Breaking News
Home / 2021 / ಜುಲೈ / 05 (page 2)

Daily Archives: ಜುಲೈ 5, 2021

ದಕ್ಷಿಣೆ ಕಾಸಿಗೆ ಆಸೆ ಬಿದ್ದು ಕೆಲ ಮಠಾಧೀಶರು ಸಿಎಂ ಪರ ಮಾತನಾಡುತ್ತಿದ್ದಾರೆ: ಯತ್ನಾಳ್ ಟೀಕೆ

ಮೈಸೂರು: ಲವ್ ಜಿಹಾದ್‌ ತಡೆಯಲು ಮಠಾಧೀಶರು ಮುಂದಾಗಬೇಕು. ಕೆಟ್ಟವರಿಗೆ ಬುದ್ದಿ ಹೇಳುವ ಕೆಲಸ ಮಾಡಬೇಕು. ಅದನ್ನ ಬಿಟ್ಟು ಮುಖ್ಯಮಂತ್ರಿ ಬದಲಾವಣೆ ಮಾಡಿದರೆ ಬೀದಿಗೆ ಬರುತ್ತೇವೆ ಎನ್ನುವುದು ಸರಿಯಲ್ಲ. ದಕ್ಷಿಣೆ ಕಾಸಿಗೆ ಆಸೆ ಬಿದ್ದು ಕೆಲ ಮಠಾಧೀಶರು ಸಿಎಂ ಪರ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟೀಕೆ ಮಾಡಿದರು. ಚಾಮುಂಡಿ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ‌ ಕುಟುಂಬದಿಂದ ಲಿಂಗಾಯತ ಸಮಾಜಕ್ಕೆ ಕೆಟ್ಟ ಹೆಸರು ಬಂದಿದೆ. …

Read More »

ಡೀಲ್ ನಡೆಯುವುದು ಕಾವೇರಿ ನಿವಾಸದ ಹಿಂಭಾಗದಲ್ಲಿ: ವಿಜಯೇಂದ್ರ ವಿರುದ್ದ ಗುಡುಗಿದ ಯತ್ನಾಳ್

ಮೈಸೂರು: ಬಿ.ವೈ.ವಿಜಯೇಂದ್ರರ ಎಲ್ಲಾ ಡೀಲ್‌ಗಳು ನಡೆಯುದು ಸಿಎಂ ನಿವಾಸ ಕಾವೇರಿ ಹಿಂಭಾಗದ ಗೆಸ್ಟ್‌ ಗೌಸ್‌ ನಲ್ಲಿ. ಸಿಸಿಬಿ ಪೊಲೀಸರು ಅಲ್ಲೂ ದಾಳಿ ನಡೆಸಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಿಎಂ ಪುತ್ರ ವಿಜಯೇಂದ್ರ ವಿರುದ್ದ‌ ಮತ್ತೆ ವಾಗ್ದಾಳಿ ನಡೆಸಿದರು. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್ ಯತ್ನಾಳ್‌ಗೆ ಮಾಹಿತಿ ನೀಡುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೂ ಪ್ರತಿಕ್ರಿಯೆ ನೀಡಿದರು. ಒಂದು ವೇಳೆ ಇದು …

Read More »

ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ಮುಕ್ತಾಯ; ಅಂತಿಮ ತನಿಖಾ ವರದಿ ಸಿದ್ಧ

ಬೆಂಗಳೂರು: ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣದ ತನಿಖೆ ಮುಕ್ತಾಯವಾಗಿದ್ದು, ಅಂತಿಮ ತನಿಖಾ ವರದಿ ಸಿದ್ಧವಿದೆ ಎಂದು ಹೈಕೋರ್ಟ್​ಗೆ ಎಜಿ ಪ್ರಭುಲಿಂಗ್ ನಾವದಗಿ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಎಸ್‌ಐಟಿಯಿಂದ ಹೈಕೋರ್ಟ್​ಗೆ ಮೆಮೋ ಸಲ್ಲಿಸಲಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಜುಲೈ 14ರವರೆಗೆ ಅಂತಿಮ ವರದಿ ಸಲ್ಲಿಸದಂತೆ ಎಸ್‌ಐಟಿ ಪೊಲೀಸರಿಗೆ ಸೂಚನೆ ನೀಡಿದೆ. ಯುವತಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್, ದಾಖಲೆಗಳ ಇಂಗ್ಲಿಷ್ ಅನುವಾದ …

