Daily Archives: ಸೆಪ್ಟೆಂಬರ್ 9, 2021

ಮಂಡ್ಯದಲ್ಲೊಂದು ಭಾರಿ ದುರಂತ: ಹಂದಿ ಎಂದು ತಿಳಿದು ಬೇಟೆಗಾರನಿಂದ ಯುವಕನಿಗೆ ಗುಂಡು

ಮಂಡ್ಯ: ಕಾಡುಹಂದಿಗೆ ಬೇಟೆಗೆ ಬಂದಿದ್ದ ಹವ್ಯಾಸಿ ಬೇಟೆಗಾರರಿಂದ ಯುವಕನಿಗೆ ಗುಂಡು ತಗುಲಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮೇಳಾಪುರ ಗ್ರಾಮದ ಹೊರವಲಯದಲ್ಲಿ ಈ ದುರಂತ ಸಂಭವಿಸಿದೆ. ಮಾದೇಶ್ (25) ಎಂಬ ಯುವಕನಿಗೆ ಗುಂಡೇಟು ತಗುಲಿದೆ. ಮೈಸೂರು ಜಿಲ್ಲೆಯ 6 ಮಂದಿ ಯುವಕರ ತಂಡ ಬೇಟೆಗೆ ಬಂದಿತ್ತು. ನಾಡಬಂದೂಕು ಬಳಸಿ ಕಾಡುಹಂದಿ ಬೇಟೆಗೆ ಈ ತಂಡ ಬಂದಿತ್ತು. ಮಾದೇಶ ಅವರ ಕಬ್ಬಿನ ಗದ್ದೆಯಲ್ಲಿ ಹಂದಿಗಾಗಿ ತಂಡ ಶೋಧ ನಡೆಸುತ್ತಿತ್ತು. ಈ …

Read More »

ಸಂಪುಟಕ್ಕೆ ಪುತ್ರ: ಬಿಎಸ್‌ವೈ ಲಾಬಿ?

ಬೆಂಗಳೂರು: ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿ ಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಕಾರಣದಿಂದಾಗಿ ಸಿಎಂ ಹೊಸದಿಲ್ಲಿಯಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಬುಧವಾರ ಭೇಟಿಯಾಗಿ ಚರ್ಚಿಸಿದ್ದಾರೆ. ಅದಕ್ಕಾಗಿ ಬೊಮ್ಮಾಯಿ 2 ಬಾರಿ ರಾಷ್ಟ್ರ ರಾಜಧಾನಿಗೆ ಪ್ರವಾಸ ಕೈಗೊಂಡಿದ್ದಾರೆ. ಸಂಪುಟದಲ್ಲಿ ಖಾಲಿ ಇರುವ 4 ಸ್ಥಾನಗಳನ್ನು ಆದಷ್ಟು ಬೇಗ ಭರ್ತಿ ಮಾಡುವಂತೆ ಸಚಿವಾಕಾಂಕ್ಷಿಗಳು …

Read More »

ಬಿಜೆಪಿ ಜತೆ ಹೊಂದಾಣಿಕೆ ಬೇಡ: ಎಚ್‌ಡಿ ರೇವಣ್ಣ

ಹಾಸನ: ‘ಜೆಡಿಎಸ್‌ ಮುಳುಗುವ ಹಡಗು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿರುವಾಗ ನಮ್ಮ ಜತೆ ಹೊಂದಾಣಿಕೆ ಮಾಡಿಕೊಂಡರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುರ್ಚಿಗೆ ಧಕ್ಕೆ ಬರಲಿದೆ’ ಎಂದು ಶಾಸಕ ಎಚ್.ಡಿ.ರೇವಣ್ಣ ಮಾರ್ಮಿಕವಾಗಿ ಹೇಳಿದರು. ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿಗೆ ಜೆಡಿಎಸ್‌ ಬೆಂಬಲನೀಡಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಯಾವ ಪಕ್ಷಕ್ಕೆ ಬೆಂಬಲ ನೀಡಬೇಕು ಎಂಬುದನ್ನು ಜೆಡಿಎಷ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ಕಾರ್ಯಕರ್ತರ …

