Breaking News

ರಾಜ್ಯದ ಹೋಟೆಲ್‌ ಮಾಲೀಕರಿಗೆ ಗುಡ್‌ ನ್ಯೂಸ್‌ – ಹೆಚ್ಚುವರಿ 1 ಸಾವಿರ ಕಮರ್ಷಿಯಲ್ ಸಿಲಿಂಡರ್ ಪೂರೈಕೆ: ಮುನಿಯಪ್ಪ

Spread the love

ಬೆಂಗಳೂರು: ಹೋಟೆಲ್ ಮಾಲೀಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ರಾಜ್ಯದಲ್ಲಿ ಹೆಚ್ಚುವರಿಯಾಗಿ 1 ಸಾವಿರ ಕಮರ್ಷಿಯಲ್ ಸಿಲಿಂಡರ್  ಪೂರೈಕೆ ಮಾಡಲಾಗುವುದು ಎಂದು ಸಚಿವ ಕೆ.ಹೆಚ್.ಮುನಿಯಪ್ಪ  ತಿಳಿಸಿದರು.

ಗ್ಯಾಸ್ ಕಂಪನಿಗಳು ಮತ್ತು ಹೋಟೆಲ್ ಸಂಘದ ಜೊತೆ ಸಚಿವ ಮುನಿಯಪ್ಪ ಇಂದು ಸಭೆ ನಡೆಸಿದರು. ರಾಜ್ಯದಲ್ಲಿ ಹೆಚ್ಚುವರಿಯಾಗಿ ಕಮರ್ಷಿಯಲ್ ಸಿಲಿಂಡರ್ ಪೂರೈಕೆ ಮಾಡಲಾಗುವುದು. ಹೆಚ್ಚುವರಿಯಾಗಿ 1,000 ಸಿಲಿಂಡರ್ ಸೇರಿಸಿ ಒಟ್ಟು 10,000 ಸಿಲಿಂಡರ್ ಪೂರೈಕೆ ಆಗಲಿದೆ. ಕಮರ್ಷಿಯಲ್ ಗ್ಯಾಸ್ ಬಳಕೆದಾರರು ಕಡ್ಡಾಯವಾಗಿ ರಿಜಿಸ್ಟರ್ ಮಾಡಿಸಬೇಕು. ಗೇಲ್ ಕಂಪನಿಗೆ ರಿಜಿಸ್ಟರ್ ಮಾಡಿಕೊಳ್ಳುವುದು ಕಡ್ಡಾಯ. ಒಂದು ವಾರದೊಳಗೆ ರಿಜಿಸ್ಟರ್ ಮಾಡಬೇಕು. ಅಕ್ರಮ ತಡೆಯಲು ಈ ಕ್ರಮಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದರು. 10 ಸಾವಿರ ಸಿಲಿಂಡರ್‌ನಲ್ಲಿ ಕಮರ್ಷಿಯಲ್ ಗ್ಯಾಸ್ ವ್ಯಾಪ್ತಿಗೆ ಬರುವ ಎಲ್ಲಾ ವಲಯಕ್ಕೆ ಹಂಚಿಕೆ ಆಗುತ್ತೆ. ಅದರಲ್ಲಿ ಹೋಟೆಲ್, ಇಂದಿರಾ ಕ್ಯಾಂಟೀನ್, ಪಿಜಿ ಇನ್ನಿತರ ವಲಯಕ್ಕೂ ಹಂಚಿಕೆಯಾಗಲಿದೆ. ಮುಂದಿನ ಸೋಮವಾರ ಮತ್ತೆ ಹೋಟೆಲ್ ಮಾಲೀಕರ ಜತೆ ಸಭೆ ಮಾಡಲಾಗುವುದು. ಕಳೆದ ವಾರ ಒಂದು ಸಾವಿರ ಸಿಲಿಂಡರ್ ಹೋಟೆಲ್‌ಗೆ ನೀಡಲಾಗುತ್ತಿತ್ತು. ಸದ್ಯ ಹೋಟೆಲ್, ಡಾಬಾ, ಹಾಸ್ಟೆಲ್, ಇಂದಿರಾ ಕ್ಯಾಂಟೀನ್‌ಗೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಹೋಟೆಲ್ ಮಾಲೀಕರ ವಿದ್ಯುತ್ ಬಿಲ್ ಕಡಿಮೆ ಮಾಡುವ ವಿಚಾರದ ಬಗ್ಗೆ ಮಾತನಾಡಿ, ಅದು ನನ್ನ ಗಮನಕ್ಕೆ ಬಂದಿಲ್ಲ. ಸಿಎಂಗೆ ಪತ್ರ ಬರೆದಿದ್ದಾರೆ. ಸಿಎಂ ಗಮನಕ್ಕೆ ತರಲಾಗುವುದು ಎಂದು ಸಚಿವರು ತಿಳಿಸಿದರು. ಪ್ರತಿ ಯೂನಿಟ್‌ಗೆ 2 ರೂ. ಕಡಿಮೆ ಮಾಡಿ ಅಂತ ಹೋಟೆಲ್ ಮಾಲೀಕರು ಮನವಿ ಮಾಡಿದ್ದರು.

ಇನ್ಮುಂದೆ ಕಮರ್ಷಿಯಲ್ ಸಿಲಿಂಡರ್ ಬಳಕೆ ಮಾಡುವವರಿಗೆ ನೋಂದಣಿ ಕಡ್ಡಾಯ. ಗೇಲ್ ಕಂಪನಿ ಜತೆ ನೋಂದಣಿ ಮಾಡಬೇಕು. ನೋಂದಣಿ ಮಾಡಿಕೊಳ್ಳಲಿಲ್ಲ ಅಂದ್ರೆ ಕಮರ್ಷಿಯಲ್ ಗ್ಯಾಸ್ ಸಿಗಲ್ಲ. ಯಾರು ಎಷ್ಟು ಬಳಕೆ ಮಾಡ್ತಿದ್ದಾರೆ ಎನ್ನುವುದರ ಮಾಹಿತಿ ಸಿಗಲಿದೆ. ಮುಂದಿನ ಶನಿವಾರದೊಳಗೆ ನೋಂದಣಿ ಕಡ್ಡಾಯ ಎಂದು ತಿಳಿಸಿದರು.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