Breaking News

Daily Archives: ಮಾರ್ಚ್ 25, 2021

ಮಾಧ್ಯಮ ಕಣ್ಗಾವಲು ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಭೇಟಿ

ಬೆಳಗಾವಿ: ಬೆಳಗಾವಿ ಲೋಕಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆಗೆ ಸಂಬಂಧಿಸಿದ ಸುದ್ದಿ ಮತ್ತು ಜಾಹೀರಾತುಗಳ ಮೇಲೆ ನಿಗಾ ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರಿಶ್ ಕುಮಾರ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಉಪ ಚುನಾವಣೆ ಹಿನ್ನೆಲೆಯಲ್ಲಿ ನಗರದ “ವಾರ್ತಾಭವನ” ದಲ್ಲಿ ಆರಂಭಿಸಲಾಗಿರುವ ಮಾಧ್ಯಮ ಕಣ್ಗಾವಲು ಕೇಂದ್ರ(ಮೀಡಿಯಾ ಮಾನಿಟರಿಂಗ್ ಸೆಲ್)ಕ್ಕೆ ಗುರುವಾರ(ಮಾ.25) ಭೇಟಿ ನೀಡಿ ಅವರು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಪಕ್ಷ …

Read More »

ಕುಟುಂಬಕ್ಕೆ ಮಣೆ ಹಾಕುವುದಿಲ್ಲ ಎನ್ನುವ ಮಾತನ್ನು ಮೀರಿ ಸುರೇಶ ಅಂಗಡಿ ಅವರ ಪತ್ನಿಗೇ ಟಿಕೆಟ್ ನೀಡಲಾಗಿದೆ.

ಬೆಳಗಾವಿ – ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ದಿ.ಸುರೇಶ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿಗೆ ಟಿಕೆಟ್ ನೀಡಲಾಗಿದೆ. ಕುಟುಂಬಕ್ಕೆ ಮಣೆ ಹಾಕುವುದಿಲ್ಲ ಎನ್ನುವ ಮಾತನ್ನು ಮೀರಿ ಸುರೇಶ ಅಂಗಡಿ ಅವರ ಪತ್ನಿಗೇ ಟಿಕೆಟ್ ನೀಡಲಾಗಿದೆ.

Read More »

ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಮಾರ್ಚ್ 29ರಂದು ನಾಮಪತ್ರ ಸಲ್ಲಿಸಲಿದ್ದಾರೆ.

ಬೆಳಗಾವಿ: ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಬೆನ್ನಲ್ಲೇ ಕೈ ನಾಯಕರ ಚುನಾವಣಾ ಸಿದ್ಧತೆ ಜೋರಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಮಾರ್ಚ್ 29ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಬೆಳಗಾವಿ ಉಪಚುನಾವಣಾ ಅಖಾಡ ರಂಗೇರುತ್ತಿದ್ದು, ಭಾನುವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕುಂದಾನಗರಿ ಬೆಳಗಾವಿಗೆ ಆಗಮಿಸಲಿದ್ದಾರೆ. ಮರುದಿನ, ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಸಲಿದ್ದಾರೆ. ಡಿ.ಕೆ.ಶಿವಕುಮಾರ್ ಮಾರ್ಚ್ 28ರಿಂದ ಉತ್ತರ ಕರ್ನಾಟ ಭಾಗದಲ್ಲಿ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ರಾಯಚೂರು ಹಾಗೂ …

Read More »

2 ನೇ ವಿಡಿಯೋ ಬಿಡುಗಡೆ ಆಗುವಷ್ಟರಲ್ಲಿ ಸಿಡಿ ಗರ್ಲ್ ಹೇರ್ ಕಟ್ ಚೇಂಜ್ !

