Breaking News

Daily Archives: ಏಪ್ರಿಲ್ 18, 2026

ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಬಂಧಿಖಾನೆ ಡಿಜಿಪಿ ಅಲೋಕ ಕುಮಾರ ದಿಢೀರ್ ದಾಳಿ

ಬೆಳಗಾವಿ:ಜೈಲಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದ ಈ ಸರ್ಚ್ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಸುಮಾರು ಎರಡು ಗಂಟೆಗಳ ಕಾಲ ತೀವ್ರ ಪರಿಶೀಲನೆ ನಡೆಯಿತು. 52 ಜನ ಪೊಲೀಸ್ ಸಿಬ್ಬಂದಿಯೊಂದಿಗೆ ದಾಳಿ ನಡೆಸಲಾಗಿದ್ದು, ಬೆಳಗಾವಿ ನಗರ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹ ಭಾಗಿಯಾಗಿದ್ದರು. ಎರಡು ಶ್ವಾನಗಳ ಸಹಾಯದಿಂದ ಕೈದಿಗಳ ಸೆಲ್‌ಗಳನ್ನು ಸಂಪೂರ್ಣವಾಗಿ ತಪಾಸಣೆ ಮಾಡಲಾಯಿತು. ದಾಳಿಯ ವೇಳೆ ಒಂದು ಸಿಗರೆಟ್ ಪ್ಯಾಕೇಟ್ ಹಾಗೂ ಜಿಮ್ ಡಂಬೆಲ್ಸ್ ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ …

Read More »

10ತರಗತಿ ವಿಧ್ಯಾರ್ಥಿನಿಗೆ ಗರ್ಭಪಾತ ಮಾಡಿಸಿರುವ ಕಾಮುಕ ಶಿಕ್ಷಕ

ಚಿತ್ರದುರ್ಗ:ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ನಡೆದಿರುವ ಘಟನೆ. ಗರ್ಭಪಾತ ಹಿನ್ನೆಲೆ ಹತ್ತನೇ ತರಗತಿ ಪರೀಕ್ಷೆಗೂ ವಿಧ್ಯಾರ್ಥಿನಿ ಗೈರು. ಶಾಲಾ ಶಿಕ್ಷಕ ಹೆಚ್.ಓ. ರಾಜಣ್ಣ ಎಂಬ ಶಿಕ್ಷಕನಿಂದ ನಡೆದ ಕೃತ್ಯ. ಬಾಲಕಿಯನ್ನ ಅನೈತಿಕವಾಗಿ ಬಳಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದ ಕಾಮುಕ ಶಿಕ್ಷಕ. ಬಾಲಕಿ ಗರ್ಭಿಣಿ ಎಂದು ತಿಳಿದ ಕೂಡಲೇ ಗರ್ಭಪಾತ ಮಾಡಿರುವ ಶಿಕ್ಷಕ. ಚಳ್ಳಕೆರೆ ಖಾಸಗಿ ನರ್ಸಿಂಗ್ ಹೋಂ ವೈಧ್ಯ ಡಾ.ಶಂಕರ್ ಲಕ್ಷ್ಮಿ ಅವರಿಂದ ಗರ್ಭಪಾತ. ನಗರದ ಸೋಮಗುದ್ದ ರಸ್ತೆಯ ಶ್ರೀಲಕ್ಷ್ಮಿ …

Read More »

ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ

ಕಾರವಾರ: ಶಿರಸಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರದ್ಧಾನಂದ ಗಲ್ಲಿಯ ರಂಗನಾಥ ಮಡಗಾಂವಕರ ಕೊಲೆ ಆರೋಪಿತರಾದ ರಮೇಶ ಮಡಗಾಂವಕರನಿಗೆ ಜೀವಾವಧಿ ಶಿಕ್ಷೆ ಹಾಗೂ ರೂ.೨೫,೦೦೦ ದಂಡ, ೫೦,೦೦೦ ಪರಿಹಾರ ನೀಡುವಂತೆ ಹಾಗೂ ಎರಡನೇ ಆರೋಪಿ ಸಾವಿತ್ರಿ ಮಡಗಾಂವಕರಗೆ ೨,೦೦೦ ದಂಡ ವಿಧಿಸಿ, ದೂರುದಾರಳಾದ ಶಕೂ ಇವಳಿಗೆ ೨,೦೦೦ ಪರಿಹಾರ ನೀಡುವಂತೆ ಮತ್ತು ಹೆಚ್ಚಿನ ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಪಡೆಯುಬಹುದು ಎಂದು ಶಿರಸಿಯ ೧ನೇ ಅಧಿಕ ಜಿಲ್ಲಾ ಮತ್ತು …

