Breaking News

ಸಿದ್ದರಾಮಯ್ಯ ರಾಜೀನಾಮೆಯಿಂದ ಕಾಂಗ್ರೆಸ್‌ಗೆ ಮುಂದಿನ ಚುನಾವಣೆಯಲ್ಲಿ ಪೆಟ್ಟು: ಯತ್ನಾಳ್‌

Spread the love

ವಿಜಯಪುರ: ಸಿಎಂ ಸಿದ್ಧರಾಮಯ್ಯ  ರಾಜೀನಾಮೆ ಕೊಟ್ಟಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ 2028ಕ್ಕೆ ದೊಡ್ಡ ಹೊಡೆತ ಬೀಳಲಿದೆ ಎಂದು ಶಾಸಕ ಬಸನಗೌಡಾ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಸಿದ್ದರಾಮಯ್ಯ ಅವರನ್ನ ಯಾವುದೆ ಕಾರಣ ಇಲ್ಲದೆ ಇಳಿಸಿದ್ದಾರೆ. ಇದರಿಂದ ಕುರುಬ ಸಮಾಜ ಕೋಪಗೊಂಡಿದೆ. ಹಾಲುಮತ ಕುರುಬ ಸಮಾಜಕ್ಕೆ ಮಾಡಿದ ಅನ್ಯಾಯ ಇದಾಗಿದೆ. ಇದರ ಎಫೆಕ್ಟ್ ಮುಂದಿನ ವಿಧಾನಸಭೆ ಚುನಾವಣೆಯ ವೇಳೆ ವಿರೋಧ ಪಕ್ಷಗಳಿಗೆ ಲಾಭ ಅಗಲಿದೆ ಎಂದಿದ್ದಾರೆ.

ರಾಹುಲ್ ಗಾಂಧಿ ಮಾತನಾಡಿದ್ರೆ ಹಿಂದುಳಿದ ವರ್ಗ ಎನ್ನುತ್ತಿದ್ದರು. ಈಗ ಎಲ್ಲಿದೆ ಹಿಂದುಳಿದ ವರ್ಗ? ಸಿದ್ದರಾಮಯ್ಯ ರಾಜೀನಾಮೆಯಿಂದ ದಲಿತರಿಗೂ ಅನ್ಯಾಯ ಆಗಿದೆ. ಸಿದ್ದರಾಮಯ್ಯ ಅವರದ್ದು ಅತೀಯಾಗಿದ್ದು ಮುಸ್ಲಿಮರ ಓಲೈಕೆ. ಕೊನೆ ಕ್ಷಣದಲ್ಲೂ ರಾಜ್ಯದಲ್ಲಿ ಮುಸ್ಲಿಂ 1 ಅಂತಾ ಘೋಷಣೆ ಮಾಡಿ ಹೋದರು. ಆದ್ರೆ ಇವತ್ತು ಯಾವೊಬ್ಬ ಮುಸ್ಲಿಂ ನಾಯಕನು ರಾಜ್ಯದಲ್ಲಿ ಒಂದು ವಿರೋಧ ವ್ಯಕ್ತಪಡಿಸಿಲ್ಲ. ಅವರ ವಿದಾಯದ ವೇಳೆ ಬಹಳ ಟೀಕೆ ಮಾಡಲ್ಲ. ಆವರಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ ಎಂದರು.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