ಬೆಂಗಳೂರು, ಮಾರ್ಚ್‌ 25: ಐದು ನೋಟಿಸ್ ಕೊಟ್ಟರೂ ವಿಚಾಣೆಗೆ ಹಾಜರಾಗದ ಸಿಡಿ ಗರ್ಲ್ ಎರಡನೇ ವಿಡಿಯೋದಲ್ಲಿ ಮಹತ್ವದ ಸಂಗತಿಯೊಂದು ಬೆಳಕಿಗೆ ಬಂದಿದೆ. ಆಕೆ ಈವರೆಗೂ ಬಿಡುಗಡೆ ಮಾಡಿರುವ ಎರಡು ವಿಡಿಯೋ ಹೇಳಿಕೆ ನೋಡಿದರೆ ಈ ಅಂಶ ಗಮನಿಸಬಹುದು. ಅಮೃಂತಾಜನ್/ವಿಕ್ಸ್ ಇಟ್ಟುಕೊಂಡು ಮೊದಲ ಹೇಳಿಕೆ ಬಿಡುಗಡೆ ಮಾಡಿದ್ದ ಸಿಡಿ ಗರ್ಲ್ ಈ ಬಾರಿ ತನ್ನ ಹೇರ್ ಸ್ಟೈಲ್ ಬದಲಿಸಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳು ಹೆಚ್ಚಾಗಿ ಇಷ್ಟ ಪಡುವ ಫೆದರ್ ಹೇರ್ …

Read More »

ಯುವತಿಗೆ ರಕ್ಷಣೆ ನೀಡಲು ರಾಜ್ಯ ಮಹಿಳಾ ಆಯೋಗ ಬದ್ಧ: ಪ್ರಮೀಳಾ ನಾಯ್ಡು

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯಲ್ಲಿರುವ ಯುವತಿ ತನಗೆ ಹಾಗೂ ತನ್ನ ತಂದೆ – ತಾಯಿಗಳಿಗೆ ರಕ್ಷಣೆ ನೀಡುವಂತೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯ ಮಹಿಳಾ ಆಯೋಗ ಯುವತಿ ರಕ್ಷಣೆ ನಮ್ಮ ಜವಾಬ್ದಾರಿ ಎಂದು ಹೇಳಿದೆ. ಈ ಕುರಿತು ಮಾತನಾಡಿರುವ ಮಹಿಳಾ ಆಯೋಗದ ಅಧ್ಯಕ್ಷೆ, ಒಂದು ಹೆಣ್ಣು ಮಗಳು ತಾನು ತೊಂದರೆಯಲ್ಲಿದ್ದೇನೆ ರಕ್ಷಣೆ ನೀಡಿ ಎಂದು ಕೇಳುವಾಗ ರಕ್ಷಣೆ ನೀಡುವುದು ಮಹಿಳಾ …

Read More »

ರಾಜ್ಯ ಬಿಜೆಪಿಯಲ್ಲಿ ಭಾರೀ ಬದಲಾವಣೆ, ವರಿಷ್ಠರಿಂದ ಮಹತ್ವದ ಕ್ರಮ

ಬೆಂಗಳೂರು: ರಾಜ್ಯ ಬಿಜೆಪಿ ಕೋರ್ ಕಮಿಟಿಯನ್ನು ಪುನಾರಚನೆ ಮಾಡಲಾಗಿದೆ. ಬಿಜೆಪಿ ಕೋರ್ ಕಮಿಟಿಗೆ ಉಪಮುಖ್ಯಮಂತ್ರಿಗಳಾದ ಡಾ.ಸಿ.ಎನ್. ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ, ಸಚಿವ ಬಿ. ಶ್ರೀರಾಮುಲು, ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ ಕುಮಾರ್ ಸುರಾನಾ ಸೇರ್ಪಡೆಯಾಗಿದ್ದಾರೆ. ಕೋರ್ ಕಮಿಟಿಯ ಸದಸ್ಯರಾಗಿದ್ದ ಸಿ.ಟಿ. ರವಿ ವಿಶೇಷ ಆಹ್ವಾನಿತರಾಗಿದ್ದಾರೆ. 13 ಸದಸ್ಯರು, ಮೂವರು ವಿಶೇಷ ಆಹ್ವಾನಿತರ ಕಮಿಟಿಯನ್ನು ಪುನರ್ ರಚನೆ ಮಾಡಲಾಗಿದೆ. ಸಚಿವ ಅರವಿಂದ ಲಿಂಬಾವಳಿ ಮತ್ತು ಸಿ.ಎಂ. ಉದಾಸಿ ಅವರಿಗೆ ಕೊಕ್ ನೀಡಲಾಗಿದೆ. …

