ವಿಜಯಪುರ: ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಗೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಿವಮೊಗ್ಗದಿಂದ ವರ್ಚುವಲ್ ಕಾರ್ಯಕ್ರಮದ ಮೂಲಕ ಚಾಲನೆ ನೀಡಿದ್ದಾರೆ. ತಾಲೂಕಿನ ಬುರಣಾಪುರ ಮದಭಾವಿ ಗ್ರಾಮಗಳ ಬಳಿ 727 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣಗೊಳ್ಳುತ್ತಿದೆ. 220 ಕೋಟಿ ರೂ. ವೆಚ್ಚದಲ್ಲಿ ಎರಡು ಹಂತದಲ್ಲಿ ಕಾಮಾಗಾರಿ ನಡೆಯುತ್ತದೆ. ಮೊದಲ ಹಂತದಲ್ಲಿ 95 ಕೋಟಿ ರೂ. ವೆಚ್ಚದಲ್ಲಿ ಇಂದಿನಿಂದ (ಫೆಬ್ರವರಿ 15) ಕಾಮಗಾರಿ ಆರಂಭವಾಗುತ್ತದೆ. 2010ರಂದು ಬಿ.ಎಸ್. ಯಡಿಯೂರಪ್ಪ ವಿಮಾನ ನಿಲ್ದಾಣಕ್ಕೆ …
Read More »Daily Archives: ಫೆಬ್ರವರಿ 15, 2021
ನಮ್ಮ ಮೆಟ್ರೋ ರೈಲಿನಲ್ಲಿ ಮತ್ತೆ ನಗದು ಪಾವತಿ ವ್ಯವಸ್ಥೆಗೆ ಆಗ್ರಹ
ಬೆಂಗಳೂರು,ಫೆಬ್ರವರಿ 15:ಕೊರೊನಾ ಲಾಕ್‌ಡೌನ್‌ನಿಂದಾಗಿ ನಮ್ಮ ಮೆಟ್ರೋ ಸಂಚಾರವನ್ನು ಹಲವು ತಿಂಗಳುಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಇದೀಗ ಸೇವೆ ಪುನಾರಂಭಗೊಂಡಿದ್ದು, ಪ್ರತಿಯೊಬ್ಬರಿಗೂ ಕಾರ್ಡ್ ಪಡೆದು ಪ್ರಯಾಣಿಸುವುದು ಕಷ್ಟವಾಗಿರುವ ಹಿನ್ನೆಲೆಯಲ್ಲಿ ಮತ್ತೆ ಟೋಕನ್ ಹಾಗೂ ನಗದು ಪಾವತಿ ವ್ಯವಸ್ಥೆ ಜಾರಿಗೊಳಿಸಬೇಕು ಎನ್ನುವ ಆಗ್ರಹ ಕೇಳಿಬಂದಿದೆ. ಮೆಟ್ರೋ ರೈಲು ಸೇವೆ ಪಡೆಯಬೇಕಾದರೆ 50 ರೂ. ನೀಡಿ ಮೆಟ್ರೋ ಕಾರ್ಡ್ ಖರೀದಿಸಿದ ಬಳಿಕವಷ್ಟೇ ಸೇವೆ ಲಭ್ಯವಾಗಲಿದೆ.ಕಾರ್ಡ್ ಖರೀದಿ ವೇಳೆಯೂ ನಗದು ಸ್ವೀಕರಿಸುತ್ತಿಲ್ಲ, ಬದಲಾಗಿ ಕ್ರೆಡಿಟ್ ಮತ್ತು ಡೆಬಿಟ್ …
Read More »ವಾಯುಸೇನೆಗೂ ಕಾಲಿಟ್ಟ ಮುಧೋಳ ನಾಯಿಗಳು..!
