Breaking News

94 ದಿನಗಳಿಂದ ಮಗುವಿಗೆ ಸೂಕ್ತ ಚಿಕಿತ್ಸೆ ನೀಡಲಾಗ್ತಿದೆ, ಮಗು ಕಂಡೀಷನ್‌ನಲ್ಲಿ ಸುಧಾರಣೆ ಕಂಡಿದೆ: ಕ್ಲೌಡ್‌ನೈನ್ ಆಸ್ಪತ್ರೆ ಸ್ಪಷ್ಟನೆ

Spread the love

ಬೆಂಗಳೂರು: ವೈದ್ಯರ ನಿರ್ಲಕ್ಷ್ಯದಿಂದ ಒಂದೂವರೆ ವರ್ಷದ ಮಗು ಕೋಮಾಗೆ ಹೋಗಿದೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲೌಡ್‌ನೈನ್ ಆಸ್ಪತ್ರೆ  ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದೆ. ಆಸ್ಪತ್ರೆ ವಿರುದ್ಧ ಕೇಳಿಬಂದಿರುವ ಆರೋಪಗಳು ಸುಳ್ಳು. 94 ದಿನಗಳಿಂದ ಮಗುವಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಹಿಂದಿಗಿಂತ ಮಗುವಿನ ಕಂಡೀಷನ್‌ನಲ್ಲಿ ಸುಧಾರಣೆ ಕಂಡುಬಂದಿದೆ. ಎಂದು ಆಸ್ಪತ್ರೆಯ ಮೆಡಿಕಲ್ ಹೆಡ್ ನಾಗ ನಿಶ್ಚಲ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕ್ಲೌಡ್‌ನೈನ್ ಆಸ್ಪತ್ರೆಯ ರೀಜಿನಲ್ ಡೈರೆಕ್ಟರ್ ಶ್ರೀನಾಥ್, ಮೆಡಿಕಲ್ ಹೆಡ್ ನಾಗ ನಿಶ್ಚಯ ಮತ್ತು ಅನಸ್ತೇಶಿಯಾ ಸ್ಪೆಷಲಿಸ್ಟ್ ನಂದಕುಮಾರ್ ಉಪಸ್ಥಿತಿತರಿದ್ದರು.

ಮೊದಲು ಆಸ್ಪತ್ರೆಯ ರೀಜಿನಲ್ ಡೈರೆಕ್ಟರ್ ಶ್ರೀನಾಥ್ ಮಾತನಾಡಿ, ಇತ್ತಿಚೆಗೆ ಮೀಡಿಯಾದಲ್ಲಿ ಬೇಬಿ ಶಯಾನಾ ಬಗ್ಗೆ ಸಾಕಷ್ಟು ವಿವಾದ ಆಗ್ತಾ ಇದೆ. ವಾಸ್ತಾವಾಂಶ ತಿಳಿಸಬೇಕು ಅಂತಾ ನಾವು ಬಂದಿದ್ದೇವೆ. ಈ ಘಟನೆಗೆ ಸಂಬಂಧಿಸಿದಂತೆ ಅಪಪ್ರಚಾರ ನಡೆಯುತ್ತಾ ಇದೆ. ವಾಸ್ತಾವಾಂಶ ತಿಳಿಸಿಕೊಡುತ್ತೇವೆ ಎಂದರು.

ನಂತರ ಮೆಡಿಕಲ್ ಹೆಡ್ ನಾಗ ನಿಶ್ಚಲ್ ಮಾತನಾಡಿ, ಮಗುವಿಗೆ ಟ್ರೀಟ್‌ಮೆಂಟ್ ಕೊಡ್ತಿಲ್ಲ ಅನ್ನೋದೆಲ್ಲ ಸುಳ್ಳು. 94 ದಿನಗಳಿಂದ ಸೂಕ್ತ ಚಿಕಿತ್ಸೆ ಕೊಡಲಾಗುತ್ತಿದೆ. ಸದ್ಯಕ್ಕೆ ಮಗು ಹಿಂದಿನ ಕಂಡೀಷನ್‌ಗಿಂತ ಈಗ ಸುಧಾರಣೆ ಕಂಡಿದೆ. ಆರಂಭದಲ್ಲಿ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ವೆಂಟಿಲೇಟರ್ ಸಪೋರ್ಟ್‌ನಲ್ಲಿತ್ತು. ಈಗ ಮಗು ವೆಂಟಿಲೇಟರ್‌ನಿಂದ ಹೊರಗೆ ಬಂದಿದೆ. ಆಕ್ಸಿಜನ್ ಅವಶ್ಯಕತೆಯಿಲ್ಲದೇ ಸರಿಯಾಗಿ ಉಸಿರಾಡುತ್ತಿದೆ. ಮಗುವಿನ ಕಂಡೀಷನ್‌ನಲ್ಲಿ ಸುಧಾರಣೆಯಾಗಿದೆ. ನ್ಯೋರೋಲಾಜಿಕಲ್ ಇಂಪ್ರೂವ್‌ಮೆಂಟ್ ಇನ್ನೂ ಸಮಯ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.

