್ಲ ಅಂತ ಮನನೊಂದು ಮಹಿಳೆ ಆತ್ಮಹತ್ಯೆ ಶಂಕೆ

ಚಿಕ್ಕಬಳ್ಳಾಪುರ: ಮಕ್ಕಳಾಗಲಿಲ್ಲ ಅಂತ ಮನನೊಂದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ  ತಾಲೂಕಿನ ಮಂಚನಬಲೆ ಗ್ರಾಮದಲ್ಲಿ ನಡೆದಿದೆ. 24 ವರ್ಷದ ರುಚಿತಾ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಚಿಕ್ಕಬಳ್ಳಾಪುರ ತಾಲೂಕಿನ ದರಬೂರು ಗ್ರಾಮದ ರುಚಿತಾಗೆ ದೊಡ್ಡಬಳ್ಳಾಪುರ  ತಾಲೂಕಿನ ವೀರಾಪುರ ಗ್ರಾಮದ ಕೇಶವ ಜೊತೆ 4 ವರ್ಷಗಳ ಹಿಂದೆ ಮದುವೆಯಾಗಿದ್ದರು. ಗಂಡ-ಹೆಂಡತಿ ನಡುವೆ ಬೇರೆ ಮನೆ ಮಾಡುವ ವಿಚಾರದಲ್ಲಿ ವೈಮನಸ್ಸು ಮಾಡಿದ್ದು, ಮಂಚನಬಲೆಯ ಸಂಬಂಧಿಕರ ಮನೆಗೆ ಬಂದಿದ್ದಳು. ಈ ವೇಳೆ ಮನನೊಂದು ರುಚಿತಾ …

Read More »

ರಾಜ್ಯಕ್ಕೆ ಹೆಚ್ಚುವರಿ 1,122 ಸರ್ಕಾರಿ ಮೆಡಿಕಲ್ ಸೀಟ್ ಲಭ್ಯ: ಡಾ. ಶರಣಪ್ರಕಾಶ ಪಾಟೀಲ್

ಬೆಂಗಳೂರು: ರಾಜ್ಯದಲ್ಲಿ ಮೆಡಿಕಲ್ ಸೀಟು ಲಭ್ಯತೆ ಹೆಚ್ಚಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸುವವರಿಗೆ ಸುವರ್ಣ ಅವಕಾಶ ಲಭಿಸಲಿದೆ. ರಾಜ್ಯಕ್ಕೆ ಹೆಚ್ಚುವರಿ 1,122 ಸೀಟುಗಳು ದೊರೆಯಲಿವೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಆರ್. ಪಾಟೀಲ್  ತಿಳಿಸಿದ್ದಾರೆ. ಶನಿವಾರ ವಿಕಾಸಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಚಿವರು, ನಮ್ಮ ರಾಜ್ಯ ವೈದ್ಯಕೀಯ ಕ್ಷೇತ್ರದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದರು. …

Read More »

ಬೆಳಗಾವಿಯಲ್ಲಿ 4,500 ಕೋಟಿ ವಂಚನೆ ಆರೋಪ – ಪ್ರಕರಣ ಸಿಐಡಿಗೆ ವಹಿಸಿ ಸರ್ಕಾರ ಆದೇಶ

ಬೆಳಗಾವಿ: ಜಿಲ್ಲೆಯಲ್ಲಿ 4,500 ಕೋಟಿ ರೂ. ವಂಚನೆ ಆರೋಪದ ಮೇಲೆ ಆರೋಪಿ ಶಿವಾನಂದ್ ನೀಲಣ್ಣವರ್ ಬಂಧನ ಬೆನ್ನಲ್ಲೇ ಇದೀಗ ರಾಜ್ಯಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿ ಆದೇಶಿಸಿದೆ. ಬೆಳಗಾವಿಯಲ್ಲಿ ಮಾಜಿ ಸೈನಿಕರು ಹಾಗೂ ಸಾರ್ವಜನಿಕರ ಹಣ ದುರಪಯೋಗದ ಗಂಭೀರ ಆರೋಪ ಕೇಳಿ ಬಂದಿತ್ತು. ಬರೋಬ್ಬರಿ 4,500 ಸಾವಿರ ಜನ ಶಿವಂ ಅಸೋಸಿಯೇಟ್ಸ್ನಲ್ಲಿ 4,500 ಕೋಟಿ ರೂ. ಹಣವನ್ನ ಹೂಡಿಕೆ ಮಾಡಿದ್ದಾರೆ. ಇಲ್ಲಿ ಯಾವುದೇ ನಿಯಮಗಳು ಪಾಲನೆಯಾಗಿಲ್ಲ, ಬದಲಿಗೆ ಹೆಚ್ಚಿನ ಬಡ್ಡಿ ಕೊಡುವ …

Read More »

