Breaking News

Daily Archives: ಜುಲೈ 22, 2021

ಟೆಲಿಫೋನ್ ಕದ್ದಾಲಿಕೆ ಆರೋಪ: ಕಾಂಗ್ರೆಸ್‌ನಿಂದ ರಾಜಭವನಕ್ಕೆ ಮುತ್ತಿಗೆ

ಬೆಂಗಳೂರು: ಟೆಲಿಫೋನ್ ಕದ್ದಾಲಿಕೆ ಪ್ರತಿಭಟಿಸಿ ಕಾಂಗ್ರೆಸ್‌ ಶಾಸಕರು, ಮುಖಂಡರು ಕಾರ್ಯಕರ್ತರು ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಪ್ರತಿಭಟನೆಯ ನೇತೃತ್ವವನ್ನು ಕಾಂಗ್ರೆಸ್‌ ಶಾಸಕಾಂಗ ಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ, ಹಿರಿಯ ಮುಖಂಡರಾದ ಎಚ್.ಕೆ. ಪಾಟೀಲ, ಅಲ್ಲಂ ವೀರಭದ್ರಪ್ಪ, ರಾಮಲಿಂಗಾರೆಡ್ಡಿ, ಕೆ.ಆರ್. ರಮೇಶ್ ಕುಮಾರ್, ಸಲೀಂ ಅಹ್ಮದ್‌ ವಹಿಸಿದ್ದರು. ಅದಕ್ಕೂ ಮೊದಲು ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ …

Read More »

ತಡರಾತ್ರಿ ಸ್ವಗ್ರಾಮಕ್ಕೆ ಬಂದ ಗದಗ ಯೋಧನ ಮೃತದೇಹ.. ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಗದಗ: ಛತ್ತೀಸ್​ಘಡದಲ್ಲಿ ನಕ್ಸಲರೊಂದಿಗೆ ಹೋರಾಡುತ್ತಾ ಹುತಾತ್ಮನಾದ ಯೋಧನ ಅಂತ್ಯಕ್ರಿಯೆ ತಡರಾತ್ರಿ ಗದಗ ಜಿಲ್ಲೆಯ ಸ್ವಗ್ರಾಮ ಗೊಜನೂರಿನಲ್ಲಿ ನಡೆದಿದೆ.     ನಕ್ಸಲರೊಂದಿಗೆ ಹೋರಾಡುವಾಗ ಗುಂಡು ತಗುಲಿ ಎರಡು ದಿನಗಳ ಹಿಂದೆ ಯೋಧ ಲಕ್ಷ್ಮಣ ಗೌರಣ್ಣವರ್ (30) ಹುತಾತ್ಮರಾಗಿದ್ದರು.. ರಾತ್ರಿ 11 ಗಂಟೆ ಸುಮಾರಿಗೆ ಪಾರ್ಥಿವ ಶರೀರ ಗ್ರಾಮಕ್ಕೆ ಬಂದಿದ್ದು ತಡರಾತ್ರಿ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗಿದೆ. ಪಾರ್ಥಿವ ಶರೀರ ಗ್ರಾಮಕ್ಕೆ ಬರುತ್ತಿದ್ದಂತೆ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.. ಯೋಧನ ಸಾವಿಗೆ ಇಡೀ …

Read More »