Read More »

ವಿಧಾನಸಭೆ ಸ್ಪೀಕರ್​​ಗೆ ನಿಂದನೆ: ಮಹಾರಾಷ್ಟ್ರದ 12 ಬಿಜೆಪಿ ಶಾಸಕರು ಅಮಾನತು

ಮುಂಬೈ: ಮಹಾರಾಷ್ಟ್ರ ವಿಧಾನಸಭೆಯ ಮುಂಗಾರು ಅಧಿವೇಶನ ಕಲಾಪದ ವೇಳೆ ಸ್ಪೀಕರ್​​ನ್ನು ನಿಂದನೆ ಮಾಡಿದ ಆರೋಪದಲ್ಲಿ ಬಿಜೆಪಿಯ 12 ಶಾಸಕರನ್ನು ಒಂದು ವರ್ಷದವರೆಗೆ ಸದನವು ಅಮಾನತುಗೊಳಿಸಿದೆ. ವಿಧಾನಸಭಾ ಕಲಾಪದ ವೇಳೆ ಹಾಜರಿದ್ದ ಪ್ರತಿಪಕ್ಷ ನಾಯಕ ದೇವೇಂದ್ರ ಫಡ್ನವೀಸ್, ಇದು “ಸುಳ್ಳು ಆರೋಪಗಳು” ಎಂದು ಹೇಳಿದ್ದಾರೆ. “ಇವು ಸುಳ್ಳು ಆರೋಪಗಳು. ಇದು ಕಟ್ಟು ಕತೆ. ಬಿಜೆಪಿಯಿಂದ ಯಾರೂ ಅವಹೇಳನ ಮಾಡಿಲ್ಲ” ಎಂದು ಫಡ್ನವೀಸ್ ಮಾಧ್ಯಮಕ್ಕೆ ತಿಳಿಸಿದರು. “ಒಬಿಸಿ (ಇತರ ಹಿಂದುಳಿದ ಜಾತಿ) ಮೀಸಲಾತಿಗಾಗಿ, …

Read More »

ಹೆಣ್ಣು ಮಕ್ಕಳನ್ನು ಅಪಮಾನಿಸಿ ಮಾತನಾಡುವುದೇ ಅವರ ಸಂಸ್ಕೃತಿ – ಸಂಸ್ಕಾರ : ಎಚ್ ಡಿಕೆ ಟಾಂಗ್ ನೀಡಿದ ಸಂಸದೆ ಸುಮಲತಾ

ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡುವುದು ಅದು ಅವರ ಸಂಸ್ಕೃತಿ – ಸಂಸ್ಕಾರವನ್ನು ಎತ್ತಿ ತೋರಿಸುತ್ತದೆ. ಮಾಜಿ ಸಿಎಂ ಆಗಿ, ಇಂತಹ ಮಾತುಗಳನ್ನು ಆಡುವುದು ಶೋಭೆತರಲ್ಲ ಎಂದು ಕುಮಾರಸ್ವಾಮಿ ಗೆ ಸಂಸದೆ ಸುಮಲತಾ ಟಾಂಗ್ ನೀಡಿದರು.‌ ವಿಧಾನ‌ ಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸುಮಲತಾ ಹೆಣ್ಣುಮಕ್ಕಳ ಬಗ್ಗೆ ಕೀಳುಮಟ್ಟದ ಹೇಳಿಕೆ ಕುಮಾರಸ್ವಾಮಿ ಸಂಸ್ಕೃತಿ, ವ್ಯಕ್ತಿತ್ವನ್ನು ತೋರುತ್ತದೆ ಎಂದು ಕಿಡಿಕಾರಿದ್ದಾರೆ. ಕೆ.ಆರ್.ಎಸ್. ಜಲಾಶಯ ರಕ್ಷಣೆ ನನ್ನ ಉದ್ದೇಶ. ನನ್ನ ಮಾಹಿತಿಯಂತೆ ಜಲಾಶಯ …

Read More »

