Breaking News

Daily Archives: ಜುಲೈ 21, 2021

ಆಮ್ಲಜನಕ ಸಿಗದೇ ಒಬ್ಬರೂ ಸತ್ತಿಲ್ಲ ಎಂದು ಹಸೀಸುಳ್ಳು ಹೇಳಿದ ಮೋದಿ ಆಡಳಿತ!

ದೇಶದಲ್ಲಿ ಕರೊನಾ ಎರಡನೇ ಅಲೆಯಲ್ಲಿಆಮ್ಲಜನಕ ಕೊರತೆಯಿಂದ ಒಂದೇ ಒಂದು ಸಾವು ಸಂಭವಿಸಿಲ್ಲ” – ಇದು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಮಂಗಳವಾರ ಸಂಸತ್ತಿನಲ್ಲಿ ನೀಡಿದ ಆಘಾತಕಾರಿ ಹೇಳಿಕೆ. ದೇಶದಲ್ಲಿ ಕಳೆದ ಏಪ್ರಿಲ್-ಮೇ ಅವಧಿಯಲ್ಲಿ ಕರೋನಾ ಎರಡನೇ ಅಲೆ ಭೀಕರ ಸಾವು-ನೋವುಗಳ ರುದ್ರನರ್ತನ ನಡೆಯುತ್ತಿರುವಾಗ ದೇಶದ ಉದ್ದಗಲಕ್ಕೆ ಆಮ್ಲಜನಕ ಕೊರತೆಯಿಂದ, ಸಕಾಲದಲ್ಲಿ ಜೀವವಾಯು ಲಭ್ಯವಾಗದೆ ಲಕ್ಷಾಂತರ ಮಂದಿ ಸಾವು ಕಂಡಿದ್ದರು. ಜನ ಹಾಗೆ ಆಸ್ಪತ್ರೆಗಳಲ್ಲಿ ಆಮ್ಲಜನಕ ಸಿಗದೆ ಸಾವು ಕಾಣುತ್ತಿರುವುದನ್ನು ರೋಗಿಗಳ …

Read More »

ಕಾನ್ಸ್‌ಟೇಬಲ್‌ಗೆ ಪೇಟ ತೊಡಿಸಿ ಸನ್ಮಾನ; ಶಿವು ಉತ್ತಮ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಪಂತ್ ಶ್ಲಾಘನೆ

ಬೆಂಗಳೂರು: ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್‌ ಅವರು ಬೆಂಗಳೂರಿನ ಕೆ.ಜಿ.ಹಳ್ಳಿ ಠಾಣೆ ಕಾನ್ಸ್‌ಟೇಬಲ್‌ ಶಿವುಗೆ ಪೇಟ ತೋಡಿಸಿ, ಶಾಲು ಹೊದಿಸಿ ಸನ್ಮಾನಿಸಿದ್ದಾರೆ. ಬಕ್ರೀದ್ ಹಿನ್ನಲೆ ನೆನ್ನೆ ರಾತ್ರಿ ಪೊಲೀಸ್ ಆಯುಕ್ತರಾದ ಕಮಲ್‌ಪಂತ್‌ ಸಿಟಿ ರೌಂಡ್ಸ್‌ ಹಾಕಿದ್ದರು. ಈ ವೇಳೆ ಕಮಲ್‌ಪಂತ್ ಅವರನ್ನು ಸನ್ಮಾನಿಸಲು ಮುಸ್ಲಿಮರು ಆಗಮಿಸಿದ್ದರು, ಆಗ ಸನ್ಮಾನಿಸಬೇಕಿರುವುದು ನನಗಲ್ಲ ಎಂದು ಪೊಲೀಸ್ ಕಾನ್ಸ್‌ಟೇಬಲ್‌ ಶಿವು ಅವರಿಗೆ ಸನ್ಮಾನಿಸಿದ್ದಾರೆ. ನಿನ್ನೆ ರಾತ್ರಿ ಶಿವಾಜಿನಗರ ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ, ಗೋವಿಂದಪುರ, …

Read More »

ಲಂಚ ಪಡೆಯುತ್ತಿದ್ದ ಕೆಎಸ್ಸಾರ್ಟಿಸಿ ಟ್ರಾಫಿಕ್ ಕಂಟ್ರೋಲರ್ ಎಸಿಬಿ ಬಲೆಗೆ!