Read More »

ಚಿತ್ರದುರ್ಗ ನಿರ್ಮಿತಿ ಕೇಂದ್ರ: ಮಾಹಿತಿ ಹಕ್ಕು ಕಾಯಿದೆಯನ್ನೇ ಬುಡಮೇಲು ಮಾಡಿದ ಯೋಜನಾ ನಿರ್ದೇಶಕ ಹರೀಶ್ ಕುಮಾರ್ ಬಿ.ಎಸ್

​ಚಿತ್ರದುರ್ಗ: ಸರಕಾರಿ ಕಚೇರಿಗಳಲ್ಲಿ ಪಾರದರ್ಶಕತೆ ತರಲು ಜಾರಿಯಲ್ಲಿರುವ ‘ಮಾಹಿತಿ ಹಕ್ಕು ಕಾಯಿದೆ 2005’ ಅನ್ನು ಚಿತ್ರದುರ್ಗ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಹರೀಶ್ ಕುಮಾರ್ ಬಿ.ಎಸ್. ತಮ್ಮ ಸ್ವಂತ ಜಾಗೀರು ಎಂಬಂತೆ ಬಳಸಿಕೊಳ್ಳುತ್ತಿದ್ದಾರೆ. ಮಾಹಿತಿ ಕೇಳುವ ಅರ್ಜಿದಾರರನ್ನು ಬೆದರಿಸಲು ಕಾಯಿದೆಯಲ್ಲೇ ಇಲ್ಲದ “ಕಪ್ಪು ಪಟ್ಟಿ” ನಿಯಮವನ್ನು ಮುಂದಿಟ್ಟುಕೊಂಡು ಅಪ್ಪಟ ಸುಳ್ಳು ಹೇಳುವ ಮೂಲಕ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿರುವುದು ದಾಖಲೆಗಳಿಂದ ಬಟಾಬಯಲಾಗಿದೆ. ​ ಬೆಂಗಳೂರಿನ ಯಶವಂತಪುರದ ನಿವಾಸಿ ಸಿ.ಪಿ. ತಿಪ್ಪೇಸ್ವಾಮಿ ಎಂಬುವರು …

Read More »

ಮರಕ್ಕೆ ಕಾರು ಡಿಕ್ಕಿ – ಸರ್ಕಲ್ ಇನ್ಸ್‌ಪೆಕ್ಟರ್ ಸ್ಥಳದಲ್ಲೇ ಸಾವು.!

ದಾವಣಗೆರೆ: ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಮುಸ್ಟೂರು- ಕಡಬನಕಟ್ಟೆ ಗ್ರಾಮದ ಮಧ್ಯೆ ನಡೆದಿದೆ. ರಘುನಾಥ್ (45) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಸಿಪಿಐ. ರಘುನಾಥ್ ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ಡಿಸಿಆರ್‌ಇ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಚಿತ್ರದುರ್ಗದ ಕಡೆಯಿಂದ ಜಗಳೂರು ಕಡೆಗೆ ಬರುತ್ತಿರುವಾಗ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿರುವ ಮರಕ್ಕೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ …

Read More »

