Breaking News

ಕುಡಿಯಲು ಹಣ ಕೊಡದಿದ್ದಕ್ಕೆ ತಾಯಿಯನ್ನೇ ಕೊಂದ ಮಗ – ಇತ್ತೀಚೆಗಷ್ಟೇ ಜೈಲಿಂದ ಬಂದಿದ್ದ ಹಂತಕ

Spread the love

ದಾವಣಗೆರೆ: ಮದ್ಯ ಸೇವಿಸಲು ಹಣ ಕೊಡಲು ನಿರಾಕರಿಸಿದ ಹೆತ್ತ ತಾಯಿಯನ್ನೇ  ಪಾಪಿ ಮಗನೊಬ್ಬ ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಚನ್ನಗಿರಿ ತಾಲೂಕಿನ ದೊಡ್ಡಘಟ್ಟ ಗ್ರಾಮದಲ್ಲಿ ನಡೆದಿದೆ.

ಬುಳ್ಳಮ್ಮ(70) ಮಗನಿಂದಲೇ ಕೊಲೆಯಾದ ದುರ್ದೈವಿ. ಹನುಮಂತಪ್ಪ (35) ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಹತ್ತು ಮಕ್ಕಳ ತಾಯಿಯಾದ ಬುಳ್ಳಮ್ಮ ಗಂಡ ತೀರಿಕೊಂಡ ಮೇಲೆ ಹತ್ತು ಮಕ್ಕಳನ್ನು ಕಷ್ಟಪಟ್ಟು ಬೆಳೆಸಿದ್ದಳು. 9 ಜನ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟು ಮಗನ ಮೇಲೆ ಅಪಾರ ಪ್ರೀತಿ ಹೊಂದಿದ್ದಳು. ಆದರೆ ಪಾಪಿ ಮಗ ಹನುಮಂತ ಕ್ರಿಮಿನಲ್ ಕೇಸ್‌ಗಳಲ್ಲಿ ಭಾಗಿಯಾಗಿ ತಾಯಿಯನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ.

ಈ ಹಿಂದೆ ಹಣದ ವಿಚಾರವಾಗಿ ಸ್ನೇಹಿತನನ್ನೇ ಹನುಮಂತ ಕೊಲೆ ಮಾಡಿ, 7 ವರ್ಷ ಜೈಲುವಾಸ ಅನುಭವಿಸಿದ್ದ. ಮಗ ಜೈಲಿಗೆ ಹೋಗಿದ್ದರಿಂದ ನೊಂದ ಬುಳ್ಳಮ್ಮ ಹಾಸಿಗೆ ಹಿಡಿದಿದ್ದಳು. ಉಳಿದ 9 ಜನ ಹೆಣ್ಣು ಮಕ್ಕಳು ಹತ್ತು ಲಕ್ಷ ರೂ. ಖರ್ಚು ಮಾಡಿ ಜಾಮೀನಿನ ಮೇಲೆ ಅರೋಪಿಯನ್ನು ಜೈಲಿನಿಂದ ಕಳೆದ ಮೂರು ತಿಂಗಳ ಹಿಂದೆ ಹೊರಗೆ ತಂದಿದ್ದರು.

ಕೊಲೆಯಾದ ಬುಳ್ಳಮ್ಮ ಮಗಳ ಮನೆಯಲ್ಲಿ ವಾಸವಾಗಿದ್ದಳು. ಹನುಮಂತ ದಾವಣಗೆರೆಯ ಹೋಟೆಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ, ಕಳೆದ ಎರಡು ದಿನಗಳ ಹಿಂದೆ ಮಗನನ್ನು ನೋಡಬೇಕು ಎಂದು ತಾಯಿಯೇ ಹನುಮಂತನನ್ನು ಮನೆಗೆ ಕರೆಸಿಕೊಂಡಿದ್ದಳು. ಕಳೆದ ರಾತ್ರಿ ಅಕ್ಕನ ಮನೆಯಲ್ಲಿ ಚಿಕನ್ ಸಾರು ರೊಟ್ಟಿ ತಿಂದು ತಾಯಿಯನ್ನು ಮಾತನಾಡಿಸಿಕೊಂಡು ಬರುವುದಾಗಿ ಹೇಳಿ, ಹೋಗಿದ್ದ.

ಬುಳ್ಳಮ್ಮ ಎರಡು ದಿನಗಳ ಹಿಂದೆ 6,000 ರೂ. ಹಣವನ್ನು ಬಿಡಿಸಿಕೊಂಡು ತನ್ನ ಬಳಿ ಇಟ್ಟುಕೊಂಡಿದ್ದ ವಿಚಾರ ತಿಳಿದಿದ್ದ ಮಗ, ವಿಪರೀತವಾಗಿ ಮದ್ಯಪಾನ ಮಾಡಿ ಹಣವನ್ನು ಕೇಳಿದ್ದ. ಕುಡಿದು ಹಾಳು ಮಾಡುತ್ತಾನೆ ಎಂದು ಹನುಮಂತನಿಗೆ ಹಣ ಕೊಡಲು ತಾಯಿ ನಿರಾಕರಿಸಿದ್ದು, ಕೋಪಗೊಂಡ ಹನುಮಂತ ದೊಣ್ಣೆಯಿಂದ ತಾಯಿ ತಲೆಗೆ ಹೊಡೆದು, ಕೊಲೆಗೈದು ಬೆಡ್ ಶೀಟ್‌ನಲ್ಲಿ ಮುಚ್ಚಿಹಾಕಿದ್ದ. ತಾಯಿಯನ್ನು ನೋಡಿಕೊಂಡು ಬರೋಕೆ ಹೋದ ಹನುಮಂತ ಇನ್ನೂ ಬಂದಿಲ್ಲ ಎಂದು ಆತನ ಅಕ್ಕ ಶಾರದಮ್ಮ ಹೋಗಿ ನೋಡಿದಾಗ ಪ್ರಕರಣ ಬಯಲಿಗೆ ಬಂದಿದೆ.

ಕೂಡಲೇ ಗ್ರಾಮಸ್ಥರನ್ನು ಕರೆಸಿ ಆತನನ್ನು ಹಿಡಿದು, ಪೊಲೀಸರಿಗೆ ಒಪ್ಪಿಸಲಾಗಿದೆ. ಸ್ಥಳಕ್ಕೆ ಬಸವಪಟ್ಟಣ ಪೊಲೀಸ್ ಠಾಣೆಯ ಸಿಪಿಐ ಮಲ್ಲಮ್ಮ ಚೌಬೇ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love

About Laxminews 24x7

Check Also

ಕೆರೆಗೆ ಬಿದ್ದಿದ್ದ ಹೋರಿ ರಕ್ಷಿಸಲು ಹೋಗಿ ಯುವಕ ಸಾವು

Spread the loveಶಿವಮೊಗ್ಗ: ಕೆರೆಗೆ ಬಿದ್ದು ಒದ್ದಾಡುತ್ತಿದ್ದ ಹೋರಿ ರಕ್ಷಿಸಲು ಹೋಗಿ ಯುವಕನೊಬ್ಬ ಕೆಸರಿನಲ್ಲಿ ಸಿಲುಕಿ ಸಾವನ್ನಪ್ಪಿದ ಘಟನೆ ಶಿಕಾರಿಪುರ  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