Breaking News

ಭೂಮಿಕಾ ಸಾವು ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ – ಡ್ರೈವರ್‌ ಜೊತೆಗೆ ಮಾತನಾಡಿದ್ದ ಸ್ಫೋಟಕ ಆಡಿಯೋ ವೈರಲ್‌!

Spread the love

ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಯುವತಿಯೊಬ್ಬಳು ಸಾವನ್ನಪ್ಪಿದ್ದ ರಸ್ತೆ ಅಪಘಾತ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಇದು ಕೇವಲ ರಸ್ತೆ ಅಪಘಾತವಲ್ಲ, ಇದರ ಹಿಂದೆ ಕೊಲೆ ಸಂಚು ಇದೆ ಎಂದು ಮೃತ ಯುವತಿ ಭೂಮಿಕಾ ಪೋಷಕರು ಆರೋಪಿಸಿದ್ದಾರೆ. ಈ ಬೆನ್ನಲ್ಲೇ ಸ್ಫೋಟಕ ಆಡಿಯೋವೊಂದು ಬೆಳಕಿಗೆ ಬಂದಿದೆ.

ಹೌದು. ಮೃತ ಭೂಮಿಕಾ ಅಪಘಾತಕ್ಕೂ ಮುನ್ನ ಕಾರು ಚಾಲಕ ಕಿಶೋರ್ ಜೊತೆ ಮಾತನಾಡಿದ್ದ ಆಡಿಯೋ ಇದೀಗ ಬೆಳಕಿಗೆ ಬಂದಿದೆ. ಬೆಂಗಳೂರಿನಿಂದ ಕಾರು ಚಾಲಕ ಕಿಶೋರ್ ಜೊತೆ ಚನ್ನಪಟ್ಟಣಕ್ಕೆ ಬಂದಿದ್ದ ಭೂಮಿಕಾ, ಬಳಿಕ ಚನ್ನಪಟ್ಟಣದಲ್ಲಿ ಸ್ನೇಹಿತ ಕಿರಣ್ ಜೊತೆ ಮತ್ತೊಂದು ಕಾರಿನಲ್ಲಿ ತೆರಳಿದ್ದ.

ಕೆಲ ಗಂಟೆಗಳ ಬಳಿಕ ಚಾಲಕ ಕಿಶೋರ್‌ಗೆ ಕರೆ ಮಾಡಿ ಮಾತನಾಡಿದ್ದ ಭೂಮಿಕಾ, ಸ್ನೇಹಿತ ಕಿರಣ್ ಹಾಗೂ ಸಹೋದರ ಆಶಿಸ್ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಕತ್ತು ಹಿಸುಕಿ ತನ್ನನ್ನು ಸಾಯಿಸಲು ಯತ್ನಿಸಿದ್ದಾರೆ ಹಾಗೂ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ ಎಂದು ಆಡಿಯೋದಲ್ಲಿ ಮಾತನಾಡಿದ್ದಾರೆ.

ಅಪಘಾತಕ್ಕೂ ಮುನ್ನ ಚಾಲಕನಿಗೆ ಕರೆ ಮಾಡಿ ಭೂಮಿಕಾ ಮಾತನಾಡಿದ್ದ ಆಡಿಯೋ ಪ್ರಕರಣಕ್ಕೆ ಟ್ವಿಸ್ಟ್ ನೀಡಿದೆ. ಅಪಘಾತದ ಬಳಿಕ ಭೂಮಿಕಾ ಸ್ನೇಹಿತರು ತಲೆಮರೆಸಿಕೊಂಡಿದ್ದಾರೆ.


Spread the love

About Laxminews 24x7

Check Also

ಮುಂದುವರಿದ ಮಹದೇವಪ್ಪ ಮುನಿಸು – ಸಿದ್ರಾಮಯ್ಯಗೆ ಆಹ್ವಾನವಿಲ್ಲದೇ ʻಸಂವಿಧಾನ ದಿನʼ ಆಚರಣೆ

Spread the loveಮೈಸೂರು: ಆಪ್ತ ಮಿತ್ರರಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ  ಹಾಗೂ ಮಾಜಿ ಸಚಿವ ಹೆಚ್‌.ಸಿ ಮಹದೇವಪ್ಪ  ಅವರ ನಡುವಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