Breaking News

Daily Archives: ಜುಲೈ 4, 2021

50 ಲಕ್ಷ ರೂ. ವೆಚ್ಚದಲ್ಲಿ ಹೊಸ ಆಸ್ಪತ್ರೆ ನಿರ್ಮಾಣ : ಶಾಸಕ ಬಾಲಚಂದ್ರ ಜಾರಕಿಹೊಳಿ

  ಮೂಡಲಗಿ : ಯಾದವಾಡ ಹಾಗೂ ಸುತ್ತಲಿನ ಗ್ರಾಮಗಳ ರೋಗಿಗಳ ಅನುಕೂಲಕ್ಕೋಸ್ಕರ ಯಾದವಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಕಾಮಗಾರಿಯನ್ನು ಒಂದು ವಾರದೊಳಗೆ ಆರಂಭಿಸಲಾಗುವುದು. ಇದಕ್ಕಾಗಿ 50 ಲಕ್ಷ ರೂ.ಗಳನ್ನು ನೀಡುವುದಾಗಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.   ತಾಲೂಕಿನ ಯಾದವಾಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಿವಾರದಂದು ಭೇಟಿ ನೀಡಿ ಆಸ್ಪತ್ರೆಯನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರದಿಂದ …

Read More »

ಅನ್​ಲಾಕ್ 3.0: ಪ್ರಸಿದ್ಧ ಕೂಡಲಸಂಗಮೇಶ್ವರ ದೇವಸ್ಥಾನ ನಾಳೆಯಿಂದ ದರ್ಶನಕ್ಕೆ ಮುಕ್ತ

ಬಾಗಲಕೋಟೆ: ನಾಳೆ ರಾಜ್ಯಾದ್ಯಂತ ಅನ್​ಲಾಕ್​​ 3.0 ಸಡಿಲಿಕೆ ಹಿನ್ನೆಲೆಯಲ್ಲಿ ದೇವಸ್ಥಾನಗಳು, ಮಠ ಸೇರಿದಂತೆ ಎಲ್ಲ ಧಾರ್ಮಿಕ ಕೇಂದ್ರಗಳು ಪ್ರವೇಶ ನೀಡಲು ಸಜ್ಜಾಗಿವೆ. ಅದೇ ರೀತಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ತ್ರಿವೇಣಿ ಸಂಗಮದ ಸುಕ್ಷೇತ್ರ ಕೂಡಲಸಂಗಮೇಶ್ವರ ದೇವಸ್ಥಾನವೂ ಕೂಡ ಭಕ್ತರಿಗೆ ನಾಳೆಯಿಂದ ದರ್ಶನಕ್ಕೆ ಮುಕ್ತವಾಗಿದ್ದು, ದೇವಸ್ಥಾನದ ಆವರಣದಲ್ಲಿ ಸ್ಚಚ್ಛತಾ ಕಾರ್ಯಗಳು ಭರದಿಂದ ಸಾಗಿವೆ. ನಾಳೆ ಬೆಳಗ್ಗೆ 6 ರಿಂದ 12 ಗಂಟೆಯವರೆಗೆ ಮತ್ತು ಮಧ್ಯಾಹ್ನ 3 ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ …

Read More »

ರಾಜ್ಯದಲ್ಲಿ ಎರಡು ವರ್ಷ ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ : ಗೋವಿಂದ ಕಾರಜೋಳ

ಕುಷ್ಟಗಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೇಯೇ ಇಲ್ಲ. ಮುಂದಿನ ಎರಡು ವರ್ಷಗಳವರೆಗೆ ಯಡಿಯೂರಪ್ಪನವರೇ ಮುಖ್ಯಮಂತ್ರಿಗಳು ಆಗಿರುತ್ತಾರೆ. ಯಡಿಯೂರಪ್ಪ ನಾಯಕತ್ವದಲ್ಲಿ ಸರ್ಕಾರವು ನಡೆಯಲಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು. ಕುಷ್ಟಗಿಯ ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದ ಸಭಾ ಮಂಟಪದಲ್ಲಿ ಕುಷ್ಟಗಿ ತಾಲೂಕಿನ ಮಾಜಿ ದೇವದಾಸಿಯರಿಗೆ ಜಮೀನಿನ ಖರೀದಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸದ್ಯಕ್ಕೆ ಇಲ್ಲ. ಬದಲಾವಣೆಯ ನಂತರ ಬಂದು ಕೇಳಿದರೆ …