ಮಗುವಿಗೆ ಅನಾಸ್ತೇಶಿಯಾ ಕೊಟ್ಟಿರುವವರಿಗೆ ಅನುಭವ ಇಲ್ಲ ಅನ್ನುವುದು ಸುಳ್ಳು. 14 ವರ್ಷ ಅನುಭವ ಇರುವ ಡಾಕ್ಟರ್ ಅನಾಸ್ತೇಶಿಯಾ ಕೊಟ್ಟಿರುವುದು. ಅವರಿಗೆ ಅನುಭವ ಇಲ್ಲ ಅನ್ನೋದು ಸುಳ್ಳು ಎಂದು ಆರೋಪಗಳನ್ನು ವೈದ್ಯರು ತಳ್ಳಿಹಾಕಿದ್ದಾರೆ.

ಪ್ರಕರಣ ಸಂಬಂಧ ತಜ್ಞರ ವರದಿ ಕುರಿತು ಮಾತನಾಡಿ, ತಜ್ಞರು ನಮ್ಮ ಬಳಿ ಪಡೆದ ಮಾಹಿತಿಯನ್ನು ಪೂರ್ಣವಾಗಿ ಉಲ್ಲೇಖಿಸಿಲ್ಲ. ಪ್ರಕರಣ ಸಂಬಂಧ ನಾವು ಕೊಟ್ಟಿರುವ ಮಾಹಿತಿಯನ್ನು ಅವರು ಬರೆದಿಲ್ಲ. ಯಾಕೆ ವರದಿಯಲ್ಲಿ ಕೊಟ್ಟಿಲ್ಲ ಅಂತ ಗೊತ್ತಿಲ್ಲ. ಅದನ್ನು ಅವರೇ ಹೇಳಬೇಕು. ನಾವು ಸಂಪೂರ್ಣ ಸಹಕಾರ ಕೊಟ್ಟಿದ್ದೇವೆ. ಆದರೆ, ವರದಿಯಲ್ಲಿ ನಮ್ಮ ಮಾಹಿತಿ ಇಲ್ಲವೇ ಇಲ್ಲ. ನಮ್ಮ ನಿರ್ಲಕ್ಷ್ಯ ಇಲ್ಲ ಎಂದು ಹೇಳಿದರು.

ಇದು ಮೆಡಿಕಲ್ ನೆಗ್ಲಿಜೆನ್ಸಿಯಿಂದ ಆಗಿಲ್ಲ. None ಕಾಂಪ್ಲಿಕೇಷನ್ ಅನಾಸ್ತೇಶಿಯಾ ಕಾಂಪ್ಲಿಕೇಷನ್‌ನಿಂದ ಆಗಿರೋದು. ಆಸ್ಪಿರೇಷನ್‌ನಿಂದ ಆಗಿರೋ ಸಮಸ್ಯೆ ಇದು ಎಂದು ಸ್ಪಷ್ಟಪಡಿಸಿದರು.

ಆಸ್ಪತ್ರೆಗೆ 70 ರಿಂದ 80 ಜನ ಬಂದು ಗಲಾಟೆ ಮಾಡಿದ್ರು. ಅದಕ್ಕೆ ಎಫ್‌ಐಆರ್ ಆಗಿದೆ. ನಮ್ಮ ಮೇಲೆ ಹಲ್ಲೆ ಮಾಡೋದಕ್ಕೆ ಮುಂದಾದ್ರು. ನಮ್ಮ ಭದ್ರತೆಗೋಸ್ಕರ ನಾವು ಪೊಲೀಸ್ ಕಂಪ್ಲೆಂಡ್ ಕೊಟ್ಟು ಎಫ್‌ಐಆರ್ ಮಾಡಿದೆವು. ನಮ್ಮ ಬಳಿ ಬಂದು ನೇರವಾಗಿ ಮಾತಾಡಿದ್ರೆ ನಾವು ಯಾಕೆ ಎಫ್‌ಐಆರ್ ಮಾಡಿಸುತ್ತಾ ಇದ್ದೆವು. ಅಲ್ಲಿ ಬಂದು ಗಲಾಟೆ ಮಾಡಿದಾಗ ರೋಗಿಗಳಿಗೆ ತೊಂದರೆ ಆಗಿದೆ. ಹಾಗಾಗಿ, ಪೊಲೀಸ್ ಕಂಪ್ಲೆಂಟ್ ಕೊಟ್ಟಿದ್ದೇವೆ ಎಂದು ತಿಳಿಸಿದರು.


Spread the love

About Laxminews 24x7

Check Also

12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ 65ರ ವೃದ್ಧ

Spread the loveಕಾರವಾರ: ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕೆಯನ್ನು ಗರ್ಭಿಣಿಯನ್ನಾಗಿಸಿದ ಆಘಾತಕಾರಿ ಪ್ರಕರಣ ಮುಂಡಗೋಡು ತಾಲೂಕಿನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