Read More »

ಸ್ಫೋಟಕ ಭವಿಷ್ಯ ನುಡಿದ ಕೋಡಿಶ್ರೀ ಗಳು

ಹಾಸನ: ಅರಸೀಕೆರೆಯ ಮಾಡಾಳು ಗೌರಮ್ಮ ಪುಣ್ಯ ಕ್ಷೇತ್ರದಲ್ಲಿ ರಾಜ್ಯ ಬಿಜೆಪಿ ಬಗ್ಗೆ ಗುರುವಾರ ಕೋಡಿ ಮಠದ ಶ್ರೀಗಳು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಭಾರತ ಸಾಧು ಸಂತರ ಪೂಜೆ, ಜಪತಪ, ದೇವರನ್ನು ನಂಬಿರೋ ದೇಶ. ಪ್ರವಾಹ, ಕರೊನಾದಂತಹ ಕೆಟ್ಟ ಕಾಲದಲ್ಲಿ ಯಡಿಯೂರಪ್ಪ ಅವರನ್ನು ಕೆಳಗಿಳಿಸೋದು ಬೇಡ ಅಂತ ಸಲಹೆ ಕೊಡಲು ಸ್ವಾಮೀಜಿಗಳು ಬಂದಿದ್ದರು. ಆದ್ರೆ ಅವರ ಮಾತುಗಳನ್ನೇ ಧಿಕ್ಕರಿಸಿದರು. ಸದ್ಯದಲ್ಲೇ ಅದರ ಫಲವನ್ನ ಇವರೆಲ್ಲ ಉಣ್ಣುತ್ತಾರೆ ನೋಡಿ. ಹೇಗೆ ಅಂತ ಈಗ ಹೇಳಲ್ಲ, ಎಲ್ಲ …

Read More »

ಬೆಳಗಾವಿಯಲ್ಲಿ 11 ದಿನ ಗಣೇಶೋತ್ಸವ ಆಚರಣೆಗೆ ಸಿಎಂ ಗ್ರೀನ್‌ ಸಿಗ್ನಲ್

ಬೆಳಗಾವಿ: ಗಡಿ ಜಿಲ್ಲೆಯಲ್ಲಿ 11 ದಿನ ಗಣೇಶೋತ್ಸವ ಆಚರಣೆಗೆ ಸಿಎಂ ಗ್ರೀನ್‌ ಸಿಗ್ನಲ್ ನೀಡಿದ್ದು, ಈ ಸಂಬಂಧ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅಭಯ್‌ ಪಾಟೀಲ್ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಬೆಳಗಾವಿಯಲ್ಲಿ ಗಣೇಶೋತ್ಸವ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಸಿಎಂ ಗಣೇಶೋತ್ಸವದ ವಿಚಾರಗಳನ್ನು ಆಯಾ ಜಿಲ್ಲಾಡಳಿತಕ್ಕೆ ಅನುಮತಿ ನೀಡಲು ಸೂಚಿಸಿದ್ದೇನೆ ಎಂದಿದ್ದಾರೆ. ಬೆಳಗಾವಿಯಲ್ಲಿ 11 ದಿನಗಳ ಕಾಲ ಗಣೇಶೋತ್ಸವ ಮಾಡುವುದು ಪ್ರತೀತಿಯಿದೆ. ಹೀಗಾಗಿ, ಈ ಬಾರಿ ಅದಕ್ಕೆ ಅವಕಾಶ ಕೊಡಿ‌ …

Read More »