Read More »

ಮಾಜಿ ಸಚಿವ ಪರಮೇಶ್ವರ ನಾಯ್ಕ ಸಹೋದರನ ಬಂಧನ

ವಿಜಯನಗರ, ಜುಲೈ 04; ಮಾಜಿ ಸಚಿವ, ಹೂವಿನಹಡಗಲಿ ಶಾಸಕ‌ ಕ್ಷೇತ್ರದ ಕಾಂಗ್ರೆಸ್ ಶಾಸಕ ಪಿ. ಟಿ. ​ಪರಮೇಶ್ವರ ನಾಯ್ಕ ಸಹೋದರ ಪಿ. ಟಿ. ಶಿವಾಜಿ ನಾಯ್ಕ ಬಂಧಿಸಲಾಗಿದೆ. ವೃದ್ಧನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಜೂನ್ 29ರಂದು ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಲಕ್ಷ್ಮೀಪುರ ತಾಂಡದಲ್ಲಿ ಮನೆಯ ಜಾಗದ ಕ್ಷುಲ್ಲಕ ವಿಚಾರವಾಗಿ ಶರಣ ನಾಯ್ಕ …

Read More »

ರಫೇಲ್‌ ಬಗ್ಗೆ ತನಿಖೆಗೆ ಮೋದಿ ಸರ್ಕಾರ ಸಿದ್ದವೇಕಿಲ್ಲ: ರಾಹುಲ್‌ ಪ್ರಶ್ನೆ

ನವದೆಹಲಿ, ಜು.04: ಸದಾ ಕೇಂದ್ರ ಸರ್ಕಾರದ ವಿರುದ್ದ ಟ್ವಿಟ್ಟರ್‌ ಮೂಲಕ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಗ ಮತ್ತೆ ರಫೇಲ್‌ ಒಪ್ಪಂದದ ಬಗ್ಗೆ ಜೆಪಿಸಿ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ತನಿಖೆಗೆ ಏಕೆ ಸಿದ್ಧವಾಗಿಲ್ಲ ಎಂದು ಟ್ವಿಟ್ಟರ್‌ನಲ್ಲಿ ಪೋಲ್‌ ಮೂಲಕ ಸಮೀಕ್ಷೆ ನಡೆಸಿದ್ದಾರೆ. ಭಾರತದೊಂದಿಗಿನ 59,000 ಕೋಟಿ ರೂ. ರಫೇಲ್‌ ಫೈಟರ್ ಜೆಟ್ ಒಪ್ಪಂದದಲ್ಲಿ ಭ್ರಷ್ಟಾಚಾರ ಮಾಡಲಾಗಿದೆ ಹಾಗೂ ಭಾರತದ …

Read More »

ಸರ್ಕಾರಿ ಹೊಸ ಮಾಧ್ಯಮಿಕ ಶಾಲೆ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದ ಕೆ ಎಂ ಎಫ್ ನಿರ್ದೇಶಕರು ಅಮರನಾಥ ಜಾರಕಿಹೊಳಿ….

ಗೋಕಾಕ ಜು 4 : ಶಾಸಕ ರಮೇಶ ಜಾರಕಿಹೊಳಿ ಅವರ ಪ್ರಯತ್ನದಿಂದ ಇಲ್ಲಿನ ಸರಕಾರಿ ಹೊಸ ಮಾಧ್ಯಮಿಕ ಶಾಲೆಗೆ ಆರ್ ಐ ಡಿ ಎಫ್ ಯೋಜನೆಯಡಿ 62.80 ಲಕ್ಷ ರೂ, ನ್ಯಾಯಾಂಗ ಇಲಾಖೆ ವತಿಯಿಂದ 15 ಲಕ್ಷ ರೂ ಹಾಗೂ ಕೆ ಆರ್ ಡಿ ಸಿ ಯೋಜನೆಯಡಿ 30 ಲಕ್ಷ ರೂ ಒಟ್ಟು ರೂ 1.7 ಕೋಟಿ ವೆಚ್ಚದಲ್ಲಿ ಮಂಜೂರಾದ 7 ಶಾಲಾ ಕೊಠಡಿ, 6 ಶೌಚಾಲಯಗಳಿಗೆ ಹಾಗೂ ಲೋಕೋಪಯೋಗಿ …

