Breaking News

ಕಾಂಗ್ರೆಸ್‌ ಕಚೇರಿಗೆ ಬಂದ ಬಿಜೆಪಿ ಶಾಸಕ ಬಿಪಿ ಹರೀಶ್‌ಗೆ ಮೊಟ್ಟೆ ಎಸೆತ

Spread the love

ಬೆಂಗಳೂರು: ಹರಿಹರದ ಬಿಜೆಪಿ ಶಾಸಕ ಬಿಪಿ ಹರೀಶ್‌ ಮೇಲೆ ಕಾಂಗ್ರೆಸ್‌  ಕಾರ್ಯಕರ್ತರು ಮೊಟ್ಟೆ ಎಸೆದ ಪ್ರಸಂಗ ನಡೆದಿದೆ.

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಇಂದು ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತ್ತು. ಈ ಪ್ರತಿಭಟನೆ ತಿರುಗೇಟು ಎಂಬಂತೆ ಬಿಜೆಪಿ ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿತ್ತು.

ಶಾಸಕರ ಮೊಬೈಲಿಗೆ ಪ್ರತಿಭಟನೆ ಸ್ಥಳದ ಲೋಕೇಶನ್‌ ಕಳುಹಿಸಲಾಗಿತ್ತು. ಈ ಲೋಕೇಶನ್‌ ಆಧಾರದ ಮೇಲೆ ಬಿಪಿ ಹರೀಶ್‌ ಚಾಲಕ ಕ್ವೀನ್ಸ್‌ ರೋಡ್‌ ಬಳಿ ಹರೀಶ್‌ ಅವರನ್ನು ಬಿಟ್ಟಿದ್ದಾನೆ.

ಹರೀಶ್‌ ಅವರು ಕಾರಿನಿಂದ ಇಳಿದ ಕೂಡಲೇ ಅಲ್ಲಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಅವರ ಮೇಲೆ ಮೊಟ್ಟೆ ಎಸೆದಿದ್ದಾರೆ. ಕೂಡಲೇ ಅಲ್ಲಿದ್ದ ಪೊಲೀಸರು ಬಿಪಿ ಹರೀಶ್‌ ಅವರನ್ನು ರಕ್ಷಿಸಿದ್ದಾರೆ.

ಬಿಪಿ ಹರೀಶ್‌ ಪ್ರತಿಕ್ರಿಯಿಸಿ, ನಮ್ಮ ನಾಯಕ ಅಶೋಕ್ ಕರೆದಿದ್ದರು. ಅವರು ಇಲ್ಲಿ ಇರಬೇಕು ಅಂದ್ಕೊಂಡು ಡ್ರೈವರ್ ಇಳಿಯಿರಿ ಎಂದ. ಆಗ ನಾನು ಇಳಿದೆ. ಆಗ ಕಾಂಗ್ರೆಸ್‌ ಕಾರ್ಯಕರ್ತರು ಓಡಿಸಿಕೊಂಡು ಬಂದು ಮೊಟ್ಟೆ ಮತ್ತು ಕೈಯಲ್ಲಿ ಹೊಡೆದರು ಎಂದು ತಿಳಿಸಿದರು.

 


Spread the love

About Laxminews 24x7

Check Also

ಶಿವಾಜಿನಗರದಲ್ಲಿ GBA ಅಧಿಕಾರಿಗಳ ಮೇಲೆ ಹಲ್ಲೆ; ಬೆಳಗ್ಗೆಯೇ ದಾಳಿ ಪ್ಲಾನ್, 11 ಮಂದಿ ಅರೆಸ್ಟ್

Spread the loveಬೆಂಗಳೂರು: ಶಿವಾಜಿನಗರದಲ್ಲಿ  ಫುಟ್‌ಪಾತ್ ತೆರವು ಕಾರ್ಯಾಚರಣೆ ವೇಳೆ GBA ಅಧಿಕಾರಿಗಳ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಹೊಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