Home / 2021 / ಜುಲೈ / 05 (page 4)

Daily Archives: ಜುಲೈ 5, 2021

ಲಾಕ್‌ಡೌನ್ ನಿರ್ಬಂಧ ಸಡಿಲಿಕೆ: ಪ್ರಮುಖ ದೇವಸ್ಥಾನಗಳಲ್ಲಿ ಇಂದಿನಿಂದ ದರ್ಶನ

ಬೆಂಗಳೂರು: ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ಸೋಮವಾರದಿಂದ (ಜು. 5) ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಉಡುಪಿಯ ಕೃಷ್ಣ ಮಠ ಹಾಗೂ ಸವದತ್ತಿ ಯಲ್ಲಮ್ಮ ದೇವಸ್ಥಾನದ ಪ್ರವೇಶಕ್ಕೆ ನಿರ್ಬಂಧ ಮುಂದುವರಿದಿದೆ. ಶೃಂಗೇರಿ ಶಾರದಾಂಬೆ ದೇಗುಲ, ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಮಂದಾರ್ತಿಯ ದುರ್ಗಾ ಪರಮೇಶ್ವರಿ ದೇವಸ್ಥಾನ, ಧರ್ಮಸ್ಥಳದ ಮಂಜುನಾಥೇಶ್ವರ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.   ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕೂಡಲಸಂಗಮದ …

Read More »

ಕಾಳಸಂತೆಗೆ ಪಡಿತರ ಅಕ್ಕಿ: 17 ಮಂದಿ ವಿರುದ್ಧ ಎಫ್‌ಐಆರ್‌

ಬೆಂಗಳೂರು: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಖರೀದಿಸಿ, ಪಾಲಿಶ್‌ ಮಾಡಿ ವಿವಿಧ ಬ್ರ್ಯಾಂಡುಗಳಲ್ಲಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಬಂಗಾರಪೇಟೆ-ಕೆ.ಜಿ.ಎಫ್‌ ರಸ್ತೆಯ ದಾಸರಹೊಸಹಳ್ಳಿ ಬಳಿ ಇರುವ ಪಿಆರ್‌ಎಸ್‌ ಆಗ್ರೋಟೆಕ್‌ ಅಕ್ಕಿ ಗಿರಣಿ ಮಾಲೀಕ ಸೇರಿ 17 ಮಂದಿಯ ವಿರುದ್ಧ ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಆಹಾರ ಇಲಾಖೆಯ ರಾಜ್ಯ ಮಟ್ಟದ ತನಿಖಾ ದಳದ ಮುಖ್ಯಸ್ಥರೂ ಆಗಿರುವ ಜಂಟಿ ನಿರ್ದೇಶಕ (ಐಟಿ ವಿಭಾಗ) ಕೆ. ರಾಮೇಶ್ವರಪ್ಪ ಅವರು ಭಾನುವಾರ ದೂರು ನೀಡಿದ್ದಾರೆ. ಅಕ್ಕಿ ಅಕ್ರಮ …

Read More »

ಏರಿದ ದರ: ಒಲೆ ಉರಿಸದ ‘ಅನಿಲ’

ಬೆಂಗಳೂರು: ಎಲ್‌ಪಿಜಿ ಸಿಲಿಂಡರ್‌ಗಳ ದರದ ಸತತ ಏರಿಕೆಯಿಂದ ರಾಜ್ಯ ಸರ್ಕಾರದ ‘ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆಯ ಫಲಾನುಭವಿಗಳು ಕಂಗಾಲಾಗಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌) ಕುಟುಂಬಗಳು ದುಬಾರಿ ದರ ಪಾವತಿಸಲಾಗದೇ ಯೋಜನೆಯಿಂದ ದೂರ ಸರಿಯುತ್ತಿವೆ. ಅನಿಲ ಭಾಗ್ಯ ಯೋಜನೆಯಡಿ 97,256 ಫಲಾನುಭವಿಗಳಿಗೆ ಅನಿಲ ಸಂಪರ್ಕ ಕಲ್ಪಿಸಲಾಗಿತ್ತು. ಈ ಪೈಕಿ 13,461 (ಶೇ 13.8) ಮಂದಿ ಈ ವರ್ಷದ ಆರು ತಿಂಗಳಿನಲ್ಲಿ ಎಲ್‌ಪಿಜಿ ತುಂಬಿದ ಒಂದು ಸಿಲಿಂಡರ್‌ ಕೂಡ ಖರೀದಿಸಿಲ್ಲ. 32,462 …

Read More »

