Breaking News

ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ಗೆ ಟ್ವಿಸ್ಟ್ – ಗೆಳೆಯನಿಂದಲೇ ನಟಿಗೆ ಬಿಗ್ ಶಾಕ್

Spread the love

ಬೆಂಗಳೂರು: ನಟಿ ರನ್ಯಾ ರಾವ್  ಅವರ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಗೆಳೆಯನೇ ನಟಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ,

ಡಿಆರ್‌ಐ ಅಧಿಕಾರಿಗಳ ಶೋಕಾಸ್ ನೋಟಿಸ್‌ಗೆ ಬೆದರಿದ ಸ್ಮಗ್ಲರ್ ಕೋರ್ಟ್ ಮುಂದೆ ತಪ್ಪೊಪ್ಪಿಗೆ ನೆಪದಲ್ಲಿ ಅವಾಂತರ ಸೃಷ್ಟಿಸಿದ್ದಾನೆ. ಈ ಮೂಲಕ ರನ್ಯಾ ರಾವ್‌ಗೆ ಗೆಳೆಯನಿಂದಲೇ ಬಿಗ್ ಶಾಕ್ ಎದುರಾಗಿದೆ. ನಾನು ರನ್ಯಾ ರಾವ್‌ಗೆ ಚಿನ್ನದ ಬಿಸ್ಕೆಟ್ ನೀಡಿದ್ದು ನಿಜ. ಆದರೆ ನಾನು ಚಿನ್ನದ ಬಿಸ್ಕೆಟ್ ನೀಡಿದ್ದು ದುಬೈನಲ್ಲಿ. ಹೀಗಾಗಿ ದುಬೈ ಕಾನೂನು ನನಗೆ ಅನ್ವಯ ಆಗಬೇಕು, ಭಾರತದ ಕಾನೂನಲ್ಲ ಮತ್ತು ನಾನು ಭಾರತದಲ್ಲಿ ಯಾವುದೇ ಅವ್ಯವಹಾರ ಮಾಡಿಲ್ಲ ಹಾಗೂ ಚಿನ್ನ ಮಾರಾಟ ಮಾಡುವ ಪ್ರಯತ್ನವನ್ನು ಮಾಡಿಲ್ಲ ಎಂದು ಹೇಳಿದ್ದಾನೆ.

ನಾನು ಕೊಟ್ಟ ಚಿನ್ನವನ್ನು ರನ್ಯಾ ಕಳ್ಳಸಾಗಾಣಿಕೆ ಮಾಡಿದ್ದಾಳೆ ಮತ್ತು ಆಕೆಗೆ ಮಾತ್ರ ಭಾರತದ ಕಾನೂನು ಅನ್ವಯ ಆಗಬೇಕು. ಹೀಗಾಗಿ ನನ್ನನ್ನು ಪ್ರಕರಣದಿಂದ ಮುಕ್ತಗೊಳಿಸಬೇಕೆಂದು ಮನವಿ ಮಾಡಿದ್ದಾನೆ. ಈ ಮೂಲಕ ರನ್ಯಾ ರಾವ್ ಗೆಳೆಯನೇ ಕೊಳ್ಳಿ ಇಟ್ಟಿದ್ದಾನೆ.


Spread the love

About Laxminews 24x7

Check Also

ರಾಜ್ಯದಲ್ಲಿ ಬರ – 177 ತಾಲೂಕುಗಳಲ್ಲಿ 46,324 ಕೋಟಿ ಬೆಳೆ ನಷ್ಟ , 7,142 ಕೋಟಿ ನೆರವಿಗೆ ಮನವಿ

Spread the loveಬೆಂಗಳೂರು: ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನ ಬರಪೀಡಿತ  ಎಂದು ಘೋಷಿಸಲಾಗಿದ್ದು, ಬರ ಪರಿಸ್ಥಿತಿ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