Read More »

ಕಲ್ಲು ಕ್ವಾರಿಗಳ ಮೇಲೆ ಗಣಿ ಇಲಾಖೆ, ಪರಿಸರ ಇಲಾಖೆ ಸರ್ಜಿಕಲ್ ಸ್ಟ್ರೈಕ್

ಗೋಕಾಕ: ಬೆಳಗಾವಿ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಚಿಕ್ಕೋಡಿ ಪರಿಸರ ಇಲಾಖೆಯ ಅಧಿಕಾರಿಗಳು ಉಪ ನಿರ್ದೇಶಕಿ ಶ್ರೀ ಬಿಂದನ ಪಾಟೀಲ್ ರವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಗೋಕಾಕ್ ನ ಬಿಲಕುಂದಿ ಗ್ರಾಮದಲ್ಲಿರುವ ಕಲ್ಲು ಕ್ರಷರ್ ಗಳಿಗೆ ಭೇಟಿಕೊಟ್ಟು ನಿಯಮಗಳನ್ನು ಉಲ್ಲಂಘನೆ ಮಾಡಿರುವ 5 ಕಲ್ಲು ಕ್ವಾರಿ ಗಳನ್ನು ಸೀಜ್ ಮಾಡಲಾಯಿತು. ಶಿವಮೊಗ್ಗದಲ್ಲಿ ಆದ ಘಟನೆಯಿಂದ ಎಚ್ಚೆತ್ತುಕೊಂಡಿರುವ ಬೆಳಗಾವಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪರಿಸರ ಇಲಾಖೆ …

Read More »

5 ಬಾರಿ ನೋಟಿಸ್ ಕೊಟ್ರೂ ಉತ್ತರಿಸಿಲ್ಲ.. ಆ ಲೇಡಿ ಯಾವ CD ನೂ ಕೊಟ್ಟಿಲ್ಲ -SIT ಸ್ಪಷ್ಟನೆ

ಬೆಂಗಳೂರು: ಮಾಜಿ ಸಚಿವರ ವಿಡಿಯೋ ವಿವಾದಕ್ಕೆ ಸಂಬಂಧಿಸಿದ ಯುವತಿಯಿಂದ ನಮಗೆ ಯಾವುದೇ ವಿಡಿಯೋ ಬಂದಿಲ್ಲ ಎಂದು ಎಸ್​ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಸ್ಪಷ್ಟನೆ ನೀಡಿದ್ದಾರೆ. ನ್ಯೂಸ್​ಫಸ್ಟ್​ಗೆ ಮಾಹಿತಿ ನೀಡಿದ ಅವರು ನಾವು ಯುವತಿಗೆ 5 ಬಾರಿ ನೋಟೀಸ್​ ಕೊಟ್ಟಿದ್ದೇವೆ, ಆದರೆ ಆಕೆ ಯಾವುದೇ ಉತ್ತರ ನೀಡಿಲ್ಲ, ಯುವತಿ ವಿಡಿಯೋದಲ್ಲಿ ನೀಡಿರುವ ಹೇಳಿಕೆ ಶುದ್ಧ ಸುಳ್ಳು. ಆಕೆ ಹೇಳಿರುವ ಸಮಯದಲ್ಲಿ ಎಸ್​ಐಟಿ ರಚನೆಯೇ ಆಗಿರಲಿಲ್ಲ. ನಮಗೆ ಆ ಯುವತಿಯಿಂದ ಯಾವುದೇ ವಿಡಿಯೋ …

Read More »

