Breaking News

ಗೇ ಜೊತೆ ಡೇಟಿಂಗ್.. ಹನಿಟ್ರ್ಯಾಪ್ ಜಾಲ.. ಬಲೆಗೆ ಬಿದ್ದ ಖತರ್ನಾಕ್ ಗಳು!

Spread the love

ಗೇ ಜೊತೆ ಡೇಟಿಂಗ್.. ಹನಿಟ್ರ್ಯಾಪ್ ಜಾಲ.. ಬಲೆಗೆ ಬಿದ್ದ ಖತರ್ನಾಕ್ ಗಳು!
ಸಲಿಂಗ ಸಂಬಂಧದ ಆಮಿಷ ಒಡ್ಡಿ ಯುವಕರನ್ನು ಟಾರ್ಗೆಟ್ ಮಾಡುತ್ತಿದ್ದ ಖತರ್ನಾಕ್ ದರೋಡೆಕೋರರ ಜಾಲವೊಂದನ್ನು #ಬೆಂಗಳೂರು ಹೊರವಲಯದ #ಜಿಗಣಿ ಪೊಲೀಸರು ಭೇದಿಸಿದ್ದಾರೆ. ಡೇಟಿಂಗ್ ಆ್ಯಪ್‌ಗಳ ಮೂಲಕ ಯುವಕರನ್ನು ಸೆಳೆದು, ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ಬೆದರಿಸಿ ದರೋಡೆ ಮಾಡುತ್ತಿದ್ದರು.
#ಆನೇಕಲ್ ತಾಲೂಕಿನ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹುದೊಂದು ಬೆಚ್ಚಿಬೀಳಿಸುವ ಜಾಲ ಬೆಳಕಿಗೆ ಬಂದಿದೆ. #ಗೇ_ಡೇಟಿಂಗ್ ಆ್ಯಪ್‌ಗಳಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸುತ್ತಿದ್ದ ಈ ಗ್ಯಾಂಗ್, ಯುವಕರನ್ನು ಸಂಪರ್ಕಿಸಿ ಕೆಲವು ದಿನಗಳ ಕಾಲ ಆತ್ಮೀಯವಾಗಿ ಮಾತನಾಡುತ್ತಿತ್ತು. ಅವರ ವಿಶ್ವಾಸ ಗಳಿಸಿದ ಬಳಿಕ, ಸಲಿಂಗ ಸಂಬಂಧದ ಆಮಿಷವೊಡ್ಡಿ ಆನೇಕಲ್ ಸುತ್ತಮುತ್ತಲಿನ ನಿರ್ಜನ ಪ್ರದೇಶಗಳಿಗೆ ಕರೆಸಿಕೊಳ್ಳುತ್ತಿತ್ತು.
ಯುವಕರು ಸ್ಥಳಕ್ಕೆ ತಲುಪುತ್ತಿದ್ದಂತೆ ಘಟನಾ ಸ್ಥಳದಲ್ಲೇ ಕಾಯುತ್ತಿದ್ದ ಖದೀಮರ ತಂಡ, ಅವರ ಮೇಲೆ ಹಲ್ಲೆ ನಡೆಸಿ, ಬೆದರಿಸಿ, ಬೆತ್ತಲೆಗೊಳಿಸಿ ಅವರ ಬಳಿಯಿದ್ದ ಹಣ ಹಾಗೂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗುತ್ತಿತ್ತು. ಇತ್ತೀಚೆಗೆ ಈ ರೀತಿಯಾಗಿ ಮೋಸಹೋಗಿ ಹಣ ಹಾಗೂ ಒಡವೆ ಕಳೆದುಕೊಂಡ ಯುವಕನೊಬ್ಬ ಧೈರ್ಯ ಮಾಡಿ ಜಿಗಣಿ ಪೊಲೀಸ್ ಠಾಣೆಗೆ ದೂರು ನೀಡಿದ್ದ.
ದೂರು ದಾಖಲಿಸಿಕೊಂಡ ಜಿಗಣಿ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆನೇಕಲ್ ಪಟ್ಟಣದ ವಿಶಾಲ್ (18), ಅಜಯ್ (19), ಸೂರ್ಯ (19) ಹಾಗೂ ಸಂಜಯ್ (22) ಬಂಧಿತ ಪ್ರಮುಖ ಆರೋಪಿಗಳಾಗಿದ್ದು, ಇವರೊಂದಿಗೆ ಭಾಗಿಯಾಗಿದ್ದ ಇಬ್ಬರು ಅಪ್ರಾಪ್ತರನ್ನು ಬಾಲ ನ್ಯಾಯ ಮಂಡಳಿಗೆ (JJB) ಹಾಜರುಪಡಿಸಲಾಗಿದೆ.
#ಆನ್‌ಲೈನ್_ಡೇಟಿಂಗ್ ಆ್ಯಪ್‌ಗಳನ್ನು ಬಳಸುವಾಗ ಸಾರ್ವಜನಿಕರು ಎಷ್ಟರಮಟ್ಟಿಗೆ ಎಚ್ಚರಿಕೆಯಿಂದ ಇರಬೇಕು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ನಕಲಿ ಪ್ರೊಫೈಲ್‌ಗಳ ಮೂಲಕ ಯುವಕರ ವಿಶ್ವಾಸಗಳಿಸಿ, ನಿರ್ಜನ ಪ್ರದೇಶಕ್ಕೆ ಕರೆಸಿ ದರೋಡೆ ಮಾಡುತ್ತಿದ್ದ ಈ 6 ಜನರ ಗ್ಯಾಂಗ್‌ ಅನ್ನು ಜಿಗಣಿ ಪೊಲೀಸರು ಕಂಬಿ ಎಣಿಸುವಂತೆ ಮಾಡಿದ್ದಾರೆ. ಮುಜುಗರದಿಂದ ಹೆದರಿ ಹಲವರು ದೂರು ನೀಡದೇ ಇರುವುದನ್ನೇ ಬಂಡವಾಳ ಮಾಡಿಕೊಂಡಿದ್ದ ಈ ಖದೀಮರ ಆಟಕ್ಕೆ ಈಗ ಬ್ರೇಕ್ ಬಿದ್ದಿದೆ.

Spread the love

About Laxminews 24x7

Check Also

ಚಿಕ್ಕಬಾಗೇವಾಡಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಶಕ್ತಿ ಸಂಘದ ನೂತನ ಶಾಖೆ ಉದ್ಘಾಟನೆ

Spread the love ಚಿಕ್ಕಬಾಗೇವಾಡಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಶಕ್ತಿ ಸಂಘದ ನೂತನ ಶಾಖೆ ಉದ್ಘಾಟನೆ ‘ಜೈ ಭೀಮ್, ಜೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