Breaking News

ಹಾರಂಗಿ ಹಿನ್ನೀರಿನಲ್ಲಿ ಬೋಟ್ ದುರಂತ: ಗುಜರಾತ್ ಮೂಲದ ದಂಪತಿ ಸಾವು – ಇಬ್ಬರು ಮಕ್ಕಳು ಪಾರು

Spread the love

ಮಡಿಕೇರಿ: ಪ್ರವಾಸಿಗರ ನೆಚ್ಚಿನ ತಾಣವಾದ ಕೊಡಗು ಜಿಲ್ಲೆಯ ಹಾರಂಗಿ ಹಿನ್ನೀರಿನಲ್ಲಿ  ಬೋಟ್ ಅವಘಡವೊಂದು ಸಂಭವಿಸಿದ್ದು, ಗುಜರಾತ್ ಮೂಲದ ದಂಪತಿ  ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.  ದಂಪತಿಯ ಜೊತೆಗಿದ್ದ ಇಬ್ಬರು ಮಕ್ಕಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೃತರನ್ನು ಧರ್ಮೇಶ್ (50) ಹಾಗೂ ನಿಮ್ಮಿ (48) ಎಂದು ಗುರುತಿಸಲಾಗಿದೆ. ಕುಶಾಲನಗರ ಸಮೀಪದ ಹಾರಂಗಿ ಅಣೆಕಟ್ಟೆಯ ಆನೆಕಾಡು ಬಳಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಅಡ್ವೆಂಚರ್ ವಾಟರ್ ಸ್ಪೋರ್ಟ್ಸ್‌ನಲ್ಲಿ ಬೋಟಿಂಗ್ ಮಾಡುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಗುಜರಾತ್ ಮೂಲದ ಕುಟುಂಬವೊಂದು ಪ್ರವಾಸಕ್ಕೆಂದು ಕೊಡಗಿಗೆ ಆಗಮಿಸಿತ್ತು. ಹಾರಂಗಿ ಹಿನ್ನೀರಿನಲ್ಲಿ ಖಾಸಗಿ ವಾಟರ್ ಸ್ಪೋರ್ಟ್ಸ್‌ಗೆ ಸೇರಿದ ಅಡ್ವೆಂಚರ್ ಬೋಟ್‌ನಲ್ಲಿ ವಿಹರಿಸುತ್ತಿದ್ದರು. ಈ ವೇಳೆ ತಿರುವು ಪಡೆಯುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ ಬೋಟ್ ಏಕಾಏಕಿ ಪಲ್ಟಿಯಾಗಿದೆ.  ಬೋಟ್‌ನ ಅಡಿಯಲ್ಲಿ ಸಿಲುಕಿದ ಪತಿ-ಪತ್ನಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಘಟನೆಯ ತೀವ್ರತೆಯ ನಡುವೆಯೂ ಇಬ್ಬರು ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳ ಹಾಗೂ ನುರಿತ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು ನೀರಿನಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು.

ಹಾರಂಗಿ ಹಿನ್ನೀರಿನಲ್ಲಿ ನಡೆದ ಈ ದುರಂತವು ಖಾಸಗಿ ವಾಟರ್ ಸ್ಪೋರ್ಟ್ಸ್ ಕೇಂದ್ರಗಳ ಕಾರ್ಯವೈಖರಿ ಮತ್ತು ಪ್ರವಾಸಿಗರ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬೋಟಿಂಗ್ ವೇಳೆ ಲೈಫ್ ಜಾಕೆಟ್‌ಗಳನ್ನು ನೀಡಲಾಗಿತ್ತೇ? ಸುರಕ್ಷತಾ ನಿಯಮಗಳನ್ನು ಸರಿಯಾಗಿ ಪಾಲಿಸಲಾಗಿತ್ತೇ? ಹಾಗೂ ಬೋಟ್‌ ಓಡಿಸುತ್ತಿದ್ದ ಆಪರೇಟರ್‌  ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆಯೇ ಎಂಬ ಪ್ರಶ್ನೆ ಎದ್ದಿದೆ. ನಿರ್ಲಕ್ಷ್ಯದ ಬೋಟ್ ಚಾಲನೆ ಆರೋಪದಡಿ ಪೊಲೀಸರು ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ.


Spread the love

About Laxminews 24x7

Check Also

ರಾಂಗ್ ರೂಟ್‌ನಲ್ಲಿ ಬಂದು ಕಾರು ಡಿಕ್ಕಿ – ಬೈಕ್ ಸವಾರ ಸ್ಥಳದಲ್ಲೇ ಸಾವು

Spread the love ಬೀದರ್: ರಾಂಗ್ ರೂಟ್‌ನಲ್ಲಿ ಬಂದು ಕಾರು ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