Breaking News

ಯುವ ದಸರಾ 2026: ಅ.17ರಂದು ʻಧುರಂದರ್ 2ʼ ಜಾಸ್ಮಿನ್ ಸ್ಯಾಂಡ್ಲಾಸ್ ಸಂಗೀತ ರಸದೌತಣ

Spread the love

ಮೈಸೂರು: ಮೈಸೂರಿನಲ್ಲಿ ನಡೆಯಲಿರುವ ಯುವ ದಸರಾ-2026ಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಅ.17ರಂದು ದುರಂಧರ್‌ ಗಾಯಕಿ ಜಾಸ್ಮಿನ್ ಸ್ಯಾಂಡ್ಲಾಸ್ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ

ಅಕ್ಟೋಬರ್ 13ರಿಂದ 17ರವರೆಗೆ ಐದು ದಿನಗಳ ಕಾಲ ಯುವ ದಸರಾ ನಡೆಯಲಿದ್ದು, ಪ್ರತಿದಿನವೂ ಖ್ಯಾತ ಕಲಾವಿದರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಈ ಬಾರಿಯ ಯುವ ದಸರಾ ಕಾರ್ಯಕ್ರಮದಲ್ಲಿ ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ನ ಹಲವು ಖ್ಯಾತ ಗಾಯಕರು ಮತ್ತು ಕಲಾವಿದರು ಭಾಗವಹಿಸಲಿದ್ದಾರೆ.

ಅಕ್ಟೋಬರ್ 13ರಂದು ಬಿ. ಅಜನೀಶ್ ಲೋಕನಾಥ್ ಮತ್ತು ತಂಡ, ಅಕ್ಟೋಬರ್ 14ರಂದು ಶಂಕರ್–ಎಹ್ಸಾನ್–ಲಾಯ್, ಅಕ್ಟೋಬರ್ 15ರಂದು ಸಿದ್ ಶ್ರೀರಾಮ್ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಅಕ್ಟೋಬರ್ 16ರಂದು ಸ್ಯಾಂಡಲ್‌ವುಡ್ ನೈಟ್ಸ್ ಆಯೋಜಿಸಲಾಗಿದ್ದು, ಶಿವರಾಜ್‌ಕುಮಾರ್, ರಚಿತಾ ರಾಮ್ ಸೇರಿದಂತೆ ಹಲವು ಕಲಾವಿದರು ಹಾಗೂ ಗಾಯಕರು ಭಾಗವಹಿಸಲಿದ್ದಾರೆ.

ಅ.17ರಂದು ಜಾಸ್ಮಿನ್ ಸ್ಯಾಂಡ್ಲಾಸ್
ಯುವ ದಸರಾ ಕಾರ್ಯಕ್ರಮದ ಕೊನೆಯ ದಿನವಾದ ಅಕ್ಟೋಬರ್ 17ರಂದು ಖ್ಯಾತ ಗಾಯಕಿ ಜಾಸ್ಮಿನ್ ಸ್ಯಾಂಡ್ಲಾಸ್ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಪೋಸ್ಟರ್‌ನಲ್ಲಿ ಉಲ್ಲೇಖಿಸಿರುವಂತೆ, ಸಂಜೆ 7:30ರಿಂದ ರಾತ್ರಿ 10:30ರವರೆಗೆ ಅವರ ಸಂಗೀತ ಕಾರ್ಯಕ್ರಮ ನಡೆಯಲಿದೆ.

‘ಧುರಂಧರ್ 2’ ಸಿನಿಮಾದ ‘ಜಾಯೇ ಸಜನಾ’ ಹಾಡಿನ ಮೂಲಕ ಗಮನ ಸೆಳೆದಿರುವ ಜಾಸ್ಮಿನ್ ಸ್ಯಾಂಡ್ಲಾಸ್ ಇದೀಗ ಮೈಸೂರಿನ ಯುವ ದಸರಾ ವೇದಿಕೆಯಲ್ಲಿ ಲೈವ್ ಪರ್ಫಾರ್ಮೆನ್ಸ್ ನೀಡಲಿದ್ದಾರೆ. ಇದರಿಂದ ಯುವ ದಸರಾ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ಬರಲಿದೆ.

ಯುವ ದಸರಾ ಕಾರ್ಯಕ್ರಮಗಳು ಮೈಸೂರಿನ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಸ್ಥಾನದ ಸಮೀಪದ 100 ಎಕರೆ ಪ್ರದೇಶದಲ್ಲಿ ಅಕ್ಟೋಬರ್ 13ರಿಂದ 17ರವರೆಗೆ ಸಂಜೆ 5:30ರಿಂದ ರಾತ್ರಿ 10:30ರವರೆಗೆ ನಡೆಯಲಿವೆ.


Spread the love

About Laxminews 24x7

Check Also

ಮೈಸೂರು ದಸರಾ – ಯತೀಂದ್ರ ಅಬ್ಬರಕ್ಕೆ ಡಿಕೆಶಿ ಬ್ರೇಕ್‌!

Spread the loveಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಆರಂಭದ ಹೊಸ್ತಿಲಲ್ಲೇ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಂತೆ ಕಾಣುತ್ತಿದೆ. ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