ಮಂಗಳವಾರ ತಡರಾತ್ರಿ ಚಿಂತಾಮಣಿಯಲ್ಲಿ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಕೆಎಸ್ ಆರ್ ಟಿಸಿ ಟ್ರಾಫಿಕ್ ಕಂಟ್ರೋಲರ್ ವೆಂಕಟಾಚಲಪತಿಯನ್ನು ಬಲೆಗೆ ಕೆಡವಿದ್ದಾರೆ. ವೆಂಕಟಾಚಲಪತಿ ಸಂಬಂಧಿ ಹಾಗೂ ಮೇಲಾಧಿಕಾರಿಯಾಗಿದ್ದ ಡಿಸಿ ಚಂದ್ರಶೇಖರ್ ವರಿಗೆ ಲಂಚದ ಮೊತ್ತ ತಲುಪಿಸುತ್ತಿದ್ದರು. ಕೋಲಾರ ಕೆಎಸ್‌ಆರ್ಟಿಸಿ ಡಿಸಿ ಚಂದ್ರಶೇಖರ್ ತಮ್ಮ ಸಂಬಂಧಿಯಾದ ಜಿಎನ್. ವೆಂಕಟಾಚಲಪತಿ ಮೂಲಕ ಕಂಡಕ್ಟರ್ ಬಳಿ 2 ಲಕ್ಷ ರೂ. ನೀಡುವಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನಿವೃತ್ತಿ ಘೋಷಣೆ ಮಾಡಲು ಇಷ್ಟು ದೊಡ್ಡ ಮೊತ್ತ ಕೇಳಿದ್ದು …

Read More »

ಬೆಳಗಾವಿ ಸಿಇಎನ್​ ಪೊಲೀಸರಿಂದ ಸೈಬರ್ ವಂಚಕರ ಬಂಧನ; 50 ಬ್ಯಾಂಕ್ ಖಾತೆ ಫ್ರೀಜ್

ಬೆಳಗಾವಿ: ಬಿಎಸ್​ಎನ್​ಎಲ್​ ನಿವೃತ್ತ ಉದ್ಯೋಗಿ ಖಾತೆಗೆ ಕನ್ನ ಹಾಕಿ 10 ಲಕ್ಷ ರೂಪಾಯಿ ಹಣ ವರ್ಗಾವಣೆ ಮಾಡಿಕೊಂಡಿದ್ದ ವಂಚಕರನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ತಾಲೂಕಿನ ಕಂಗ್ರಾಳಿ ಕೆ.ಹೆಚ್. ಗ್ರಾಮದ ಯಲ್ಲಪ್ಪ ಜಾಧವ್‌ ಅವರ ಬ್ಯಾಂಕ್ ಖಾತೆಗೆ ಕನ್ನ ಹಾಕಿದ್ದ, ಚಂದ್ರಪ್ರಕಾಶ್(30), ಆಶಾದೇವಿ(25)ಯನ್ನು ಇಂದು ಜಾರ್ಖಂಡ್‌ಗೆ ತೆರಳಿ ಬೆಳಗಾವಿ ಪೊಲೀಸರು( Karnataka police) ಬಂಧಿಸಿದ್ದಾರೆ. ಕೆವೈಸಿ ಅಪ್​ಡೆಟ್ ನೆಪದಲ್ಲಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಪ್ರತಿ, ವಾಟ್ಸಪ್ ಪಡೆದಿದ್ದ …

Read More »

41ನೇ ರೈತ ಹುತಾತ್ಮ ದಿನಾಚರಣೆ; ಹುತಾತ್ಮ ರೈತನಿಗೆ ನಮನ ಸಲ್ಲಿಸಿ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ರೈತರು

ಗದಗ: 41ನೇ ರೈತ ಹುತಾತ್ಮ ದಿನಾಚರಣೆ ಹಿನ್ನೆಯಲ್ಲಿ ಬಂಡಾಯದ ನಾಡಿನತ್ತ ಇಂದು (ಜುಲೈ 21) ರೈತ ಸಮೂಹವೇ ಹರಿದು ಬಂದಿತ್ತು. ಹುತಾತ್ಮ ರೈತನ ವೀರಗಲ್ಲಿಗೆ ಹೂವು ಅರ್ಪಿಸಿ ರೈತರು, ಮುಖಂಡರು, ಜನಪ್ರತಿನಿಧಿಗಳು ನಮನ ಸಲ್ಲಿಸಿದರು. ಈ ವೇಳೆ ಮಹದಾಯಿ, ಕಳಸಾ ಬಂಡೂರಿಗಾಗಿ ರೈತರು ಹಸಿರು ಶಾಲು ಹಾರಿಸುವ ಮೂಲಕ ಮತ್ತೆ ರಣಕಹಳೆ ಊದಿದರು. ಜೊತೆಗೆ ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು. ಸುಪ್ರೀಂ ಕೋರ್ಟ್​ನಲ್ಲಿ ಪಿಐಎಲ್ ಹಾಕುವ ಮೂಲಕ ಸರ್ಕಾರಗಳಿಗೆ …