ಗಾಂಜಾ‌ ನಶೆಯಲ್ಲಿ ಸಿಕ್ಕ ಸಿಕ್ಕ ವಾಹನಗಳ ಗಾಜು ಪುಡಿಮಾಡಿ ಎಸ್ಕೇಪ್

ಬೆಂಗಳೂರು: ಗಾಂಜಾ‌ ನಶೆಯಲ್ಲಿ ಮೂವರು ಪುಂಡರು ವಿಜಯನಗರದ ಆರ್​​ಟಿಪಿಸಿಆರ್​ ಲೇಔಟ್​ನಲ್ಲಿ ತಡರಾತ್ರಿ ಸಿಕ್ಕ ಸಿಕ್ಕ ವಾಹನಗಳ ಗಾಜು ಪುಡಿ ಮಾಡಿದ ಘಟನೆ ನಡೆದಿದೆ. ಅದೇ ಏರಿಯಾದ ಯುವಕರು ಈ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ. ರಸ್ತೆ ಬದಿ ನಿಲ್ಲಿಸಿದ್ದ ಐದಕ್ಕೂ ಹೆಚ್ಚು ವಾಹನಗಳ ಗ್ಲಾಸ್​ಗಳನ್ನ ಯುವಕರು ಪುಡಿಪುಡಿ ಮಾಡಿದ್ದು ಸಿಸಿಟಿವಿಗಳಲ್ಲಿ ಕೃತ್ಯದ ದೃಶ್ಯ ಸೆರೆಯಾಗಿದೆ. ಯುವಕರು ಕೃತ್ಯ ತಡೆಯಲು ಹೋದವರ ಮೇಲೆ ಕಲ್ಲು ತೂರಿ ಯುವಕರು ಎಸ್ಕೇಪ್ ಆಗಿದ್ದಾರೆ. ಘಟನಾ ಸ್ಥಳಕ್ಕೆ …

Read More »

ಎದೆ ಝಲ್​ ಎನಿಸುವ ರೌಡಿಶೀಟರ್​ ಬಾಬ್ಲಿ ಕೊಲೆಯ ದೃಶ್ಯ

ಬೆಂಗಳೂರು: ರೌಡಿ ಶೀಟರ್ ಬಬ್ಲಿ ಕೊಲೆಯ ಭೀಕರತೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜುಲೈ19 ರಂದು ಕೋರಮಂಗಲ ಬ್ಯಾಂಕ್​ನಲ್ಲಿ ಕೊಲೆ ನಡೆದಿತ್ತು. ಆಡುಗೋಡಿ ರೌಡಿಶೀಟರ್ ಆಗಿದ್ದ ಬಬ್ಲಿ ಹೆಂಡತಿ ಜೊತೆ ಬ್ಯಾಂಕ್ ಗೆ ಬಂದಿದ್ದಾಗ ಅಟ್ಯಾಕ್ ನಡೆದಿತ್ತು. ಬ್ಯಾಂಕ್ ಒಳಗೆ ನುಗ್ಗಿ ರೌಡಿಗಳ ಗ್ಯಾಂಗ್ ಬಬ್ಲಿಯನ್ನ ಕೊಚ್ಚಿ ಕೊಲೆ ಮಾಡಿತ್ತು.. ಕೊಲೆಯ ನಂತರ ಬೈಕ್‌ ಮೇಲೆ ಮಚ್ಚು ಹಿಡಿದು ಗ್ಯಾಂಗ್ ಸಂಭ್ರಮಿಸಿತ್ತು.. ಈ ಭಯಾನಕ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಿನ್ನೆ ಕೋರಮಂಗಲ ಪೊಲೀಸರು …

Read More »

ಜುಲೈ 30 ರ ಒಳಗೆ ಸರ್ಕಾರ ಶಾಲೆ ತೆರೆಯದಿದ್ದರೆ.. ಆಗಸ್ಟ್ 1 ಕ್ಕೆ ನಾವೇ ಆರಂಭಿಸ್ತೇವೆ- ರುಪ್ಸಾ ಎಚ್ಚರಿಕೆ

ಶಿಕ್ಷಣ ಇಲಾಖೆ ಹಾಗೂ ಸರ್ಕಾರಕ್ಕೆ ರುಪ್ಸಾ ಎಚ್ಚರಿಕೆ ನೀಡಿದ್ದು ಸರ್ಕಾರ ಶಾಲೆ ಆರಂಭಕ್ಕೆ ಅವಕಾಶ ಕೊಟ್ಟಿಲ್ಲ ಅಂದ್ರೆ ತಾವೇ ಸ್ವತಃ ಶಾಲೆ ಆರಂಭಕ್ಕೆ ಸಿದ್ಧ ಎಂದಿದೆ. ತಮ್ಮ ಶಾಲೆಯಲ್ಲಿ ಇರುವ ಪೋಷಕರ ಅಭಿಪ್ರಾಯ ಪಡೆದು ಶಾಲೆ ಆರಂಭಕ್ಕೆ ಚಿಂತನೆ ನಡೆಸಿದ್ದೇವೆ.. ಕಳೆದ ವರ್ಷದ SOPಗೆ ಅನುಗುಣವಾಗಿ ಆಗಸ್ಟ್ 1 ಕ್ಕೆ ಶಾಲೆ ಆರಂಭಿಸುತ್ತೇವೆ ಎಂದಿದೆ. ಶಾಲೆಗಳ ಆರಂಭಕ್ಕೆ ICMR ಗ್ರೀನ್ ಸಿಗ್ನಲ್ ಕೊಟ್ಟ ಬೆನ್ನಲ್ಲೇ ರುಪ್ಸಾ ವತಿಯಿಂದ ಸುದ್ದಿಗೋಷ್ಠಿ ನಡೆಸಲಾಯ್ತು.. …