ಬೆಳಗಾವಿ : ದಾಂಪತ್ಯ ಜೀವಕ್ಕೆ ಕಾಲಿಟ್ಟ ಅಂಧ ಜೋಡಿ

ಬೆಳಗಾವಿ : ದೇವರ ಶಾಪಕ್ಕೆ ಗುರಿಯಾಗಿ ಹುಟ್ಟಿನಿಂದ ಅಂಧತ್ವದಲ್ಲೇ ಬದುಕು ಕಳೆಯುತ್ತಿದ್ದ ಅಂಧರಿಬ್ಬರು ಕೊರೊನಾ ನಿಯಮಾವಳಿಯಂತೆ ಸರಳ ಮದುವೆ ಮಾಡಿಕೊಂಡರು. ಇಲ್ಲಿನ ಹನುಮಾನ ನಗರದ ಭಕ್ತಿವಾಸ ಸಾಂಸ್ಕೃತಿಕ ಭವನದ ಕಾರ್ಯಾಲಯದಲ್ಲಿ ಉಷಾ ತಾಯಿ ಪೋತದಾರ್ ಫೌಂಡೇಶನ್‍ನ ಆಶ್ರಯದಲ್ಲಿ ಬೆಳಗಾವಿಯ ದೀಪಾ ಹಾಗೂ ಬೆಂಗಳೂರಿನ ರವಿ ಅಂಧ ಜೋಡಿಯ ಮಂಗಲ ಕಾರ್ಯ ನೆರವೇರಿತು. ಜಿಲ್ಲೆಯಲ್ಲಿ ಸಾಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಬೆಳಗಾವಿಯ ಉಷಾ ಪೋತದಾರ್ ಫೌಂಡೇಶನ್ ಮುಖ್ಯಸ್ಥರು ಅಂಧ ಜೋಡಿಯ ಮದುವೆ …

Read More »

ಚಿತ್ರೀಕರಣದತ್ತಅಣ್ತಮ್ಮ! ಇಂದಿನಿಂದ ಶಿವಣ್ಣ, ಪುನೀತ್‌ ಶೂಟಿಂಗ್‌ನಲ್ಲಿ ಭಾಗಿ

ಲಾಕ್‌ಡೌನ್‌ ತೆರವಾಗಿ ಚಿತ್ರೀಕರಣಕ್ಕೆ ಅನುಮತಿ ಸಿಗುತ್ತಿದ್ದಂತೆ ಒಂದೊಂದೇ ಸಿನಿಮಾಗಳು ಮುಹೂರ್ತ ಆಚರಿಸಿಕೊಳ್ಳುತ್ತಿವೆ. ಈ ಮೂಲಕ ಲಾಕ್‌ ಡೌನ್‌ನಲ್ಲಿ ಮನೆಯಲ್ಲಿದ್ದ ನಟ-ನಟಿಯರೆಲ್ಲ ಮತ್ತೆ ಬಣ್ಣ ಹಚ್ಚಲು ಸಿದ್ಧವಾಗಿದ್ದಾರೆ. ಈಗ ಆ ಸಾಲಿಗೆ ಶಿವರಾಜ್‌ಕುಮಾರ್‌ ಹಾಗೂ ಪುನೀತ್‌ರಾಜ್‌ಕುಮಾರ್‌ ಕೂಡಾ ಸೇರುತ್ತಾರೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಕಳೆದ ಎರಡೂವರೆ ತಿಂಗಳಿನಿಂದ ಚಿತ್ರೀಕರಣದಿಂದ ದೂರವಿದ್ದ ಶಿವರಾಜ್‌ಕುಮಾರ್‌ ಅವರು ಇಂದು ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ. ಅವರ ನಟನೆಯ123ನೇ ಚಿತ್ರದ ಚಿತ್ರೀಕರಣದಲ್ಲಿ ಶಿವಣ್ಣ ಪಾಲ್ಗೊಳ್ಳುತ್ತಿದ್ದಾರೆ. ವಿಜಯ್‌ ಮಿಲ್ಟನ್‌ ನಿರ್ದೇಶನದ, ಕೃಷ್ಣ ಸಾರ್ಥಕ್‌ …

Read More »

