Breaking News

ಎಂಜಿನಿಯರಿಂಗ್‌ ಪರೀಕ್ಷೆ ಮುಗಿಸಿದ 5 ನಿಮಿಷದಲ್ಲಿ ಫಲಿತಾಂಶ – VTU ಸಾಧನೆ

Spread the love

ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಅಧೀನದ ರಾಜ್ಯದ ವಿವಿಧ ಎಂಜನಿಯರಿಂಗ್ ‌ಕಾಲೇಜುಗಳಲ್ಲಿ 6 ನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ಸುಮಾರು 60 ಸಾವಿರ ವಿದ್ಯಾರ್ಥಿಗಳು ಇಂದು ಸಂಜೆ 5:30ಕ್ಕೆ ಕೊನೆಯ ಪ್ರಾಯೋಗಿಕ ಪರೀಕ್ಷೆ ಮುಗಿಸಿ ಹೊರ ಬರುವಷ್ಟರಲ್ಲಿ ಅಂದರೆ 5 ನಿಮಿಷದಲ್ಲಿ ವಿಟಿಯು ಫಲಿತಾಂಶ ಪ್ರಕಟಿಸಿ ದಾಖಲೆ ಸೃಷ್ಟಿಸಿದೆ.

ಕಳೆದ 15 ದಿನಗಳಿಂದ ನಡೆದ ಲಿಖಿತ ಪರೀಕ್ಷೆಯ ಡಿಜಿಟಲ್ ಮೌಲ್ಯಮಾಪನ ಒಂದು ವಾರಕಾಲ ಪೂರ್ಣಗೊಳಿಸಿ ಅಂಕಗಳನ್ನು ಅಪ್ಲೋಡ್ ಮಾಡಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆಯಾ ಪ್ರಾಯೋಗಿಕ ಪರೀಕ್ಷೆ ಮುಕ್ತಾಯದ ನಂತರ ತಾಂತ್ರಿಕ ಸಹಾಯದಿಂದ ಅಂಕಗಳನ್ನು ಭರ್ತಿ ಮಾಡ

ಇಂದು ಕೊನೆಯ ಪ್ರಾಯೋಗಿಕ ಪರೀಕ್ಷೆ ಮುಗಿದ ಐದು ನಿಮಿಷದಲ್ಲಿ ಆಯಾ ಕಾಲೇಜು ಕೇಂದ್ರಗಳಿಂದ ಅಂಕಗಳ ಅಪ್ಲೋಡ್ ಮಾಡಿ ತಕ್ಷಣ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಮೊಬೈಲ್‌ಳಿಗೆ ಫಲಿತಾಂಶದ ಎಸ್‌ಎಂಎಸ್‌ ಮಾಹಿತಿಯನ್ನು ರವಾನಿಸುವುದರ ಮೂಲಕ ವಿಟಿಯು ತನ್ನ ತಾಂತ್ರಿಕತೆಯನ್ನು ಸಾಬೀತುಪಡಿಸಿದೆ.

ಈ ಬಗ್ಗೆ ಮಾಹಿತಿ ನೀಡಿದ ಕುಲಸಚಿವ ಡಾ.ಪ್ರಸಾದ ಬಿ. ರಾಂಪುರೆ, ಆಧುನಿಕ ತಾಂತ್ರಿಕತೆಯ ಸಹಕಾರ, ವಿಶ್ವವಿದ್ಯಾಲಯದ ಕುಲಪತಿ ಪ್ರೊಫೆಸರ್ ಎಸ್. ವಿದ್ಯಾಶಂಕರ ಅವರ ಕ್ರಿಯಾಶೀಲತೆ ಮತ್ತು ಎಲ್ಲ ಸಿಬ್ಬಂದಿ ವರ್ಗದ ಸಾಮೂಹಿಕ ಜವಾಬ್ದಾರಿ ನಿರ್ವಹಣೆಯಿಂದಾಗಿ ವಿದ್ಯಾರ್ಥಿಗಳಿಗೆ ತ್ವರಿತವಾಗಿ ಫಲಿತಾಂಶ ನೀಡುವುದರ ಮೂಲಕ ವಿಟಿಯು ಐತಿಹಾಸಿಕ ದಾಖಲೆ ನಿರ್ಮಿಸಿದೆ. ವಿದ್ಯಾರ್ಥಿಗಳ ಮುಂದಿನ ಓದು ಅಥವಾ ಭವಿಷ್ಯ ನಿರ್ಮಾಣಕ್ಕೆ ಅನುಕೂಲತೆಯ ದೃಷ್ಟಿಯಿಂದ ತಾಂತ್ರಿಕ ಸಾಧನ ಬಳಸಿ ಫಲಿತಾಂಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

80ನೇ ಸ್ವಾತಂತ್ರ‍್ಯ ದಿನಾಚರಣೆ – ಮಾಣೆಕ್ ಷಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಸಿಎಂ ಡಿಕೆಶಿ

Spread the loveಬೆಂಗಳೂರು: ಇಂದು ದೇಶದೆಲ್ಲೆಡೆ 80ನೇ ಸ್ವಾತಂತ್ರ‍್ಯ ದಿನಾಚರಣೆಯ ಸಂಭ್ರಮ. ಇದರ ಅಂಗವಾಗಿ ಬೆಂಗಳೂರಿನ ಮಾಣೆಕ್ ಷಾ ಮೈದಾನದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