Read More »

ರಾಮನಗರ; ನೀರಿನ ಪೈಪ್‌ನಲ್ಲಿ ಸಿಲುಕಿದ್ದ ರೈತನ ರಕ್ಷಣೆ

ರಾಮನಗರ, ಜುಲೈ 04; ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಿದ್ದ ಪೈಪ್‌ಲೈನ್‌ನಲ್ಲಿ ಸಿಲುಕಿದ್ದ ರೈತನನ್ನು ಅಗ್ನಿಶಾಮಕದಳದ ಸಿಬ್ಭಂದಿ ಕಾರ್ಯಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ. ಸುಮಾರು ಅರ್ಧಗಂಟೆಗಳ ಕಾಲ ರೈತ ಪೈಪ್‌ನಲ್ಲಿ ಸಿಲುಕಿದ್ದ. ರಾಮನಗರ ತಾಲ್ಲೂಕಿನ ಸಿಂಗ್ರಿಬೋವಿ ದೊಡ್ಡಿ ಗ್ರಾಮದ ಗೋವಿಂದರಾಜು (ರಾಜಣ್ಣ) ಪೈಪ್‌ಲೈನ್‌ನಲ್ಲಿ ಸಿಲುಕಿದ್ದ. ಕೊಂಕಾಣಿದೊಡ್ಡಿ ಗ್ರಾಮದ ಬಳಿ ನಿರ್ಮಾಣವಾಗುತ್ತಿರು ದಶಪಥದ ರಾಷ್ಟ್ರೀಯ ಹೆದ್ದಾರಿಯ ಕೆಳಬಾಗದಲ್ಲಿ ಹಳ್ಳದ ನೀರು ಹರಿಯಲು ಹಾಕಿದ್ದ ಪೈಪ್‌ಲೈನ್‌ನಲ್ಲಿ ಸಿಲುಕಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ. ರಾಷ್ಟ್ರೀಯ ಹೆದ್ದಾರಿಯ …

Read More »

ಟೀಂ ಇಂಡಿಯಾ ಹುಡುಗರಿಗೆ ನೋ ರೆಸ್ಟ್: ಟ್ರೈನಿಂಗ್ ಶುರು ಮಾಡಿದ ದ್ರಾವಿಡ್

ಕೊಲೊಂಬೋ: ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾಗೆ ಕೋಚ್ ರಾಹುಲ್ ದ್ರಾವಿಡ್ ಕ್ವಾರಂಟೈನ್ ಮುಗಿದ ಬೆನ್ನಲ್ಲೇ ತರಬೇತಿ ಶುರು ಮಾಡಿದ್ದಾರೆ. ಲಂಕಾದಲ್ಲಿ ಕಾಲಿಟ್ಟ ಶಿಖರ್ ಧವನ್ ನೇತೃತ್ವದ ಕ್ರಿಕೆಟಿಗರು ಮೂರು ದಿನಗಳ ಕಾಲ ನಿಯಮದಂತೆ ಕ್ವಾರಂಟೈನ್ ಗೊಳಗಾಗಿದ್ದರು. ಅದಾದ ಬಳಿಕ ತಡಮಾಡದೇ ದ್ರಾವಿಡ್ ತಮ್ಮ ಹುಡುಗರೊಂದಿಗೆ ಅಂಗಣಕ್ಕಿಳದಿದ್ದಾರೆ. ಜುಲೈ 13 ರಿಂದ ಸರಣಿ ಆರಂಭವಾಗಲಿದ್ದು, ಒಂದು ವಾರ ಮೊದಲೇ ದ್ರಾವಿಡ್ ದೈಹಿಕ ವ್ಯಾಯಾಮ ಮಾಡಿಸಿ ಯುವ ಕ್ರಿಕೆಟಿಗರನ್ನು ಸಿದ್ಧಗೊಳಿಸಿದ್ದಾರೆ. ಇನ್ನು, ದ್ರಾವಿಡ್ …

Read More »

ಸ್ಟಾರ್ ದಂಪತಿ ನಡುವಿನ ಬ್ಯಾಟಿಂಗ್ ಆಟದಲ್ಲಿ ಗೆದ್ದವರ್ಯಾರು..?

