Breaking News

Daily Archives: ಜುಲೈ 9, 2021

ಬೆಳಗಾವಿ ಮಹಾನಗರ ಪಾಲಿಕೆಯಿಂದ 58 ವಾರ್ಡುಗಳ ವಾರ್ಡ್ ವಾರು ಅಂತಿಮ ಮತದಾರರ ಪಟ್ಟಿ ಪ್ರಕಟ

ಬೆಳಗಾವಿ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆಯ 58 ವಾರ್ಡುಗಳ ವಾರ್ಡ್ ವಾರು ಅಂತಿಮ ಮತದಾರರ ಪಟ್ಟಿಯನ್ನು ಜುಲೈ 9 2021ರಂದು ಪ್ರಕಟಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ ದಿನಾಂಕ: 01-01-2021ರ ಅರ್ಹತಾ ದಿನಾಂಕಕ್ಕೆ ಪರಿಷ್ಕರಣೆ ಯಾದ ವಿಧಾನಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ದಿನಾಂಕ 18-01-2021ರ ಮತದಾರರ ಪಟ್ಟಿಯ ಡೇಟಾ ಪಡೆದುಕೊಂಡು ಬೆಳಗಾವಿ ಮಹಾನಗರಪಾಲಿಕೆಯ 58 ವಾರ್ಡಗಳು ವಾರ್ಡವಾರು ಕರಡು ಮತದಾರರ ಪಟ್ಟಿಯನ್ನು ಸಿದ್ದಪಡಿಸಿ ದಿನಾಂಕ 28-06-2021ರಂದು ಮಾನ್ಯ …

Read More »

“ರಸ್ತೆ ಬದಿಯಲ್ಲಿ ಸಸ್ಯೀಕರಣ” ಕಾರ್ಯಕ್ಕೆ ಗಿಡ ನೆಡುವ ಮೂಲಕ ಚಾಲನೆ

ದೇಶದ 75ನೇ ಸ್ವಾತಂತ್ರ್ಯ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ, ರಸ್ತೆ ಅಭಿವೃದ್ಧಿ ಕಾರ್ಯಕ್ರಮದ ಭಾಗವಾಗಿ ಬೆಳಗಾವಿ ತಾಲೂಕಿನ ಧಾಮಣೆ ಗ್ರಾಮದಲ್ಲಿ ಶಾಸಕರಾದ ಶ್ರೀ ಅಭಯ್ ಪಾಟೀಲ್ ಅವರೊಂದಿಗೆ “ರಸ್ತೆ ಬದಿಯಲ್ಲಿ ಸಸ್ಯೀಕರಣ” ಕಾರ್ಯಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಯೋಗಿತಾ ಪರಶುರಾಮ, ಗ್ರಾ.ಪಂ. ಸದಸ್ಯರಾದ ಶ್ರೀ ಅಶೋಕ ರುದ್ರೇಗೌಡ ಪಾಟೀಲ್, ಶ್ರೀ ಕೊನೇರಿ ಬಸವಂತ, ಶ್ರೀ ಮನೋಹರ …

Read More »

ಎಲ್ಲರಿಗೂ ಲಸಿಕೆ, ಎಲ್ಲರಿಗೂ ಉಚಿತ! : ಮಂಗಳಾ ಅಂಗಡಿ

ಇಂದು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಬೆಳಗುಂದಿ ಗ್ರಾಮದಲ್ಲಿ, ಕೋವಿಡ್ 19 ಉಚಿತ ಲಸಿಕಾಕರಣ ಅಭಿಯಾನಕ್ಕೆ ಚಾಲನೆ ನೀಡಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದೆನು. ಪ್ರತಿಯೊಬ್ಬ ನಾಗರಿಕರೂ ಕೋವಿಡ್ ಲಸಿಕೆ ಪಡೆದು, ದೇಶವನ್ನು ಕೊರೋನಾ ಸೋಂಕು ಮುಕ್ತ ಮಾಡಲು ಕೈಜೋಡಿಸುವಂತೆ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಬಿಜೆಪಿ ಮಾಜಿ ಅಧ್ಯಕ್ಷರಾದ ಶ್ರೀ ವಿನಯ್ ಕದಮ್, ಬೆಳಗುಂದಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಹೇಮಾ ಹದಗಲ್, ಉಪಾಧ್ಯಕ್ಷರಾದ ಶ್ರೀ ಬಾಲು …