ವಿದ್ಯುತ್ ಮಗ್ಗ ನೇಕಾರರಿಗೆ 3 ಸಾವಿರ ಲಾಕ್ ಡೌನ್ ವಿಶೇಷ ದನ ಸಹಾಯಕ್ಕಾಗಿ ಅರ್ಜಿ ಅಹ್ವಾನ

ಬಾಗಲಕೋಟೆ : ಕೋವಿಡ್-19 ರ 2ನೇ ಅಲೆಯಿಂದ ಲಾಕ್‍ಡೌನ್ ಘೋಷಣೆ ಮಾಡಿದ್ದು, ಇದರಿಂದ ಬಾದಿತವಾದ ವಿದ್ಯುತ್ ಮಗ್ಗ ಘಟಕಗಳಲ್ಲಿನ ನೇಕಾರರು ಹಾಗೂ ಮಗ್ಗಪೂರ್ವ ಚಟುವಟಿಕೆಗಳಾದ ಟ್ವಿಸ್ಟಿಂಗ್, ವೈಂಡಿಂಗ್, ಯಾರ್ನಡೈಯಿಂಗ್, ವಾರ್ಪಿಂಗ್, ಝರಿ ವೈಂಡಿಂಗ್ & ವಾರ್ಪಿಂಗ್, ವಾರ್ಪ ನಾಟಿಂಗ್ ಹಾಗೂ ಸೈಜಿಂಗ್ ಕೆಲಸಗಾರರಿಗೆ ತಲಾ 3 ಸಾವಿರ ರೂ.ಗಳಂತೆ ಪರಿಹಾರಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ‘SSLC ವಿದ್ಯಾರ್ಥಿ’ಗಳೇ ಗಮನಿಸಿ : ಶಿಕ್ಷಣ ಇಲಾಖೆಯ ‘ಈ ಆಪ್’ ಹಾಕೊಳ್ಳಿ, ನಿಮ್ಮ ‘ಪರೀಕ್ಷಾ ಸಿದ್ಧತೆ’ಗೆ …

Read More »

ಸಾರ್ವಜನಿಕರಿಂದ ಅತಿಕ್ರಮಣಗೊಂಡಿದ ಸರ್ಕಾರಿ ಜಾಗ ಮರು ವಶಕ್ಕೆ.

ಘಟಪ್ರಭಾ : ಕಳೆದ ಹತ್ತು ಹದಿನೈದು ವರ್ಷಗಳಿಂದ ಸಾರ್ವಜನಿಕರಿಂದ ಆಕ್ರಮಿಸಿಕೊಂಡಿದ್ದ ಸರ್ಕಾರಿ ಭೂಮಿಯನ್ನು ಮರು ವಶಪಡಿಸಿಕೊಂಡ ಘಟನೆ ಪಾಮಲದಿನ್ನಿ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.   ಪಾಮಲದಿನ್ನಿ ಗ್ರಾಮದಲ್ಲಿ ಸರ್ವೆ ನಂ. 4 ರಲ್ಲಿ ಸುಮಾರು 10 ಎಕರೆ ಭೂಮಿ ಇದ್ದು, ಅದರಲ್ಲಿಯ 2 ಎಕರೆಯಷ್ಟು ಭೂಮಿಯನ್ನು ಸರಕಾರಿ ಪ್ರೌಢಶಾಲೆಗೆ ಬಿಟ್ಟು ಕೊಡಲಾಗಿದೆ. ಇನ್ನುಳಿದ ಜಾಗದಲ್ಲಿ ಸಾರ್ವಜನಿಕರ ಅಭಿವೃದ್ಧಿಯ ಹಿತ ದೃಷ್ಟಿಯಿಂದ ವಿವಿಧ ಇಲಾಖೆಗಳ ಉಪಯೋಗಕೆಂದು ಕಾಯ್ದಿರಿಸಲಾಗಿತ್ತು. ಈಗ ಈ …

Read More »

ಮಾಜಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ತೇಜಶ್ವಿನಿ ನಾಯಕವಾಡಿ ಅವರ ಮನೆಗೆ ಕಾಂಗ್ರೆಸ್ ಯುವ ಮುಖಂಡ ರಾಹುಲ್, ಪ್ರಿಯಾಂಕಾ ಜಾರಕಿಹೊಳಿ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಮೂಡಲಗಿ : ತಾಲ್ಲೂಕಿನ ಕಂಕನವಾಡಿ ಗ್ರಾಮದಲ್ಲಿ ಇತ್ತಿಚೇಗೆ ನಿಧನರಾದ ಮಾಜಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ತೇಜಶ್ವಿನಿ ನಾಯಕವಾಡಿ ಅವರ ಮನೆಗೆ ಕಾಂಗ್ರೆಸ್ ಯುವ ಮುಖಂಡ ರಾಹುಲ್, ಪ್ರಿಯಾಂಕಾ ಜಾರಕಿಹೊಳಿ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.   ಬಳಿಕ ಪುಣ್ಯ ಸ್ಮರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಹುಲ್ ಜಾರಕಿಹೊಳಿ ಮಾತನಾಡಿ, ಇತ್ತಿಚೇಗೆ ನಿಧನರಾದ ಮಾಜಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ತೇಜಸ್ವಿನಿ ನಾಯಕವಾಡಿ ಅವರ ಕಾಲಾವಧಿಯಲ್ಲಿ ಅನೇಕ ಕೆಲಸಗಳನ್ನು ಮಾಡಿದ್ದಾರೆ ಎಂದು ಅವರ …

