Breaking News

Daily Archives: ಮಾರ್ಚ್ 15, 2021

ಬೆಳಗಾವಿ ಗಡಿ ವಿವಾದ ಪ್ರಸ್ತಾಪಿಸಿದ ಸಂಸದ

ನವದೆಹಲಿ: ಬೆಳಗಾವಿ ಗಡಿ ವಿವಾದದ ಬಗ್ಗೆ ಮಹಾರಾಷ್ಟ್ರ  ಸಂಸದ ಅರವಿಂದ್ ಸಾವಂತ್ ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದು, ಬೆಳಗಾವಿಯಲ್ಲಿ ಶಿವಸೇನೆ ನಾಯಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳಿದ್ದಾರೆ. ಶೂನ್ಯವೇಳೆಯಲ್ಲಿ ಗಡಿ ವಿವಾದ ಪ್ರಸ್ತಾಪಿಸಿದ ಸಾವಂತ್, ದೇಶದಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾಗಿದೆ. ಬೀದರ್, ಭಾಲ್ಕಿ, ನಿಪ್ಪಾಣಿ, ಬೆಳಗಾವಿ, ಕಾರವಾರದಲ್ಲಿ ಮರಾಠಿಗರು ಬಹುಭಾಷಿಗರಿದ್ದಾರೆ. ಶಿವಸೇನೆ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಹಿಂದಿನಿಂದ ಹೋರಾಟ ನಡೆಸುತ್ತಿದೆ. ಹೋರಾಟದಲ್ಲಿ ನಿರತರಾಗಿರುವ ಶಿವಸೇನೆ ನಾಯಕರ ಮೇಲೆ ಹಲ್ಲೆ ನಡೆಸಲಾಗಿದೆ …

Read More »

ಗಂಡನ ಕಣ್ಣೆದುರೇ ಹೆಂಡತಿ ಮೇಲೆ ಐವರಿಂದ ಅತ್ಯಾಚಾರ..!

  ರಾಜಸ್ಥಾನ : ರಾಜ್ಯದಲ್ಲಿ 30 ವರ್ಷದ ಮಹಿಳೆ ಮೇಲೆ ಆಕೆಯ ಪತಿಯ ಕಣ್ಣೆದುರೇ, ಐವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ, ಬರಾನ್ ಎಂಬಲ್ಲಿ ನಡೆದಿದೆ. ಮಹಿಳೆಯ ಮಾಜಿ ಪತಿ ಮತ್ತು ಆತನ ಸಹಾಯಕರು ಸೇರಿದಂತೆ ಐವರು ಪುರುಷರು ಶನಿವಾರ ರಾತ್ರಿ ಬರಾನ್ ಅತ್ರು ರಾಜ್ಯ ಹೆದ್ದಾರಿಯಲ್ಲಿ ದಂಪತಿಗಳನ್ನು ತಡೆದು, ಅತ್ಯಾಚಾರ ಎಸಗಿರುವುದಾಗಿ ಎಸ್ ಪಿ ವಿನೀತ್ ಕುಮಾರ್ ಬನ್ಸಾಲ್ ತಿಳಿಸಿದ್ದಾರೆ. ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿ ದಂಪತಿ …

Read More »

ಮತ್ತೆ ಆಸ್ಪತ್ರೆಗೆ ದಾಖಲಾದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇತ್ತೀಚಿಗಷ್ಟೆ ಕಣ್ಣಿನ ಸರ್ಜರಿಗಾಗಿ ಆಸ್ಪತ್ರೆ ಸೇರಿದ್ದ ಅಮಿತಾಬ್ ಇದೀಗ 2ನೇ ಎರಡನೇ ಕಣ್ಣಿನ ಸರ್ಜರಿಗಾಗಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು (ಮಾರ್ಚ್ 15) ಅಮಿತಾಬ್ ಕಣ್ಣಿನ ಶಸ್ತ್ರಚಿಕಿತ್ಸೆ ನಡೆದಿದ್ದು, ಸರ್ಜರಿ ಯಶಸ್ವಿಯಾಗಿದೆ ಎಂದು ಸ್ವತಃ ಅಮಿತಾಬ್ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರೆಕೊಂಡಿರುವ ಬಿಗ್ ಬಿ, ‘ನನ್ನ ಎರಡನೇ ಕಣ್ಣಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಆರೋಗ್ಯದಲ್ಲೂ ಚೇತರಿಕೆ ಕಾಣುತ್ತಿದೆ’ ಎಂದು ಟ್ವೀಟ್ …