ಚಾಂಪಿಯನ್‌ ಟಗರಿಗೆ ಬಂಗಾರದ ಬೆಲೆ; ಎಂಟು ಲಕ್ಷ ಕೊಡುತ್ತೇವೆ ಎಂದರೂ ಮಾರದ ಟಗರು ಮಾಲೀಕ

ಬಾಗಲಕೋಟೆ: ಒಂದು ಟಗರಿಗೆ ಅಬ್ಬಬ್ಬಾ ಎಂದರೆ ಎಷ್ಟು ಬೆಲೆ ಇರಬಹುದು. ಇಪ್ಪತ್ತು ಸಾವಿರ ಹೆಚ್ಚೆಂದರೆ ಐವತ್ತು ಇನ್ನು ಹೆಚ್ಚೆಂದರೆ ಒಂದು ಲಕ್ಷ. ಆದರೆ ಬಾಗಲಕೋಟೆಯ ಟಗರನ್ನು ಬರೊಬ್ಬರಿ ಎಂಟು ಲಕ್ಷಕ್ಕೆ ಖರೀದಿಗೆ ಕೇಳಿದ್ದಾರೆ. ಆದರೆ ಗಮನಿಸಬೇಕಾದ ಅಂಶ ಎಂದರೆ ಎಂಟು ಲಕ್ಷ ಕೊಡುವುದಕ್ಕೆ ಬಂದರೂ ಈ ಟಗರಿನ ಯಜಮಾನ ಮಾತ್ರ ಟಗರನ್ನು ಮಾರಾಟ ಮಾಡುವುದಕ್ಕೆ ತಯಾರಿಲ್ಲ. ಅಷ್ಟಕ್ಕೂ ಈ ಟಗರಿಗೆ ಇಷ್ಟೊಂದು ಬೆಲೆ ಬರುವುದಕ್ಕೆ ಕಾರಣ ಏನು? ಈ ಟಗರಲ್ಲಿ …

Read More »

ನಮ್ಮದೇ ಸರ್ಕಾರವಿದ್ರೂ ಪ್ರಯೋಜನವಿಲ್ಲ, ಚಪ್ಪಡಿ ಕಲ್ಲಿನ ಸ್ಥಿತಿ ನಮ್ಮದು: ಸಿ.ಪಿ. ಯೋಗೇಶ್ವರ್

ಮೈಸೂರು: ಮತ್ತೆ ನಾಯಕತ್ವ ಬದಲಾವಣೆಯ ಬಗ್ಗೆ ಸಚಿವ ಸಿ.ಪಿ ಯೋಗೇಶ್ವರ್ ಮಾತನಾಡಿದ್ದಾರೆ. ಬಿಜೆಪಿ ಸರ್ಕಾರ ಬರಲು ನಾವು ಬಹಳಷ್ಟು ಶ್ರಮಿಸಿದ್ದೇವೆ. ಆದರೆ, ನಮ್ಮ ಶ್ರಮ ಯಾರಿಗೂ ಕಾಣಿಸುತ್ತಿಲ್ಲ ಎಂದು ಹೇಳಿದ್ದಾರೆ. ಜನರು ದೇಗುಲಕ್ಕೆ ಹೋದರೆ ರಾಜಗೋಪುರಕ್ಕೆ ಕೈಮುಗಿಯುತ್ತಾರೆ. ರಾಜಗೋಪುರದ ಕೆಳಗಿನ ಚಪ್ಪಡಿ ಕಲ್ಲುಗಳು ಜನರಿಗೆ ಕಾಣುವುದಿಲ್ಲ. ಚಪ್ಪಡಿ ಕಲ್ಲಿನ ಮೇಲೆ ಚಪ್ಪಲಿ ಬಿಟ್ಟು, ರಾಜಗೋಪುರ ನೋಡುತ್ತಾರೆ. ನಮ್ಮ ಸ್ಥಿತಿ ಚಪ್ಪಡಿ ಕಲ್ಲಿನಂತೆ ಆಗಿದೆ ಎಂದು ಯೋಗೇಶ್ವರ್ ತಿಳಿಸಿದ್ದಾರೆ. ನಮ್ಮದೇ ಸರ್ಕಾರವಿದ್ದರೂ …

Read More »

BPL, ಅಂತ್ಯೋದಯ ಪಡಿತರ ಚೀಟಿದಾರರಿಗೆ ಮುಖ್ಯ ಮಾಹಿತಿ: ಇ-ಕೆವೈಸಿ ಕಡ್ಡಾಯ

ರಾಯಚೂರು: ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿ (ಬಿಪಿಎಲ್) ಹೊಂದಿರುವ ಇದೂವರೆಗೆ ಇ-ಕೆವೈಸಿ ಆಗದೇ ಇರುವ ಪಡಿತರ ಕಾರ್ಡಿನ ಸದಸ್ಯರಿಗೆ ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋ ದೃಢೀಕರಣ ನೀಡಿ, ಇ-ಕೆವೈಸಿ ಮಾಡಿಸಿಕೊಳ್ಳಲು ಪ್ರತಿ ತಿಂಗಳ 1 ರಿಂದ 10 ನೇ ದಿನಾಂಕದ ವರೆಗೆ ಅವಕಾಶ ಮಾಡಿಕೊಡಲಾಗಿದೆ. ಇದುವರೆಗೆ ಇ-ಕೆವೈಸಿ ಆಗದಿರುವ ಸದಸ್ಯರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋ ದೃಢೀಕರಣ ಮೂಲಕ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳುವಂತೆ ಜಿಲ್ಲೆಯ ಆಹಾರ, …

Read More »