ನಟಿ ಅನುಷ್ಕಾ ಹಾಗೂ ವಿರಾಟ್ ಕೊಹ್ಲಿ ದಂಪತಿಯನ್ನ ನೋಡೋದೆ ಒಂದು ಖುಷಿ. ಅದರಲ್ಲೂ ಅವರಿಬ್ಬರ ಆಟಗಳು ಮನರಂಜನೆ ನೀಡುತ್ವೆ. ಅನುಷ್ಕಾ ಆಗಾಗ ವಿರಾಟ್ ಕೊಹ್ಲಿಯನ್ನ ರೇಗಿಸ್ತಾ ಇರ್ತಾರೆ. ಒಬ್ಬರಿಗೊಬ್ಬರು ಕಾಳೆದುಕೊಳ್ತಾ ಇರ್ತಾರೆ. ಆದ್ರೆ ಇದೀಗ ಇಬ್ಬರ ನಡುವೆ ಬ್ಯಾಟಿಂಗ್ ಪಂದ್ಯವೊಂದು ನಡೆದಿದೆ. ಅದರಲ್ಲಿ ಗೆದ್ದವರ್ಯಾರು ಗೊತ್ತಾ..? ಎರಡು ಬೆರಳಲ್ಲಿ ಬ್ಯಾಟ್ ಹಿಡಿದು ಬ್ಯಾಲೆನ್ಸ್ ಮಾಡುವ ಪಂದ್ಯವದು.‌ ವಿರಾಟ್ ಕೊಹ್ಲಿ ಒಂದು ಕಡೆ ಹಿಡಿದ್ರೆ, ಮತ್ತೊಂದು ಕಡೆ ಅನುಷ್ಕಾ ಶರ್ಮಾ. ಆದ್ರೆ …

Read More »

ಐಎಎಸ್, ಐಪಿಎಸ್ ಅಧಿಕಾರಿಗಳ ಮಧ್ಯೆ ವಾರ್: ಫೇಸ್ ಬುಕ್ ನಲ್ಲಿ ತಾರಕಕ್ಕೇರಿದ ರೂಪಾ, ರೋಹಿಣಿ ಸಿಂಧೂರಿ ನಡುವೆ ಫೈಟ್

ಬೆಂಗಳೂರು : ಐಎಎಸ್, ಐಪಿಎಸ್ ಅಧಿಕಾರಿಗಳ ಮಧ್ಯೆ ವಾರ್ ಮುಂದುವರೆದಿದೆ. ಫೇಸ್ ಬುಕ್ ನಲ್ಲಿ ರೂಪ ಹಾಗೂ ರೋಹಿಣಿ ಸಿಂಧೂರಿ ಮಧ್ಯೆ ಫೈಟ್ ತಾರಕಕ್ಕೇರಿದೆ. ರೂಪಾ ಹಾಕುವ ಫೇಸ್ ಬುಕ್ ಪೋಸ್ಟ್ ಬಗ್ಗೆ ರೋಹಿಣಿ ಸಿಂಧೂರಿ ಪತಿ ಕೆಟ್ಟದಾಗಿ ಟ್ರೋಲ್ ಮಾಡಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.. ಈ ಕುರಿತು ಅಪರಿಚಿತ ವ್ಯಕ್ತಿಯಿಂದ ಡಿ.ರೂಪಾಗೆ ಮಾಹಿತಿ ಬಂದಿದೆ. ಫೇಸ್ ಬುಕ್ ನಲ್ಲಿ ರೋಹಿಣಿ ಸಿಂಧೂರಿ ಬಗ್ಗೆ ಯಾವುದೇ ಪೋಸ್ಟ್ ಹಾಕಬೇಡಿ.. …

Read More »