Read More »

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಕರ್ನಾಟಕ ಭವನದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ನವದೆಹಲಿಯ ಕರ್ನಾಟಕ ಭವನದಲ್ಲಿ ವಿವಿಧ ವೃಂದಗಳಲ್ಲಿ ಖಾಲಿ ಇರುವ ಗ್ರೂಪ್ ಸಿ ಮತ್ತು ಡಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಹೈದರಾಬಾದ್ ಕರ್ನಾಟಕ ವೃಂದಕ್ಕೆ 7, ಉಳಿಕೆ ಮೂಲ ವೃಂದದ 25 ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸಹಾಯಕ ವ್ಯವಸ್ಥಾಪಕರು, ಸ್ವಾಗತಕಾರರು, ಕಿಚನ್ ಮೇಟ್, ಪ್ಯೂನ್ ಕಂ ವಾಚ್ ಮೆನ್, ಗಾರ್ಡನರ್ ಕಂ ಸ್ವೀಪರ್ ಸೇರಿ ಒಟ್ಟು 32 ಹುದ್ದೆಗಳ ನೇಮಕಾತಿಗೆ …

Read More »

ಕಾರಿನ ಗಾಜು ಹೊಡೆದು 4 ಲಕ್ಷ ಹಣ ಕಳವು! ಈ ಕಾರು ಶಾಸಕರದ್ದೇ?

ರಾಯಚೂರು: ಶಾಸಕರ ಗುರುತಿನ ಚೀಟಿ ಅಂಟಿಸಿದ್ದ ಕಾರಿನ ಗ್ಲಾಸ್ ಹೊಡೆದು ಹಣ ಕಳ್ಳತನ ಮಾಡಿರುವ ಘಟನೆ ಮಾನ್ವಿಯ ಮಲ್ಲಿಕಾರ್ಜುನ ಚಿತ್ರಮಂದಿರ ಬಳಿ ಇಂದು ಸಂಭವಿಸಿದೆ. ಕೊಪ್ಪಳ ಜಿಲ್ಲೆ ಕನಕಗಿರಿಯ ಬಿಜೆಪಿ ಶಾಸಕ ಬಸವರಾಜ ದಡೇಸೂಗುರು ಅವರ ಗುರುತಿನ ಚೀಟಿ ಇದ್ದ ಕಾರಲ್ಲಿ 4 ಲಕ್ಷ ರೂಪಾಯಿ ನಗದು ಇತ್ತು. ಈ ಬಗ್ಗೆ ಮಾಹಿತಿ ಗೊತ್ತಿದ್ದ ದುಷ್ಕರ್ಮಿಗಳು ಕಾರಿನ ಗಾಜು ಹೊಡೆದು ಒಳಗಿದ್ದ ಹಣ ದೋಚಿ ಪರಾರಿಯಾಗಿದ್ದಾರೆ. ಈ ಕಾರು ಶಾಸಕರದ್ದಾ …

Read More »