Read More »

ಪುನೀತ್ ‘ಜೇಮ್ಸ್’ ಸಿನಿಮಾದಲ್ಲಿ ‘ಘಟೋತ್ಕಚ’ ಖ್ಯಾತಿಯ ಕೇತನ್

ಪವರ್ ಸ್ಟಾರ್ ರಾಜ್ ಕುಮಾರ್ ಸದ್ಯ ಜೇಮ್ಸ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಜೇಮ್ಸ್ ಸಿನಿಮಾದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಮತ್ತಷ್ಟು ತಡವಾಗಿದೆ. ಇದೀಗ ಪವರ್ ಸ್ಟಾರ್ ಲಾಕ್ ಡೌನ್ ಮುಗಿಸಿ ಮತ್ತೆ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ. ಚೇತನ್ ಕುಮಾರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಜೇಮ್ಸ್ ಪಕ್ಕಾ ಆಕ್ಷನ್ ಸಿನಿಮಾವಾಗಿದ್ದು, ಹೈ ವೋಲ್ಟೇಜ್ ಆಕ್ಷನ್ ದೃಶ್ಯಗಳು ಚಿತ್ರದಲ್ಲಿದೆ. ಜುಲೈ 5ರಿಂದ ಚಿತ್ರೀಕರಣ …

Read More »

ವಂಚನೆ ಪ್ರಕರಣ: ಸಲ್ಮಾನ್ ಖಾನ್‌ಗೆ ಪೊಲೀಸರಿಂದ ಸಮನ್ಸ್

ನಟ ಸಲ್ಮಾನ್ ಖಾನ್ ಹಾಗೂ ಸಹೋದರಿ ಅಲ್ವಿರಾ ಖಾನ್ ಅಗ್ನಿಹೋತ್ರಿ ಸೇರಿ ಒಂಬತ್ತು ಮಂದಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂಡೀಗಢ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ಸಲ್ಮಾನ್ ಖಾನ್ ‘ಬೀಯಿಂಗ್ ಹ್ಯೂಮನ್’ ಹೆಸರಿನ ಎನ್‌ಜಿಒ ನಡೆಸುತ್ತಿದ್ದು, ‘ಬೀಯಿಂಗ್ ಹ್ಯೂಮನ್’ ಹೆಸರಿನ ಬ್ರ್ಯಾಂಡ್‌ ಅಡಿಯಲ್ಲಿ ಉತ್ಪನ್ನಗಳ ಮಾರಾಟ ಸಹ ಮಾಡುತ್ತಿದ್ದಾರೆ. ಬೀಯಿಂಗ್ ಹ್ಯೂಮನ್ ಕುರಿತಾಗಿಯೇ ಚಂಡೀಗಢದ ಅರುಣ್ ಗುಪ್ತಾ ಎಂಬುವರು, ಸಲ್ಮಾನ್ ಖಾನ್, ಬೀಯಿಂಗ್ ಹ್ಯೂಮನ್ ಸಂಸ್ಥೆಯ ಸಿಇಒ, ಸಲ್ಮಾನ್ ಖಾನ್ …

Read More »

ಅಮೆರಿಕಾದಿಂದ ಸೂಪರ್ ಸ್ಟಾರ್ ರಜನಿಕಾಂತ್ ವಾಪಸ್: ಫಿಟ್ ಅಂಡ್ ಫೈನ್ ಆಗಿ ಮರಳಿದ ತಲೈವಾ!