ಕಲಬುರಗಿಪಾಲಿಕೆಯಲ್ಲಿ ಬಿಜೆಪಿಯವರೇ ಮೇಯರ್ ಆಗುತ್ತಾರೆ: ಸಿಎಂ ಬೊಮ್ಮಾಯಿ

ಬೆಂಗಳೂರು: ಕಲಬುರಗಿ ಪಾಲಿಕೆ ಅಧಿಕಾರದ ವಿಚಾರವಾಗು ಪ್ರಾರಂಭಿಕ ಹಂತದಲ್ಲಿ ಮಾತ್ರ ಚರ್ಚೆಯಾಗ್ತಿದೆ. ಆದರೆ ಕಲಬುರಗಿಯಲ್ಲಿ ಬಿಜೆಪಿಯವರೇ ಮೇಯರ್ ಆಗುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ಭೇಟಿ ಫಲಪ್ರದವಾಗಿದೆ. ಎಲ್ಲ ಸಚಿವರ ಭೇಟಿ ಯಶಸ್ವಿಯಾಗಿದೆ. ರಿಂಗ್ ರೋಡ್ ದಾಬಸ್ ಪೇಟೆಯಿಂದ ಮೈಸೂರು ರೋಡ್ ಯೋಜನೆ ಎರಡು ಮೂರು ವರ್ಷಗಳಿಂದ ನೆನೆಗುದಿಗೆ ಬಿದಿತ್ತು, ಅದನ್ನು ಕ್ಲಿಯರ್ ಮಾಡಿಸಿ ಮುಂದುವರೆಯಲಿದೆ. 5 -6 ತಿಂಗಳಲ್ಲಿ ಕೆಲಸ ಪ್ರಾರಂಭವಾಗುತ್ತದೆ. ರಾಜ್ಯದ …

Read More »

ಅನಿಲ್ ಅಂಬಾನಿಗೆ ಬಿಗ್‌ ರಿಲೀಫ್‌: ರಿಲಯನ್ಸ್‌ ಇನ್ಫ್ರಾಗೆ 4,660 ಕೋಟಿ ರೂ. ಪ್ರಕರಣದ ಗೆಲುವು

ಅನಿಲ್ ಅಂಬಾನಿಗೆ ಸುಪ್ರೀಂ ಕೋರ್ಟ್ ನಿಂದ ದೊಡ್ಡ ಮಟ್ಟಿನ ಪರಿಹಾರ ಸಿಕ್ಕಂತಾಗಿದೆ. ಅನಿಲ್ ಅಂಬಾನಿ ನೇತೃತ್ವದ ಸಾಲದಲ್ಲಿ ಮುಳುಗಿರುವ ರಿಲಯನ್ಸ್ ಅನಿಲ್ ಧೀರೂಭಾಯಿ ಅಂಬಾನಿ ಗ್ರೂಪ್ (ಎಡಿಎಜಿ) ಗೆ ಗೆಲುವಿನಲ್ಲಿ, ಸುಪ್ರೀಂ ಕೋರ್ಟ್ ADAG ಪರವಾಗಿ ಮಧ್ಯಸ್ಥಿಕೆ ಪ್ರಶಸ್ತಿಯನ್ನು ಎತ್ತಿಹಿಡಿದಿದೆ. ಕಳೆದ ನಾಲ್ಕು ವರ್ಷದಿಂದ ಕೋರ್ಟ್‌ನಲ್ಲಿ ವಾದ ವಿವಾದಗಳಿಗೆ ಎಡೆಮಾಡಿದ್ದ ಪ್ರಕರಣದಲ್ಲಿ ತೀರ್ಪು ಅನಿಲ್ ಅಂಬಾನಿ ಪರವಾಗಿ ಬಂದಿದೆ. ಆದರೆ ನ್ಯಾಯಾಲಯದ ತೀರ್ಪಿನ ವಿವರವಾದ ಪ್ರತಿಯನ್ನು ನಿರೀಕ್ಷಿಸಲಾಗುತ್ತಿದೆ. ಏನಿದು ಪ್ರಕರಣ? …

Read More »

ಪ್ರತಿಭಟನಾಕಾರರ ಆಕ್ರೋಶಕ್ಕೆ ‘ಮಣಿದ’ ಬಿಬಿಎಂಪಿ: ಬೆಂಗಳೂರಿನಲ್ಲಿ ವಾರ್ಡ್ ಗೆ 1 ಕ್ಕಿಂತ ಹೆಚ್ಚು ಗಣೇಶ ಪ್ರತಿಷ್ಠಾಪನೆಗೆ ಅನುಮತಿ

