Breaking News

ಆ ವಿಧಿಯನ್ನ ಶಪಿಸಬೇಕಾ? ಹೆತ್ತವರನ್ನ ಬೈಬೇಕಾ ಗೊತ್ತಾಗ್ತಿಲ್ಲಖಾಸಗಿ ಶಾಲಾ ಬಸ್ಸಿನ ಮುಂಬದಿ ಚಕ್ರಕ್ಕೆ ಸಿಲುಕಿ ಬಾಲಕಿ ಸ್ಥಳದಲ್ಲಿಯೇ ಪ್ರಾಣಬಿಟ್ಟಿದೆ.

Spread the love

ಆ ವಿಧಿಯನ್ನ ಶಪಿಸಬೇಕಾ? ಹೆತ್ತವರನ್ನ ಬೈಬೇಕಾ ಗೊತ್ತಾಗ್ತಿಲ್ಲ😭
ಎಷ್ಟು ಮುದ್ದಾದ ಮಗು ಅರೆ ಕ್ಷಣದ ಮುಂದೆ ಮನೆ ತುಂಬ ನಲಿದಾಡುತ್ತಿತ್ತು. ಇನ್ನೊಂದು ಕ್ಷಣದಲ್ಲಿ ಆ ಕಂಡ ಇಲ್ಲ ಅಂದ್ರೆ ಆ ಜೀವಗಳು ಅದ್ಹೇಗೆ ಸಹಿಸಿಕೊಳ್ಳುತ್ತೆ ಹೇಳಿ 💔
ಅಲ್ಲಿ ಆಗಿದ್ದಿಷ್ಟು
#ವಿಜಯಪುರ ನಗರದ ಕೈಗಾರಿಕೆ ಪ್ರದೇಶದ ಪದಂ ನಗರದಲ್ಲಿ ಶಾಲಾ ಬಸ್ ನಡಿ ಸಿಲುಕಿ 3 ವರ್ಷದ ಮಗು ಪ್ರಾಣಬಿಟ್ಟಿದೆ. 3 ವರ್ಷದ ಶಿರ್ಷಾ ಸುಹಾಸ ವಾಡಿ, ಇಹ ಲೋಕ ತ್ಯಜಿಸಿದ ಕಂದಮ್ಮ.
ಶಾಲೆಗೆ ಹೋಗಿದ್ದ ತನ್ನ ಅಣ್ಣ, ಶಾಲಾ ಬಸ್ ನಲ್ಲಿ ವಾಪಸ್ ಬಂದಿದ್ದಾನೆ. ಅಣ್ಣ ಬಂದ ಖುಷಿಯಲ್ಲಿ ಮನೆ ಒಳಗಿನಿಂದ ಪುಟಾಣಿ ಕಂದಮ್ಮ ಹೊರಗೆ ಓಡಿ ಬಂದಿದೆ. ಆದ್ರೆ ಅದೇ ಬಸ್, ಬಾಲಕಿ ಪಾಲಿಗೆ ಯಮನಂತಾಗಿಬಿಟ್ಟಿದೆ. ಖಾಸಗಿ ಶಾಲಾ ಬಸ್ಸಿನ ಮುಂಬದಿ ಚಕ್ರಕ್ಕೆ ಸಿಲುಕಿ ಬಾಲಕಿ ಸ್ಥಳದಲ್ಲಿಯೇ ಪ್ರಾಣಬಿಟ್ಟಿದೆ.
ಎಂತಾ ಘೋರ ದುರಂತ ನೋಡಿ. ಆ ಭಗವಂತ ಹೆತ್ತವರಿಗೆ ಧೈರ್ಯ ಕೊಡಲಿ. ಕಂದಮ್ಮನ ಆತ್ಮಕ್ಕೆ ಶಾಂತಿ ಕೊಡಲಿ💐💐

Spread the love

About Laxminews 24x7

Check Also

ಭೆಂಡಿಗೇರಿ ಗ್ರಾಮಕ್ಕೆ ಹೆಚ್ಚುವರಿ ಬಸ್‌ಗೆ ಆಗ್ರಹಿಸಿ ಬಸ್ ತಡೆದು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ

Spread the love ಭೆಂಡಿಗೇರಿ ಗ್ರಾಮಕ್ಕೆ ಹೆಚ್ಚುವರಿ ಬಸ್‌ಗೆ ಆಗ್ರಹಿಸಿ ಬಸ್ ತಡೆದು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ ಬೆಳಗಾವಿ ಜಿಲ್ಲೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