Breaking News

Daily Archives: ಮಾರ್ಚ್ 31, 2021

BSYಗೆ ಮತ್ತೊಂದು ಸಂಕಷ್ಟ: ಆಪರೇಷನ್‌ ಕಮಲ ಆಡಿಯೋ ಕ್ಲಿಪ್‌ ಪ್ರಕರಣದ ತನಿಖೆಗೆ ಆದೇಶ

ಬಹಳ ಕಷ್ಟದಿಂದ ಸರ್ಕಾರವನ್ನು ನಡೆಸಿಕೊಂಡು ಬರುತ್ತಿರುವ ಸಿಎಂ ಯಡಿಯೂರಪ್ಪನವರಿಗೆ ಮತ್ತೊಂದು ಸಂಕಟ ಎದುರಾಗಿದೆ. 2019ರಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರವನ್ನು ಬೀಳಿಸುವಲ್ಲಿ ಸಿಎಂ ಬಿಎಸ್‌ವೈ ಪ್ರಮುಖ ಪಾತ್ರ ವಹಿಸಿದ್ದಾರೆಂಬುದಕ್ಕೆ ಸಾಕ್ಷಿಯಾಗಿದ್ದ ಆಡಿಯೋ ಕ್ಲಿಪ್‌ ಒಂದರ ತನಿಖೆಯನ್ನು ಮುಂದುವರೆಸಲು ನ್ಯಾಯಾಲಯ ಆದೇಶ ನೀಡಿದೆ. ಗುರುಮಠಕಲ್‌ ಕ್ಷೇತ್ರದ ಶಾಸಕ ನಾಗನಗೌಡ ಕಂದಕೂರ ಅವರ ಪುತ್ರ ಶರಣಗೌಡ ಪಾಟೀಲ ದೂರು ನೀಡಿದ್ದರು. ಇದಕ್ಕೆ ಸಾಕ್ಷಿಯಾಗಿ ಖುದ್ದು ಯಡಿಯೂರಪ್ಪನವರೇ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕೂಡಾ ಬಿಡುಗಡೆಯಾಗಿತ್ತು. ಈ …

Read More »

22 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ

ಬೆಂಗಳೂರು: ರಾಜ್ಯ ಆಡಳಿತ ಯಂತ್ರದಲ್ಲಿ ಬಹುದೊಡ್ಡ ಬದಲಾವಣೆಯಾಗಿದ್ದು, ಒಟ್ಟು 22 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಬಿಬಿಎಂಪಿ ನೂತನ ಆಯುಕ್ತರಾಗಿ ಗೌರವ್ ಗುಪ್ತಾ ಅವರನ್ನು ನೇಮಕ ಮಾಡಲಾಗಿದೆ.ಅದೇ ರೀತಿ ಬಿಬಿಎಂಪಿ ಆಡಳಿತ ಅಧಿಕಾರಿಯಾಗಿ ರಾಕೇಶ್ ಸಿಂಗ್ ಅವರನ್ನು ನೇಮಕ ಮಾಡಲಾಗಿದ್ದು, ಮಂಜುನಾಥ ಪ್ರಸಾದ್ ಅವರನ್ನು ಕಂದಾಯ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ಇನ್ನು ನೂತನ ಆಯುಕ್ತ ಗೌರವ್ ಗುಪ್ತಾ ಅವರಿಗೆ ಹೆಚ್ಚುವರಿಯಾಗಿ ಕಂದಾಯ ಇಲಾಖೆ, ವಿಪತ್ತು ನಿರ್ವಹಣಾ …

Read More »

ಆರ್. ಅಶೋಕ ಭಾಮೈದರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಕ್ಕೆ ನನ್ನ ಕುಟುಂಬಕ್ಕೆ ಕೈಹಾಕಿದರು.: ಜಗದೀಶ್‌ ಕುಮಾರ್‌