ಭದ್ರಾ ಡ್ಯಾಂನಿಂದ ಹಾವೇರಿಗೆ ಕುಡಿಯುವ ನೀರು ಬಿಡುಗಡೆಗೆ ನಿರ್ಧಾರ

ಶಿವಮೊಗ್ಗ: ಹಾವೇರಿ , ರಾಣೇಬೆನ್ನೂರು, ಬ್ಯಾಡಗಿ ಮತ್ತು ಹಿರೇಕೆರೂರು ಪಟ್ಟಣಗಳಿಗೆ ಹಾಗೂ ನದಿಯ ಪಕ್ಕದಲ್ಲಿ ಬರುವ ಗ್ರಾಮಗಳ ಬಹುಗ್ರಾಮ ನದಿ ನೀರು ಯೋಜನೆಯಡಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಪೂರೈಕೆಗೆ ಭದ್ರಾ ಜಲಾಶಯದಿಂದ ನೀರು ಬಿಡುಗಡೆಗೆ ತೀರ್ಮಾನ ಕೈಗೊಳ್ಳಲಾಗಿದೆ. ತುಂಗಭದ್ರಾ ನದಿಯ ನೀರನ್ನು ಅವಲಂಬಿಸಿರುವ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಶಿವಮೊಗ್ಗದ ಭದ್ರಾವತಿ ಬಳಿಯ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಮೇ 18ರಿಂದ 23ರವರೆಗೆ ಪ್ರತಿದಿನ 2 ಸಾವಿರ ಕ್ಯೂಸೆಕ್‌ನಂತೆ ನೀರನ್ನು …

Read More »

ಹಾಸನದಲ್ಲಿ ಚಲಿಸುತ್ತಿದ್ದ ಖಾಸಗಿ ಬಸ್‌ಗೆ ಬೆಂಕಿ – ಪ್ರಯಾಣಿಕರು ಸೇಫ್!

ಹಾಸನ: ಚಲಿಸುತ್ತಿದ್ದ ಖಾಸಗಿ ಬಸ್‌ನ  ಟೈರ್ ಸ್ಫೋಟಗೊಂಡ  ಪರಿಣಾಮ ಬಸ್‌ಗೆ ಬೆಂಕಿ ಹೊತ್ತಿಕೊಂಡು ಧಗಧಗಿಸಿ ಹೊತ್ತಿ ಉರಿದಿದ್ದು, ಬಸ್‌ನಲ್ಲಿದ್ದ ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಹಾಸನ ತಾಲೂಕಿನ, ಶಾಂತಿಗ್ರಾಮ ಬಳಿ ಇಂದು ಮುಂಜಾನೆ ನಡೆದಿದೆ.ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ಪುರುಷರು, ಮಹಿಳೆಯರು, ಮಕ್ಕಳು ಸೇರಿ 36 ಮಂದಿ ಪ್ರಯಾಣಿಸುತ್ತಿದ್ದರು. ಶಾಂತಿಗ್ರಾಮ ಬಳಿ ಬಸ್‌ನ ಟೈರ್ ಸ್ಫೋಟಗೊಂಡಿದ್ದು, ಟೈರ್ ಸ್ಫೋಟಗೊಳ್ಳುತ್ತಿದ್ದಂತೆ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಚಾಲಕ …

Read More »

ಜೂ.1 ರಂದು ರಾಜ್ಯಾದ್ಯಂತ ಅದ್ಧೂರಿ ಶಾಲಾ ಪ್ರಾರಂಭೋತ್ಸವ – ಮುಖ್ಯಮಂತ್ರಿಗಳಿಂದ ಚಾಲನೆ

ಬೆಂಗಳೂರು: ಹೊಸ ಶೈಕ್ಷಣಿಕ ವರ್ಷದ ಸಿದ್ಧತೆಗಳ ಕುರಿತು ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಅವರು ರಾಜ್ಯದ 46,000 ಸರ್ಕಾರಿ ಶಾಲೆಗಳ ಮುಖ್ಯಶಿಕ್ಷಕರು, ಸಹ ಶಿಕ್ಷಕರು ಹಾಗೂ ಡಿಡಿಪಿಐ, ಡಿಡಿಪಿಯು, ಬಿಇಒ ಸೇರಿದಂತೆ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಹತ್ವದ ಸಭೆ ನಡೆಸಿದರು. ಮುಂಬರುವ ಜೂ.1 ರಂದು ರಾಜ್ಯಾದ್ಯಂತ ಶಾಲಾ ಪ್ರಾರಂಭೋತ್ಸವ ವಿಜೃಂಭಣೆಯಿಂದ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ಅವರು ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸಲಿದ್ದಾರೆ ಎಂದು …

Read More »

ತಮಿಳುನಾಡು ನೂತನ ಸಚಿವರಿಗೆ ಖಾತೆ ಹಂಚಿಕೆ – ಹಣಕಾಸು ಬಿಟ್ಟು 16 ಇಲಾಖೆ ತನ್ನಲ್ಲೇ ಇಟ್ಟುಕೊಂಡ ದಳಪತಿ

ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಸಿ. ಜೋಸೆಫ್ ವಿಜಯ್  ಅವರಿಂದು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಮೇ 10 ರಂದು ಮುಖ್ಯಮಂತ್ರಿಗಳೊಂದಿಗೆ ಪ್ರಮಾಣ ಸ್ವೀಕರಿಸಿದ್ದ ಸಚಿವರುಗಳಿಗೆ ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಖಾತೆಗಳ ಹಂಚಿಕೆಗೆ ಅನುಮೋದನೆ ನೀಡಿದ್ದು, ಈ ಕುರಿತು ಲೋಕ ಭವನದಿಂದ ಮೇ 16 ರಂದು ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ. ನೂತನ ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರು ಆಡಳಿತದ ಮೇಲೆ ಬಿಗಿ …

Read More »

ಮುಷ್ಕರಕ್ಕೂ ಮುನ್ನವೇ BMTC ನೌಕರರಿಗೆ ಗುಡ್‌ನ್ಯೂಸ್‌ – 11 ತಿಂಗಳ ಹಿಂಬಾಕಿ ವೇತನ ರಿಲೀಸ್‌

ಬೆಂಗಳೂರು: ಸರ್ಕಾರ ಮತ್ತು ಸಾರಿಗೆ ನೌಕರರ ವೇತನ  ಹೆಚ್ಚಳದ ವಿಚಾರದ ಫೈಟ್ ಮುಂದುವರೆದಿದ್ದು, ಮೇ 20 ರಿಂದ ಅನಿರ್ಧಿಷ್ಟಾವದಿ ಮುಷ್ಕರದ ತಯಾರಿ ಜೊತೆಗೆ ಸರ್ಕಾರದ ಸಾಧನ ಸಮಾವೇಶಕ್ಕೂ ಹೋರಾಟದ ಬಿಸಿ ಮುಟ್ಟಿಸಲು ನೌಕರರು ಮುಂದಾಗಿದ್ದಾರೆ. ಈ ಹೊತ್ತಿನಲ್ಲೇ ಸಾರಿಗೆ ನೌಕರರಿಗೆ ಬಿಎಂಟಿಸಿ  ನೌಕರರಿಗೆ ಗುಡ್‌ನ್ಯೂಸ್‌ ಕೊಟ್ಟಿದೆ. 11 ತಿಂಗಳ ಹಿಂಬಾಕಿ (ಅರಿಯರ್ಸ್‌) ವೇತನವನ್ನು ಬಿಎಂಟಿಸಿ ನೌಕರರ ಖಾತೆಗೆ ಸಾರಿಗೆ ಇಲಾಖೆ ಜಮೆ ಮಾಡಿದೆ. ರಾಜ್ಯ ಸರ್ಕಾರ 4 ನಿಗಮಗಳ ಸಾರಿಗೆ …

Read More »

0 ಲಕ್ಷಕ್ಕೆ NEET ಪ್ರಶ್ನೆಪತ್ರಿಕೆ ಖರೀದಿಸಿದ್ದ ತಂದೆ – ಮಗ ಗಳಿಸಿದ್ದು 720ಕ್ಕೆ 107 ಅಂಕ

ಜೈಪುರ: ದೇಶಾದ್ಯಂತ ಸಂಚಲನ ಮೂಡಿಸಿರುವ ನೀಟ್  ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಮತ್ತೊಂದು ರೋಚಕ ಸಂಗತಿ ಬೆಳಕಿಗೆ ಬಂದಿದೆ. ಪ್ರಕರಣದ ಹೊಣೆ ಹೊತ್ತಿರುವ ಕೇಂದ್ರೀಯ ತನಿಖಾ ದಳ ಒಬ್ಬೊಬ್ಬರೇ ವಂಚಕರನ್ನ ಸಮಾಜದ ಮುಂದೆ ತರುತ್ತಿದೆ.‌ ಈ ಮಧ್ಯೆ ಬಂಧಿತ ಸಹೋದರರಾದ ದಿನೇಶ್ ಬಿವಾಲ್‌, ಮಂಗಿಲಾಲ್ ಬಿವಾಲ್ ಮತ್ತು ಮಂಗಿಲಾಲ್ ಅವರ ಹಿರಿಯ ಮಗ ವಿಕಾಸ್ ಮೂವರು ಪ್ರಶ್ನೆಪತ್ರಿಕೆಗಳನ್ನ ಪಡೆದುಕೊಂಡಿದ್ದಲ್ಲದೇ, ತರಬೇತಿ ಕೇಂದ್ರಗಳಿಗೆ ಪೂರೈಸಿದ್ದರು ಎಂಬುದು ಗೊತ್ತಾಗಿದೆ. ಸದ್ಯ ಮಂಗಿಲಾಲ್‌, ಆರೋಪಿ ದಿನೇಶ್‌ …

Read More »