Read More »

ಮಹಾರಾಷ್ಟ್ರ, ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಭಾರೀ ಮಳೆ – 8 ಸೇತುವೆಗಳು ಜಲಾವೃತ

ಚಿಕ್ಕೋಡಿ: ಮಹಾರಾಷ್ಟ್ರ ಹಾಗೂ ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರಿದಿರುವ ಹಿನ್ನೆಲೆ ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡಿದೆ. ಕೃಷ್ಣಾ, ದೂದಗಂಗಾ, ವೇದಗಂಗಾ ಹಾಗೂ ಹೀರಣ್ಯಕೇಶಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, ಚಿಕ್ಕೋಡಿ ಉಪವಿಭಾಗದ ಎಂಟು ಸೇತುವೆಗಳು ಜಲಾವೃತವಾಗಿವೆ. ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ ತಾಲೂಕುಗಳ ಎಂಟು ಸೇತುವೆಗಳು ಜಲಾವೃತಗೊಂಡಿದ್ದು, ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಯಡೂರು-ಕಲ್ಲೋಳ ಸೇತುವೆ, ದೂದಗಂಗಾ, ವೇದಗಂಗಾ ಹಾಗೂ ಹೀರಣ್ಯಕೇಶಿ ನದಿಗಳಿಗೆ …

Read More »

ಸಿಎಂ ಬದಲಾಗೋ ಮುನ್ನ ಪಂಚಮಸಾಲಿಗೆ ಒಬಿಸಿ ಮೀಸಲಾತಿ ಕೊಡಿ ಎಂದ ಸ್ವಾಮೀಜಿ

ಬೆಂಗಳೂರು: ಲಿಂಗಾಯಿತ ಪಂಚಮಸಾಲಿ ಸಮಯದಾಯಕ್ಕೆ ಒಬಿಸಿ(2ಎ) ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಸಿಎಂ ಸ್ಥಾನ ಬದಲಾಗುವ ಮುನ್ನ ಕೊಟ್ಟ ಭರವಸೆ ಈಡೇರಿಸಬೇಕು ಎಂದು ಲಿಂಗಾಯತ ಪಂಚಮಸಾಲಿ ಪೀಠಾಧ್ಯಕ್ಷ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ. ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗದ ಮೀಸಲಾತಿಗೆ ಸೇರಿಸಬೇಕೆಂದು 39 ದಿನ ಪಾದಯಾತ್ರೆ ಕೈಗೊಂಡು ಒತ್ತಾಯಿಸಲಾಗಿತ್ತು. ಆಗ ಮುಂದಿನ 6 ತಿಂಗಳಲ್ಲಿ ಮೀಸಲಾತಿ ನೀಡುವುದಾಗಿಸಿಎಂ ಯಡಿಯೂರಪ್ಪ ಅವರು ಸದನದಲ್ಲಿ ಭರವಸೆ ಕೊಟ್ಟಿದ್ದ, ಹಿನ್ನೆಲೆಯಲ್ಲಿ ಮಾ. …

Read More »

ಬಿಜೆಪಿಯಲ್ಲಿ ಜೋರಾಯ್ತು ಹಂಗಾಮಿ ಸಿಎಂ ಚರ್ಚೆ..!