ಯುವತಿಯ ಪ್ರಿಯತಮ ಎಸ್‌ಐಟಿ ಮುಂದೆ ಹಾಜರಾಗಿ ಸತ್ಯ ಬಾಯಿ ಬಿಟ್ಟಿದ್ದಾನೆ…

ಬೆಂಗಳೂರು: ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ರಾಸಲೀಲೆಯ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯಲ್ಲಿರುವ ಯುವತಿಯ ಪ್ರಿಯತಮನನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಎಸ್‌ಐಟಿ ತನಿಖೆ ವೇಳೆ ಯುವತಿಯ ಪ್ರಿಯತಮ ಎಸ್‌ಐಟಿ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದಾನೆ. ಯುವತಿ ತನ್ನ ಪ್ರಿಯಕರನಿಗೆ ಸಿಡಿಯ ಕಥೆ ಹೇಳದೆಯೇ ಮಾಹಾಮೊಸ ಮಾಡಿದ್ದಾಳೆ ಎಂದು ಎಸ್‌ಐಟಿ ತನಿಖಾಧಿಕಾರಿಗಳ ಮುಂದೆ ಯುವತಿ ಪ್ರಿಯತಮ ಸತ್ಯ ಬಾಯಿ ಬಿಟ್ಟಿದ್ದಾನೆ. ಸಚಿವರೊಬ್ಬರಿಗೆ ವಂಚನೆ ಮಾಡುತ್ತಿರೋ ವಿಚಾರ ಪ್ರಿಯತಮನಿಗೆ ಗೊತ್ತಿತ್ತಂತೆ. ಆದರೆ ರಾಸಲೀಲೆ ಸಿಡಿ …

Read More »

ಪ್ರಜ್ವಲ್ ರೇವಣ್ಣ ನಿವಾಸಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್

ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಬೆಂಬಲಿಗರು ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾಗಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಕುಟುಂಬದ ಆತಿಥ್ಯ ಸ್ವೀಕರಿಸಿದ್ದಾರೆ. ಬೆಂಗಳೂರಿನಿಂದ ಪ್ರಜ್ವಲ್ ಅವರೊಂದಿಗೆ ಆಗಮಿಸಿದ ದರ್ಶನ್ ಅವರನ್ನು ಜೆಡಿಎಸ್ ಬೆಂಬಲಿಗರು, ಅಭಿಮಾನಿಗಳು ಸ್ವಾಗತಿಸಿದ್ದಾರೆ. ದರ್ಶನ್ ಆಗಮನದ ಸುದ್ದಿ ತಿಳಿದ ಅಪಾರ ಸಂಖ್ಯೆಯ ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದಿದ್ದಾರೆ. ಪ್ರಜ್ವಲ್ ರೇವಣ್ಣ ಅವರೊಂದಿಗೆ 8 ವರ್ಷಗಳಿಂದ ಗೆಳೆತನವಿದೆ …

Read More »

ಸಿಡಿಯಲ್ಲಿರುವ ಧ್ವನಿ ಚಿಕ್ಕಮಗಳೂರು ಮೂಲದ ವ್ಯಕ್ತಿಯದ್ದಾಗಿದೆ ಎಂಬ ಶಂಕೆ?

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೆತ್ತಿಕೊಂಡಿರುವ ಎಸ್ ಐ ಟಿ ಯುವತಿ ಹಾಗೂ ಸಿಡಿ ಮಾಸ್ಟರ್ ಮೈಂಡ್ ಹುಡುಕಾಟದಲ್ಲಿ ನಿರತವಾಗಿದೆ. ಈ ನಡುವೆ ಸಿಡಿಯಲ್ಲಿರುವ ಧ್ವನಿ ಚಿಕ್ಕಮಗಳೂರು ಮೂಲದ ವ್ಯಕ್ತಿಯದ್ದಾಗಿದೆ ಎಂಬ ಶಂಕೆ ಮೂಡಿದೆ. ವ್ಯಕ್ತಿಯ ದ್ವನಿಗೂ ಸಿಡಿಯಲ್ಲಿರುವ ಧ್ವನಿನೂ ಸಾಮ್ಯತೆ ಇರುವುದರಿಂದ ಈಗಾಗಲೇ ಎಸ್ ಐ ಟಿ ವ್ಯಕ್ತಿಯ ಧ್ವನಿ ಸಂಗ್ರಹಿಸಿದ್ದು, ಧ್ವನಿ ಸ್ಯಾಂಪಲ್ ನ್ನು ಎಫ್‌ಎಸ್‌ಎಲ್ ಗೆ ಕಳುಹಿಸಲಾಗಿದೆ. ಇಂದು ವರದಿ ಬರುವ …

