Breaking News

“ಆ್ಯಂಟಿ ಸ್ಟಾಬಿಂಗ್ ಸ್ಕ್ವಾಡ್” ವಿಶೇಷ ಕಾರ್ಯಾಚರಣೆ: ಆಯುಧ ಸಮೇತ ಆರೋಪಿ ವಶಕ್ಕೆ

Spread the love

ಬೆಳಗಾವಿ: ಬೆಳಗಾವಿ ನಗರದಲ್ಲಿ ಇತ್ತಿಚೆಗೆ ಹೆಚ್ಚುತ್ತಿರುವ ಸ್ಟಾಬಿಂಗ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ಬೆಳಗಾವಿ ನಗರದ ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ “ಆ್ಯಂಟಿ ಸ್ಟಾಬಿಂಗ್ ಸ್ಕ್ವಾಡ್” ತಂಡದಿಂದ ಪರಿಶೀಲನೆ ಮುಂದುವರೆಸಲಾಗಿದೆ.

ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮುಚ್ಚಂಡಿ-ಬುಡ್ಯಾನೂರ ರಸ್ತೆಯಲ್ಲಿ ಆರೋಪಿತನಾದ ಕಿರಣ ದುರ್ಗಪ್ಪ ಕಡ್ಯಾಗೋಳ (22) ಎಂಬಾಗ ಕಾನೂನು ಬಾಹಿರವಾಗಿ ಅರಣ್ಯ ಪ್ರದೇಶದ ಗಿಡಗಂಟಿಗಳಲ್ಲಿ ನಿಂತು ಕೈಯಲ್ಲಿ ಕಬ್ಬಿಣದ ಕುಡುಗೋಲ ಹಿಡಿದು ಜಳಪಳಿಸುತ್ತಿದ್ದ.

ಈ ವೇಳೆ ಮಾರಿಹಾಳ ಠಾಣೆಯ ಪಿಎಸ್‌ಐ ಮಂಜುನಾಥ ಹುಲಕುಂದ ಪಿಎಸ್‌ಐ ಹಾಗೂ ಸಿಬ್ಬಂದಿಯವರು ಆರೋಪಿಯನ್ನು ಕುಡುಗೋಲ ಸಮೇತ ವಶಕ್ಕೆ ಪಡೆದಿದ್ದು, ಕಾನೂನು ಕ್ರಮ ಜರುಗಿಸಿ, ಪ್ರಕರಣದ ತನಿಖೆ ಮುಂದುವರೆಸಲಾಗಿದೆ.


Spread the love

About Laxminews 24x7

Check Also

ಬರಪೀಡಿತ ಎಂದು ಘೋಷಿಸದ್ದಕ್ಕೆ ರಾಜೀನಾಮೆ ಸಲ್ಲಿಸಿದೆ – ಕ್ಷೇತ್ರದ ಜನರಿಗಾಗಿ ರಾಜಕೀಯ ನಿವೃತ್ತಿಗೂ ಸಿದ್ಧ: ಯಶವಂತರಾಯಗೌಡ

Spread the loveವಿಜಂಯಪುರ: 188 ತಾಲೂಕುಗಳು ಘೋಷಣೆ ಆದಾಗಲೂ, ವಿಜಯಪುರ ಜಿಲ್ಲೆಯ 13 ತಾಲೂಕುಗಳ ಪೈಕಿ 11 ಘೋಷಣೆ ಆದರೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