Read More »

ಅವರು ಸಿಪಿ ಯೋಗೇಶ್ವರ್ ಅಲ್ಲ… ಸಿಡಿ ಯೋಗೇಶ್ವರ್… ಸಿಡಿ ಇಟ್ಕೊಂಡೇ ಆಟ ಆಡ್ತಿದ್ದಾರೆ.: ಡಿ.ಕೆ ಸುರೇಶ್

ನವದೆಹಲಿ: ಅವರು ಸಿಪಿ ಯೋಗೇಶ್ವರ್ ಅಲ್ಲ… ಸಿಡಿ ಯೋಗೇಶ್ವರ್… ಸಿಡಿ ಇಟ್ಕೊಂಡೇ ಆಟ ಆಡ್ತಿದ್ದಾರೆ. ಇದು ಕರ್ನಾಟಕಕ್ಕೆ ಕಪ್ಪು ಚುಕ್ಕೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್​ ಸಂಸದ ಡಿ.ಕೆ ಸುರೇಶ್ ನವದೆಹಲಿಯಲ್ಲಿ ಸಚಿವ ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು. ರೇಣುಕಾಚಾರ್ಯ ಸಿಡಿ ಪ್ರಸ್ತಾಪ ಹಿನ್ನೆಲೆಯಲ್ಲಿ ಈ ಮಾತುಗಳನ್ನು ಆಡಿದರು. ಲಿಂಗಾಯತರು ಕೆಪಿಸಿಸಿ ಅಧ್ಯಕ್ಷರಾಗುತ್ತಾರೆ ಎಂಬ ವಿಚಾರವಾಗಿ ಹೈಕಮಾಂಡ್ ನಿರ್ದೇಶನವನ್ನು ನಾವು ಪಾಲಿಸುತ್ತೇವೆ. ಯಾವುದೇ ಸಮುದಾಯದ ಅಧ್ಯಕ್ಷ ಆದರೂ ನಾವು …

Read More »

ಕೇಂದ್ರ ಸರ್ಕಾರದ ವಿರುದ್ಧ ಶಿವಸೇನೆ ವಾಗ್ದಾಳಿ

ಮುಂಬೈ,ಜು.21-ಕೊರೊನಾ ಎರಡನೆ ಅಲೆ ಸಂದರ್ಭದಲ್ಲಿ ಆಮ್ಲಜನಕ ಕೊರತೆಯಿಂದ ತಮ್ಮವರನ್ನು ಕಳೆದುಕೊಂಡಿರುವವರು ಕೇಂದ್ರ ಸರ್ಕಾರದ ವಿರುದ್ಧ ನ್ಯಾಯಾಲಯದ ಮೊರೆ ಹೋಗುವಂತೆ ಶಿವಸೇನೆ ಸಂಸದ ಸಂಜಯ್ ರಾವತ್ ಮನವಿ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರ ರಾಜ್ಯ ಸಭೆಯಲ್ಲಿ ಕೊರೊನಾ ಎರಡನೆ ಅಲೆ ಸಂದರ್ಭದಲ್ಲಿ ಆಕ್ಸಿಜನ್ ಕೊರತೆಯಿಂದ ಯಾರು ಸಾವನ್ನಪ್ಪಿಲ ಎಂದು ಸಮರ್ಥಿಸಿಕೊಂಡ ಬೆನ್ನಲ್ಲೆ ರಾವತ್ ಈ ಹೇಳಿಕೆ ನೀಡಿದ್ದಾರೆ. ಕೊರೊನಾ ಎರಡನೆ ಅಲೆ ಸಂದರ್ಭದಲ್ಲೂ ಆಕ್ಸಿಜನ್ ಕೊರತೆ ಇತ್ತು. ಆಗಲೂ ಹಲವು ರಾಜ್ಯಗಳಲ್ಲಿ ಆಮ್ಲಜನಕ …

Read More »

‘ಸಿಡಿ ಅಸ್ತ್ರ’ಕ್ಕೆ ಬೆಟ್ಟಿ ಬಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ : ‘ಶಾಸಕ ಎಂಪಿ ರೇಣುಕಾಚಾರ್ಯ’ ವಿರುದ್ಧ ‘CD ಷಡ್ಯಂತ್ರ’.?

