Breaking News

ವಿದ್ಯಾರ್ಥಿಗಳು ಸೇವಾ ಮನೋಭಾವ ರೂಢಿಸಿಕೊಳ್ಳಿ

Spread the love

ನೇಸರಗಿ: ವಿದ್ಯಾರ್ಥಿಗಳು ಸೇವಾ ಮನೋಭಾವ ರೂಢಿಸಿಕೊಳ್ಳುವ ಮೂಲಕ ಸಮಾಜಮುಖಿ ಕಾರ್ಯ ಕೈಗೊಳ್ಳಬೇಕು ಎಂದು ಪ್ರೊ.ಮಹಾಂತೇಶ ಅವ್ವಕ್ಕನವರ ಹೇಳಿದರು.

ಸಮೀಪದ ಮತ್ತಿಕೊಪ್ಪ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನೇಸರಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರ ಉದ್ಘಾಟಿಸಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳು ನಿರಂತರ ಅಧ್ಯಯನ ಹಾಗೂ ಶಿಕ್ಷಕರ ಮಾರ್ಗದರ್ಶನ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ಪ್ರಾಚಾರ್ಯ ಡಾ.ಕೀರನಾಯ್ಕ ಗಡ್ಡಿಗೌಡರ ಮಾತನಾಡಿದರು. ಯೋಜನಾಧಿಕಾರಿ ಎಸ್​.ಎಸ್​.ಚವತ್ರಿಮಠ, ಗ್ರಾಪಂ ಮಾಜಿ ಅಧ್ಯೆ ಶಾಂತವ್ವ ದೇಯಣ್ಣವರ, ಮುಖ್ಯಶಿಕ ಸಿ.ಎಸ್​.ಗದಗ, ಎಸ್​ಡಿಎಂಸಿ ಅಧ್ಯ ಬಸವರಾಜ ಶೇಗುಣಸಿ, ಉಪಾಧ್ಯೆ ಭಾರತಿ ಮೋರೆ, ಎನ್​ಎಸ್​ಎಸ್​ ಶಿಬಿರಾಧಿಕಾರಿ ಪ್ರೊ.ಸುಖದೇವಾನಂದ ಚವತ್ರಿಮಠ, ಪ್ರೊ.ಮಂಜುನಾಥ ಕಂಬಳಿ, ಡಾ.ಮೀನಾ ಮಡಿವಾಳರ, ಅಶೋಕ ಗುಡದರಿ, ಸುರೇಖಾ ಶೆಟ್ಟಿ ಇತರರಿದ್ದರು.


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