Breaking News
Home / ರಾಜ್ಯ / ಕೊರೊನಾ ಅಲ್ಲ, ಇದು ಪ್ರೀತಿಯ ಸೋಂಕು- ವಿಭಿನ್ನ ಲಗ್ನ ಪತ್ರಿಕೆ .. ವೈರಲ್

ಕೊರೊನಾ ಅಲ್ಲ, ಇದು ಪ್ರೀತಿಯ ಸೋಂಕು- ವಿಭಿನ್ನ ಲಗ್ನ ಪತ್ರಿಕೆ .. ವೈರಲ್

Spread the love

ಶಿವಮೊಗ್ಗ: ಕೊರೊನಾ ಸೋಂಕಲ್ಲ, ಇದು ಪ್ರೀತಿಯ ಸೋಂಕು ಎಂದು ವರನೋರ್ವ ವಿಶೇಷವಾಗಿ ಲಗ್ನ ಪತ್ರಿಕೆಯೊಂದನ್ನು ಮುದ್ರಿಸಿದ್ದು, ಈ ಪತ್ರಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಯುವಕ ವಿನೋದ್ ಇದೇ ತಿಂಗಳ ಜೂ. 15ರಂದು ಚಂದನಾ ಅವರೊಂದಿಗೆ ವಿವಾಹವಾಗುತ್ತಿದ್ದಾರೆ. ಇವರ ವಿವಾಹಕ್ಕೆ ವರ ವಿನೋದ್ ವಿಭಿನ್ನವಾದ ಲಗ್ನ ಪತ್ರಿಕೆ ಮಾಡಿಸಿದ್ದು, ಇದರಲ್ಲಿ ನಿಶ್ಚಿತಾರ್ಥವನ್ನು ಲಾಕ್‍ಡೌನ್‍ಗೆ ಮತ್ತು ಮದುವೆಯನ್ನು ಸೀಲ್‍ಡೌನ್‍ಗೆ ಹೋಲಿಸಲಾಗಿದೆ.

ಈ ಪತ್ರಿಕೆಯ ಮುಂಭಾಗದಲ್ಲಿ ವಿನೋದ್ ಹಾಗೂ ಚಂದನಾ ಇವರಿಬ್ಬರಿಗೂ ಪರಸ್ಪರ ಪ್ರೀತಿ ಎಂಬ ಸೋಂಕು ಇರುವುದು ದೃಢಪಟ್ಟಿದ್ದು, ನಿಶ್ಚಿತಾರ್ಥದ ಮೂಲಕ ಲಾಕ್‍ಡೌನ್ ಮಾಡಿ, ಮದುವೆ ಎಂಬ ಸೀಲ್‍ಡೌನ್ ಮಾಡಿ, ನಂತರ ಜೀವನವಿಡಿ ಲವ್ ಕ್ವಾರಂಟೈನ್ ಮಾಡಲು ಗುರುಹಿರಿಯ ಬಂಧುಮಿತ್ರರು ತೀರ್ಮಾನಿಸಿದ್ದು, ತಾವುಗಳು ಮುಖಕ್ಕೆ ಮಾಸ್ಕ್ ಧರಿಸಿ, ಕೈಗಳಿಗೆ ಸ್ಯಾನಿಟೈಜರ್ ಹಚ್ಚಿಕೊಂಡು ಸಾಮಾಜಿಕ ಅಂತರದೊಂದಿಗೆ ಬಂದು ಆಶೀರ್ವಾದ ಮಾಡಬೇಕು ಎಂದು ಅಹ್ವಾನಿಸುತ್ತೇವೆ ಎಂದು ಬರೆಯಲಾಗಿದೆ.


Spread the love

About Laxminews 24x7

Check Also

ಫಲಕದಲ್ಲಿ ಕಾಮಗಾರಿ ಸಿಸಿ ರಸ್ತೆ ಮಾಯ ಕಳಪೆ ಚರಂಡಿ ಕಾಮಗಾರಿ ಪಂಚಾಯತರಾಜ ಇಂಜಿನಿಯರಿಂಗನ ಬ್ರಹ್ಮಾಂಡ ಭ್ರಷ್ಟಾಚಾರ

Spread the loveಬೆಳಗಾವಿ: ಫಲಕದಲ್ಲಿ ಕಾಮಗಾರಿ ಸಿಸಿ ರಸ್ತೆ ಮಾಯ ಕಳಪೆ ಚರಂಡಿ ಕಾಮಗಾರಿ ಪಂಚಾಯತರಾಜ ಇಂಜಿನಿಯರಿಂಗನ ಬ್ರಹ್ಮಾಂಡ ಭ್ರಷ್ಟಾಚಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