ಬೆಂಗಳೂರು : ಸಿಎಂ ಬದಲಾವಣೆ ಬೆನ್ನಲ್ಲೇ, ಈಗ ಸಿಡಿ ಷಡ್ಯಂತ್ರದ ಸುದ್ದಿ ಹರಿದಾಡುತ್ತಿದೆ. ಅದರಲ್ಲೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರ ಸಿಡಿ ವಿಚಾರ ಕೂಡ ಈಗ ಮುನ್ನಲೆಗೆ ಬಂದಿದ್ದು, ಇದೇ ಕಾರಣಕ್ಕಾಗಿ ದಿಢೀರ್ ದೆಹಲಿಗೆ ಅವರು ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಎಂಪಿ ರೇಣುಕಾಚಾರ್ಯ ವಿರುದ್ಧ ಸಿಡಿ ಷಡ್ಯಂತ್ರ ನಡೆಯುತ್ತಿದೆ ಎನ್ನಲಾಗಿದೆ.   ಇಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ದೆಹಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸಿಎಂ ಪರವಾಗಿ …

Read More »

ನಟ ದರ್ಶನ್ ಗೆ 5 ವರ್ಷ ನಿಷೇಧ ಹೇರಿ: ಫಿಲ್ಮಂ ಚೇಂಬರ್ ಗೆ ಮಾನವಹಕ್ಕುಗಳು, ಭ್ರಷ್ಟಚಾರ ನಿಗ್ರಹದಳದಿಂದ ದೂರು

ಬೆಂಗಳೂರು :ಕಳೆದ ಕೆಲವು ದಿನಗಳಿಂದ ಸ್ಯಾಂಡಲ್ವುಡ್ ನಟ ದರ್ಶನ್ ಅವರ ವಿರುದ್ಧ ಸಾಲಕ್ಕೆ ಶ್ಯೂರಿಟಿ ಪ್ರಕರಣ ಹಾಗು ನಿರ್ದೇಶಕ ಇಂದ್ರಜಿತ್ ಲಂಕೇಶ್ ನಡುವಿನ ಆರೋಪ-ಪ್ರತ್ಯಾರೋಪಗಳು ಕನ್ನಡ ಚಿತ್ರರಂಗದಲ್ಲಿ ಬೇಸರ ಮೂಡಿಸಿದೆ. ಈ ಕುರಿತಾಗಿ ಇಂದು ಮಾನವ ಹಕ್ಕುಗಳು ಮತ್ತು ಭ್ರಷ್ಟಚಾರ ನಿಗ್ರಹದಳ ಸಂಸ್ಥೆಯ ಅಧ್ಯಕ್ಷ ಮೋಹನ್ ಅವರ ನಿಯೋಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿ ನಟನಿಗೆ ಐದು ವರ್ಷಗಳ ಕಾಲ ನಿಷೇಧ ಹೇರುವಂತೆ ಆಗ್ರಹಿಸಿ ಸೂಕ್ತ ಕ್ರಮಕ್ಕೆ …

Read More »

ಬಾಯಿ ಮುಚ್ಚಿಸಿಕೊಂಡು ಇದ್ದರೆ ಎಲ್ಲ ಸರಿಹೋಗುತ್ತೆ : ಈಶ್ವರಪ್ಪ ಗರಂ

ಶಿವಮೊಗ್ಗ : ಕೇಂದ್ರೀಯ ನಾಯಕರು ತೆಗೆದುಕೊಂಡ ತೀರ್ಮಾನಕ್ಕೆ ಬದ್ಧ ಅಂತಾ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಇದರಿಂದ ಯತ್ನಾಳ್ ಸೇರಿದಂತೆ ಯಾರು ಮಾತನಾಡದೆ ಬಾಯಿ ಮುಚ್ಚಿಸಿಕೊಂಡು ಇದ್ದರೆ ಎಲ್ಲವೂ ಸರಿಯಾಗುತ್ತದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಸದ್ಯ ರಾಜಕೀಯ ಬೆಳವಣಿಗೆ ಬಗ್ಗೆ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಕರ್ನಾಟಕದಲ್ಲಿ ಏನು ಮಾಡಬೇಕೆಂದು ರಾಷ್ಟ್ರೀಯ ನಾಯಕರುಗಳು ಒಂದು ತೀರ್ಮಾನ ತೆಗೆದುಕೊಂಡಿದ್ದರು. ಪಕ್ಷದ ರಾಷ್ಟ್ರೀಯ ನಾಯಕ ಅರುಣ್ ಸಿಂಗ್ ಬಂದು ಎಲ್ಲರ ಅಭಿಪ್ರಾಯ ಪಡೆದು ರಾಷ್ಟ್ರೀಯ …

Read More »