ಸುಖಾ ಸುಮ್ಮನೆ ಬೈಕ್​ಗಳನ್ನು ಎಳೆದೊಯ್ದು, ಯಾಕೆ ಎಂದು ಕೇಳಿದವರ ಮೇಲೆ ದರ್ಪ: ಚಾಟಿ ಬೀಸಿದ್ದಾರೆ ಕಮಲ್​ ಪಂತ್​

ಬೆಂಗಳೂರು: ಸುಖಾ ಸುಮ್ಮನೆ ಬೈಕ್​ಗಳನ್ನು ಎಳೆದೊಯ್ದು, ಯಾಕೆ ಎಂದು ಕೇಳಿದವರ ಮೇಲೆ ದರ್ಪ ತೋರುತ್ತಿದ್ದ ಟೋಯಿಂಗ್​ ಸಿಬ್ಬಂದಿಗೆ ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್​ ಚಾಟಿ ಬೀಸಿದ್ದಾರೆ. ಈ ಹಿಂದಿನ ಕಮಿಷನರ್​ ಭಾಸ್ಕರ್​ ರಾವ್ ಟೋಯಿಂಗ್​ ಸಮಸ್ಯೆಗೆ ಮುಕ್ತಿ ನೀಡುವ ಸಲವಾಗಿ ಟೋಯಿಂಗ್​ ಮಾಡುವ ಸಿಬ್ಬಂದಿ ಗಾಡಿ ಎಳೆದೊಯ್ಯುವಾಗ ಅನೌನ್ಸ್​ ಮಾಡಬೇಕು ಎಂದು ಸುತ್ತೋಲೆ ಹೊರಡಿಸಿದ್ದರು. ಅದನ್ನ ಯಥಾಪ್ರಕಾರವಾಗಿ ಎರಡು ದಿನ ಫಾಲೋ ಮಾಡಿದ ಸಿಬ್ಬಂದಿ, ಮತ್ತೆ ತಮ್ಮ ಚಾಳಿ …

Read More »

ಆ ಸಿಡಿಯನ್ನ ವಿಷ್ಣುಚಕ್ರ ಅಂದುಕೊಂಡು ತಿರುಗಿಸಿದ್ರಾ?;: ಎಚ್​. ವಿಶ್ವನಾಥ್​

ಮೈಸೂರು(ಮಾ.25): ಕೋಟ್ಯಾಂತರ ರೂಪಾಯಿ ಲೂಟ್ ಆಗಿರುವ ಇಡಿ ಬಗ್ಗೆ ಚರ್ಚೆ ಮಾಡೋಲ್ಲ ಬರಿ ಸಿಡಿ ಚರ್ಚೆ ಮಾಡುತ್ತೀರಲ್ಲಾ, ಬಜೆಟ್‌ ಚರ್ಚೆಗಿಂತ ಸಿಡಿಯೇ ಹೆಚ್ಚಾಯ್ತಾ ನಿಮಗೆ ಅಂತ, ಸದನದಲ್ಲಿ ಸರ್ಕಾರಕ್ಕೆ ಚಾಟಿ ಬೀಸಲಿಲ್ಲ ಎಂದು ವಿರೋಧ ಪಕ್ಷಗಳಿಗೆ ಪರಿಷತ್‌ ಸದಸ್ಯ ಹಳ್ಳಿಹಕ್ಕಿ ಹೆಚ್.ವಿಶ್ವನಾಥ್ ಚಾಟಿ ಬೀಸಿದ್ದಾರೆ. ನಿನ್ನೆ ಮುಗಿದ ಸದನ ಮುಗಿತು ಅಷ್ಟೆ, ಇದರಲ್ಲಿ ರಾಜ್ಯದ ಜನರಿಗೆ ಯಾವುದೇ ಪ್ರಯೋಜನ ಆಗಲಿಲ್ಲ. ಬಜೆಟ್ ಅಧಿವೇಶ ಅಂದ್ರೆ ಆದಾಯ, ತೆರಿಗೆ, ಹಣಕಾಸಿನ ಬಗ್ಗೆ …

Read More »