ಬೆಂಗಳೂರು: ಸಿಡಿ ಪ್ರಕರಣದಲ್ಲಿ ಸಂತ್ರಸ್ತೆ ಪರ ವಾದಿಸುತ್ತಿರುವ ವಕೀಲ ಕೆ.ಎನ್‌.ಜಗದೀಶ್‌ ಕುಮಾರ್‌ ಅವರು ‘ತಮಗೆ ಬಿಜೆಪಿ ಮುಖಂಡ ಮತ್ತು ಪೊಲೀಸರು ಕೊಟ್ಟ ಕಾಟದಿಂದ ಕುಟುಂಬದಿಂದ ದೂರಾದೆ’ ಎಂದು ಆರೋಪಿಸಿದ್ದಾರೆ. ‘ಕೊಡಿಗೇಹಳ್ಳಿ ಲೋಕ ಕಲ್ಯಾಣ ಟ್ರಸ್ಟ್ ಜಮೀನು ಪರಭಾರೆ ಮಾಡಿದ್ದ ಆರ್. ಅಶೋಕ ಭಾಮೈದರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಕ್ಕೆ ನನ್ನ ಕುಟುಂಬಕ್ಕೆ ಕೈಹಾಕಿದರು. 13 ಕೇಸ್ ಹಾಕಿದರು. ಅವರು ಕೊಟ್ಟ ಹಿಂಸೆಯಿಂದ ನನ್ನ ಹೆಂಡತಿ ದೂರಾದಳು. ನನ್ನ ಬೆಳೆದ ಮಗ, …

Read More »

ಆ ಸಿ.ಡಿ ಹುಡುಗಿಗೆ ಮೊದಲು ಮೆಂಟಲ್ ಟೆಸ್ಟ್ ಮಾಡಿಸಿ: ಸಚಿವ ನಾರಾಯಣಗೌಡ

ಚಿಕ್ಕಬಳ್ಳಾಪುರ: ಸಂತ್ರಸ್ತೆ ಎನ್ನಲಾದ ಹುಡುಗಿ ಕನ್ಫ್ಯೂಸ್ ನಲ್ಲಿದ್ದಾಳೆ. ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾಳೆ. ಆಕೆಗೆ ಮೊದಲು ಮೆಂಟ್ಲ ಟೆಸ್ಟ್ ಮಾಡಿಸಬೇಕಿದೆ ಎಂದು ಸಚಿವ ನಾರಾಯಣಗೌಡ ಹೇಳಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳೊಂದಿಗೆಡ ಮಾತನಾಡಿದ ಅವರು ಯುವತಿ, ನ್ಯಾಯಾಧೀಶರ ಮುಂದೆ ಹಾಜರಾಗಿ ಏನು ಹೇಳಿದ್ದಾಳೆಂಬುದು ಯಾರಿಗೂ ಗೊತ್ತಿಲ್ಲ. ಹೆಣ್ಣುಮಗಳ ಹೇಳಿಕೆ ಏನೆಂಬುದು ಈಗಲೂ ಬಹಿರಂಗವಾಗಿಲ್ಲ. ಆ ಹೆಣ್ಣು ಮಗಳು ಕನ್ಫ್ಯೂಸ್ ನಲ್ಲಿದ್ದಾಳೆ. ಒಂದೊಂದು ದಿನ ಒಂದೊಂದು ತರ ಹೇಳಿಕೆ ಕೊಡ್ತಿದ್ದಾಳೆ. ಹಾಗಾಗಿ ಆಕೆಗೆ ಕೂಲ್ ಆಗಿ …

Read More »

ಸತೀಶ್ ಜಾರಕಿಹೊಳಿ ನಿವಾಸಕ್ಕೆ ಆಗಮಿಸಿದ ಲಕ್ಷ್ಮಿ ಹೆಬ್ಬಾಳ್ಕರ್,ಒಂದೇ ವಾಹನದಲ್ಲಿ ತೆರಳಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಚುನಾವಣಾ ಪ್ರಚಾರ