ಬೆಂಗಳೂರು,ಜು.22- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಖಚಿತವಾಗುತ್ತಿದ್ದಂತೆ ತೆರವಾಗಲಿರುವ ಈ ಸ್ಥಾನಕ್ಕೆ ಯಾರು ಎಂಬ ಮಿಲಿಯನ್ ಡಾಲರ್ ಪ್ರಶ್ನೆ ರಾಜ್ಯದ ಜನತೆಯನ್ನು ಕಾಡುತ್ತಿದೆ. ಇದೇ 26ರಂದು ಸಿಎಂ ಬಿಎಸ್‍ವೈ ಅವರು ಸಂಜೆ ರಾಜ್ಯಪಾಲ ತಾವರ್ ಚಂದ್ರ ಗೆಲ್ಹೋಟ್ ಅವರನ್ನು ಭೇಟಿಯಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಹೊಸ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವವರೆಗೂ ಹಂಗಾಮಿ ಸಿಎಂ ಆಗಿ ನೀವೇ ಮುಂದುವರೆಯಬೇಕೆಂದು ರಾಜ್ಯಪಾಲರು ಅವರಿಗೆ ನಿರ್ದೇಶನ ನೀಡುವರು. ಬಳಿಕ ಶಾಸಕಾಂಗ ಸಭೆ …

Read More »

ಕಾಂಗ್ರೆಸ್ ನ ಮಂಗಳೂರು ಸಭೆ ರದ್ದು: ಆಸ್ಕರ್ ಆರೋಗ್ಯ ವಿಚಾರಿಸಲು ಡಿಕೆ ಶಿವಕುಮಾರ್ ಮಂಗಳೂರಿಗೆ

ಬೆಂಗಳೂರು: ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಂಗಳೂರಿನಲ್ಲಿ ಶುಕ್ರವಾರ ನಡೆಸಬೇಕಿದ್ದ ಸಭೆಯನ್ನು ರದ್ದುಗೊಳಿಸಲಾಗಿದೆ. ಆಸ್ಕರ್ ಫರ್ನಾಂಡಿಸ್ ಅವರ ಆರೋಗ್ಯ ವಿಚಾರಿಸಲು ಡಿ.ಕೆ. ಶಿವಕುಮಾರ್ ಅವರು ಇಂದು ಸಂಜೆ ಮಂಗಳೂರಿಗೆ ತೆರಳಲಿದ್ದಾರೆ. ಉಳಿದಂತೆ ತುಮಕೂರಿನಲ್ಲಿ ಶನಿವಾರ ನಡೆಯಲಿರುವ ಸಭೆ ನಿಗದಿಯಂತೆ ಮುಂದುವರಿಯಲಿದೆ.

Read More »

ಮೊದಲ ಬಾರಿಗೆ ರಾಜೀನಾಮೆ ವಿಚಾರವಾಗಿ ಮಾತನಾಡಿರುವ ಸಿಎಂ

ಬೆಂಗಳೂರು: ಮೊದಲ ಬಾರಿಗೆ ರಾಜೀನಾಮೆ ವಿಚಾರವಾಗಿ ಮಾತನಾಡಿರುವ ಸಿಎಂ ಯಡಿಯೂರಪ್ಪ ಜುಲೈ 26ರ ಕಾರ್ಯಕ್ರಮದ ಬಳಿಕ ಹೈಕಮಾಂಡ್ ಸೂಚನೆಯಂತೆ ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇನೆ. ಪಕ್ಷವನ್ನ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದೇನೆ. ವರಿಷ್ಠರ ಸೂಚನೆಯಂತೆ 26ರಿಂದ ಕೆಲಸ ಆರಂಭಿಸಲಿದ್ದೇನೆ ಎಂದಿದ್ದಾರೆ. ಧನ್ವಂತರಿ ಯಾಗದಲ್ಲಿ ಭಾಗಿಯಾದನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಯಾರಿಗೂ 75 ವರ್ಷ ದಾಟಿದವರಿಗೆ ಯಾವುದೇ ಸ್ಥಾನಮಾನ ಕೊಟ್ಟಿಲ್ಲ ಆದರೆ ನನ್ನ ಕೆಲಸವನ್ನು ಮೆಚ್ಚಿ ಪ್ರಧಾನಿ ಮೋದಿ, ಅಮಿತ್ ಶಾ, …

Read More »