Breaking News

ಡೀಸೆಲ್ ಬಳಿಕ ಟಿಕೆಟ್ ರೋಲ್ ಕೊರತೆ; 3-4 ಜನರಿಗೆ ಸೇರಿ ಒಂದೇ ಟಿಕೆಟ್ ವಿತರಣೆ

Spread the love

ಬೀದರ್: ನಾರಿ ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆ  ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಡಿಸೇಲ್ ಕೊರತೆ ಬಳಿಕ ಈಗಾ ಪ್ರಯಾಣಿಕರಿಗೆ ಟಿಕೆಟ್ ನೀಡುವ ರೋಲ್  ಕೊರತೆಯಾಗಿದೆ. ಪ್ರತಿಯೊಬ್ಬರಿಗೆ ನೀಡಬೇಕಿದ್ದ ಟಿಕೆಟ್‌ಗಳನ್ನು ಸಾರಿಗೆ ಸಿಬ್ಬಂದಿ ಮೂರು ನಾಲ್ಕು ಜನಕ್ಕೆ ಸೇರಿಸಿ ಒಂದೇ ಟಿಕೆಟ್ ನೀಡುತ್ತಿದ್ದು, ಬೀದರ್ ಟು ಕಲಬುರಗಿ ಸೇರಿದಂತೆ ವಿವಿಧ ಕಡೆ ಹೋಗುವ ಬಸ್‌ಗಳಲ್ಲಿ ಎರಡು ಮೂರು ಪ್ರಯಾಣಿಕರಿಗೆ ಒಂದೇ ಟಿಕೆಟ್ ನೀಡಲಾಗುತ್ತಿದೆ.

ಒಂದೇ ಟಿಕೆಟ್ ನೀಡಿ ಟಿಕೆಟ್ ರೋಲ್ ಕೊರತೆಯನ್ನು ಹರಸಾಹಸ ಪಟ್ಟು ಕಂಡಕ್ಟರ್‌ಗಳು ನೀಗಿಸುತ್ತಿದ್ದು, ಟಿಕೆಟ್ ಕೊರತೆಯನ್ನು ನೀಗಿಸಲು ರೋಲ್‌ಗಳು ಇರುವ ಕಂಡಕ್ಟರ್‌ಗಳಿಂದ ಪಡೆದು ಪ್ರಯಾಣಿಕರಿಗೆ ಟಿಕೆಟ್ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಟಿಕೆಟ್ ರೋಲ್ ಕೊರತೆಯಿಂದ ಸಾರಿಗೆ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇಷ್ಟು ದಿನ ಹಣ ಪಾವತಿ ಮಾಡಲಾಗದ್ದಕ್ಕೆ ಡಿಸೇಲ್ ಕೊರತೆಯಿಂದ ಬಸ್ ಸೇವೆ ಸ್ಥಗಿತವಾಗಿತ್ತು. ಈಗ ಪ್ರಯಾಣಿಕರಿಗೆ ನೀಡುವ ಬಸ್ ಟಿಕೆಟ್ ರೋಲ್ ಕೂಡಾ ಕೊರತೆಯಾಗಿದ್ದು, ನಾರಿ ಶಕ್ತಿ ಗ್ಯಾರಂಟಿಯಿಂದಾಗಿ ಸಾರಿಗೆ ಇಲಾಖೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. 


Spread the love

About Laxminews 24x7

Check Also

ಮುಂದುವರಿದ ಮಹದೇವಪ್ಪ ಮುನಿಸು – ಸಿದ್ರಾಮಯ್ಯಗೆ ಆಹ್ವಾನವಿಲ್ಲದೇ ʻಸಂವಿಧಾನ ದಿನʼ ಆಚರಣೆ

Spread the loveಮೈಸೂರು: ಆಪ್ತ ಮಿತ್ರರಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ  ಹಾಗೂ ಮಾಜಿ ಸಚಿವ ಹೆಚ್‌.ಸಿ ಮಹದೇವಪ್ಪ  ಅವರ ನಡುವಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