ಬಾಗಲಕೋಟೆ: ರಾಜ್ಯದ ಪ್ರಸಿದ್ಧ ಮುಧೋಳ ನಾಯಿಗಳು ಈಗ ಭಾರತೀಯ ವಾಯುಸೇನೆಗೂ ಸೇರ್ಪಡೆಯಾಗಿದ್ದು ಈ ಮೂಲಕ ರಾಜ್ಯದ ಕೀರ್ತಿಯನ್ನು ಹೆಚ್ಚಳ ಮಾಡಿದೆ. ಭಾನುವಾರ ಎರಡು ಹೆಣ್ಣು ಸೇರಿದಂತೆ ನಾಲ್ಕು ಮುಧೋಳ ನಾಯಿಮರಿಗಳನ್ನು ಆಗ್ರಾ ವಿಮಾನ ನಿಲ್ದಾಣಕ್ಕೆ ಕರೆತರಲಾಯಿತು. ಇವುಗಳನ್ನು ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಕೆನಡಿ ಸಂಶೋಧನೆ ಮತ್ತು ಮಾಹಿತಿ ಕೇಂದ್ರದ (ಸಿಆರ್ ಐಸಿ) ಪರವಾಗಿ ಕರ್ನಾಟಕದ ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಅವರು ಶುಕ್ರವಾರ ಐಎಎಫ್ ಗೆ ಹಸ್ತಾಂತರಿಸಿದರು. ಮುಧೋಳ ದಮನಕಾರಿ ನಾಯಿಗಳು …
Read More »ವಾಟ್ಸಾಪ್, ಫೇಸ್‌ಬುಕ್‌ಗೆ ಸುಪ್ರೀಂ ಕೋರ್ಟ್‌ನಿಂದ ನೋಟಿಸ್ ಜಾರಿ
ನವದೆಹಲಿ: ತನ್ನ ಹೊಸ ಖಾಸಗಿತನ ನೀತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ವಾಟ್ಸಾಪ್ ಮತ್ತು ಅದರ ಮಾತೃ ಸಂಸ್ಥೆ ಫೇಸ್ ಬುಕ್ ಗೆ ನೋಟಿಸ್ ಜಾರಿ ಮಾಡಿದೆ. ಈ ಬಗ್ಗೆ ನಾಲ್ಕು ವಾರಗಳಲ್ಲಿ ಟೆಕ್ ದೈತ್ಯರಿಂದ ಪ್ರತಿಕ್ರಿಯೆ ನೀಡುವಂತೆ ತಿಳಿಸಿದೆ. ಭಾರತದಲ್ಲಿ ವಾಟ್ಸಾಪ್ ತನ್ನ ಹೊಸ ಗೌಪ್ಯತಾ ನೀತಿಯನ್ನು ಜಾರಿಗೆ ತರದಂತೆ ನಿರ್ಬಂಧ ಹೇರಬೇಕು ಮತ್ತು ಐರೋಪ್ಯ ಒಕ್ಕೂಟ ಪ್ರದೇಶದಲ್ಲಿ ಬಳಕೆದಾರರಿಗೆ ಅನ್ವಯವಾಗುವ ಗೌಪ್ಯತಾ ನೀತಿಯನ್ನು …
Read More »ಅನುದಾನಕ್ಕಾಗಿ ಆಗ್ರಹಿಸಿ ಕಲ್ಯಾಣ ಕರ್ನಾಟಕದ 1500 ಶಾಲೆಗಳು ಬಂದ್..!