ಬೆಳಗಾವಿ: ಲೋಕಸಭಾ ಉಪಚುನಾವಣೆ ಅಖಾಡ ರಂಗೇರಿದ್ದು, ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅಸಮಾಧಾನ ಮರೆತು ಒಂದಾಗಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಬೆಳಿಗ್ಗೆ ಸತೀಶ್ ಜಾರಕಿಹೊಳಿ ನಿವಾಸಕ್ಕೆ ಆಗಮಿಸಿದ ಲಕ್ಷ್ಮಿ ಹೆಬ್ಬಾಳ್ಕರ್, ಕೆಲ ಕಾಲ ಚರ್ಚೆ ನಡೆಸಿದರು. ಬಳಿಕ ಇಬ್ಬರೂ ಒಂದೇ ವಾಹನದಲ್ಲಿ ತೆರಳಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡರು. ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕ್ಷೇತ್ರವಾದ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಎಲ್ಲ ಸಮಾಜಗಳ ಮತದಾರರನ್ನು …

Read More »

ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರೊಂದಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಬುಧವಾರ ಅಬ್ಬರದ ಪ್ರಚಾರ

ಬೆಳಗಾವಿ: ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಉಚಗಾಂವ ಗ್ರಾಮದಲ್ಲಿ ಬೆಳಗಾವಿ ಲೋಕಸಭಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರೊಂದಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಬುಧವಾರ ಅಬ್ಬರದ ಪ್ರಚಾರ ನಡೆಸಿದರು. ಸತೀಶ ಹಾಗೂ ಲಕ್ಷ್ಮಿ ಅವರು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ವಾಧ್ಯಮೇಳಗಳನ್ನು ಬಾರಿಸುವ ಮೂಲಕ ಅದ್ಧೂರಿ ಸ್ವಾಗತ ಕೋರಿದರು. ಸತೀಶ ಅವರ ಪರ ಜೈಘೋಷಗಳನ್ನು ಕೂಗಿದರು. ಪ್ರಚಾರದ ಸಂದರ್ಭದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಲಕ್ಷ್ಮಿ ಹೆಬ್ಬಾಳಕರ್, “ಸತೀಶ ಜಾರಕಿಹೊಳಿ ಅವರು ಕಾಂಗ್ರೆಸ್ ಪಕ್ಷದ …

Read More »

ಮಹಾರಾಷ್ಟ್ರ ಮೂಲದ ಕಾರಿನಲ್ಲಿ ಹಣ ಘಟಪ್ರಭಾ ಚೆಕ್ ಪೋಸ್ಟ್ ನಲ್ಲಿ 42.71 ಲಕ್ಷ ನಗದು ವಶ

ಬೆಳಗಾವಿ: ಸಮರ್ಪಕ ದಾಖಲೆಗಳಿಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 42.71 ಲಕ್ಷ ರೂಪಾಯಿ ನಗದು ಹಣವನ್ನು ಘಟಪ್ರಭಾ ಬಳಿಯ ಚೆಕ್ ಪೋಸ್ಟ್ ನಲ್ಲಿ ಬುಧವಾರ(ಮಾ.31) ವಶಪಡಿಸಿಕೊಳ್ಳಲಾಗಿದೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಘಟಪ್ರಭಾ ಬಳಿ ಸ್ಥಾಪಿಸಲಾಗಿರುವ ಚೆಕ್ ಪೋಸ್ಟ್ ನಲ್ಲಿ ಚುನಾವಣಾ ಕಾರ್ಯನಿರತ ಎಸ್.ಎಸ್.ಟಿ. ತಂಡವು ಮಹಾರಾಷ್ಟ್ರ ಮೂಲದ ಕಾರು ತಪಾಸಣೆ ನಡೆಸಿದಾಗ ನಗದು ಹಣ ಪತ್ತೆಯಾಗಿದೆ. ಮಂಗಸೂಳಿ ಮಾರ್ಗವಾಗಿ ಯರಗಟ್ಟಿ ಕಡೆಗೆ ಹೊರಟಿದ್ದ ಕಾರಿನಲ್ಲಿ ಈ ಹಣ ಪತ್ತೆಯಾಗಿದ್ದು, ಸೂಕ್ತ ದಾಖಲಾತಿಗಳು ಇಲ್ಲದಿರುವುದರಿಂದ …

Read More »

ನಿನ್ನೆ ಸಿಡಿ ಸಂತ್ರಸ್ತೆ ಬಂದ ಕಾರ್ ಯಾರದ್ದು ಗೊತ್ತಾ..? ಇದಕ್ಕೂ ನಲಪಾಡ್​ಗೂ ಏನ್​ ಸಂಬಂಧ..?

ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ನ್ಯಾಯಾಧೀಶರ ಎದುರು ಮತ್ತು ಎಸ್​ಐಟಿ ಎದುರು ಹೇಳಿಕೆ ನೀಡಿದ್ದ ಯುವತಿ ನಂತರ ಅಜ್ಞಾತ ಸ್ಥಳಕ್ಕೆ ತೆರಳಿದ್ದರು. ಈ ಮಧ್ಯೆ ಸಂತ್ರಸ್ತ ಯುವತಿಗೆ ಕಾಂಗ್ರೆಸ್ ನಾಯಕರು ರಕ್ಷಣೆ ಕೊಡ್ತಿದ್ದಾರಾ ಎನ್ನುವ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ  ಎಕ್ಸ್​ಕ್ಲೂಸಿವ್ ಮಾಹಿತಿ ಲಭ್ಯವಾಗಿದೆ. ನಿನ್ನೆ ಸಂತ್ರಸ್ತೆ ಯುವತಿ ಹೇಳಿಕೆ ನೀಡಲು ಟೊಯೋಟಾ ಫಾರ್ಚೂನರ್ ಸಿಗ್ಮಾ-4 ಕಾರ್​ನಲ್ಲಿ ಆಗಮಿಸಿದ್ದರು.. ಆ ಕಾರ್​ ನಂ KA 04 MU 9232 …

Read More »

ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಏರುಮುಖ

ಬೆಂಗಳೂರು, ಮಾರ್ಚ್ 30: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಕರ್ನಾಟಕದಲ್ಲಿ ದಿನೇದಿನೆ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 2975 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 992779ಕ್ಕೆ ಏರಿಕೆಯಾಗಿದೆ. ಒಂದೇ ದಿನ ಮಹಾಮಾರಿಗೆ 21 ಮಂದಿ ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ 12541ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಮಂಗಳವಾರದ …

Read More »

ಸಚಿವ ಸುಧಾಕರ್ ಆದೇಶವನ್ನು ಗಾಳಿಗೆ ತೂರುತ್ತಿರುವ ಜಿಲ್ಲಾ ಶತ್ರ್ತ ಚಿಕಿತ್ಸಕ

ಚಿತ್ರದುರ್ಗ,ಮಾ.30(ಹಿ.ಸ) : ಕೋರೋನಾ ವಾರಿಯರ್ಸ್ ಆಗಿ ಕಳೆದ ಆರು ತಿಂಗಳಿಂದ ದುಡಿದ ನೂರಾರು ಸಿಬ್ಬಂದಿಗಳನ್ನು ಜಿಲ್ಲಾ ಶಸ್ತ್ರ ಚಿಕಿತ್ಸಕರು ಏಕಾಏಕಿ ಕೆಲಸದಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದ್ದು, ಇದೀಗ ಪ್ರಾಣದ ಹಂಗೂ ತೊರೆದು ಕೆಲಸ ಮಾಡುತ್ತಿರುವ ಸಿಬ್ಬಂದಿಗಳು ಇತ್ತ ವೇತನವೂ ಇಲ್ಲದೆ ಕೆಲಸವೂ ಇಲ್ಲದೆ ಕಂಗಾಲಾಗಿದ್ದಾರೆ. ಕೋಟೆ ನಾಡು ಚಿತ್ರದುರ್ಗದಲ್ಲಿ ಕೋರೋನಾ ಹಿನ್ನೆಲೆಯಲ್ಲಿ ಲ್ಯಾಬ್ ಟೆಕ್ನಿಷಿಯನ್, ಶ್ರುಶ್ರೂಕಿಯರು, ಡಿ ಗ್ರೂಪ್ ನೌಕರರನ್ನು ಗುತ್ತಿಗೆ/ಹೊರ ಗುತ್ತಿಗೆ ಮೂಲಕ ಸರ್ಕಾರದ ಅದೇಶದಂತೆ ಆಯಾ ಕೆಲಸಕ್ಕೆ …

Read More »