Read More »

ಎಚ್ಚರ. ಮನೆಗಳ ಸಿಸಿಟಿವಿ ದೃಶ್ಯಗಳಿಗೂ ಹ್ಯಾಕರ್‌ಗಳ‌ ಕನ್ನ!

ಕೊಚ್ಚಿ: ಇತ್ತೀಚೆಗೆ ಭದ್ರತೆಯ ಸಲುವಾಗಿ ಮನೆಗಳಲ್ಲಿ “ಕ್ಲೋಸ್ಡ್ ಸರ್ಕ್ನೂಟ್‌ ಕೆಮರಾ’ಗಳನ್ನು (ಸಿಸಿ ಕೆಮರಾ) ಹಾಕಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೇ ವೇಳೆ, ಹ್ಯಾಕರ್‌ಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚುತ್ತಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಕೆಲವು ಮನೆಗಳಲ್ಲಿ ಸುತ್ತಲಿನ ವಿದ್ಯಮಾನ ಗಮನಿಸಲು ಮನೆಯ ಮುಖ್ಯ ಬಾಗಿಲಿನ ಮುಂದೆ, ಗೇಟ್‌ ಹಾಗೂ ಇತರ ಆಯ್ದ ಕಡೆಗಳಿಗೆ ಸಿಸಿ ಕೆಮರಾ ಅಳವಡಿಸಿದರೆ, ಇನ್ನೂ ಕೆಲವರು ಮಕ್ಕಳ ಚಟುವಟಿಕೆಗಳನ್ನು ಗಮನಿಸಲು ಮನೆಯ ಒಳಾಂಗಣಗಳಲ್ಲಿ ಕೆಮರಾಗಳನ್ನು ಅಳವಡಿಸುತ್ತಾರೆ. ಬಹುತೇಕ ಕಡೆ, …

Read More »

ಮೋದಿ ಸರ್ಕಾರದಿಂದ ಗುಡ್ ನ್ಯೂಸ್

ಅನೇಕ ಬಾರಿ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡಿಸಿಕೊಳ್ಳಬೇಕು ಅಂದರೆ ಸಾರ್ವಜನಿಕರಿಗೆ ಅಲ್ಲಿನ ಸಿಬ್ಬಂದಿಯಿಂದ ಕಿರಿಕಿರಿ ಉಂಟಾಗುವುದು ಇದೆ. ಇಂತಹ ಸಂದರ್ಭಗಳಲ್ಲಿ ಅನೇಕರು ಮೇಲಾಧಿಕಾರಿಗಳಿಗೆ ದೂರನ್ನ ಸಹ ನೀಡುತ್ತಾರೆ.   ಆದರೆ ಈ ದೂರುಗಳನ್ನ ಕೆಲವರು ಗಂಭೀರವಾಗಿ ಪರಿಗಣಿಸೋದೇ ಇಲ್ಲ. ಆದರೆ ಇನ್ಮೇಲೆ ನೀವು ಈ ರೀತಿಯ ಸಮಸ್ಯೆಗಳನ್ನ ಎದುರಿಸಬೇಕಾಗಿ ಬರೋದಿಲ್ಲ. ಏಕೆಂದರೆ ಸಾರ್ವಜನಿಕರು ನೇರವಾಗಿ ದೂರುಗಳನ್ನ ಪ್ರಧಾನಮಂತ್ರಿ ಕಾರ್ಯಾಲಯಕ್ಕೇ ತಲುಪಿಸಬಹುದಾಗಿದೆ.   ನೀವು ನೇರವಾಗಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೇ ದೂರನ್ನ ಸಲ್ಲಿಸಬೇಕು …

Read More »