ಬೆಳಗಾವಿ, ಫೆ.15- ಕಲ್ಯಾಣ ಕರ್ನಾಟಕ ಭಾಗದ ಅನುದಾನ ರಹಿತ ಶಾಲೆಗಳಿಗೆ ಅನುದಾನ ನೀಡಬೇಕೆಂದು ಆಗ್ರಹಿಸಿ 1500 ಶಾಲೆಗಳು ಇಂದು ಬಂದ್ ಮಾಡಿ ಪ್ರತಿಭಟನೆ ನಡೆಸಿವೆ. ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ, ವಿಜಯಪುರ ಸೇರಿದಂತೆ ಆರು ಜಿಲ್ಲೆಗಳ 1500 ಶಾಲೆಗಳು ಅನುದಾನಕ್ಕೆ ಆಗ್ರಹಿಸಿ ಇಂದು ಶಾಲಾ-ಕಾಲೇಜುಗಳನ್ನು ಬಂದ್ ಮಾಡಿ ಕಲ್ಯಾಣ ಕರ್ನಾಟಕ ಅನುದಾನ ರಹಿತ ಶಾಲೆಗಳ ಒಕ್ಕೂಟ ಪ್ರತಿಭಟನೆ ನಡೆಸಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದೆ. 2013-14ರಲ್ಲಿ …
Read More »ಷರತ್ತಿನೊಂದಿಗೆ ಬಿಎಂಟಿಸಿ ಸಿಬ್ಬಂದಿ ವೇತನ ಬಿಡುಗಡೆ
ಬೆಂಗಳೂರು, ಫೆ.15- ಬಿಎಂಟಿಸಿಯ ಅಧಿಕಾರಿ ಮತ್ತು ಸಿಬ್ಬಂದಿಗಳ ಡಿಸೆಂಬರ್ ಮತ್ತು ಜನವರಿ ತಿಂಗಳ ವೇತನಕ್ಕಾಗಿ ಸಾರಿಗೆ ಇಲಾಖೆ 86.69 ಕೋಟಿ ರೂ.ವನ್ನು ಷರತ್ತಿನೊಂದಿಗೆ ಬಿಡುಗಡೆ ಮಾಡಿ ಆದೇಶಿಸಿದೆ. ಪ್ರಸಕ್ತ ಸಾಲಿನಲ್ಲಿ ಯಾವುದೇ ಹೊಸ ಬಸ್ ಖರೀದಿ ಪ್ರಕ್ರಿಯೆ ಮಾಡುವಂತಿಲ್ಲ. ವಾಹನಗಳ ನಿರ್ವಹಣೆ ಮತ್ತು ಬಿಡಿ ಭಾಗಗಳಿಗೆ ಸಂಬಂಧಿಸಿದಂತೆ ಅತಿ ಅವಶ್ಯಕ ವೆಚ್ಚವನ್ನು ಮಾತ್ರ ಮಾಡಲು ಆದೇಶದಲ್ಲಿ ಸೂಚಿಸಲಾಗಿದೆ.ಕೋವಿಡ್ ಹಿನ್ನೆಲೆಯಲ್ಲಿ ಬಿಎಂಟಿಸಿಯ ಅಧಿಕಾರಿ ಮತ್ತು ಸಿಬ್ಬಂದಿ ವೇತನಕ್ಕಾಗಿ 2020ರ ಏಪ್ರಿಲ್‍ನಿಂದ ನವೆಂಬರ್‍ವರೆಗೆ …
Read More »ದಿಶಾ ರವಿ ಬಂಧನ ಖಂಡಿಸಿದ ದೆಹಲಿ ಸಿಎಂ ಕೇಜ್ರಿವಾಲ್
ನವದೆಹಲಿ, ಫೆ.15 (ಪಿಟಿಐ)- ಟೂಲ್‍ಕಿಟ್ ಡಾಕ್ಯುಮೆಂಟ್ ಪ್ರಕರಣದಲ್ಲಿ ಹವಾಮಾನ ಚಳವಳಿಗಾರ ದಿಶಾ ರವಿ ಅವರ ಬಂಧನವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಖಂಡಿಸಿದ್ದಾರೆ. ರವಿ ಅವರ ಮೇಲಿನ ನಡೆ ನಮ್ಮ ದೇಶದ ಪ್ರಜಾಪ್ರಭುತ್ವದ ಮೇಲೆ ಹಿಂದೆಂದು ಕಂಡಿರದ ಅಭೂತಪೂರ್ವ ದಾಳಿಯಾಗಿದೆ ಎಂದರು. ರೈತರ ಪ್ರತಿಭಟನೆಗೆ ಸಂಬಂಸಿದ ಟೂಲ್‍ಕಿಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಕ್ಕಾಗಿ 21 ವರ್ಷದ ಚಳವಳಿಗಾರನನ್ನು ಶನಿವಾರ ಬೆಂಗಳೂರಿನಿಂದ ಬಂಸಲಾಗಿದೆ. ದಿಶಾ ರವಿ ಬಂಧನವು ಪ್ರಜಾಪ್ರಭುತ್ವದ ಮೇಲೆ ಅಭೂತಪೂರ್ವ …