ಚಿನ್ನಸ್ವಾಮಿ ಕ್ರೀಡಾಂಗಣದ ಕ್ಯಾಂಟೀನ್ ನೌಕರನ ಬಳಿ 100 ಐಪಿಎಲ್ ಟಿಕೆಟ್ ಪತ್ತೆ

ಕ್ಯಾಂಟೀನ್ ನೌಕರ 100ಕ್ಕೂ ಹೆಚ್ಚು ಐಪಿಎಲ್ ಟಿಕೆಟ್‌ಗಳನ್ನು ಬ್ಲಾಕ್ ಮಾರ್ಕೆಟ್ ನಲ್ಲಿ ಮಾರಾಟ .. ಮಾರಾಟ ಮಾಡುವಾಗ ಸಿಸಿಬಿ (CCB) ಪೊಲೀಸರ ಬಲೆಗೆ.. ಚಂದ್ರಶೇಖರ್ ಬಂಧಿತ ಆರೋಪೊಯಾಗಿದ್ದು, ಶ್ರೀ ಲಕ್ಷ್ಮಿ ಕ್ಯಾಂಟೀನ್‌ ನಲ್ಲಿ ಕೆಲಸ ಮಾಡುತ್ತಿದ್ದ.. ಈತ ಒಂದೊಂದು ಟಿಕೆಟ್ ನ್ನು ಸುಮಾ ರು 15 ಸಾವಿರ ದಿಂದ ₹19 ಸಾವಿರದವರೆಗಿನ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ.. ಮಾರ್ಚ್ 28 ರಂದು ನಡೆದ ಆರ್‌ಸಿಬಿ (RCB) ಮತ್ತು ಕೆಕೆಆರ್ (KKR) …

Read More »

ಕಾಂಗ್ರೆಸ್‌ನಲ್ಲಿ ಹೈಡ್ರಾಮಾ: ಸಚಿವ ಜಮೀರ್‌ ಅಹಮದ್‌ ‘ಗೌರವಯುತ ವಿದಾಯ’ಕ್ಕೆ ತೆರೆಮರೆಯ ಸ್ಕೆಚ್‌!

​ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರ ಭವಿಷ್ಯದ ಕುರಿತಾದ ಚರ್ಚೆಗಳು ಬಿರುಸಿನ ಸಂಚಲನ ಮೂಡಿಸಿವೆ. ದಾವಣಗೆರೆ ಉಪಚುನಾವಣೆಯ ಬೆನ್ನಲ್ಲೇ ಸಚಿವರನ್ನು ಸಂಪುಟದಿಂದ ಕೈಬಿಡಲು ಕಾಂಗ್ರೆಸ್‌ ಹೈಕಮಾಂಡ್ ಮತ್ತು ರಾಜ್ಯ ನಾಯಕತ್ವ ‘ಗೌರವಯುತ’ ದಾರಿಯನ್ನು ಹುಡುಕುತ್ತಿದ್ದು, ಈ ಸಂಬಂಧ ತೆರೆಮರೆಯಲ್ಲಿ ಭರ್ಜರಿ ಕಸರತ್ತುಗಳು ನಡೆಯುತ್ತಿವೆ. ​ನಾಯಕತ್ವದ ಕತ್ತಿ ಯಾರತ್ತ? ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದ್ದಾರೆ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ …

Read More »

