Breaking News

ಸೌಜನ್ಯ ಕೇಸ್: SITಯಿಂದ ನನ್ನ ಕೈಬಿಡಿ ಅಂತ ಎಎಸ್‌ಪಿ ಪತ್ರ

Spread the love

ಬೆಂಗಳೂರು: ಸೌಜನ್ಯ ಕೊಲೆ  ಪ್ರಕರಣದ ಮರುತನಿಖೆಗೂ ಮುನ್ನ ಹಿನ್ನಡೆಯಾಗಿದೆ. ಪ್ರಕರಣದ ತನಿಖೆಗೆ ರಚನೆಯಾದ ಎಸ್‌ಐಟಿ  ತಂಡದಿಂದ ನನ್ನ ಹೆಸರು ಕೈಬಿಡುವಂತೆ ಎಎಸ್‌ಪಿ ವೆಂಕಟೇಶ್ ಪ್ರಸನ್ನ ಪತ್ರ ಬರೆದಿದ್ದಾರೆ.

ಸೌಜನ್ಯ ಪ್ರಕರಣ ಮರುತನಿಖೆಗೆ ಎಸ್‌ಐಟಿ ನೇಮಕ ಮಾಡಲಾಗಿದೆ. ಎಸ್‌ಐಟಿ ತಂಡಕ್ಕೆ ಮತ್ತಷ್ಟು ಅಧಿಕಾರಿ, ಸಿಬ್ಬಂದಿ ನಿಯೋಜಿಸಲಾಗಿದೆ. ತನಿಖಾ ಸಹಾಯಕರಾಗಿ 16 ಮಂದಿ ನೇಮಕಗೊಂಡಿದ್ದಾರೆ. ಮಂಗಳೂರು ನಗರ ಸಿಸಿಬಿ ಎಸಿಪಿ ಮನೋಜ್ ಕುಮಾರ್ ನಾಯಕ್, ಬೆಂಗಳೂರು ಸಿಸಿಬಿ ಎಸಿಪಿ ರಾಮಚಂದ್ರ.ಬಿ, ಐಡಿ ಇನ್ಸ್ಪೆಕ್ಟರ್ ದೀಪಕ್, ಇನ್ಸ್ಪೆಕ್ಟರ್ ಮೋಹನ್ ಡಿ ಪಾಟೀಲ್, ಮಡಿವಾಳ ಸಂಚಾರ ಠಾಣೆಯ ಇನ್ಸ್ಪೆಕ್ಟರ್ ಈಶ್ವರಿ, ಕೋಣಾಜೆ ಠಾಣೆಯ ಪಿಎಸ್‌ಐ ಪುನೀತ್ ಗಾವಂಕರ್, ದಕ್ಷಿಣ ಸಂಚಾರಿ ಠಾಣೆಯ ಪಿಎಸ್‌ಐ ಪ್ರದೀಪ್, ಕಂಕನಾಡಿ ಠಾಣೆಯ ಪಿಎಸ್‌ಐ ಅನಿತಾ ನಿಕಂ ಸೇರಿದಂತೆ 16 ಸಿಬ್ಬಂದಿ ನೇಮಕವಾಗಿದೆ.

ಸೌಜನ್ಯ ಪ್ರಕರಣದ ಮರುತನಿಖೆಗೆ ಎಸ್‌ಐಟಿ ರಚಿಸಲು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಸುಪ್ರೀಂ ಆದೇಶದ ಬಳಿಕ ಸರ್ಕಾರ ಎಸ್‌ಐಟಿ ರಚಿಸಿದೆ. ಐಜಿಪಿ ಎನ್.ಶಶಿಕುಮಾರ್ ನೇತೃತ್ವದಲ್ಲಿ ಎಸ್‌ಐಟಿ ರಚನೆಯಾಗಿದೆ. ಐಪಿಎಸ್ ಅಧಿಕಾರಿಗಳಾದ ಸಿ.ಹೆಚ್.ಸುಧೀರ್ ಕುಮಾರ್ ರೆಡ್ಡಿ, ನಿಶಾ ಜೇಮ್ಸ್, ಲೋಕೇಶ್ ಜಗಲಸಾರ್ ಹಾಗೂ ಎಎಸ್‌ಪಿ ವೆಂಕಟೇಶ್ ಪ್ರಸನ್ನ ಅವರನ್ನೊಳಗೊಂಡ ಎಸ್‌ಐಟಿ ರಚಿಸಲಾಗಿದೆ. ತನಿಖಾ ತಂಡದ ಸಹಾಯಕರಾಗಿ 16 ಮಂದಿ ನೇಮಕಗೊಳಿಸಿ ಡಿಜಿಪಿ ಡಾ. ಎಂ.ಎ.ಸಲೀಂ ಅವರಿಂದ ಆದೇಶ ಹೊರಡಿಸಿದ್ದಾರೆ.

ಎಸ್‌ಐಟಿಯಲ್ಲಿರುವ ಎಎಸ್‌ಪಿ ವೆಂಕಟೇಶ್ ಪ್ರಸನ್ನ ಅವರು ತಮ್ಮನ್ನು ತಂಡದಿಂದ ಕೈಬಿಡುವಂತೆ ಎಸ್‌ಐಟಿ ಮುಖ್ಯಸ್ಥರಿಗೆ, ಡಿಜಿಪಿಗೆ ಪತ್ರ ಬರೆದಿದ್ದಾರೆ. ಈ ಹಿಂದೆ ನಾನು ಧರ್ಮಸ್ಥಳದಲ್ಲಿ ಕೆಲಸ ಮಾಡಿದ್ದೇನೆ. ಹೀಗಾಗಿ, ತನಿಖಾ ತಂಡದಿಂದ ನನ್ನ ಹೆಸರು ಕೈಬಿಡುವಂತೆ ಕೋರಿ ಪತ್ರ ಬರೆದಿದ್ದಾರೆ.


Spread the love

About Laxminews 24x7

Check Also

ಬಸವನ ಬಾಗೇವಾಡಿಯಲ್ಲಿ 3.5 ತೀವ್ರತೆಯ ಭೂಕಂಪನ

Spread the loveವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ  ತಾಲೂಕಿನಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 3.5 ತೀವ್ರತೆ ದಾಖಲಾಗಿದೆ. ರಾಷ್ಟ್ರೀಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