Read More »ಉಮೇಶ್ ಕತ್ತಿ ಹೇಳಿಕೆಗೆ ಇದೀಗ ಸ್ವಪಕ್ಷೀಯ ನಾಯಕರೇ ವಿರೋಧ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಟಿವಿ, ಫ್ರಿಡ್ಜ್, ಬೈಕ್ ಇದ್ದವರು ಬಿಪಿಎಲ್ ಕಾರ್ಡ್ ಹಿಂದಿರುಗಿಸಿ ಎಂಬ ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಇದೀಗ ಸ್ವಪಕ್ಷೀಯ ನಾಯಕರೇ ವಿರೋಧ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಶಾಸಕ ಸೋಮಶೇಖರ್ ರೆಡ್ಡಿ, ಸಚಿವ ಉಮೇಶ್ ಕತ್ತಿ ತಮ್ಮ ಸ್ವಂತ ನಿರ್ಧಾರವನ್ನು ಜನರ ಮೇಲೆ ಹೇರಬಾರದು. ಟಿವಿ, ಫ್ರಿಡ್ಜ್ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇರುತ್ತೆ. ಇನ್ನು ಬೈಕ್ ನ್ನು ಈಗ ಲೋನ್ ಮೇಲೂ ತೆಗೆದುಕೊಳ್ಳುತ್ತಾರೆ. ಸರ್ಕಾರದ ಯೋಜನೆಗಳು ಜನರಿಗೆ ತಲುಪಲು ಟಿವಿ …
Read More »ಅಡುಗೆ ಸಿಲಿಂಡರ್ ದರದಲ್ಲಿಯೂ ಭಾರೀ ಏರಿಕೆಯಾಗಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ
ನವದೆಹಲಿ: ಪೆಟ್ರೋಲ್, ಡೀಸೆಲ್ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ಇದೀಗ ಅಡುಗೆ ಸಿಲಿಂಡರ್ ದರದಲ್ಲಿಯೂ ಭಾರೀ ಏರಿಕೆಯಾಗಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿದೆ. ಸಬ್ಸಿಡಿ ರಹಿತ ಸಿಲಿಂಡರ್ ದರ 50 ರೂಪಾಯಿ ಏರಿಕೆಯಾಗಿದೆ. ಎಲ್ ಪಿಜಿ ಸಿಲಿಂಡರ್ ದರ ಬೆಂಗಳೂರಿನಲ್ಲಿ ಈವರೆಗೆ 722ರೂ ಇತ್ತು. ಇಂದು 772 ರೂಗೆ ಏರಿಕೆಯಾಗಿದೆ. ಕಳೆದ ಡಿಸೆಂಬರ್ ನಿಂದ ಇಲ್ಲಿಯವರೆಗೆ ಮೂರು ಬಾರಿ ಅಡುಗೆ ಅನಿಲ ದರ ಹೆಚ್ಚಳ ಮಾಡಲಾಗಿದೆ. ಫೆ.4ರಂದು ಸಿಲಿಂಡರ್ …
Read More »ವೀರರಾಣಿ ಚೆನ್ನಮ್ಮ ಹಾಗೂ ರಾಯಣ್ಣನ ಪುತಳಿ ಪ್ರತಿಷ್ಠಾಪಿಸಿವವಂತೆವೀರ ಕನ್ನಡಿಗರ ಘರ್ಜನೆ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಮಹಾರಾಜರ ಪುತ್ತಳಿ ಜೊತೆಗೆ ಬಾಬಾಸಾಹೇಬ್ ಅಂಬೇಡ್ಕರ್, ಮಹರ್ಷಿ ವಾಲ್ಮೀಕಿ, ಬಸವೇಶ್ವರ ಪುತಳಿನ್ನು ನಿರ್ಮಿಸಲು ಸರಕಾರ ಈಗಾಗಲೇ ಸಮ್ಮತಿ ನೀಡಿದೆ.. ಅದರ ಜೊತೆ ವೀರರಾಣಿ ಕಿತ್ತೂರು ಚೆನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಸಹ ಮಣಗುತ್ತಿ ಗ್ರಾಮದಲ್ಲಿ ಪ್ರತಿಷ್ಠಾಪಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ವೀರ ಕನ್ನಡಿಗರ ಘರ್ಜನೆ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
Read More »