ಅಂಕೋಲಾ ಹೆದ್ದಾರಿಯಲ್ಲಿ ಟ್ಯಾಂಕರ್ ಅಗ್ನಿ ಅವಘಡ: ವಾಹನ ಸಂಚಾರ ಸಂಪೂರ್ಣ ಸ್ಥಗಿತ

ಅಂಕೋಲಾ: ತಾಲೂಕಿನ ಕಂಚಿನಬಾಗಿಲು ಬಳಿ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಗುರುವಾರ ರಾಸಾಯನಿಕ ಅಥವಾ ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್‌ವೊಂದು ಪಲ್ಟಿಯಾಗಿ ಭಾರಿ ಬೆಂಕಿಗೆ ಆಹುತಿಯಾಗಿದೆ. ರಸ್ತೆಯ ಮಧ್ಯೆಯೇ ಟ್ಯಾಂಕರ್ ಸ್ಫೋಟಗೊಂಡು ಹೊತ್ತಿ ಉರಿಯುತ್ತಿರುವ ಪರಿಣಾಮ, ಅಂಕೋಲಾ-ಹುಬ್ಬಳ್ಳಿ ಸಂಪರ್ಕಿಸುವ ಈ ಪ್ರಮುಖ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ಬಂದ್ ಆಗಿದೆ. ಅಗಸೂರು ಪಂಚಾಯತ್ ವ್ಯಾಪ್ತಿಗೆ ಸೇರುವ ಕಂಚಿನಬಾಗಿಲು ಬಳಿ ಈ ಘಟನೆ ಸಂಭವಿಸಿದೆ. ನೋಂದಣಿ ಸಂಖ್ಯೆಯ ಈ ಟ್ಯಾಂಕರ್, ಚಾಲಕನ ನಿಯಂತ್ರಣ ತಪ್ಪಿ …

Read More »

ಹಿಡ್ಕಲ್ ಜಲಾಶಯದಿಂದ ಘಟಪ್ರಭಾ ಬಲದಂಡೆ ಕಾಲುವೆಗೆ ಹರಿಸುತ್ತಿರುವ ನೀರು ಮೂರು ದಿನಗಳವರೆಗೆ ಹೆಚ್ಚುವರಿ ವಿಸ್ತರಣೆ

ಗೋಕಾಕ; ಜನ ಹಾಗೂ ಜಾನುವಾರುಗಳಿಗೆ ಹಿಡ್ಕಲ್ ಜಲಾಶಯದಿಂದ ಘಟಪ್ರಭಾ ಬಲದಂಡೆ ಕಾಲುವೆಗೆ ಹರಿಸಲಾಗುತ್ತಿರುವ ನೀರನ್ನು ಇನ್ನೂ ಮೂರು ದಿನಗಳವರೆಗೆ ವಿಸ್ತರಣೆ ಮಾಡಿರುವುದಕ್ಕೆ ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹರ್ಷ ವ್ಯಕ್ತಪಡಿಸಿದ್ದು, ಇದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈಗಾಗಲೇ 10 ದಿನಗಳತನಕ ಘಟಪ್ರಭಾ ಬಲದಂಡೆ ಕಾಲುವೆಗೆ ನೀರನ್ನು ಹರಿಸಿದ್ದು, ಆದರೂ ಕೌಜಲಗಿ ಉಪ ವಿಭಾಗದ ಯಾದವಾಡ, ಕಾಮನಕಟ್ಟಿ, ಕೊಪದಟ್ಟಿ, ಗುಲಗಂಜಿಕೊಪ್ಪ ಗ್ರಾಮಗಳಿಗೆ ನೀರು …

Read More »

ಸಿದ್ದಾಪುರದ ಮೂಲದ ಐಎಎಸ್ ಅಧಿಕಾರಿ ತೇಜಸ್ವಿ ನಾಯ್ಕ್‌ಗೆ ಕೇಂದ್ರದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಬಡ್ತಿ

ಸಿದ್ದಾಪುರ :ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ಪುತ್ರ, ಸಿದ್ದಾಪುರ ತಾಲೂಕಿನ ಕಾನಗೋಡು ಗ್ರಾಮದವರಾದ ಐಎಎಸ್ ಅಧಿಕಾರಿ ತೇಜಸ್ವಿ ನಾಯ್ಕ್ ಅವರಿಗೆ ಕೇಂದ್ರ ಸರ್ಕಾರದಲ್ಲಿ ಮಹತ್ವದ ಜವಾಬ್ದಾರಿ ಒಲಿದುಬಂದಿದೆ. ಕೇಂದ್ರ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಇವರಿಗೆ, ಇದೀಗ ಕೇಂದ್ರ ಕಾರ್ಮಿಕ ಮತ್ತು ಸಬಲೀಕರಣ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ಪದೋನ್ನತಿ ನೀಡಿ ಆದೇಶ ಹೊರಡಿಸಲಾಗಿದೆ. ದಕ್ಷ ಅಧಿಕಾರಿಗೆ ಒಲಿದ ಉನ್ನತ ಹುದ್ದೆ: …

Read More »