Breaking News

ದೇಶದ್ರೋಹಿ ಸಂಘಟನೆ ʻಕಾಕ್ರೋಚ್‌ ಜನತಾ ಪಾರ್ಟಿʼ ಜೊತೆ ರಾಹುಲ್ ಹೋಗಿದ್ದಾರೆ: ಅಶೋಕ್‌ ಲೇವಡಿ

Spread the love

ಬೆಂಗಳೂರು: ಕಾಕ್ರೋಚ್‌ ಜನತಾ ಪಾರ್ಟಿ  ದೇಶದ್ರೋಹಿ ಸಂಘಟನೆ, ಅದರ ಮುಖ್ಯಸ್ಥ ಅಭಿಜಿತ್‌ ದೀಪ್ಕೆ ಪಾಕಿಸ್ತಾನ, ಬಾಂಗ್ಲಾದೇಶದ ಜೊತೆಗೆ ಸಂಪರ್ಕ ಇಟ್ಟುಕೊಂಡಿದ್ದಾನೆ. ಅದರ ಜೊತೆಗೆ ಈಗ ರಾಹುಲ್‌ ಗಾಂಧಿ ಹೋಗಿದ್ದಾರೆ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌  ಲೇವಡಿ ಮಾಡಿದ್ದಾರೆ.

ಬೆಂಗಳೂರಿನಲ್ಲಿಂದು ( ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮನೆ ಬಾಗಿಲಿಗೆ ಆತ್ಮಹತ್ಯೆ ತಂದ ಸರ್ಕಾರ ಇದು. ರಾಹುಲ್ ಗಾಂಧಿ ಜಿರಳೆ ಪ್ರತಿಭಟನೆ ಅಂತಾರೆ. ʻಸಿಜೆಪಿʼ ಅದೊಂದು ದೇಶ ದ್ರೋಹ ಸಂಘಟನೆ, ಅಭಿಜೀತ್‌ ದೀಪ್ಕೆ ಪಾಕಿಸ್ತಾನ, ಬಾಂಗ್ಲಾದೇಶದ ಜೊತೆ ಸಂಪರ್ಕ ಇಟ್ಟುಕೊಂಡಿದ್ದಾನೆ. ಅವರ ಜೊತೆ ರಾಹುಲ್ ಹೋಗ್ತಾರೆ, ಆದ್ರೆ ರಾಜ್ಯದ ಸಮಸ್ಯೆ ಬಗ್ಗೆ ಕೇಳೋಕಾಗಲ್ಲ ಎಂದು ಕುಟುಕಿದ್ದಾರೆ.

ರಾಜ್ಯದಲ್ಲಿ ಕೃಷಿ ಸಚಿವರು ಇಲ್ಲ, ತೋಟಗಾರಿಕೆ ಸಚಿವರು ಇಲ್ಲ. ಸಮೀಕ್ಷೆ ಮಾಡೋರು ಯಾರು? ಅಧಿಕಾರಿಗಳನ್ನ ನಂಬೋಕೆ ಆಗುತ್ತಾ? ರಾಷ್ಟ್ರೀಯ ವಿಪತ್ತು ಅಂತ ಘೋಷಣೆ ಮಾಡಬೇಕು ಅಂತಾರೆ. ಯಾವ ಮನೆಹಾಳ ಈ ಐಡಿಯಾ ಕೊಟ್ಟ ಗೊತ್ತಿಲ್ಲ. ರಾಜ್ಯ ಸರ್ಕಾರವೇ ಇನ್ನು ವಿಪತ್ತು ಅಂತ ಘೋಷಣೆ ಮಾಡಿಲ್ಲ. ಕೇಂದ್ರ ಹೇಗೆ ಮಾಡುತ್ತದೆ? ರೋಮ್ ಹೊತ್ತಿ ಉರಿದರೆ ಯಾರೋ ಪಿಟೀಲು ಬಾರಿಸುತ್ತಿದ್ದನಂತೆ, ಅದೇ ರೀತಿ ಸಿಎಂ ದೆಹಲಿಯಲ್ಲಿ ಕೂತಿದ್ದಾರೆ. ಎಲ್ಲರಿಗೂ ಈಗ ದೆಹಲಿ ಬೇಕಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಿಯಾಂಕ್ ಖರ್ಗೆ ಮಾತೆತ್ತಿದ್ರೆ ಆರ್‌ಎಸ್‌ಎಸ್‌ ಲೆಕ್ಕ ಕೊಡಿ ಅಂತಾರೆ, ಕಲಬುರಗಿಯಿಂದ ಗುಳೆ ಹೋಗ್ತಾ ಇದ್ದಾರೆ. ಅದರ ಲೆಕ್ಕ ಕೊಡಪ್ಪ ನೀನು ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರಲ್ಲದೇ, ಜನರು ಗುಳೆ ಹೋಗ್ತಾ ಇದ್ದಾರೆ. ತಾಂಡಾಗಳು ಖಾಲಿ ಆಗ್ತಾ ಇವೆ, ಅದರ ಲೆಕ್ಕ ಮೊದಲು ಕೊಡಿ ಎಂದು ಆಗ್ರಹಿಸಿದ್ದಾರೆ.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