ಬೆಂಗಳೂರು: ವಿಶೇಷ ಸ್ಟ್ರೇ ವೇಕೆನ್ಸಿ ಮುಂದುವರಿದ ಸುತ್ತಿನ ವೈದ್ಯಕೀಯ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ.
ಉಳಿದಿದ್ದ 47 ವೈದ್ಯಕೀಯ ಸೀಟುಗಳ ಪೈಕಿ 20 ಸೀಟು ಈ ಸುತ್ತಿನಲ್ಲಿ ಹಂಚಿಕೆಯಾಗಿವೆ. ಇನ್ನೂ 27 ಸೀಟು ಹಾಗೆಯೇ ಉಳಿದಿವೆ. ಸೀಟು ಹಂಚಿಕೆಯಾದವರು ಉಳಿಕೆ ಶುಲ್ಕ ಕಟ್ಟಿ ನ.14ರೊಳಗೆ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಎಂಎಸ್ಸಿ ನರ್ಸಿಂಗ್: ಇಚ್ಛೆ ದಾಖಲಿಸಲು ನ.14 ಕೊನೆ ದಿನ:
ಎಂಎಸ್ಸಿ ನರ್ಸಿಂಗ್ ಕೋರ್ಸ್ ಪ್ರವೇಶಕ್ಕೆ ಇದುವರೆಗೂ ಯಾವುದೇ ಸೀಟು ಹಂಚಿಕೆಯಾಗದ ಸೇವಾನಿರತರು ಹಾಗೂ ಸೇವಾ ನಿರತರಲ್ಲದವರು ನ.14ರಂದು ಮಧ್ಯಾಹ್ನ 2 ಗಂಟೆಯೊಳಗೆ ಆಪ್ಷನ್ಸ್ ದಾಖಲಿಸಬೇಕು. ಸಂಜೆ 6 ನಂತರ ಫಲಿತಾಂಶ ಪ್ರಕಟಿಸಲಾಗುತ್ತದೆ. ನ.16ರೊಳಗೆ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕು ಎಂದು ತಿಳಿಸಿದ್ದಾರೆ.
Laxmi News 24×7