Breaking News
Home / ಜಿಲ್ಲೆ / ನನ್ನನ್ನು ಮನೆಗೆ ಕಳಿಸಿ, ಭಯ ಆಗುತ್ತೆ’- ರೈಲ್ವೆ ನಿಲ್ದಾಣದಲ್ಲಿ ವೃದ್ಧ ಹಠ

ನನ್ನನ್ನು ಮನೆಗೆ ಕಳಿಸಿ, ಭಯ ಆಗುತ್ತೆ’- ರೈಲ್ವೆ ನಿಲ್ದಾಣದಲ್ಲಿ ವೃದ್ಧ ಹಠ

Spread the love

ಬೆಂಗಳೂರು: ರಾಜ್ಯದಲ್ಲಿ ಕ್ವಾರಂಟೈನ್ ರಾದ್ದಾಂತಗಳು ಮುಂದುವರಿದಿವೆ. ಮುಂಬೈ ರೈಲಿನಲ್ಲಿ ಬಂದಿದ್ದ ವೃದ್ಧ ತಮ್ಮನ್ನು ಮನೆಗೆ ಕಳಿಸಿ ಭಯ ಆಗುತ್ತೆ ಎಂದು ಹಠ ಹಿಡಿದು ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಕುಳಿತಿದ್ದ ಘಟನೆ ನಡೆದಿದೆ.

ಮೊದಲು ಹೋಂ ಕ್ವಾರಂಟೈನ್‍ಗೆ ಹೋದರೆ ಮಕ್ಕಳಿಗೆ ತೊಂದರೆ ಆಗುತ್ತೆ ಅಂತ ಸ್ವಯಂಪ್ರೇರಿತವಾಗಿ ಹೋಟೆಲ್ ಕ್ವಾರಂಟೈನ್‍ಗೆ ವೃದ್ಧ ಮುಂದಾಗಿದ್ರು. ಆದರೆ ಬಸ್ಸಿನಲ್ಲಿ ಕುಳಿತವರನ್ನು ನೋಡಿ ಮನಸ್ಸು ಬದಲಿಸಿ, ನಾನು ಇವರೊಂದಿಗೆ ಹೋಗಲ್ಲ. ನಾನು ಹೋಂ ಕ್ವಾರಂಟೈನ್‍ಗೆ ಹೋಗ್ತೀನಿ ಅಂತ ಹೇಳಿದರು. ಇದಕ್ಕೆ ಕರಗಿದ ಬಿಬಿಎಂಪಿ ಸಿಬ್ಬಂದಿ ವೃದ್ಧನನ್ನ ಮನೆಗೆ ಕಳಿಸಿದರು.

ವಿಜಯಪುರದ ಇಂಗಳೇಶ್ವರ ತಾಂಡಾದಲ್ಲಿ ಕೊರೊನಾ ಸೋಂಕಿತನನ್ನ ಕರೆದೊಯ್ಯಲು ಬಂದ ಆರೋಗ್ಯ ಸಿಬ್ಬಂದಿಗೆ ವೃದ್ಧೆಯೊಬ್ಬರು ಅವಾಜ್ ಹಾಕಿ ಕೊಲೆ ಬೆದರಿಕೆ ಹಾಕಿದ್ದಾರೆ. ನನ್ ಮೊಮ್ಮಗನನ್ನ ಕರೆದೊಯ್ದರೇ ಅಷ್ಟೇ ಅಂತ ಅಬ್ಬರಿಸಿದರು. ಕೊನೆಗೆ ಹರಸಾಹಸ ಮಾಡಿ ಅಜ್ಜಿ ಮನವೊಲಿಸಿದ ಅಧಿಕಾರಿಗಳು ಸೋಂಕಿತನನ್ನ ಆಸ್ಪತ್ರೆಗೆ ಕರೆದೊಯ್ದರು.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