ಆರೋಗ್ಯ ತಪಾಸಣೆಗೆಂದು ಯುಎಸ್‌ಗೆ ತೆರಳಿದ್ದ ದಕ್ಷಿಣ ಭಾರತದ ಸೂಪರ್ ಸ್ಟಾರ್, ಕಾಲಿವುಡ್ ತಲೈವಾ ರಜನಿಕಾಂತ್ ಚೆನ್ನೈಗೆ ಮರಳಿದ್ದಾರೆ. ಆರೋಗ್ಯ ತಪಾಸಣೆಗಾಗಿ ಕಳೆದ ತಿಂಗಳು ನಟ ರಜನಿಕಾಂತ್. ಪತ್ನಿ ಲತಾ, ಪುತ್ರಿ ಐಶ್ವರ್ಯ ಜೊತೆಗೆ ಯುಎಸ್‌ಗೆ ರಜನಿಕಾಂತ್ ತೆರಳಿದ್ದರು. ಅಲ್ಲಿನ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಗಾದರು. ಮೂರು ವಾರಗಳ ಕಾಲ ಯುಎಸ್‌ನಲ್ಲಿದ್ದ ರಜನಿಕಾಂತ್ ಇಂದು ಬೆಳಗ್ಗೆ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಚೆನ್ನೈಗೆ ರಜನಿಕಾಂತ್ ಬಂದಿಳಿಯಲಿದ್ದಾರೆ ಎಂಬ ಸುದ್ದಿ ಬಹಿರಂಗವಾದ ನಂತರ …

Read More »

ಹಿಂದಿ ಸಿನಿಮಾರಂಗಕ್ಕೆ ನಾಗಚೈತನ್ಯ ಎಂಟ್ರಿ; ಆಮೀರ್ ಖಾನ್ ಜೊತೆ ನಟನೆ

ತೆಲುಗು ಸಿನಿಮಾರಂಗದ ಖ್ಯಾತ ನಟ ನಾಗ ಚೈತನ್ಯ ಹಿಂದಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಾಗ ಚೈತನ್ಯ ಹಿಂದಿ ಸಿನಿಮಾದ ಬಗ್ಗೆ ಅನೇಕ ತಿಂಗಳಿಂದ ಚರ್ಚೆ ನಡೆಯುತ್ತಿತ್ತು. ಇದೀಗ ನಾಗ ಚೈತನ್ಯ ಅಧಿಕೃತವಾಗಿ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಅಂದಹಾಗೆ ನಾಗಚೈತನ್ಯ ನಟಿಸುತ್ತಿರುವುದು ಬಾಲಿವುಡ್ ಸ್ಟಾರ್ ನಟ ಆಮೀರ್ ಖಾನ್ ಸಿನಿಮಾದಲ್ಲಿ. ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಖ್ಯಾತಿಗಳಿಸಿರುವ ನಟ ಆಮೀರ್ ಖಾನ್ ಸದ್ಯ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಹುನಿರೀಕ್ಷೆಯ ಸಿನಿಮಾದ …

Read More »

