Breaking News

3 ಲಕ್ಷ ಲಂಚ ಪಡೆಯುವಾಗ ʻಲೋಕಾʼ ದಾಳಿ – ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಅಧಿಕಾರಿ

Spread the love

ರಾಯಚೂರು: ಭೂ ಪರಿವರ್ತನೆಗೆ 3.5 ಲಕ್ಷ ರೂ. ಲಂಚ  ಪಡೆಯುತ್ತಿದ್ದ ಮಾನ್ವಿ ನಗರ ಯೋಜನಾ ಪ್ರಾಧಿಕಾರ ಸಹಾಯಕ ನಿರ್ದೇಶಕ ಕಚೇರಿಯ ಪ್ರಭಾರ ನಗರ ಯೋಜನಾ ಸದಸ್ಯ ಕಾರ್ಯದರ್ಶಿಯನ್ನು ಲೋಕಾಯುಕ್ತ  ಪೊಲೀಸರು ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದಾರೆ.

ಯಾದಗಿರಿ  ಹಾಗೂ ಮಾನ್ವಿ ಎರಡು ಕಡೆ ಶರಣಪ್ಪ ಕಾರ್ಯನಿರ್ವಹಿಸುತ್ತಿದ್ದಾರೆ. ಎನ್‌ಎ ಭೂಮಿಯನ್ನ ಕಮರ್ಷಿಯಲ್ ಭೂಮಿಗೆ ಬದಲಾವಣೆ ಮಾಡಲು 3.5 ಲಕ್ಷ ರೂ. ಲಂಚಕ್ಕೆ ಅವರು ಬೇಡಿಕೆ ಇಟ್ಟಿದ್ದರು. ಲೇಔಟ್‌ನ ಕೆಲ ಭಾಗವನ್ನ ಕಮರ್ಷಿಯಲ್ ಮಾಡಲು ಲಂಚ ಕೇಳಿದ್ದ ಹಿನ್ನೆಲೆ ಭೂ ಮಾಲೀಕ ಸುಧಾಕರ್ ಲೋಕಾಯುಕ್ತರಿಗೆ ದೂರು ನೀಡಿದ್ದರು.

ಭೂ ಮಾಲೀಕನಿಂದ 3 ಲಕ್ಷ ರೂ. ಲಂಚ ಪಡೆಯುವಾಗ ಚಾಲಕ ಸಂತೋಷ ಹಾಗೂ ಅಧಿಕಾರಿ ಶರಣಪ್ಪ ಇಬ್ಬರು ಲೋಕಾ ಬಲೆಗೆ ಬಿದ್ದಿದ್ದಾರೆ. ಯಾದಗಿರಿ ಕಚೇರಿಯಲ್ಲಿ ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.

ಯಾದಗಿರಿಗೆ ಬಂದು ಹಣ ಕೊಡುವಂತೆ ಅಧಿಕಾರಿ ಒತ್ತಾಯಿಸಿದ್ದ. ಸಿಕ್ಕಿಬಿದ್ದ ಅಧಿಕಾರಿ ಹಾಗೂ ಚಾಲಕನನ್ನ ವಶಕ್ಕೆ ಪಡೆದು ರಾಯಚೂರು ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.


Spread the love

About Laxminews 24x7

Check Also

ಬಿಜೆಪಿ ಹಿರಿಯ ನಾಯಕ ಎಲ್‌.ಕೆ ಅಡ್ವಾಣಿ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

Spread the loveನವದೆಹಲಿ: ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರ ಆರೋಗ್ಯದಲ್ಲಿ ಶುಕ್ರವಾರ ತಡರಾತ್ರಿ ಸಮಸ್ಯೆ ಕಾಣಿಸಿಕೊಂಡಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