Read More »

ಶಕುನಿ ಮಾತು ಕೇಳಿ ಕುಮಾರಸ್ವಾಮಿ ಜೆಡಿಎಸ್ ನ್ನು ಸರ್ವನಾಶ ಮಾಡಲು ಹೊರಟಿದ್ದಾರೆ: ಜಿಟಿಡಿ ವಾಗ್ದಾಳಿ

ಮೈಸೂರು: ಜೆಡಿಎಸ್ ನಲ್ಲಿ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಶಕುನಿ, ಮಂಥರೆಯ ಮಾತು ಕೇಳಿ ಕುಮಾರಸ್ವಾಮಿ ಜೆಡಿಎಸ್ ನ್ನು ನಾಶ ಮಾಡಲು ಹೊರಟಿದ್ದಾರೆ ಎಂದು ಶಾಸಕ ಜಿ.ಟಿ. ದೇವೇಗೌಡ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಜಿ.ಟಿ.ಡಿ., ಮಹಾಭಾರತದಲ್ಲಿ ಶಕುನಿಯಿಂದ ಕೌರವರ ಸಂತತಿ ನಾಶವಾಯಿತು. ರಾಮಾಯಣದಲ್ಲಿ ಮಂಥರೆ ಮಾತು ಕೇಳಿ ಕೈಕೇಯಿ ರಾಮನನ್ನು ವನವಾಸಕ್ಕೆ ಕಳುಹಿಸಿದಳು. ಇದೀಗ ರಾಜಕೀಯದಲ್ಲಿ ಕುಮಾರಸ್ವಾಮಿ ಶಕುನಿ, ಮಂಥರೆ ಮಾತು ಕೇಳಿ ಜೆಡಿಎಸ್ ನ್ನು ಸರ್ವನಾಶ ಮಾಡಲು ಹೊರಟಿದ್ದಾರೆ ಎಂದರು. …

Read More »

ನಾನು ನಿಮ್ಮ ಖುರ್ಚಿಯಲ್ಲಿ ಕೂರುವ ಕಾಲ ದೂರವಿಲ್ಲ; ಸಿಎಂ ಕಾಲೆಳೆದ ಸಿದ್ದರಾಮಯ್ಯ

ಬೆಂಗಳೂರು: ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯದ ಇತಿಹಾಸದಲ್ಲೇ ಇಂತಹ ಕೆಟ್ಟ ಬಜೆಟ್ ನ್ನು ನೋಡಿರಲಿಲ್ಲ. ಬಜೆಟ್ ನಲ್ಲಿ ರೆವೆನ್ಯೂ, ಖರ್ಚು-ವೆಚ್ಚ ಸಮತೋಲನವಿರಬೇಕು ಆದರೆ ಈ ಬಾರಿ ಬಜೆಟ್ ವೆಚ್ಚವೇ ಅಧಿಕವಾಗಿದೆ ಎಂದು ಕಿಡಿಕಾರಿದರು. ಈ ರೀತಿ ಬಜೆಟ್ ನಿಂದ ಸರ್ಕಾರದ ಮೇಲೂ ಪರಿಣಾಮ ಬೀರುತ್ತೆ. ನಾವು ತೆಗೆದುಕೊಳ್ಳುವ ಸಾಲ ಆದಾಯದ ಶೇ.25ರ ಒಳಗಿರಬೇಕು. 2004-05ರಲ್ಲಿ ನಾವು ಸಮತೋಲನ ಕಾಯ್ದುಕೊಂಡೆವು. ಆಗ ನಾನು ಹಣಕಾಸು …

Read More »