ಬೆಂಗಳೂರು : ನಾಳೆ ಗಣೇಶ ಚತುರ್ಥಿಗೆ ನಾಡು ಸಜ್ಜಾಗುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ವಿಧಿಸಲಾಗಿದ್ದ ನಿರ್ಬಂಧವನ್ನು ಬಿಬಿಎಂಪಿ ಸಡಿಲಗೊಳಿಸಿದೆ. ಬೇಡಿಕೆ ಬಂದರೆ ವಾರ್ಡ್ ಗೆ ಒಂದಕ್ಕಿಂತ ಹೆಚ್ಚು ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಲು ನಿರ್ಧರಿಸಲಾಗಿದೆ.   ಪ್ರತಿಭಟನಾಕಾರರ ಪ್ರತಿಭಟನೆಗೆ ಮಣಿದ ಬಿಬಿಎಂಪಿ ವಾರ್ಡ್ ಗೆ ಒಂದಕ್ಕಿಂತ ಹೆಚ್ಚು ಗಣೇಶ ಪ್ರತಿಷ್ಠಾಪನೆ ಮಾಡಲು ಅನುಮತಿ ನೀಡಿದೆ. ಈ ಕುರಿತಂತೆ ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ …

Read More »

ಗೋಕಾಕ ಸಾಹುಕಾರರು ಮತ್ತೆ ಮಂತ್ರಿ ಆಗಲಿದ್ದಾರೆ ಬಸವರಾಜ್ ಬೊಮ್ಮಾಯಿ ದೆಹಲಿ ಭೇಟಿ ಬಹುತೇಕ ಸಕ್ಸಸ್

ಗೋಕಾಕ: ಗೋಕಾಕ ಸಾಹುಕಾರರು ಮತ್ತೆ ಮಂತ್ರಿ ಆಗಲಿದ್ದಾರೆ ನಿನ್ನೆ ಬಸವರಾಜ್ ಬೊಮ್ಮಾಯಿ ದೆಹಲಿ ಭೇಟಿ ಬಹುತೇಕ ಸಕ್ಸಸ್ ಆಗಿದೆ. ಇನ್ನು ಅಧಿವೇಶನ ಬಳಿಕ ಉಳಿದ 4 ಸಚಿವ ಸ್ಥಾನದಲ್ಲಿ ಒಂದು ಮಂತ್ರಿ ಸ್ಥಾನ ರಮೇಶ ಜಾರಕಿಹೊಳಿ ಅವರಿಗೆ ಕೊಡೋದು ಫಿಕ್ಸ್ ಎಂಬ ಮಾಹಿತಿ ಸಿಕ್ಕಿದೆ. ಇದಕ್ಕೆ ಹಾಯ್ ಕಮಾಂಡ್ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ . ಉಳಿದ ನಾಲ್ಕು ಸಚಿವ ಸ್ಥಾನದಲ್ಲಿ ಒಂದು ರಮೇಶ್ ಜಾರಕಿಹೊಳಿ …

Read More »

ಸೆ.13ರಂದು ಗಜಪಡೆ ಆಗಮನ, ಅ.7ಕ್ಕೆ ದಸರಾ ಉದ್ಘಾಟನೆ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಯ ಪಯಣ ಸೆ.13ರಂದು ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ನಡೆಯಲಿದ್ದು, ಈ ಬಾರಿಯ ದಸರಾ ಮಹೋತ್ಸವಕ್ಕೆ ಮುನ್ನುಡಿ ಬರೆಯಲಿದೆ. ಬುಧವಾರ ದಸರಾ ಆಚರಣೆ ಸಂಬಂಧ ಅರಮನೆ ಮಂಡಳಿ ಸಭಾಂಗಣದಲ್ಲಿ ನಡೆದ ದಸರಾ ಕಾರ್ಯಕಾರಿ ಸಮಿತಿ ಸಭೆ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌, ಕೋವಿಡ್‌ ಹಿನ್ನೆಲೆ ಕಳೆದ ಬಾರಿಯಂತೆ ಈ ಬಾರಿಯೂ ಅರಮನೆಗೆ ಸೀಮಿತವಾಗುವಂತೆ …

Read More »