ಅಶೋಕ್ ಪಿಎ ವಿರುದ್ಧ ಲಂಚದ ಆರೋಪ ಮಾಡಿದ್ದ ಶೃಂಗೇರಿ ಸಬ್ ರಿಜಿಸ್ಟ್ರಾರ್ ಚೆಲುವರಾಜ್ ಅಮಾನತು

ಚಿಕ್ಕಮಗಳೂರು: ಕಂದಾಯ ಸಚಿವ ಆರ್.ಅಶೋಕ್ ಪಿಎ ವಿರುದ್ಧ ಲಂಚ ಕೇಳಿದ್ದ ಆರೋಪ ಮಾಡಿದ್ದ ಶೃಂಗೇರಿ ಸಬ್ ರಿಜಿಸ್ಟ್ರಾರ್ ಚೆಲುವರಾಜ್ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶಿಸಲಾಗಿದೆ. 2005-06 ರಲ್ಲಿ ಮಂಡ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಚೆಲುವರಾಜ್ ಕರ್ತವ್ಯ ಲೋಪ ಮಾಡಿದ್ದರು ಎಂಬ ಕಾರಣಕ್ಕಾಗಿ ಅಮಾನತು ಮಾಡಲಾಗಿದೆ. ಚೆಲುವರಾಜ್ ಸೇರಿ 7 ಜನರು ಸೇವೆಯಿಂದ ವಜಾ ಮಾಡಲಾಗಿದೆ.   ಮಂಡ್ಯದಲ್ಲಿ ಕೆಲಸ ಮಾಡುತ್ತದ್ದಾಗ ಸರ್ಕಾರಕ್ಕೆ ಸೇರಬೇಕಿದ್ದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದರು ಎನ್ನಲಾಗಿದೆ. …

Read More »

ನಟ ರಕ್ಷಿತ್ ಶೆಟ್ಟಿ ಬಗ್ಗೆ ಅವಹೇಳನಕಾರಿ ಮಾತು ಖಂಡಿಸಿ ಕಾಪು ಬಂಟರ ಸಂಘದ ವತಿಯಿಂದ ದೂರು

ಕಾಪು : ಪ್ರತಿಭಾನ್ವಿತ ನಟ ಮತ್ತು ನಿರ್ದೇಶಕ, ತುಳುನಾಡಿನ ಹೆಮ್ಮೆಯ ಕಲಾವಿದ ರಕ್ಷಿತ್ ಶೆಟ್ಟಿ ಅಲೆವೂರು ಅವರ ಕುರಿತಾಗಿ ಖಾಸಗಿ ಟಿವಿ ಮಾಧ್ಯಮದಲ್ಲಿ ಅವಹೇಳನಕಾರಿ ಮತ್ತು ಹೀನಾಯವಾಗಿ ನಿಂದಿಸಿರುವ ಘಟನೆಯನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಕಾಪು ಬಂಟರ ಸಂಘದ ವತಿಯಿಂದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು. ಕಾಪು ಬಂಟರ ಸಂಘದ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮಾತನಾಡಿ, ತಳುನಾಡಿನ ಅದ್ಭುತ ಪ್ರತಿಭೆಯಾಗಿರುವ …

Read More »

ಸಿಎಂ ಸ್ಥಾನ ಅಲ್ಲ ಕಾಂಗ್ರೆಸ್ ಗೆ ವಿಪಕ್ಷ ಸ್ಥಾನವೂ ಸಿಗಲ್ಲ : ಈಶ್ವರಪ್ಪ

ಮೈಸೂರು,ಜು.9- ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದ ಸ್ಥಾನಕ್ಕೂ ಅರ್ಹವಾಗುವುದಿಲ್ಲ. ಇನ್ನು ಸಿಎಂ ಸ್ಥಾನ ಕನಸಿನ ಮಾತು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‍ನಲ್ಲಿ ಐದು ಮಂದಿ ಮುಖ್ಯಮಂತ್ರಿಗಳಾಗುತ್ತೇವೆಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ಅವರು ಪಂಚ ಕೌರವರಿದ್ದಂತೆ ಎಂದು ಟೀಕಿಸಿದರು. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ತನ್ವೀರ್‍ಸೇಠ್, ಪರಮೇಶ್ವರ್ ಹಾಗೂ ಎಂ.ಬಿ. ಪಾಟೀಲ್ ಮುಖ್ಯಮಂತ್ರಿಯಾಗುವುದಾಗಿ ಸ್ವಯಂ ಘೋಷಿಸಿಕೊಂಡಿದ್ದಾರೆ. ನಾವು ಬಿಜೆಪಿಯವರು ಪಾಂಡವರಿದ್ದಂತೆ, …

Read More »